ಬೀದರ್‌ | ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆ; ಬೇಕಿದೆ ಮಾರುಕಟ್ಟೆ ಸೌಲಭ್ಯ

Date:

ಸೀತಾಫಲ ಹಣ್ಣು ತಿನ್ನಲು ತುಂಬಾ ರುಚಿಕರ ಹಾಗೂ ಅಷ್ಟೇ ಸ್ವಾದಿಷ್ಟ, ರೋಗ ನಿರೋಧಕ ಶಕ್ತಿಯೂ ಹೊಂದಿರುವ ಕಾರಣ ಸೀತಾಫಲ ಸೀಜನ್‌ ನಲ್ಲಿ ಒಮ್ಮೆಯಾದರೂ ಈ ಹಣ್ಣು ಸವಿಯಲೇಬೇಕೆಂದು ಜನ ತುಂಬಾ ಇಷ್ಟಪಡುತ್ತಾರೆ.

ಬೆಟ್ಟ, ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಸೀತಾಫಲ ಹಣ್ಣು ಇದೀಗ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಹಣ್ಣಾಗಿದೆ. ವರ್ಷದಲ್ಲಿ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ಈ ಎರಡು ತಿಂಗಳು ಮಾತ್ರ ದೊರೆಯುವ ಸೀತಾಫಲ ಸಿಹಿ ಸವಿಯಲು ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಸೀತಾಫಲ ಹೆಚ್ಚಾಗಿ ಬೆಳೆಯುವುದು ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ಕಲಬುರಗಿ ಹಾಗೂ ಬೀದರ್‌ ಜಿಲ್ಲೆಯಲ್ಲಿ, ಉಷ್ಣ ವಲಯದ ಗುಡ್ಡಗಾಡು ಪ್ರದೇಶದಲ್ಲಿ ಬೆಳೆಯುವ ಸೀತಾಫಲ ಮಳೆಗಾಲ ಆರಂಭವಾಗುತ್ತಿದ್ದಂತೆ ಸ್ವಚ್ಛಂದವಾಗಿ ಚಿರುರೊಡೆದು, ಸುವಾಸನೆಯುಕ್ತ ಹೂಗಳಿಂದ ಕಂಗೊಳಿಸಿ ಕಾಯಿ ಬಿಡುತ್ತದೆ. ಹೆಚ್ಚು ಬೀಜಗಳು ಹೊಂದಿರುವ ಈ ಹಣ್ಣು ಒಮ್ಮೆ ಸವಿದರೆ ಸಾಕು ತಿನ್ನಲು ಮಜಾ ಬರುತ್ತದೆ. ಇಂಥ ಅಪರೂಪದ ಹಣ್ಣು ವರ್ಷ ಎಲ್ಲೆಡೆ ಉತ್ತಮ ಮಳೆಯಾದ ಕಾರಣ ಹೆಚ್ಚಾಗಿ ಬೆಳೆದಿದೆ, ಅಷ್ಟೇ ಬೇಡಿಕೆಯೂ ಹೆಚ್ಚಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸೀತಾಫಲ ಹಣ್ಣಿಗೆ ಔರಾದ ʼಫೇಮಸ್ʼ :

ಬೀದರ್‌ ಜಿಲ್ಲಾದ್ಯಂತ ಸೀತಾಫಲ ಹಣ್ಣು ಬೆಳೆಯುತ್ತದೆ, ಆದರೆ ಅತೀ ಹೆಚ್ಚು ಬೆಳೆಯುವುದು ಔರಾದ ತಾಲೂಕಿನಲ್ಲಿ, ಗುಡ್ಡಗಾಡು ಪ್ರದೇಶ ಹೊಂದಿರುವ ಈ ತಾಲೂಕಿನಲ್ಲಿ ಸೀತಾಫಲ ಗಿಡಗಳು ಹೆಚ್ಚಾಗಿ ಬೆಳೆಯುತ್ತವೆ. ತಾಲೂಕಿನ ಚಿಂತಾಕಿ, ಸಂತಪೂರ ಸೇರಿದಂತೆ ಇತರೆ ಹೋಬಳಿಗಳಲ್ಲಿ ನೈಸರ್ಗೀಕವಾಗಿ ಬೆಳೆಯುವ ಸೀತಾಫಲ ಸಿಹಿಗೆ ಜಿಲ್ಲೆಯಲ್ಲಿ ಭಾರೀ ಡಿಮ್ಯಾಂಡ್‌.

