ಹಾವೇರಿ‌| ಕಬ್ಬಿಗೆ ದರ ನಿಗದಿ ಆಗುವ ತನಕ ಕಾರ್ಖಾನೆ ಆರಂಭಿಸುವಂತಿಲ್ಲ: ರೈತರು ಆಗ್ರಹ

Date:

“ಕಬ್ಬಿಗೆ ದರ ನಿಗದಿ‌ ಆಗುವ ತನಕ ಕಾರ್ಖಾನೆಗಳನ್ನು ಆರಂಭಿಸಬಾರದು” ಎಂದು ರೈತ ಮುಖಂಡರು ಸಭೆಯ ನಂತರ ಆಗ್ರಹಿಸಿದರು.

- Advertisement -

ಹಾವೇರಿ ಜಿಲ್ಲೆಯ ಸಂಗೂರ್ ಶುಗರ್ ಕಾರ್ಖಾನೆಯಲ್ಲಿ, ಕಾರ್ಖಾನೆ ಆರಂಭಿಸಿವ ಕುರಿತು “ಕಬ್ಬು ಬೆಳೆಗಾರರ ಸಭೆ ನಡೆಸಿದ ಸಭೆ ವಿಫಲವಾಗಿದ್ದು, ರೈತರನ್ನು ಕಡೆಗಣಿಸಿ, ಪ್ಯಾಕ್ಟರಿ ಉದ್ದಾರ ಮಾಡುವುದಕ್ಕಾಗಿ ಹುನ್ನಾರ ನಡೆಸಿದ್ದಾರೆ. ರೈತರ ಅನುಮತಿ ಇಲ್ಲದೇ ಕಬ್ಬು ಮಾಲೀಕರು ಕಾರ್ಖಾನೆಗಳನ್ನು ಆರಂಭಿಸುವಂತಿಲ್ಲ. ಜಿಲ್ಲೆಯ ರೈತರು ಕಬ್ಬಿಗೆ ದರ ನಿಗದಿ ಆಗುವವರೆಗೂ ಕಬ್ಬನ್ನು ಕಟಾವು ಮಾಡಬಾರದು” ಎಂದು ರೈತ ಮುಖಂಡರು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

“ಕಾರ್ಖಾನೆಯವರು ರಿಕವರಿಯಲ್ಲಿ‌ ರೈತರಿಗೆ‌ ಮೋಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಬೇರೆ ಜಿಲ್ಲೆಗೂ ನಮ್ಮ ಜಿಲ್ಲೆಯ ಕಬ್ಬಿಗೂ ಒಂದೇ ಬೆಲೆ ಇಲ್ಲ. ರೈತರಿಗೆ ತಾರತಮ್ಯ ಮಾಡುತ್ತಿದ್ದು, ಅನ್ಯಾಯ ಮಾಡುತ್ತಿದ್ದಾರೆ. ಬೆಳಗಾವಿ ಕಬ್ಬಿಗೆ ₹3300 ಕೊಡ್ತಿದ್ದಾರೆ. ಆದರೆ ಇಲ್ಲಿಯ ರೈತರಿಗೆ ಅನ್ಯಾಯ ಆಗುತ್ತಿದ್ದು, ಇಲ್ಲಿಯೂ ಅದೇ ದರವನ್ನು ನಿಗದಿ ಮಾಡಬೇಕು” ಎಂದು ರೈತ ಮುಖಂಡರು ಒತ್ತಾಯಿಸಿದರು.

ಕೇಂದ್ರ ಸರಕಾರ ನಿಯೋಗ ಕರೆದಿದ್ದು, ಸಭೆಯಲ್ಲಿ‌ ಏನು ನಿರ್ಧಾರ ಆಗುತ್ತದೆಯೋ ಆಗಲಿ. ಕಾಯುತ್ತೇವೆ. ಉತ್ತರ ಕರ್ನಾಟಕದಲ್ಲಿ ಸಧ್ಯ ಏನು ಬೆಲೆ‌ ಇದೆಯೋ‌ ಆ ಬೆಲೆಯನ್ನು ಇಲ್ಲಿಯೂ ಕೊಡಬೇಕು” ಎಂದು ರೈತರು ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಅನಿಲ ಡೊಳ್ಳಿನ, ಚನ್ನಬಸಪ್ಪ ಹಾವನಗಿ, ಜಗದೀಶ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಸೂರ್ಯಕಾಂತಿ ಬೆಂಬಲ ಬೆಲೆ ಕ್ವಿಂಟಾಲ್‌ಗೆ ₹8,343: ಖರೀದಿ ಕೇಂದ್ರ ಆರಂಭ; ಡಿಸಿ

ಸರ್ಕಾರದ ಆದೇಶದಂತೆ 2026-27ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು...

ರಾಯಚೂರು | ಹತ್ತಿ ಮಿಲ್ ಗೆ ಆಕಸ್ಮಿಕ ಬೆಂಕಿ: 60 ಲಕ್ಷದ ಹತ್ತಿ ಭಸ್ಮ

ಹತ್ತಿ ಮಿಲ್‌ಗೆ ಅಕಸ್ಮಿಕ ಬೆಂಕಿ ತಗುಲಿ ಸುಮಾರು 60ಲಕ್ಷ ಮೌಲ್ಯದ ಬೆಂಕಿ...

ರಾಯಚೂರು | ವಿದ್ಯುತ್ ಅವಘಡದಲ್ಲಿ ರೈತ ಸಾವು: ಕುಟುಂಬಕ್ಕೆ ಬೋಸರಾಜು, ಹಂಪಯ್ಯ ನಾಯಕ್ ಸಾಂತ್ವನ

ಮಾನ್ವಿ ತಾಲ್ಲೂಕಿನ ಕಾತರಕಿ ಗ್ರಾಮದಲ್ಲಿ ಮೋಟಾರ್ ಸ್ಟಾರ್ಟ್ ಮಾಡಲು...

ರಾಯಚೂರು | 12 ತಾಸು ವಿದ್ಯುತ್ ಪೂರೈಕೆಗೆ ಆಗ್ರಹ: ಜೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ

ರೈತರಿಗೆ 12 ತಾಸು ವಿದ್ಯುತ್ ಪೂರೈಸಬೇಕು, ಬೆಳೆಗಳು ಒಣಗುತ್ತಿವೆ ಎಂದು ಆಕ್ರೋಶ...