ʼನಗರದಲ್ಲಿದ್ದರೂ 12 ವರ್ಷಗಳಿಂದ ಮೂಲಸೌಲಭ್ಯವಿಲ್ಲʼ: ಕಲಬುರಗಿ ಬುಡ್ಗ ಜಂಗಮರ ಕಣ್ಣೀರಿನ ಕಥೆ

Date:

ಅಭಿವೃದ್ಧಿಯ ಘೋಷಣೆಗಳು ಕೇವಲ ನಗರ ಕೇಂದ್ರಗಳಿಗೆ ಸೀಮಿತವಾಗದೆ, ಅಂಚಿನ ಸಮುದಾಯಗಳ ಬದುಕಿಗೂ ತಲುಪಿದಾಗ ಮಾತ್ರ ಅದು ನಿಜವಾದ ಅಭಿವೃದ್ಧಿಯಾಗುತ್ತದೆ. 12 ವರ್ಷಗಳಿಂದ ಮೂಲಸೌಕರ್ಯಗಳಿಗಾಗಿ ಕಾಯುತ್ತಿರುವ ಬುಡ್ಗ ಜಂಗಮ ಕಾಲನಿಯ ಜನರಿಗೆ ರಸ್ತೆ, ನೀರು, ವಿದ್ಯುತ್, ಒಳಚರಂಡಿ ಸೇರಿದಂತೆ ಕನಿಷ್ಠ ಮೂಲಸೌಲಭ್ಯಗಳನ್ನು ಒದಗಿಸುವುದು ಸರ್ಕಾರ ಮತ್ತು ಸ್ಥಳೀಯ ಆಡಳಿತದ ತುರ್ತು ಜವಾಬ್ದಾರಿಯಾಗಿದೆ.

ಒಂದು ಕಡೆ ಸ್ಮಾರ್ಟ್ ಸಿಟಿ, ನಗರಾಭಿವೃದ್ಧಿ, ಮೂಲಸೌಕರ್ಯಗಳ ಅಭಿವೃದ್ಧಿ ಎಂಬ ಘೋಷಣೆಗಳು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಕಲಬುರಗಿ ನಗರದ ಹೊರವಲಯದಲ್ಲಿರುವ ಬುಡ್ಗ ಜಂಗಮ ಕಾಲೋನಿಯ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ಹಾಗೂ 1,300ಕ್ಕೂ ಅಧಿಕ ಮಂದಿ ಕಳೆದ 12 ವರ್ಷಗಳಿಂದ ರಸ್ತೆ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್, ಅಂಗನವಾಡಿ, ನಿವೇಶನ, ರುದ್ರಭೂಮಿ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ ಬದುಕು ಸಾಗಿಸುತ್ತಿದ್ದಾರೆ.

- Advertisement -

ನಿತ್ಯದ ಬದುಕೇ ಇಲ್ಲಿ ಹೋರಾಟವಾಗಿದೆ. ಮಳೆ ಬಂದರೆ ಕೆಸರಿನ ನಡುವೆ ಬದುಕು, ಬೇಸಿಗೆಯಲ್ಲಿ ನೀರಿಗಾಗಿ ಪರದಾಟ, ರಾತ್ರಿ ಕತ್ತಲೆಯಲ್ಲೇ ಸಂಚಾರ, ಅಸ್ವಸ್ಥರಾದರೆ ಆಸ್ಪತ್ರೆಗೆ ಕರೆದೊಯ್ಯಲು ರಸ್ತೆ ಇಲ್ಲ, ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೂ ಸ್ವಂತ ಜಾಗವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಕಾಲನಿ ನಿವಾಸಿಗಳು ತಮ್ಮ ಅಳಲನ್ನು ಈ ದಿನ.ಕಾಮ್ ಮುಂದೆ ಹಂಚಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ʼಕಲಬುರಗಿಯಲ್ಲಿದ್ದರೂ ನಾವು ನಗರದವರಲ್ಲʼ