ಪ್ರಾಕೃತಿಕವಾಗಿ ಅರಣ್ಯ ಪ್ರದೇಶ, ಗುಡ್ಡಗಾಡು ಪ್ರದೇಶಲ್ಲಿ ಬೆಳೆಯುವ ಸೀತಾಫಲಕ್ಕೆ 2 ತಿಂಗಳು ಸುಗ್ಗಿಯ ಕಾಲ, ಈ ಭಾಗದ ಹಲವು ಕುಟುಂಬಗಳಿಗೆ ಎರಡು ತಿಂಗಳು ತಕ್ಕ ಮಟ್ಟಿನ ಆದಾಯದ ಮೂಲವಾಗಿದೆ. ಸೀತಾಫಲ ಗಿಡಗಳಿಗೆ ಯಾರೂ ನೀರು, ಗೊಬ್ಬರ ಹಾಕಿ ಪೋಷಣೆ ಮಾಡುವುದಿಲ್ಲ. ತಂತಾನೇ ಬೆಳೆಯುವ ಸೀತಾಫಲ ಹಣ್ಣು ಪುಕ್ಕಟೆಯಾಗಿ ದೊರೆಯುತ್ತದೆ. ಹೀಗಾಗಿ ಅನೇಕ ಕುಟುಂಬಗಳು ಎರಡು ತಿಂಗಳು ಮುಂಜಾನೆ ಎದ್ದು ಕೈಯಲ್ಲಿ ಚೀಲ ಹಿಡಿದುಕೊಂಡು ಗುಡ್ಡಗಾಡು , ಅರಣ್ಯ ಪ್ರದೇಶದೊಳಗೆ ಹೊಕ್ಕರೆ ಸಾಕು ಹಣ್ಣು ಮತ್ತು ಕಾಯಿಯ ಚೀಲ ತುಂಬಿಕೊಂಡು ಬಂದು ಹಣ್ಣಿನ ವ್ಯಾಪಾರ ನಡೆಸಿ ಆದಾಯ ಗಳಿಸುತ್ತಾರೆ.

ಮಾರುಕಟ್ಟೆ ಇಲ್ಲ; ಬೀದಿಯಲ್ಲಿ ವ್ಯಾಪಾರ:

ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಎಲ್ಲಾ ಹಣ್ಣುಗಳು ರಾಸಾಯನಿಕ ಮಿಶ್ರಿತ, ಸೀತಾಫಲ ತೋಟಗಾರಿಕೆ ಬೆಳೆಯಾದರೂ ಬೆಳೆಯುವವರ ರೈತರ ಸಂಖ್ಯೆ ತುಂಬಾ ವಿರಳ. ಯಾವುದೇ ರಾಸಾಯನಿಕ ಮಿಶ್ರಿತವಿಲ್ಲದೇ ಇರುವ ಸೀತಾಫಲ ಹಣ್ಣಿಗೆ ಬೇಡಿಕೆ ಹೆಚ್ಚಿದ್ದರೂ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ವ್ಯಾಪಾರಿಗಳು ಬೀದಿಬದಿಯಲ್ಲಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ.

ಸುಮಾರು 30-40 ಕಿ.ಮೀ. ದೂರದ ಹಳ್ಳಿ-ತಾಂಡಾಗಳಿಂದ ಬೀದರ್‌ ನಗರಕ್ಕೆ ಬುಟ್ಟಿ ಹೊತ್ತಿಕೊಂಡು ಬರುವ ಬಡ ವ್ಯಾಪಾರಿಗಳು ಬೀದರ್‌ ನಗರದ ಸಿದ್ದಾರ್ಥ ಕಾಲೇಜು ಮುಂಭಾಗ, ಜನವಾಡ ರಸ್ತೆ, ಅಂಬೇಡ್ಕರ್‌ ವೃತ್ತ, ಹಳೆ ಬಸ್‌ ನಿಲ್ದಾಣ ಸೇರಿದಂತೆ ನಗರದ ವಿವಿಧ ಕಡೆ ಬೀದಿ ಮೇಲೆ ಕುಳಿತು ಮಾರಾಟ ಮಾಡುವ ವ್ಯಾಪಾರಿಗಳಿಗೆ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಬಿಸಿಲು, ಮಳೆಯಲ್ಲೇ ವಹೀವಾಟು ನಡೆಸುತ್ತಿದ್ದಾರೆ.

