ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮದಲ್ಲಿ ಬುಧವಾರ ಸುರಿದ ಗುಡುಗು-ಮಿಂಚಿನ ಸಹಿತ ಭಾರೀ ಮಳೆಯ ವೇಳೆ ಕಣಕಿ ಬಣವೆಗೆ ಸಿಡಿಲು ಬಡಿದು ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಗ್ರಾಮದ ಸಿದ್ದಣ್ಣ ಶರಣಪ್ಪ ಕೊಟ್ರಿಕಿ ಅವರ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಕಣಕಿ ಬಣವೆಗೆ ಬೆಳಗ್ಗೆ ಸುಮಾರು 4 ಗಂಟೆ ಸುಮಾರಿಗೆ ಸಿಡಿಲು ಬಡಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ.
ಮಳೆಯ ನಡುವೆಯೂ ಬಣವಿ ಹೊತ್ತಿ ಉರಿದಿದ್ದು, ಗಾಳಿಯ ರಭಸಕ್ಕೆ ಬೆಂಕಿಯ ಕಿಡಿಗಳು ದೂರದವರೆಗೆ ಹಾರಿದ ದೃಶ್ಯ ಸ್ಥಳೀಯರ ಆತಂಕಕ್ಕೆ ಕಾರಣವಾಯಿತು. ಕೆಲ ಸ್ಥಳೀಯರು ಘಟನೆಯ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಹೊಲದಲ್ಲಿದ್ದ ಜೋಳದ ರಾಶಿಯನ್ನು ಕೆಲ ದಿನಗಳ ಹಿಂದೆ ಕಣಕಿ ಬಣವಿಯಾಗಿ ಸಂಗ್ರಹಿಸಲಾಗಿತ್ತು. ಸಿಡಿಲಿನ ಪರಿಣಾಮ ಸಂಪೂರ್ಣ ಬಣವಿ ಸುಟ್ಟುಹೋಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಖಾಸಗಿ ಶಾಲೆಯ ಅವ್ಯವಸ್ಥೆ ಖಂಡಿಸಿ ಜಯ ಕರ್ನಾಟಕ ಜನಪರ ವೇದಿಕೆ ಮನವಿ
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.