ಕಾಲನಿ ನಿವಾಸಿ ದೇವಿಂದ್ರಪ್ಪ ಮಾತನಾಡಿ, “ನಮ್ಮ ಕಾಲನಿಯಲ್ಲಿ ರಸ್ತೆ ಎಂಬುದೇ ಇಲ್ಲ. ಮಳೆ ಬಂದರೆ ಸಂಪೂರ್ಣ ಕೆಸರಿನ ಕೆರೆಯಾಗುತ್ತದೆ. ಒಳಚರಂಡಿ ಇಲ್ಲದ ಕಾರಣ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಮಕ್ಕಳು, ಮಹಿಳೆಯರು, ವೃದ್ಧರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಾವು ಕಲಬುರಗಿ ನಗರದಲ್ಲಿದ್ದರೂ ನಗರದವರಂತೆ ಬದುಕುತ್ತಿಲ್ಲ. ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ನಮ್ಮ ಸಮಸ್ಯೆ ಕೇಳಲು ಬರುವುದೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ನಿವಾಸಿ ಹಣಮಂತ ಮಾತನಾಡಿ, “ಇಷ್ಟು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದರೂ ಸರ್ಕಾರದಿಂದ ನಮಗೆ ಒಂದೇ ಒಂದು ಮೂಲಸೌಲಭ್ಯವೂ ಸಿಕ್ಕಿಲ್ಲ. ಕುಡಿಯುವ ನೀರು ಇಲ್ಲ, ರಸ್ತೆ ಇಲ್ಲ, ಸರ್ಕಾರಿ ಬಸ್ ಇಲ್ಲ, ಅಂಗನವಾಡಿ ಇಲ್ಲ, ರುದ್ರಭೂಮಿ ಇಲ್ಲ. ಚುನಾವಣೆ ವೇಳೆ ಮಾತ್ರ ಎಲ್ಲರೂ ಬರುತ್ತಾರೆ. ನಂತರ ನಮ್ಮ ಕಡೆ ಯಾರೂ ಗಮನ ಹರಿಸುವುದಿಲ್ಲ” ಎಂದು ಆರೋಪಿಸಿದರು.

ಅಲೆಮಾರಿ ಸಂಘಟನೆಯ ಉಪಾಧ್ಯಕ್ಷ ಯಲ್ಲಪ್ಪ ಮಾತನಾಡಿ, “ನಾವು ಶಿಕ್ಷಣದಿಂದ ವಂಚಿತರಾದವರು. ಆದರೆ ನಮ್ಮ ಮಕ್ಕಳು ನಮ್ಮಂತೆ ಆಗಬಾರದೆಂಬ ಆಸೆ ಇದೆ. ಅದಕ್ಕಾಗಿ ಕನಿಷ್ಠ ಒಂದು ಅಂಗನವಾಡಿ ಕೇಂದ್ರವಾದರೂ ಬೇಕು. 500 ಕುಟುಂಬಗಳು, 1,300ಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಯಾವುದೇ ಸೌಲಭ್ಯ ಇಲ್ಲ. ಸುಮಾರು 300ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆಗಳಿಲ್ಲ. ಬೇರೆವರ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಬದುಕುತ್ತಿದ್ದೇವೆ. ಅಧಿಕಾರಿಗಳು ಭರವಸೆ ಕೊಡುತ್ತಾರೆಯೇ ಹೊರತು, ಕೆಲಸ ಮಾಡುವುದಿಲ್ಲ” ಎಂದು ದೂರಿದರು.

