ನಿತಿನ್ ನಬಿನ್‌ ತಂಡದಲ್ಲಿ ಶೇ.50ಕ್ಕೂ ಹೆಚ್ಚು ʼಮೇಲ್ಜಾತಿʼ ನಾಯಕರಿಗೆ ಸ್ಥಾನ; ಉಳಿದವರಿಗೆ?

Date:

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಅವರು ಇತ್ತೀಚೆಗೆ ನೇಮಕ ಮಾಡಿರುವ ಹೊಸ ಪದಾಧಿಕಾರಿಗಳ ತಂಡದಲ್ಲಿ ಶೇ.50ಕ್ಕೂ ಹೆಚ್ಚು ಮಂದಿ ‘ಮೇಲ್ಜಾತಿ’ ಅಥವಾ ಮುಂದುವರಿದ ಸಮುದಾಯಗಳಿಗೆ ಸೇರಿದವರಾಗಿದ್ದಾರೆ ಎಂದು ದಿ ಪ್ರಿಂಟ್‌ನ ವಿಶ್ಲೇಷಣಾ ವರದಿ ತಿಳಿಸಿದೆ.

- Advertisement -

ಒಂದು ಕಾಲದಲ್ಲಿ ʼಬ್ರಾಹ್ಮಣ-ಬನಿಯಾʼ ಪಕ್ಷ ಎಂಬ ಹಣೆಪಟ್ಟಿ ಹೊಂದಿದ್ದ ಬಿಜೆಪಿ, ಈಗಲೂ ಹಳೆ ಚಾಳಿ ಮುಂದುವರೆಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು ಸೇರಿದಂತೆ ವಿವಿಧ ಸಮುದಾಯಗಳಿಗ ಅಲ್ಲೊಂದು ಇಲ್ಲೊಂದು ಅವಕಾಶ ಕೊಟ್ಟರೂ ಪಕ್ಷದ ಪ್ರಮುಖ ಹುದ್ದೆಗಳಲ್ಲಿ ‘ಮೇಲ್ಜಾತಿ’ ನಾಯಕರ ಪ್ರಾಬಲ್ಯ ಮುಂದುವರಿದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಬಿಜೆಪಿ ಆಡಳಿತವಿರುವ 17 ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ 10 ಮಂದಿ ‘ಮೇಲ್ಜಾತಿ’ ಅಥವಾ ಮುಂದುವರಿದ ಸಮುದಾಯಗಳಿಗೆ ಸೇರಿದವರು. ಮೂವರು ಒಬಿಸಿ, ಮೂವರು ಪರಿಶಿಷ್ಟ ಪಂಗಡ (ST) ಹಾಗೂ ಒಬ್ಬರು ಮಣಿಪುರದ ಮೈತೇಯಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಸ್ಸಾಂನ ಹಿಮಂತ ಬಿಸ್ವ ಶರ್ಮಾ, ದೆಹಲಿಯ ರೇಖಾ ಗುಪ್ತಾ, ಗೋವಾದ ಪ್ರಮೋದ್ ಸಾವಂತ್, ಗುಜರಾತ್‌ನ ಭೂಪೇಂದ್ರ ಪಟೇಲ್, ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್, ರಾಜಸ್ಥಾನದ ಭಜನ್‌ಲಾಲ್ ಶರ್ಮಾ, ತ್ರಿಪುರಾದ ಮಾಣಿಕ್ ಸಾಹಾ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ಹಾಗೂ ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ ‘ಮೇಲ್ಜಾತಿ’ ಸಮುದಾಯಗಳಿಗೆ ಸೇರಿದವರು.