ಸೀತಾಫಲ ಹಣ್ಣಾದ ನಂತರ ಎರಡ್ಮೂರು ದಿನಗಳ ಕಾಲ ಉಳಿಯುವುದಿಲ್ಲ. ಹೀಗಾಗಿ ಹಣ್ಣಾದ ದಿನವೇ ಮಾರಾಟ ಆಗಲೇಬೇಕು ಎಂಬುವ ಕಾರಣ ಅಂದಂದೇ ಸಾಗಾಣೆ ಮಾಡಿ ಮಾರಾಟ ಮಾಡುತ್ತಾರೆ. ಒಂದು ಹಣ್ಣಿಗೆ 5, 10 ರೂ. ಯಂತೆ ಬೇಡಿಕೆಯಿದೆ, ಇನ್ನು 100, 200, 400 ರೂಪಾಯಿಗೆ 1 ಬುಟ್ಟಿಯಂತೆ ಮಾರಾಟ ಮಾಡುತ್ತಾರೆ. ಎರಡು ತಿಂಗಳ ಸುಗ್ಗಿಯ ಕಾಲದಲ್ಲಿ ಕನಿಷ್ಠ 40-50 ಸಾವಿರ ಆದಾಯ ಗಳಿಸುತ್ತಾರೆ.

ಸೀತಾಫಲಕ್ಕೆ ಸೂಕ್ತ ಬೆಲೆ ನಿಗದಿಪಡಿಬೇಕು:

ಗ್ರಾಮೀಣ ಭಾಗದ ಕೆಲ ಕೂಲಿ ಕಾರ್ಮಿಕರು, ಕೃಷಿಕರು ವರ್ಷದ ಎರಡು ತಿಂಗಳು ಸೀತಾಫಲ ಹಣ್ಣಿನ ವ್ಯಾಪಾರ ಮಾಡುತ್ತಾರೆ. ಗುಡ್ಡಗಾಡು, ಅರಣ್ಯ ಪ್ರದೇಶಗಳಿಂದ ಕಷ್ಟಪಟ್ಟು ಕಡಿದು ತಂದು ಮಾರಾಟ ಮಾಡುವ ಬಡ ವ್ಯಾಪಾರಿಗಳಿಗೆ ದುಡಿಮೆಯಂತೆ ಆದಾಯ ಸಿಗುತ್ತಿಲ್ಲ. ಅವರಿಗೂ ಸೂಕ್ತ ಮಾರುಕಟ್ಟೆ ಹಾಗೂ ಸಾಗಾಣೆ ವ್ಯವಸ್ಥೆ ಕಲ್ಪಿಸಿ ನಿರ್ದಿಷ್ಟ ಬೆಲೆ ನಿಗದಿಪಡಿಸಿದರೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯ. ಹಾಗೂ ಬೇರೆ ರಾಜ್ಯಗಳಿಗೆ ಸಾಗಾಟ ಮಾಡಲು ಅನುಕೂಲ ಆಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದರ ಈದಿನ.ಕಾಮ್‌ ದೊಂದಿಗೆ ಮಾತನಾಡಿ ಹೇಳಿದರು.