ಕುಡಿಯುವ ನೀರಿನ ಸಮಸ್ಯೆ ಕಾಲನಿಯ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಹಿಂದೆ ನಿರ್ಮಿಸಿದ್ದ ಎರಡು ಬೋರ್‌ವೆಲ್‌ಗಳು ಕೆಟ್ಟು ನಿಂತಿವೆ. ಒಂದೇ ಬೋರ್‌ವೆಲ್‌ನಿಂದ ನೂರಾರು ಕುಟುಂಬಗಳು ನೀರು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನೀರಿಗಾಗಿ ಮಹಿಳೆಯರು, ಮಕ್ಕಳು ಪ್ರತಿದಿನ ಸರದಿಯಲ್ಲಿ ನಿಂತು ಕಾಯಬೇಕು. ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಕಾಲನಿಯಲ್ಲಿ ಶುದ್ಧ ಕುಡಿಯುವ ನೀರಿನ ಆರ್‌ಒ ಘಟಕವೂ ಇಲ್ಲ. ಹೀಗಾಗಿ ದೂರದ ಪ್ರದೇಶಗಳಿಂದ ನೀರು ತಂದು ಕುಡಿಯಬೇಕಾದ ಪರಿಸ್ಥಿತಿ ಇದೆ.

ʼನೀರು ತರಲು ಕಿಲೋಮೀಟರ್‌ಗಟ್ಟಲೆ ನಡೆಯಬೇಕುʼ

ಅಲೆಮಾರಿ ಸಮುದಾಯದ ಈರಮ್ಮ ಮಾತನಾಡಿ, “ಕುಡಿಯುವ ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ದೂರ ನಡೆದು ಎರಡು-ಮೂರು ಕೊಡ ನೀರು ತರುತ್ತೇವೆ. ಅದೇ ನೀರನ್ನು ಕುಡಿಯಲು, ಅಡುಗೆಗೆ, ಸ್ನಾನಕ್ಕೆ ಬಳಸುತ್ತೇವೆ. ಮಳೆ ಬಂದರೆ ಗುಡಿಸಲುಗಳೊಳಗೆ ನೀರು ನುಗ್ಗುತ್ತದೆ. ಅಂಗನವಾಡಿ ಇಲ್ಲ. ಮಕ್ಕಳಿಗೆ ಸರಿಯಾದ ಶಿಕ್ಷಣದ ಅವಕಾಶವೂ ಇಲ್ಲ. ಸತ್ತವರನ್ನು ಸಮಾಧಿ ಮಾಡಲು ಜಾಗವಿಲ್ಲ. ಇತರರ ಬಳಿ ಬೇಡಿಕೊಂಡು ಹಣ ಕೊಟ್ಟು ಅಂತ್ಯಸಂಸ್ಕಾರ ಮಾಡಬೇಕಾಗುತ್ತದೆ. ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು ನಮ್ಮನ್ನು ನೆನಪಿಸಿಕೊಳ್ಳುತ್ತಾರೆ” ಎಂದು ಕಣ್ಣೀರಿಟ್ಟರು.

ನಿವಾಸಿ ವೆಂಕಟೇಶ ಕೋಮಾರಿ ಮಾತನಾಡಿ, “ರಸ್ತೆ ಇಲ್ಲದ ಕಾರಣ ಆ್ಯಂಬುಲೆನ್ಸ್‌ ಕಾಲನಿಯೊಳಗೆ ಬರಲು ಸಾಧ್ಯವಾಗುವುದಿಲ್ಲ. ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ಆಟೋದಲ್ಲೇ ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತದೆ. ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ದುಸ್ತರವಾಗುತ್ತದೆ. ಯಾವ ಪಕ್ಷದ ಜನಪ್ರತಿನಿಧಿಗಳೂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲೆಮಾರಿ ಸಮುದಾಯದ ಗಜೇಂದ್ರಪ್ಪ ಮಾತನಾಡಿ, “ಇವತ್ತು ಸಮಾಜದಲ್ಲಿ ನಾಯಿಗೂ ಬೆಲೆ ಇದೆ. ಆದರೆ ನಮ್ಮ ಸಮುದಾಯದ ಜನರಿಗೆ ಬೆಲೆ ಇಲ್ಲ. ನಮ್ಮ ನೋವು ಕೇಳುವವರಿಲ್ಲ. ನಾವು ಯಾವ ಪಾಪ ಮಾಡಿದ್ದೇವೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ” ಎಂದು ಭಾವುಕರಾದರು.