ಅರುಣಾಚಲ ಪ್ರದೇಶದ ಪೇಮಾ ಖಂಡು, ಛತ್ತೀಸ್‌ಗಢದ ವಿಷ್ಣುದೇವ ಸಾಯಿ ಹಾಗೂ ಒಡಿಶಾದ ಮೋಹನ್ ಚರಣ್ ಮಾಝಿ ST ಸಮುದಾಯಕ್ಕೆ ಸೇರಿದವರು. ಬಿಹಾರದ ಸಮ್ರಾಟ್‌ ಚೌಧರಿ, ಹರಿಯಾಣದ ನಾಯಬ್‌ ಸಿಂಗ್ ಸೈನಿ ಹಾಗೂ ಮಧ್ಯಪ್ರದೇಶದ ಮೋಹನ್‌ ಯಾದವ್‌ ಒಬಿಸಿ ಸಮುದಾಯದವರು. ಮಣಿಪುರದ ಯುಮ್ನಮ್‌ ಖೇಮಚಂದ್ ಸಿಂಗ್‌ ಮೈತೇಯಿ ಸಮುದಾಯಕ್ಕೆ ಸೇರಿದವರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಲ್ಲೂ ಮೇಲ್ಜಾತಿ ಪ್ರಾಬಲ್ಯ

ನಿತಿನ್‌ ನಬಿನ್‌ ಅವರ ಹೊಸ ತಂಡದಲ್ಲಿ ನೇಮಕಗೊಂಡಿರುವ ಎಂಟು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಪೈಕಿ ಆರು ಮಂದಿ ‘ಮೇಲ್ಜಾತಿ’ ಸಮುದಾಯದವರು. ಜೂನ್‌ನಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಸತೀಶ್‌ ಪೂನಿಯಾ ಮಾತ್ರ ಒಬಿಸಿ ಮುಖವಾಗಿದ್ದಾರೆ. ಮಧ್ಯಪ್ರದೇಶದ ಖರ್ಗೋನ್‌ ಲೋಕಸಭಾ ಕ್ಷೇತ್ರದ ಸಂಸದ ಗಜೇಂದ್ರ ಪಟೇಲ್‌ ಪರಿಶಿಷ್ಟ ಪಂಗಡದ ನಾಯಕ. 13 ರಾಷ್ಟ್ರೀಯ ಉಪಾಧ್ಯಕ್ಷರ ಪೈಕಿ 7 ಮಂದಿ ‘ಮೇಲ್ಜಾತಿ’ ಸಮುದಾಯಕ್ಕೆ ಸೇರಿದವರು. ಇವರಲ್ಲಿ ಜೈನ್‌ ಬನಿಯಾ ಸಮುದಾಯದವರೂ ಸೇರಿದ್ದಾರೆ. ಇಬ್ಬರು ಒಬಿಸಿ, ತಲಾ ಒಬ್ಬರು ST ಮತ್ತು SC ಸಮುದಾಯದವರು. ಒಬ್ಬ ಮುಸ್ಲಿಂ ಹಾಗೂ ಒಬ್ಬ ಸಿಖ್‌ ಸಮುದಾಯದವರಿಗೆ ಸ್ಥಾನ ನೀಡಲಾಗಿದೆ.

ಉತ್ತರ ಪ್ರದೇಶದ ಧೌರಹರಾ ಕ್ಷೇತ್ರದ ಮಾಜಿ ಸಂಸದೆ ರೇಖಾ ವರ್ಮಾ ಹಾಗೂ ಕರ್ನಾಟಕದ ರಾಜ್ಯಸಭಾ ಸದಸ್ಯ ಎಂ. ನಾಗರಾಜ್‌ ಒಬಿಸಿ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಎಸ್‌ಸಿ ಮೋರ್ಚಾದ ಉಸ್ತುವಾರಿ ವಹಿಸಿದ್ದ ಹಿರಿಯ ದಲಿತ ನಾಯಕ ಲಾಲ್‌ ಸಿಂಗ್‌ ಆರ್ಯ ಕೂಡ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಕುಲಪತಿ ತಾರಿಕ್‌ ಮನ್ಸೂರ್‌ ಹೊಸ ತಂಡದಲ್ಲಿರುವ ಏಕೈಕ ಮುಸ್ಲಿಂ ಉಪಾಧ್ಯಕ್ಷರಾಗಿದ್ದಾರೆ. ಮಾಜಿ ಕೇಂದ್ರ ಸಚಿವ ಮನಪ್ರೀತ್‌ ಸಿಂಗ್‌ ಬಾದಲ್‌ ಏಕೈಕ ಸಿಖ್‌ ಮುಖವಾಗಿದ್ದಾರೆ.