ನಗರಕ್ಕೆ ಹೆಚ್ಚಾಗಿ ಔರಾದ ತಾಲೂಕಿನಿಂದ ಸೀತಾಫಲ ಹಣ್ಣು ಬರುತ್ತದೆ, ಹಳ್ಳಿಗಳಿಂದ ತರುವ ಕೆಲ ವ್ಯಾಪಾರಿಗಳು ಬೀದಿ ಬದಿಯಲ್ಲೇ ಕುಳಿತು ಮಾರಾಟ ಮಾಡಿದರೆ ಉಳಿದವರು ಸಗಟು ಬೆಲೆಗೆ ಮಾರಾಟ ಮಾಡುತ್ತಾರೆ. ಒಂದು ಬುಟ್ಟಿಯಲ್ಲಿ ನೂರು, ಇನ್ನೂರು ಹೀಗೆ ಆಯಾ ಹಣ್ಣಿನ ರುಚಿಕರ ತಕ್ಕಂತೆ ಬೆಲೆ ಇರುತ್ತದೆ. ನಾವು ಬುಟ್ಟಿಯ ರೂಪದಲ್ಲಿ ಖರೀದಿಸಿ ಚಿಲ್ಲರೆ ಮಾರಾಟ ಮಾಡುತ್ತೇವೆ, ಇದರಿಂದ ದಿನಕ್ಕೆ 500, 600 ಆದಾಯ ಆಗುತ್ತದೆ ಎಂದು ಬೀದಿಬದಿ ವ್ಯಾಪಾರಿ ಪ್ರೇಮಾ ಮಿರಗಂಜಿ ಹೇಳುತ್ತಾರೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಮನೆ ಗೋಡೆ ಕುಸಿದು 8 ವರ್ಷದ ಬಾಲಕಿ ಸಾವು

ಬೀದರ್‌ ತೋಟಗಾರಿಕೆ ಮಾಹಾವಿದ್ಯಾಲಯದ ಡೀನ್‌ ಡಾ. ಎಸ್.ವಿ.ಪಾಟೀಲ್‌ ಈದಿನ.ಕಾಮ್‌ ದೊಂದಿಗೆ ಮಾತನಾಡಿ, ” ಸೀತಾಫಲ ಹೆಚ್ಚಾಗಿ ಔರಾದ ತಾಲೂಕಿನಲ್ಲಿ ಬೆಳೆಯುತ್ತದೆ, ಎರಡು ತಿಂಗಳು ಕಾಲ ಇರುವ ಸೀತಾಫಲ ಸುಗ್ಗಿ ಅನೇಕರು ಆದಾಯದ ಮೂಲವಾಗಿದೆ. ಸೀತಾಫಲ ಹಣ್ಣಾದ ನಂತರ ಜಾಸ್ತಿ ದಿನಗಳಾದರೆ ಕೊಳೆಯುತ್ತದೆ. ಹೀಗಾಗಿ ದೂರದ ನಗರಗಳಿಗೆ ಸಾಗಾಣೆ ಮಾಡುವುದು ಕಷ್ಟಕರ. ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಹಬ್ಬಗಳಲ್ಲಿ ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆಯಿದೆ. ಸೀತಾಫಲ ಹೆಚ್ಚಾಗಿ ಹಣ್ಣಿನ ಮಾರುಕಟ್ಟೆಗೆ ಹೋಗುವುದಿಲ್ಲ, ಬೀದಿ ಬದಿಯಲ್ಲಿ ಮಾತ್ರ ಮಾರಾಟ ನಡೆಯುತ್ತದೆ. ಇದಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಯೋಚಿಸೋಣ” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಎಚ್‌ಡಿಕೆ ಹೇಳಿಕೆಗೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರ ಖಂಡನೆ

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು...

ಕಲಬುರಗಿ | ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜ್ಯಾದ್ಯಂತ ಕಾಂಗ್ರೆಸ್‌ಗೆ ಬೆಂಬಲ: ದಸಂಸ

2024ರ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿವಿಗಾಗಿ ರಾಜ್ಯಾದ್ಯಂತ ಕಾಂಗ್ರೆಸ್‌...

ದಾವಣಗೆರೆ | ಭಾರತ ದೇಶ ಇರುವವರೆಗೂ ಸಂವಿಧಾನ ಇರುತ್ತದೆ: ಪ್ರಾಂಶುಪಾಲ ಕಲ್ಲೇಶ್‌

ಭಾರತ ದೇಶ ಇರುವವರೆಗೂ ಸಂವಿಧಾನ ಇರುತ್ತದೆ. ಅದರ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ...

ರಾಯಚೂರು | ಎಚ್‌ಡಿಕೆಯಿಂದ ಮಹಿಳೆಯರಿಗೆ ಅವಮಾನ, ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ...