ಹಾಸನ | ಮನುಷ್ಯನನ್ನು ಕೇಂದ್ರವಾಗಿಟ್ಟುಕೊಂಡು ವೈಜ್ಞಾನಿಕವಾಗಿ ಚಿಂತಿಸಬೇಕು: ಡಾ. ರಾಜಪ್ಪ ದಳವಾಯಿ

Date:

ಮನುಷ್ಯನಿಗಿಂತ ಧರ್ಮ, ದೇವರು, ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಮುಖ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಮನುಷ್ಯನ ಬದುಕು, ಸ್ವಾತಂತ್ರ್ಯ ಮತ್ತು ವಿಚಾರಶಕ್ತಿಯೇ ಸಮಾಜದ ಕೇಂದ್ರವಾಗಬೇಕು ಎಂದು ಡಾ. ರಾಜಪ್ಪ ದಳವಾಯಿ ಹೇಳಿದರು.

- Advertisement -

ಹಾಸನ ನಗರದಲ್ಲಿ ನಡೆದ ‘ನಾನೇಕೆ ನಾಸ್ತಿಕ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಗತ್ ಸಿಂಗ್ ಅವರ “ನಾನು ಏಕೆ ನಾಸ್ತಿಕ?” ಎಂಬ ಬರಹದ ಮಹತ್ವವನ್ನು ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

“ಭಗತ್ ಸಿಂಗ್ ಅವರು ತಮ್ಮ ಕಾಲದಲ್ಲಿಯೇ ದೇವರು, ಧರ್ಮ, ಸಮಾಜ ಹಾಗೂ ಮನುಷ್ಯನ ನಡುವಿನ ಸಂಬಂಧವನ್ನು ಪ್ರಶ್ನಿಸಿದ್ದರು. ಅವರು ಓದಿದ ಪುಸ್ತಕಗಳು, ಮಾಡಿರುವ ಉಲ್ಲೇಖಗಳು ಹಾಗೂ ಅವರ ಡೈರಿಯಲ್ಲಿನ ವಿಚಾರಗಳನ್ನು ಗಮನಿಸಿದರೆ ಅವರ ಚಿಂತನೆಯ ಆಳವನ್ನು ಅರ್ಥಮಾಡಿಕೊಳ್ಳಬಹುದು” ಎಂದು ಹೇಳಿದರು.

ಅಧಿಕಾರ ಮತ್ತು ಧರ್ಮದ ನಡುವಿನ ಸಂಬಂಧವನ್ನು ಕುರಿತು ಮಾತನಾಡಿದ ಡಾ. ದಳವಾಯಿ, “ಇತಿಹಾಸದಲ್ಲಿ ಅನೇಕ ಸಂದರ್ಭಗಳಲ್ಲಿ ರಾಜಕೀಯ ಅಧಿಕಾರವು ಧರ್ಮವನ್ನು ತನ್ನ ಉದ್ದೇಶಗಳಿಗೆ ಬಳಸಿಕೊಂಡಿರುವುದನ್ನು ಕಾಣಬಹುದು. ಕೆಲವೊಮ್ಮೆ ರಾಜಕೀಯ ಮತ್ತು ಧಾರ್ಮಿಕ ಅಧಿಕಾರಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಮನುಷ್ಯನ ಸ್ವತಂತ್ರ ಚಿಂತನೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು” ಎಂದರು.

“ನಮ್ಮ ಜೀವನದಲ್ಲಿ ನಡೆಯುವ ಎಲ್ಲವೂ ನಮ್ಮ ಕರ್ಮದ ಫಲ, ಹಿಂದಿನ ಜನ್ಮದ ಕರ್ಮದ ಪರಿಣಾಮ” ಎಂದು ಪ್ರತಿಯೊಂದು ಘಟನೆಗೂ ವಿವರಣೆ ನೀಡುವ ಮನೋಭಾವ ಮನುಷ್ಯನ ಪ್ರಶ್ನಿಸುವ ಶಕ್ತಿಯನ್ನು ಕುಂಠಿತಗೊಳಿಸಬಹುದು. ಯಾವುದನ್ನೂ ಕುರುಡಾಗಿ ನಂಬುವುದಕ್ಕಿಂತ ‘ಏಕೆ? ಹೇಗೆ? ಇದಕ್ಕೆ ಸಾಕ್ಷಿ ಏನು?’ ಎಂದು ಪ್ರಶ್ನಿಸುವುದು ವೈಜ್ಞಾನಿಕ ಮನೋಭಾವದ ಮೂಲವಾಗಿದೆ” ಎಂದು ವಿವರಿಸಿದರು.

