ಹಾವೇರಿ | ಓದುಗರ ಮೇಲೆ ಪರಿಣಾಮ ಬಿರುವಂತೆ ಬರಹ ಇರಬೇಕು: ಶರಣಪ್ಪ ಎಚ್ ಸಂಗನಾಳ

Date:

“ಬರವಣಿಗೆಯು ಒಂದು ಕಲೆಯಾಗಿದ್ದು, ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಅಭಿವ್ಯಕ್ತಪಡಿಸುವ ವಿಧಾನ ಬರಹವಾಗಿದೆ. ಸರಳ ಭಾಷೆಯಲ್ಲಿ ನಿರೂಪಿಸುತ್ತ ಓದುಗರ ಮೇಲೆ ಪರಿಣಾಮ ಬಿರುವಂತೆ ಬರಹ ಇರಬೇಕು” ಎಂದು ಈದಿನ.ಕಾಮ್ ಜಿಲ್ಲಾ ವರದಿಗಾರರು ಶರಣಪ್ಪ ಎಚ್ ಸಂಗನಾಳ ಹೇಳಿದರು.

- Advertisement -

ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದಲ್ಲಿ ರೋಷನಿ ಸಂಸ್ಥೆ, ಈದಿನ.ಕಾಮ್ ಹಾಗೂ ನ್ಯಾಷನಲ್ ಟ್ರಸ್ಟ್ ಸಹಯೋಗದಲ್ಲಿ ಬಡ್ತೆ ಕದಂ ಅಟಿಸಂ, ಸೆರೆಬ್ರೇಲ್ ಪಾಲಸಿ, ಮಲ್ಟಿಪಲ್ ಡಿಜೆಬಿಲಿಟಿ, ಜಾಗೃತ ಕಾರ್ಯಕ್ರಮ ಹಾಗೂ ಸುದ್ದಿ ಬರವಣಿಗೆ ಕುರಿತು ಕಾರ್ಯಗಾರದಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

“ಬರವಣಿಗೆ ಪೂರ್ವದಲ್ಲಿ ಸಾಕಷ್ಟು ಓದು ಇರಬೇಕು. ಆ ಓದು ಪ್ರಬುದ್ಧತೆಯಿಂದ ಬರವಣಿಗೆ ಕೂಡಿರುತ್ತದೆ. ಬರವಣಿಗೆಯಲ್ಲಿ ಸರಿಯಾದ ವ್ಯಾಕರಣ, ಪದಗಳ ಬಳಕೆ ಮತ್ತು ಶೈಲಿ ಬರವಣಿಗೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ” ಎಂದರು.

“ಸಮಾಜದಲ್ಲಿ ನಡೆಯುವಂತಹ ಅನ್ಯಾಯ, ದೌರ್ಜನ್ಯಗಳ ವಿರುದ್ಧ ದ್ವನಿ ಎತ್ತುವ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಸಿಟಿಜನ್ ಜರ್ನಲಿಸ್ಟ್. ಅವರ ಮೂಲಕವೂ ಸಮಾಜದ ಬದಲಾವಣೆ ಮಾಡಲು ಸಾಧ್ಯವಿದೆ” ಎಂದು ಹೇಳಿದರು.

ಜೋನಲ್ ಕೋಆರ್ಡಿನೇಟರ್ ಸಂತೋಷ್ ಎಚ್ ಎಮ್ ಮಾತನಾಡಿ, “ಪತ್ರಕರ್ತರು ವಾಸ್ತವದಲ್ಲಿ ಸರ್ಕಾರಗಳ ಸಾಕು ನಾಯಿಗಳಂತೆ ಕೆಲಸ ಮಾಡುತ್ತಿದ್ದಾವೆ. ಇದರಿಂದ‌ ಮಾಧ್ಯಮಗಳ ಸ್ವಾತಂತ್ರ್ಯವನ್ನು ಉಳಿಸಿಕೊಂಡಿಲ್ಲ. ಮತ್ತು ಜನರ ಸಮಸ್ಯೆಗಳ ಬಗ್ಗೆ ಸುದ್ಧಿಗಳು ಬರೆಯುವುದು ಕಡಿಮೆ ಆಗಿದೆ. ಒಂದು ವರದಿಯಂತೆ ಸುದ್ಧಿಗಳಿಗಾಗಿ ಟಿವಿ ನೋಡುಗರ ಸಂಖ್ಯೆ ಕಡಿಮೆ ಆಗಿದೆ. ಆದ್ದರಿಂದ ಡಿಜಿಟಲ್ ಮಾಧ್ಯಮದ ಅವಶ್ಯವಿದೆ” ಎಂದರು.

IMG 20250711 WA0005

ಕಾರ್ಯಾಗಾದಲ್ಲಿ ರೋಷನಿ ಸಂಸ್ಥೆಯ ನಿರ್ದೇಶಕರು ಅನಿತಾ ಡಿಸೋಜಾ ಮಾತನಾಡಿ, “ನಮ್ಮ ಸಮಸ್ಯೆಗಳನ್ನು ನಾವೇ ಸುದ್ದಿ ಬರೆಯುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು” ಎಂದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಅನ್ನಭಾಗ್ಯಕ್ಕೆ 12 ವರ್ಷದ ಸಂಭ್ರಮ; ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಅನ್ಯಾಯ

ಕಾರ್ಯಾಗಾರದಲ್ಲಿ ರೋಷನಿ ಸಂಸ್ಥೆಯ ಸಿಬ್ಬಂದಿಗಳು, ಸಾಮಾಜಿಕ ಹೋರಾಟಗಾರರು ಇನ್ನೂ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಅರ್ಥಪೂರ್ಣ ಗಾಂಧಿ ಜಯಂತಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.)...

ಉಡುಪಿ | ಸಮುದಾಯದ ಅಭಿವೃದ್ಧಿಗೆ ಉದ್ಯಮಿಗಳ ಒಗ್ಗಟ್ಟು ಅಗತ್ಯ: ಮುಮ್ತಾಜ್ ಮನ್ಸೂರಿ

ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ...

ರಾಯಚೂರು | ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ: ಜ್ಞಾನೇಶ ಕುಮಾರ ರಾಜೀನಾಮೆಗೆ ನಾಗರಿಕ ವೇದಿಕೆ ಆಗ್ರಹ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ...