ಗದಗ | ಮೌಢ್ಯತೆ ಆಚರಿಸುವ ದೇಶಗಳ ಅಭಿವೃದ್ಧಿ ಸಾಧ್ಯವಿಲ್ಲ: ಡಾ. ಜಯದೇವಿ ಗಾಯಕವಾಡ

Date:

ಯಾವ ದೇಶದಲ್ಲಿ ಮೌಢ್ಯ ಸಂಪ್ರದಾಯಗಳ ಆಚರಣೆ ಇರುತ್ತವೆಯೋ, ಅಂತಹ ದೇಶಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಜಯದೇವಿ ಗಾಯಕವಾಡ ಹೇಳಿದರು.

- Advertisement -

ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ ಹಾಗೂ ಗದಗ ನಗರದ ಡಾ. ಎಂ ಎಂ ಕಲಬುರ್ಗಿ ಸಂಶೋಧನ ಕೇಂದ್ರ ಸಹಯೋಗದೊಂದಿಗೆ ತೋಂಟದಾರ್ಯ ಮಠದಲ್ಲಿ ಹಮ್ಮಿಕೊಂಡಿದ್ದ ದಸಾಪ ಪಯಣ 30ನೇ ವರ್ಷದ ಪ್ರಯುಕ್ತ ಪುಸ್ತಕ ಬಿಡುಗಡೆ ಹಾಗೂ ಕಾವ್ಯಯಾನ-1 ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

“ಮೌಢ್ಯ ಸಂಪ್ರದಾಯಗಳನ್ನು ಕಡೆಗಣಿಸಿ, ವಿಜ್ಞಾನವನ್ನು ಅನುಸರಿಸಿದರೆ ಮಾತ್ರ ದೇಶ ಮುಂದುವರೆಯುತ್ತದೆ. ಯಾವ ದೇಶಗಳಲ್ಲಿ‌ ಮೌಢ್ಯಾಚರಣೆ ಆಚರಿಸಲಾಗುತ್ತಿಯೋ ಆ ದೇಶಗಳು ಮುಂದುವರೆಯಲು ಸಾಧ್ಯವಿಲ್ಲ. ಸಮಾಜ ಎದುರಿಸುತ್ತಿರುವ ತಳಮಳಗಳ ಕುರಿತು ಸಾಹಿತ್ಯ ಹುಟ್ಟಬೇಕು. ಬೇಂದ್ರೆ, ಕುವೆಂಪು ಸೇರಿದಂತೆ ಇನ್ನೂ ಅನೇಕರು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದರು. ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳು ಇಂದಿನ ಯುವಕರ ಮೇಲೆ ಪ್ರಭಾವಿಸಬೇಕಿದೆ. 12ನೇ ಶತಮಾನದಲ್ಲಿ ಸಾಹಿತ್ಯ ಮತ್ತು ಚಳವಳಿ ಒಂದೇಯಾಗಿ ಜಾರಿಯಲ್ಲಿದ್ದವು” ಎಂದರು.

ವಿಮರ್ಶಕ ಡಾ. ಎಚ್ ಬಿ ಕೋಲ್ಕಾರ ಮಾತನಾಡಿ, “ಪ್ರಗತಿಶೀಲ ಸಂದರ್ಭದಲ್ಲಿ ವಾಸ್ತವವನ್ನು ತಲೆಬರಹಗಳಲ್ಲಿ ಕಟ್ಟಿರುವುದನ್ನು ನೋಡಿದ್ದೇವೆ. ಹಾಗೆ ಕವಿಯ “ಇರುಳ ಬಾಗಿಲಿಗೆ ಕಣ್ಣದೀಪ” ಕವನ ಸಂಕಲನ ಇದೆ. ಇಲ್ಲಿ ಬದುಕಿನ ಶೈಲಿಗೆ, ತೀವ್ರತೆ ಕೊಡುವಲ್ಲಿ ಕವಿ ಅರಿವಿನಿಂದ ಪದಗಳಲ್ಲಿ ಕಟ್ಟುತ್ತಾನೆ. ಆದ್ಯಾತ್ಮಿಕ ಬದುಕನ್ನು ಲೌಕಿಕವಾಗಿ ಕವಿತೆಗಳಲ್ಲಿ ಕವಿ ಹೇಳುತ್ತಾನೆ. “ಎದೆಯಾಗಿನ ಮಾತು” ಕೃತಿಯು ಪ್ರೀತಿ ಪ್ರೇಮ, ವಿರಹಗಳೇ ಶಾಹಿರಿಗಳಾಗಿವೆ. ಓದುತ್ತಾ ಹೋದಂತೆ ಮನಸ್ಸಿಗೆ ಉಲ್ಲಾಸ ನೀಡುತ್ತವೆ” ಎಂದರು.

ಇದನ್ನು ಓದಿದ್ದೀರಾ? ಗದಗ | ಗೋವಿಂದ ಪೈ ಜಯಂತಿ ಸರ್ಕಾರದಿಂದ ಆಚರಿಸಲು ಮನೋಹರ್ ಮೆರವಾಡೆ ಒತ್ತಾಯ

ದಲಿತ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ಡಾ. ಅರ್ಜುನ ಗೋಳಸಂಗಿ ಅವರು ಅಧ್ಯಕ್ಷಿಯ ಮಾತುಗಳನ್ನಾಡಿದರು. ಡಾ. ಗವಿಸಿದ್ದಪ್ಪ ಪಾಟೀಲ, ಎಂ ಸಿ ಕಟ್ಟಿಮನಿ, ಕೃತಿಕರರಾದ ಡಾ. ಸದಾಶಿವ ದೊಡಮನಿ ಹಾಗೂ ಮರುಳುಸಿದ್ಧಪ್ಪ ದೊಡಮನಿ ಗೌರವ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಎರಡು ಮನೆಗಳಿಗೆ ಕನ್ನ: ₹3.65 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

ನಗರದ ಹೀರಾಪುರ ಹೊಸ ಬಡಾವಣೆ ಹಾಗೂ ಚಿಂಚೋಳಿ ಲೇಔಟ್‌ನಲ್ಲಿ ಎರಡು ಪ್ರತ್ಯೇಕ...

ಯಾದಗಿರಿ | ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳ ಗೆಲುವು

ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ವಿಭಾಗದ ಬಾಲಕರ ಜಿಲ್ಲಾ ಮಟ್ಟದ...

ಉಡುಪಿ | ತೈಲದ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲು ಹಸಿರು ಹೈಡ್ರೋಜನ್ ಸಹಕಾರಿ

ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್ ಭಾರತಕ್ಕೆ ಅಪಾರ ಸಾಧ್ಯತೆಗಳನ್ನು ಹೊಂದಿದ್ದು, ತೈಲದ...

ಎಂಆರ್‌ಪಿಎಲ್ ಸ್ಫೋಟ: ಮೃತ ಮನೀಶ್ ಕುಟುಂಬಕ್ಕೆ ಸಾಂತ್ವನ, ಹಾನಿಗೊಳಗಾದ ಚರ್ಚ್‌ಗೆ ಪ್ರಶಾಂತ್ ಜತ್ತನ್ನ ಭೇಟಿ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ (ಸಿಎಚ್‌ಟಿಯು)ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಮುಲ್ಕಿ...