“ನಾಸ್ತಿಕರಾಗಿರುವುದು ಎಂದರೆ ಅಪಾಯಕಾರಿಯಾಗುವುದು ಅಥವಾ ನೈತಿಕತೆಯನ್ನು ಕಳೆದುಕೊಳ್ಳುವುದು ಎಂದಲ್ಲ. ದೇವರನ್ನು ನಂಬದ ವ್ಯಕ್ತಿಯೂ ಅತ್ಯಂತ ಜವಾಬ್ದಾರಿಯುತವಾಗಿ, ನೈತಿಕವಾಗಿ ಮತ್ತು ಮಾನವೀಯತೆಯಿಂದ ಬದುಕಬಹುದು. ಮನುಷ್ಯನ ಒಳ್ಳೆಯತನಕ್ಕೆ ದೇವರ ನಂಬಿಕೆಯೇ ಏಕೈಕ ಆಧಾರವಲ್ಲ” ಎಂದು ಡಾ. ದಳವಾಯಿ ಅಭಿಪ್ರಾಯಪಟ್ಟರು.

“ಭಾರತದ ಸಂವಿಧಾನ ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ತನ್ನ ಧರ್ಮವನ್ನು ಆಚರಿಸುವುದಷ್ಟೇ ಅಲ್ಲದೆ, ಯಾವುದೇ ಧರ್ಮವನ್ನು ಆಚರಿಸದಿರುವ ಸ್ವಾತಂತ್ರ್ಯವೂ ವ್ಯಕ್ತಿಗೆ ಇದೆ. ಆದರೆ ಈ ಸ್ವಾತಂತ್ರ್ಯವನ್ನು ಸಮಾಜದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು ಎಲ್ಲವನ್ನೂ ದೇವರ ಮೇಲೆ ಬಿಟ್ಟುಬಿಡುವ ಮನೋಭಾವಕ್ಕೆ ಬಳಸಬಾರದು ಎಂದರು.

“ಸಮಾಜದಲ್ಲಿ ಅಪರಾಧ, ಅನ್ಯಾಯ, ಬಡತನ, ಅಸಮಾನತೆ ಮತ್ತು ಶೋಷಣೆಗಳಿದ್ದಾಗ ದೇವರು ಬಂದು ಅವುಗಳನ್ನು ಪರಿಹರಿಸುತ್ತಾನೆಂದು ಕಾಯುವುದಕ್ಕಿಂತ, ಅವುಗಳ ಕಾರಣಗಳನ್ನು ಮನುಷ್ಯನೇ ಹುಡುಕಿ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳಬೇಕು. ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳ ಸಾಮಾಜಿಕ, ಐತಿಹಾಸಿಕ ಹಾಗೂ ರಾಜಕೀಯ ಪಾತ್ರವನ್ನೂ ಪ್ರಶ್ನಾತ್ಮಕವಾಗಿ ಪರಿಶೀಲಿಸುವ ಅಗತ್ಯವಿದೆ” ಎಂದು ಹೇಳಿದರು.

“ಭಗತ್ ಸಿಂಗ್ ಅವರ ನಾಸ್ತಿಕವಾದವನ್ನು ಕೇವಲ “ದೇವರನ್ನು ನಂಬುವುದಿಲ್ಲ” ಎಂಬ ಸರಳ ಅರ್ಥದಲ್ಲಿ ನೋಡಬಾರದು. ಅದರ ಹಿಂದಿರುವುದು ಮನುಷ್ಯನನ್ನು ಕೇಂದ್ರದಲ್ಲಿಟ್ಟುಕೊಂಡು ಯೋಚಿಸುವುದು, ಪ್ರಶ್ನಿಸುವುದು, ಸಾಕ್ಷ್ಯವನ್ನು ಹುಡುಕುವುದು ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಎಂಬ ವಿಶಾಲ ಚಿಂತನೆಯಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿದ್ದೀರಾ? ಹಾಸನ | ಭಗತ್ ಸಿಂಗ್ ಕೇವಲ ಕ್ರಾಂತಿಕಾರಿಯಲ್ಲದೆ ವೈಜ್ಞಾನಿಕ ಮನೋಭಾವ ಉಳ್ಳವರಾಗಿದ್ದರು: ಡಾ. ಎಚ್ ಆರ್ ಸ್ವಾಮಿ