ಎರಡು ಗ್ರಾಮ ಪಂಚಾಯಿತಿಗಳ ನಡುವೆ ಸಿಲುಕಿದ ಕಾಲನಿ

ಕಾಲನಿಯ ಸುಮಾರು 160 ಮಂದಿ ಮತದಾರರು ಕುಸುನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದರೆ, ಉಳಿದವರು ರಾಜಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದಾರೆ. ಈ ಆಡಳಿತಾತ್ಮಕ ಗೊಂದಲದಿಂದ ಯಾವುದೇ ಇಲಾಖೆ ಸಂಪೂರ್ಣ ಜವಾಬ್ದಾರಿ ವಹಿಸದೆ ಅಭಿವೃದ್ಧಿ ಕಾಮಗಾರಿಗಳು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಸುಮಾರು 400 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ಇಲ್ಲ. ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಲವರು ಇತರರ ಜಾಗದಲ್ಲಿ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿ ವಾಸಿಸುತ್ತಿದ್ದಾರೆ. ಇದಕ್ಕಿಂತಲೂ ದೊಡ್ಡ ನೋವು ಎಂದರೆ ಕಾಲನಿಗೆ ಸ್ವಂತ ರುದ್ರಭೂಮಿ ಇಲ್ಲ. ಮೃತಪಟ್ಟವರ ಅಂತ್ಯಸಂಸ್ಕಾರಕ್ಕಾಗಿ ಇತರರ ಬಳಿ ಬೇಡಿಕೊಂಡು ಹಣ ನೀಡಿ ಜಾಗ ಪಡೆಯಬೇಕಾದ ಪರಿಸ್ಥಿತಿ ಇದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ವಿದ್ಯುತ್ ಕಂಬ, ಬೀದಿ ದೀಪ, ಅಂಗನವಾಡಿಗೆ ಆಗ್ರಹ

ಕಾಲನಿಯ ಎರಡು ರಸ್ತೆಗಳಿಗೆ ವಿದ್ಯುತ್ ಕಂಬಗಳು ಹಾಗೂ ಬೀದಿ ದೀಪಗಳನ್ನು ಅಳವಡಿಸಬೇಕು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕನಿಷ್ಠ ಎರಡು ಅಂಗನವಾಡಿ ಕೇಂದ್ರಗಳನ್ನು ಆರಂಭಿಸಬೇಕು. ಜತೆಗೆ ಸಮರ್ಪಕ ರಸ್ತೆ, ಒಳಚರಂಡಿ, ಶುದ್ಧ ಕುಡಿಯುವ ನೀರಿನ ಆರ್‌ಒ ಘಟಕ, ಹೆಚ್ಚುವರಿ ಬೋರ್‌ವೆಲ್, ಸರ್ಕಾರಿ ಬಸ್ ವ್ಯವಸ್ಥೆ ಹಾಗೂ ನಿವೇಶನ ಹಕ್ಕುಪತ್ರಗಳನ್ನು ಕೂಡಲೇ ನೀಡಬೇಕು ಎಂಬುದು ನಿವಾಸಿಗಳ ಒತ್ತಾಯವಾಗಿದೆ.

12 ವರ್ಷಗಳ ನಿರೀಕ್ಷೆಗೆ ಕೊನೆ ಯಾವಾಗ?