ಹೊಸ ತಂಡ ರಚಿಸುವಾಗ ಸಮಾಜದ ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ನೀಡಲು ವಿಶೇಷ ಗಮನ ಹರಿಸಲಾಗಿದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿಕೊಂಡಿದ್ದಾರೆ. ಹೊಸ ತಂಡದಲ್ಲಿ ಸುಮಾರು ಶೇ.40 ಅಥವಾ ಅದಕ್ಕಿಂತ ಹೆಚ್ಚು ಮಂದಿ ಅಂಚಿನಲ್ಲಿರುವ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪ್ರಧಾನಿ ಮೋದಿ ದೇಶದ ಪ್ರಮುಖ ಒಬಿಸಿ ಮುಖವಾಗಿದ್ದು, ಅವರ ನೇತೃತ್ವದಲ್ಲಿ ಸಾಮಾಜಿಕವಾಗಿ ಹಿಂದುಳಿದ ಹಾಗೂ ದುರ್ಬಲ ವರ್ಗಗಳನ್ನು ತಲುಪಲು ಪಕ್ಷ ವಿಶೇಷ ಗಮನ ನೀಡಿದೆ ಎಂದು ನಾಯಕ ಹೇಳಿದ್ದಾರೆ.

ಆದರೆ ಸೆಂಟರ್‌ ಫಾರ್‌ ಪಾಲಿಸಿ ರಿಸರ್ಚ್‌ನ ಫೆಲೋ ರಾಹುಲ್‌ ವರ್ಮಾ, ನಿತಿನ್‌ ನಬಿನ್‌ ಅವರ ತಂಡದ ರಚನೆಯಲ್ಲಿ ಬಿಜೆಪಿಯ ಎರಡು ವಾಸ್ತವಗಳು ಗೋಚರಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ತನ್ನ ಸಾಂಪ್ರದಾಯಿಕ ಮೇಲ್ಜಾತಿ, ನಗರ ಹಾಗೂ ಮಧ್ಯಮವರ್ಗದ ನೆಲೆಯನ್ನು ಮೀರಿ ವಿಸ್ತರಿಸಿದ್ದರೂ, ಆ ಮೂಲ ನೆಲೆಯೇ ಇನ್ನೂ ಪಕ್ಷದಲ್ಲಿ ಪ್ರಮುಖವಾಗಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಒಬಿಸಿ, ದಲಿತರು ಹಾಗೂ ಇತರ ಸಮುದಾಯಗಳಿಗೂ ಪಕ್ಷದಲ್ಲಿ ಸ್ಥಾನ ನೀಡುವ ಮೂಲಕ ತನ್ನ ವಿಸ್ತರಿತ ಸಾಮಾಜಿಕ ನೆಲೆಯನ್ನು ಬಿಜೆಪಿ ಪ್ರತಿಬಿಂಬಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ​ಬಡಪಾಯಿ ಮಹಿಳೆಯನ್ನು ಝಾಡಿಸಿದ ಬಂಗಾಳ ಸಚಿವೆ ಅಗ್ನಿಮಿತ್ರಾ ಪಾಲ್ ವಿರುದ್ಧ ಸಾರ್ವಜನಿಕರ ಆಕ್ರೋಶ

