ಹಾವೇರಿ | ಕನ್ನಡ ಭಾಷೆಗೆ ಹೊಸ ಶಕ್ತಿ ತುಂಬಿದ ಡಾ.ವಿ.ಕೃ.ಗೋಕಾಕ್: ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ

Date:

“ಕ್ಷೀಣವಾಗುತ್ತಿದ್ದ ಕನ್ನಡಕ್ಕೆ ಹೊಸ ಶಕ್ತಿ ತುಂಬಿದ್ದು ಡಾ.ವಿ.ಕೃ.ಗೋಕಾಕ್‌ ಅವರು. ಗೋಕಾಕ್ ವರದಿ ಆಧಾರಿತ ಗೋಕಾಕ್ ಚಳವಳಿಯಾಗಿದ್ದು, ಇವರು ಕನ್ನಡ ಭಾಷೆಗೆ ಹೊಸ ಶಕ್ತಿ ತುಂಬಿದ್ದರು” ಎಂದು ಹಾವೇರಿ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ. ಸುರೇಶ ಜಂಗಮಶೆಟ್ಟಿ ಹೇಳಿದರು.

- Advertisement -

ಹಾವೇರಿ ಜಿಲ್ಲೆಯ ಕೆರೆಮತ್ತಿಹಳ್ಳಿ ಗ್ರಾಮದಲ್ಲಿ ಇರುವ  ಹಾವೇರಿ ವಿಶ್ವವಿದ್ಯಾಯದಲ್ಲಿ ಗುರುವಾರ ಡಾ. ವಿ.ಕೃ.ಗೋಕಾಕ್‌ರಾಷ್ಟ್ರೀಯ ಸ್ಮಾರಕ ಟ್ರಸ್ಟ ಮತ್ತು ಹಾವೇರಿ ವಿಶ್ವ ವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಲಾದ ಡಾ. ವಿ.ಕೃ.ಗೋಕಾಕ್‌ರ ಕಾವ್ಯದ ನೆಲೆಗಳು ಎಂಬ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

“ಸ್ಥಳೀಯ ಮತ್ತು ರಾಜ್ಯ ಮಟ್ಟದ ಹಲವು ಸಮಸ್ಯೆಗಳ ಮೇಲೆ ಇಂದು ರಕ್ಷಣಾ ವೇದಿಕೆಗಳು ಹೋರಾಟ ಮಾಡುತ್ತಿವೆ. ಇದಕ್ಕೆ ಮೂಲ ಕಾರಣ ಡಾ.ವಿ.ಕೃ.ಗೋಕಾಕ್‌ರು ಕೊಟ್ಟ ಕನ್ನಡದ ಶಕ್ತಿ. ಅವರ ಸಾಧನೆಯ ಹಿಂದೆ ದೊಡ್ಡ ಪಯಣವಿದೆ. ಅವರ ವ್ಯಕ್ತಿತ್ವವನ್ನು ಹೊಸ ಪೀಳಿಗೆಗೆ ಪರಿಪೂರ್ಣವಾಗಿ ತಿಳಿಸುವ ಪ್ರಯತ್ನವಾಗಬೇಕು” ಎಂದರು.

ಅಧ್ಯಕ್ಷತೆ ಟ್ರಸ್ಟಿನ ಅಧ್ಯಕ್ಷ ಡಾ.ಸತೀಶ ಕುಲಕರ್ಣಿ ಮಾತನಾಡಿ, “ನವ್ಯಕಾವ್ಯದ ಪ್ರವರ್ತಕರಾದ ಡಾ.ವಿ.ಕೃ.ಗೋಕಾಕ್‌ರು ಕನ್ನಡ ನವ್ಯ ಕಾವ್ಯದ ಮೂಲಕ ಜೀವ ಕಳೆ ತಂದವರು. ಮುಂಬರುವ ದಿನಗಳಲ್ಲಿ ಅವರ ಸಮಗ್ರ ಸಾಹಿತ್ಯದ ಅಧ್ಯಯನ ಮೂಲಕ ಹೊಸ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಟ್ರಸ್ಟ್ ಮಾಡಲಿದೆ” ಎಂದು ಹೇಳಿದರು.

Advertisements

ಈ ಸಂದರ್ಭದಲ್ಲಿ ಗೋಕಾಕ್‌ರ ಕಾವ್ಯದ ನೆಲೆಗಳು ಎಂಬ ವಿಚಾರ ಗೋಷ್ಠಿಯಲ್ಲಿ ಎರಡು ಉಪನ್ಯಾಸಗಳು ಜರುಗಿದವು. ಕನ್ನಡ ಅಧ್ಯಯನ ವಿಭಾಗದ ಡಾ. ಪ್ರವೀಣ ಎಚ್. ‘ನವ್ಯಕಾವ್ಯ ಪರಂಪರೆ: ಭಾಷಿಕ ಮೀಮಾಂಸೆ’ ಎಂಬ ವಿಷಯದ ಮೇಲೆ ಮಾತನಾಡಿ, “ತಮ್ಮ ಆಧುನಿಕ ಚಿಂತನೆಗಳ ಮೂಲಕ ನವ್ಯಕಾವ್ಯಕ್ಕೆ ಪ್ರವೇಶಿಕೆ ಬರೆದ ಗೋಕಾಕ್‌ರು ಭಾಷೆ ಮತ್ತು ಭಿನ್ನ ವಸ್ತುಗಳನ್ನು ಕಾವ್ಯಕ್ಕೆ ತಂದು ಹಳೆಯದರಿಂದ ಬಿಡುಗಡೆಗೊಳಿಸಿದ ಕೀರ್ತಿ ಅವರದು. ಅವರ ಭಾಷಿಕ ಮೀಮಾಂಸೆ ಈಗಲೂ ಪ್ರಸ್ತುತ” ಎಂದು ಹೇಳಿದರು.

