ಬ್ಯಾಡಗಿ ನಗರದ ಛತ್ರ ರೋಡ್ ಕ್ರಾಸ್ ಹತ್ತಿರ ಸೇರಿದಂತೆ ಹಲವಾರು ರೋಡ್ ಕ್ರಾಸಿಂಗ್ ಹತ್ತಿರ ಅನೇಕ ಬಾರಿ ವಾಹನ ಅಪಘಾತಗಳು ಆಗುತ್ತಿದ್ದು, ಹಲವಾರು ಜನರು ಕೈಕಾಲು ಕಳೆದುಕೊಂಡಿದ್ದಾರೆ, ಕೆಲವರು ಮೃತಪಟ್ಟಿದ್ದಾರೆ. ಇಷ್ಟೆಲ್ಲ ನಡೆದರು ಪುರಸಭೆ ಅಧಿಕಾರಿಗಳು, ಪೋಲಿಸ್ ಇಲಾಖೆ, ಲೋಕೊಪಯೊಗಿ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕದೆ ಸುಮ್ಮಬಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೖಗೊಳ್ಳಬೇಕೆಂದು ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ತಿ ಇದಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಕುಮಾರ ಶೆಟ್ಟಿ ಬಣದ ಕಾರ್ಯಕರ್ತರು ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ತಾಲೂಕು ಅಧ್ಯಕ್ಷ ಪವನ ವಡ್ಡರ ಮಾತನಾಡಿ, ” ನಗರದ ಚಿತ್ರಾ ರೋಡ್ ಹತ್ತಿರ ಕೆಲ ತಿಂಗಳುಗಳಿಂದ ರೋಡ್ ಕ್ರಾಸಿಂಗ್ ಮಾಡುವಾಗ ಅನೇಕ ಜನ ವಾಹನ ಸವಾರರು ಬಿದ್ದು ಜೀವವನ್ನು ಕಳೆದುಕೊಂಡಿರುವರು. ಕೈಕಾಲು ಕಳೆದುಕೊಂಡು ಜೀವನ ಪರಿಯಂತ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ” ಎಂದು ಹೇಳಿದರು.
“ಬ್ಯಾಡಗಿ ನಗರದ ಅನೇಕ ಕಡೆ ರೋಡ್ ಕ್ರಾಸಿಂಗ್ ಹತ್ತಿರ ಅಕ್ಕ ಪಕ್ಕದಲ್ಲಿ ಅನಧಿಕೃತ ಬಿಡಿ ಅಂಗಡಿಗಳು, ಹೋಟೆಲಗಳು, ಎಗ್ ರೈಸ್ ಅಂಗಡಿಗಳು ಸೇರಿದಂತೆ ಹಲವಾರು ಅಂಗಡಿಗಳು ರಸ್ತೆ ಮೇಲೆ ಇರುವುದರಿಂದ ವಾಹನ ಸವಾರರು ರೋಡ್ ಕ್ರಾಸಿಂಗ್ ಮಾಡುವಾಗ ಇಂತಹ ಅನಾಹುತಗಳು ಸಂಭವಿಸುತ್ತಿವೆ. ಇಷ್ಟೆಲ್ಲಾ ನಡೆದರು ಸ್ಥಳೀಯ ಪುರಸಭೆ, ಲೋಕಪಯೋಗಿ, ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸದರು.
“ಇಂತಹ ಅನಧಿಕೃತ ಅಂಗಡಿಗಳ ಮಾಲೀಕರ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ವಾಗಬೇಕು. ಈಗಾಗಲೆ ಮೃತಪಟ್ಟವರಿಗೆ ಪುರಸಭೆ ಸೂಕ್ತ ಪರಿಹಾರವನ್ನು ನೀಡಬೇಕು” ಎಂದು ಆಗ್ರಹಿಸಿದರು.
“ರಸ್ತೆಯ ಇಕ್ಕಳಗಳಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಪೊಲೀಸ್ ಇಲಾಖೆ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಬ್ಯಾರಿಕೆಡ್ ಅಳವಡಿಸಬೇಕು. ಲೋಕಪಯೋಗಿ ಇಲಾಖೆ ರೋಡ್ ಬ್ರೇಕ್ ಹಾಕಿ ಸಾರ್ವಜನಿಕರ ಹಾಗೂ ವಾಹನ ಸವಾರರ ಪ್ರಾಣ ಹಾನಿಯಾಗದಂತೆ ತಡೆಗಟ್ಟುವಲ್ಲಿ ಕ್ರಮವಹಿಸಬೇಕು. ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ ಈ ಮೂರು ಇಲಾಖೆಗಳ ನಿಸ್ಕಾಳಜಿಯನ್ನು ಖಂಡಿಸಿ ಬ್ಯಾಡಗಿ ನಗರವನ್ನು ಬಂದ ಮಾಡುವುದರ ಮೂಲಕ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಮನವಿ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಕರಿಗೌಡ ಕರೇಗೌಡರ, ಜಿಲ್ಲಾ ಕಾರ್ಯಾಧ್ಯಕ್ಷರುಪುಟ್ಟಪ್ಪ ಹಿತ್ರಮನಿ,
ಮಾರುತಿ ಹಾಲಗಿ, ಜಿಲ್ಲಾ ಉಪಾಧ್ಯಕ್ಷ ಫಕ್ಕಿರೇಶ ಕಟ್ಟಿಮನಿ ಜಿಲ್ಲಾ ಪ್ರಧಾನ ಸಂಚಾಲಕ ದ್ಯಾಮಣ್ಣ ಮಲ್ಲಾಡದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ ಸುಳ್ಳನವರ, ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಮಾಲತೇಶ್ ಜಿ ಕೆ, ಜಿಲ್ಲಾ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಶಿವಲೀಲಾ ಗೊಂಡಬಾಳ, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಲಕ್ಷ್ಮೀ ಗಂಗಮ್ಮವರ, ರಾಣೆಬೆನ್ನೂರು ತಾಲೂಕು ಯುವ ಘಟಕದ ಅಧ್ಯಕ್ಷ ಸಂತೋಷ ಹಿರಿಯಕ್ಕನವರ, ಹಿರೇಕೆರೂರ ತಾಲೂಕು ಮಹಿಳಾ ಘಟಕದ ಅಧ್ಯಕ್ಷ ರೇಣುಕಾ ಮಾನೇಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