“ಮನುಷ್ಯನು ಏಕೆ ಬದುಕಬೇಕು? ಹೇಗೆ ಬದುಕಬೇಕು? ಸಮಾಜವನ್ನು ಹೇಗೆ ಬದಲಾಯಿಸಬೇಕು? ಎಂಬ ಮೂಲಭೂತ ಪ್ರಶ್ನೆಗಳನ್ನು ನಾವು ಎದುರಿಸಬೇಕು. ವಿಜ್ಞಾನವನ್ನು ಬಳಸಿಕೊಂಡು ಪ್ರಗತಿ ಸಾಧಿಸುತ್ತಿರುವ ಜಗತ್ತಿನ ಬೆಳವಣಿಗೆಯನ್ನು ಅರ್ಥಮಾಡಿಕೊಂಡು, ವೈಜ್ಞಾನಿಕ ಚಿಂತನೆಯನ್ನು ನಮ್ಮ ಜೀವನದ ಭಾಗವನ್ನಾಗಿಸಿಕೊಳ್ಳಬೇಕು” ಎಂದರು.

“ಪ್ರಶ್ನಿಸುವುದು, ಸಾಕ್ಷ್ಯ ಹುಡುಕುವುದು, ಕಾರಣ–ಕಾರ್ಯ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು ಹಾಗೂ ತಪ್ಪೆಂದು ತಿಳಿದಾಗ ನಮ್ಮ ನಂಬಿಕೆಯನ್ನು ಬದಲಾಯಿಸುವ ಧೈರ್ಯ ಹೊಂದಿರುವುದೇ ವೈಜ್ಞಾನಿಕ ಮನೋಭಾವ. ಭಗತ್ ಸಿಂಗ್ ಅವರ ಚಿಂತನೆಯಲ್ಲಿರುವ ಈ ಸಂದೇಶವನ್ನು ಇಂದಿನ ಯುವಜನತೆ ಅರ್ಥಮಾಡಿಕೊಳ್ಳಬೇಕು” ಎಂದು ಡಾ. ರಾಜಪ್ಪ ದಳವಾಯಿ ಕರೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾನವೀಯತೆಯೇ ಎಲ್ಲ ಧರ್ಮಗಳ ಸಾರ: ಸಿದ್ದರಾಮಯ್ಯ

ಪ್ರವಾದಿ ಮುಹಮ್ಮದ್‌(ಸ) ಅವರು ಯಾವುದೇ ಒಂದು ಧರ್ಮ ಅಥವಾ ಸಮುದಾಯಕ್ಕೆ ಮಾತ್ರ...

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ: ವೈರಲ್ ಆಯ್ತು ರಾಹುಲ್ ಗಾಂಧಿ ‘X’ ಪೋಸ್ಟ್

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ ಎಂದು ಕಾಂಗ್ರೆಸ್ ನಾಯಕ ಹಾಗೂ...

ಕೋಲಾರ | ಮರಗಳ ಹರಾಜು ಅಕ್ರಮ, ತನಿಖೆಗೆ ವಿಶೇಷ ತಂಡ ರಚಿಸಲು ರೈತ ಸಂಘ ಆಗ್ರಹ

ಕೋಲಾರ–ವೇಮಗಲ್ ರಸ್ತೆ ವಿಸ್ತರಣೆಗೆ ಮರಗಳ ತೆರವು ಸಂಬಂಧ ನಡೆದಿರುವ ಹರಾಜು ಪ್ರಕ್ರಿಯೆಯಲ್ಲಿ...

ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆಂಬ ಸುಳ್ಳುಸುದ್ದಿ: ತಪ್ಪಿತಸ್ಥನ ವಿರುದ್ಧ FIR

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಆಹ್ವಾನವನ್ನು...