‘ಗೋಕಾಕ್‌ ಕಾವ್ಯ ಮತ್ತು ಪುರಾಣ ಅನುಸಂಧಾನ’ ಎಂಬ ವಿಷಯದ ಮೇಲೆ ಲೇಖಕ ಲಿಂಗರಾಜ ಸೊಟ್ಟಪ್ಪನವರ ಮಾತನಾಡಿ, “ಪುರಾನವನ್ನು ನಿರಾಕರಿಸದೆ. ವಿಶ್ವಾಮಿತ್ರನನ್ನು ಸರ್ವಕಾಲಿಕವಾಗಿ ಪ್ರಸ್ತುತವೆನಿಸುವಂತೆ ಕಟ್ಟಿಕೊಟ್ಟವರು ಗೋಕಾಕ್‌ರು, ನಭೋ ಮಂಡಲದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ವಿ.ಕೃ.ಗೋಕಾಕ್‌ರು ಲೋಕದ ವಿಮರ್ಶೆ ಮಾಡಿದ ದೊಡ್ಡ ಕವಿ ಎಂದು ಹೇಳಿ ಅವರ ಊರ್ಣನಾಭ, ಭಾರತ ಸಿಂಧುರಶ್ಮಿ ಮುಂತಾದ ಕಾವ್ಯಗಳ ಉದಾಹರಣೆ ಕುರಿತು ಮಾತನಾಡಿದರು.

ನಂತರ ನಡೆದ ಸಂವಾದದಲ್ಲಿ ಡಾ.ಚಿದಾನಂದ ಕಮ್ಮಾರ, ಚೈತ್ರಾ ಹುಳುಕೆಲ್ಲಪ್ಪನವರ. ಡಾ. ಪುಟ್ಟಸ್ವಾಮಿ, ಡಾ.ರೇಖಾ ಬಿ. ಬಾಳೋಜಿ, ಪ್ರೊ.ಕಿರಣ ಕೆ. ಮುಂತಾದವರು ಪಾಲ್ಗೊಂಡಿದ್ದರು.

ಮೌಲ್ಯಮಾಪನ ಕುಲಸಚಿವರಾದ ಪ್ರೊ.ರೇಣುಕಾ ಮೇಟಿ, ಟ್ರಸ್ಟಿನ ಸದಸ್ಯರುಗಳಾದ ಪ್ರೊ.ಮಾರುತಿ ಶಿಡ್ಲಾಪೂರ, ಗುರುರಾಜ ನಾಡಿಗೇರ, ಡಾ.ಪುಷ್ಪಾವತಿ ಶಲವಡಿಮಠ, ಮಾಲತೇಶ ಅಂಗೂರ ಇತರರು ಉಪಸ್ಥಿತರಿದ್ದರು.

ರಂಜಿತಾ ಗುಳೇದ ಮತ್ತು ಸಂಗಡಿಗರು ಪ್ರಾರ್ಥಿಸಿದರು. ತನುಜಾ ಹಂಚಿನಮನಿ ಸ್ವಾಗತಿಸಿದರು. ವಾಣಿ ಅಗಡಿ ಕಾರ್ಯಕ್ರಮ ನಿರೂಪಿಸಿದರು. ಪುಟ್ಟಸ್ವಾಮಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಸಮಸ್ತ’ ಆ್ಯಪ್ ಸಮಸ್ಯೆ ಪರಿಹರಿಸಿ, ಗೃಹಲಕ್ಷ್ಮಿ ಹೆಚ್ಚುವರಿ ಕೆಲಸ ಕೈಬಿಡಿ: ಆಶಾ ಕಾರ್ಯಕರ್ತೆಯರ ಆಗ್ರಹ

‘ಸಮಸ್ತ’ ಆ್ಯಪ್‌ನಲ್ಲಿ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು, ಗೃಹಲಕ್ಷ್ಮಿ ಯೋಜನೆಯ...

ಇಳಕಲ್ | SIR ರದ್ದು, ಜ್ಞಾನೇಶ್ ಕುಮಾರ್ ವಜಾಕ್ಕೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು...

ಪತ್ರಕರ್ತರ ಸಂಘದ ನೂತನ ಭವನಕ್ಕೆ ₹50 ಲಕ್ಷ ಅನುದಾನ: ಸಂಸದ ಯದುವೀರ ಘೋಷಣೆ

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಭವನ ನಿರ್ಮಾಣಕ್ಕೆ ಸಂಸದರ ಪ್ರದೇಶಾಭಿವೃದ್ಧಿ...

ಗದಗ | ಮತದಾನದ ಹಕ್ಕನ್ನು‌ ಕಳೆದುಕೊಳ್ಳುವ ಆತಂಕದಲ್ಲಿ ಅನಿವಾಸಿ ಭಾರತೀಯರು: ಮುಖಂಡರು ಕಿಡಿ

"ರೋಣ ಮತಕ್ಷೇತ್ರದಲ್ಲಿ ಅನಿವಾಸಿ ಭಾರತೀಯರು 999 ಜನರಿದ್ದಾರೆಂದು ಮತದಾರರ ಯಾದಿ ಪಟ್ಟಿಯಲ್ಲಿ...