ಹಾಸನ ಜಿಲ್ಲೆ ಸಕಲೇಶಪುರ ನಗರದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಕಾರಿನಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಕೊಡಗು ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕೊಡಗು ಮೂಲದ ಅಜರುದ್ದೀನ್ ಎಂಬಾತ, ಸುಮಾರು ₹2.5 ಲಕ್ಷ ಮೌಲ್ಯದ 25 ಗ್ರಾಂ ಎಂಡಿಎಂ ಮಾದಕ ವಸ್ತುವನ್ನು ದಿ: 05/08/2026ರಂದು ಮಧ್ಯಾಹ್ನ ಸುಮಾರು 02.15 ಗಂಟೆಯ ವೇಳೆಗೆ, ಸಕಲೇಶಪುರ ಟೌನ್‌ನ ಗುರುದೇವ ಪೆಟ್ರೋಲ್ ಬಂಕ್ ಬಳಿ ನಾಗ್ ಎನ್‌ಕ್ಲೇವ್ ಲೇಔಟ್ ಪ್ರದೇಶದಲ್ಲಿ ಕಾರಿನಲ್ಲಿ ವ್ಯಕ್ತಿಯೊಬ್ಬ ಮಾದಕ ಪದಾರ್ಥ ಮಾರಾಟ ಮಾಡುತ್ತಿರುವ ಬಗ್ಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಕೃಷ್ಣಪ್ಪ ಕೆ.ಎಸ್ ಅವರಿಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮಂತ್ರಿಗಿರಿ ಪಟ್ಟಿಯಲ್ಲಿ ಶಾಂತೇಗೌಡ; ನಿರಾಸೆಯಾಗಿದ್ದೇಕೆ?
ಸಕಲೇಶಪುರ ನಗರ ಪೊಲೀಸ್ ಅಧಿಕಾರಿ ವನರಾಜು ಹಾಗೂ ಕೃಷ್ಣಪ್ಪ ಕೆ.ಎಸ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಠಾಣೆಯ ಸಿಬ್ಬಂದಿಗಳಾದ ಖಾದರ್ ಅಲಿ, ರೇವಣ್ಣ ಎಸ್.ಜೆ., ಶ್ರೀಧರ್, ರಾಕೇಶ್, ಸೋಮಶೇಖರ್, ಅಶೋಕ್, ಸುನಿಲ್ ಕುಮಾರ್, ಹನುಮಂತು, ಶಿವಕುಮಾರ್ ಹಾಗೂ ಚಾಲಕ ಮಧು ಉಪಸ್ಥಿತರಿದ್ದರು.