2024ರಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರನೇ ಅವಧಿಗೆ ಅಧಿಕಾರ ಸ್ವೀಕರಿಸಿದಾಗ 71 ಕೇಂದ್ರ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ಅವರಲ್ಲಿ 10 ಮಂದಿ ದಲಿತರು, 27 ಮಂದಿ ಒಬಿಸಿ, 21 ಮಂದಿ ‘ಮೇಲ್ಜಾತಿ’, ಐವರು ಆದಿವಾಸಿ ಸಮುದಾಯ ಹಾಗೂ ಐವರು ವಿವಿಧ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರಾಗಿದ್ದರು. 2019ರ ಲೋಕಸಭಾ ಚುನಾವಣೆಯ ಬಳಿಕ ರಚನೆಯಾದ ಮೋದಿ ಅವರ 57 ಸದಸ್ಯರ ಸಚಿವ ಸಂಪುಟದಲ್ಲಿ 32 ಮಂದಿ ‘ಮೇಲ್ಜಾತಿ’, 13 ಮಂದಿ ಒಬಿಸಿ, ಆರು ಮಂದಿ ಎಸ್‌ಸಿ ಹಾಗೂ ನಾಲ್ವರು ಎಸ್‌ಟಿ ಸಮುದಾಯದವರಾಗಿದ್ದರು. 2021ರ ವಿಸ್ತರಣೆಯ ಬಳಿಕ 27 ಒಬಿಸಿ, 12 ಎಸ್‌ಸಿ, 8 ಎಸ್‌ಟಿ ಹಾಗೂ 30 ‘ಮೇಲ್ಜಾತಿ’ ಸಚಿವರು ಸಂಪುಟದಲ್ಲಿದ್ದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲ್‌ ಕೃಷ್ಣ ಅಗರ್ವಾಲ್‌, ಪದಾಧಿಕಾರಿಗಳ ನೇಮಕದಲ್ಲಿ ಜಾತಿಯೊಂದೇ ಮಾನದಂಡವಲ್ಲ ಎಂದು ಹೇಳಿದ್ದಾರೆ. ಹಿಂದಿನ ಕೊಡುಗೆ, ಜನರೊಂದಿಗೆ ಹೊಂದಿರುವ ಸಂಪರ್ಕ, ಸಂಘಟನೆ ಬಲಪಡಿಸುವ ಸಾಮರ್ಥ್ಯ ಹಾಗೂ ಸೈದ್ಧಾಂತಿಕ ಬದ್ಧತೆಯನ್ನೂ ಪರಿಗಣಿಸಲಾಗುತ್ತದೆ. ಎಲ್ಲ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಲು ಪಕ್ಷ ಕಾಳಜಿ ವಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಹೊಸ ತಂಡದಲ್ಲಿ ಹಿಂದೂ ನಾಯಕರ ಜತೆಗೆ ಒಬ್ಬ ಸಿಖ್‌, ಇಬ್ಬರು ಕ್ರಿಶ್ಚಿಯನ್‌, ಒಬ್ಬ ಮುಸ್ಲಿಂ, ಒಬ್ಬ ಜೈನ್‌ ಹಾಗೂ ಒಬ್ಬ ಪಾರ್ಸಿ ಸಮುದಾಯದ ಪ್ರತಿನಿಧಿಗಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ ಗ್ರಾಮಸ್ಥರು

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು...

ವಿಜಯಪುರ | ಕೆ-ಸೆಟ್ ಪರೀಕ್ಷೆ ಪಾರದರ್ಶಕತೆಗೆ ಕಟ್ಟುನಿಟ್ಟಿನ ಕ್ರಮ: ಡಾ. ಔದ್ರಾಮ

ಅ. 11ರಂದು ನಡೆಯಲಿರುವ ಕೆ-ಸೆಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು ಸಾಧ್ಯವಲ್ಲವೇ?

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ...

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್‌; ದುಬಾರಿ ಔಷಧಗಳ ಬೆಲೆ ಶೇ.70ರವರೆಗೆ ಇಳಿಕೆ?

ದೇಶದಲ್ಲಿ ದುಬಾರಿಯಾಗಿರುವ ಕೆಲವು ಕ್ಯಾನ್ಸರ್ ಔಷಧಗಳ ಬೆಲೆ ಶೀಘ್ರದಲ್ಲೇ ಭಾರಿ ಪ್ರಮಾಣದಲ್ಲಿ...