ನಗರದ ವ್ಯಾಪ್ತಿಯಲ್ಲಿದ್ದರೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಬುಡ್ಗ ಜಂಗಮ ಕಾಲನಿಯ ಜನರ ಬದುಕು ಅಭಿವೃದ್ಧಿಯ ಭರವಸೆಗಳಿಗೂ ವಾಸ್ತವಕ್ಕೂ ಇರುವ ಅಂತರವನ್ನು ಎತ್ತಿ ತೋರಿಸುತ್ತದೆ. ದಶಕಕ್ಕೂ ಹೆಚ್ಚು ಕಾಲದಿಂದ ಸಂಕಷ್ಟ ಅನುಭವಿಸುತ್ತಿರುವ ಈ ಕುಟುಂಬಗಳ ಸಮಸ್ಯೆಗಳನ್ನು ಸರ್ಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕಲ್ಪಿಸಬೇಕೆಂಬುದು ನಿವಾಸಿಗಳ ಒಕ್ಕೊರಲಿನ ಆಗ್ರಹವಾಗಿದೆ. ಸಮಸ್ಯೆಗಳು ಶೀಘ್ರ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿದ್ದೀರಾ? ದೇವದುರ್ಗ | 10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಣೆಯಾಗದ ಕನ್ನಡ ಪಠ್ಯಪುಸ್ತಕ: ಕಲಿಕೆ ಹಾಗೂ ಪರೀಕ್ಷಾ ಸಿದ್ಧತೆಗೆ ಹೊಡೆತ

ಅಭಿವೃದ್ಧಿಯ ಘೋಷಣೆಗಳು ಕೇವಲ ನಗರ ಕೇಂದ್ರಗಳಿಗೆ ಸೀಮಿತವಾಗದೆ, ಅಂಚಿನ ಸಮುದಾಯಗಳ ಬದುಕಿಗೂ ತಲುಪಿದಾಗ ಮಾತ್ರ ಅದು ನಿಜವಾದ ಅಭಿವೃದ್ಧಿಯಾಗುತ್ತದೆ. 12 ವರ್ಷಗಳಿಂದ ಮೂಲಸೌಕರ್ಯಗಳಿಗಾಗಿ ಕಾಯುತ್ತಿರುವ ಬುಡ್ಗ ಜಂಗಮ ಕಾಲನಿಯ ಜನರಿಗೆ ರಸ್ತೆ, ನೀರು, ವಿದ್ಯುತ್, ಒಳಚರಂಡಿ ಸೇರಿದಂತೆ ಕನಿಷ್ಠ ಮೂಲಸೌಲಭ್ಯಗಳನ್ನು ಒದಗಿಸುವುದು ಸರ್ಕಾರ ಮತ್ತು ಸ್ಥಳೀಯ ಆಡಳಿತದ ತುರ್ತು ಜವಾಬ್ದಾರಿಯಾಗಿದೆ.

WhatsApp Image 2026 05 02 at 12.01.27 e1777704270988
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿ ಪ್ರತಿಭಟನೆ: ಟಿವಿ ವಾಹಿನಿಗಳ ವಿಶ್ವಾಸಾರ್ಹತೆ ಕೊರತೆಗೆ ಕನ್ನಡಿ ಎಂದ ‘ಎಡಿಟರ್ಸ್ ಗಿಲ್ಡ್’

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಿಜೆಪಿ (CJP) ಪ್ರತಿಭಟನೆಗಳ ವರದಿಗಾರಿಕೆಯಲ್ಲಿ ಬಹುತೇಕ ಮುಖ್ಯವಾಹಿನಿಯ...

ದಸರಾ ಕಲಾ ಕೆಲಸಗಳನ್ನು ನೇರವಾಗಿ ಕಲಾವಿದರಿಗೆ ನೀಡಲು ಆಗ್ರಹ

ಮೈಸೂರು ದಸರಾ ಮಹೋತ್ಸವದ ಕಲಾ ಚಟುವಟಿಕೆಗಳ ಗುತ್ತಿಗೆಗಳನ್ನು ಮಧ್ಯವರ್ತಿಗಳು ಹಾಗೂ ಖಾಸಗಿ...

ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನಿಸಿದ್ದ 8 ವಿದ್ಯಾರ್ಥಿಗಳಿಗೆ ಐಐಐಟಿ ಹೈದರಾಬಾದ್ ನೋಟಿಸ್

ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ...