ಕೊಡಗಿನಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 24.66 ಮಿ.ಮೀ. ಮಳೆ

Date:

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 24.66 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷದ ಇದೇ ದಿನ 49.44 ಮಿ.ಮೀ. ಮಳೆಯಾಗಿತ್ತು. ಈ ವರ್ಷದ ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ 405.58 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 1486.74 ಮಿ.ಮೀ. ಮಳೆ ದಾಖಲಾಗಿತ್ತು.

- Advertisement -

ತಾಲ್ಲೂಕುವಾರು ಮಳೆಯ ವಿವರದ ಪ್ರಕಾರ, ಸೋಮವಾರಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 63.35 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 24.22 ಮಿ.ಮೀ., ಪೊನ್ನಂಪೇಟೆ ತಾಲ್ಲೂಕಿನಲ್ಲಿ 20.74 ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ 7.80 ಮಿ.ಮೀ. ಹಾಗೂ ಕುಶಾಲನಗರ ತಾಲ್ಲೂಕಿನಲ್ಲಿ 7.20 ಮಿ.ಮೀ. ಮಳೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಆಗ್ನೇಯ ಪದವೀಧರ ಕ್ಷೇತ್ರ: ಕಾಂಗ್ರೆಸ್-ಬಿಜೆಪಿ ನಡುವೆ ಬಿರುಸಿನ ಸ್ಪರ್ಧೆ!

ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಕಾವು ಪಡೆದುಕೊಂಡಿದ್ದು, ಬಿಜೆಪಿ–ಜೆಡಿಎಸ್ ಮೈತ್ರಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಯ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್‌ನಿಂದ ಶಶಿ ಹುಲಿಕುಂಟೆಮಠ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ...

ವಿಜಯಪುರ | ಪ್ಲಾಟ್‌ಫಾರ್ಮ್‌ ಮೇಲೆ ಹರಿವ ಚರಂಡಿ ನೀರು;...

"ಚರಂಡಿ ನೀರಿನ್ಯಾಗ ದಿನ ಹೋಗಾಕ ಹತ್ತಿವಿ…" ಇದು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಪ್ರಯಾಣಿಕರ ಅಳಲು. ಪ್ಲಾಟ್‌ಫಾರ್ಮ್‌-1ರಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜವಾಬ್ದಾರಿಯಿಂದ...

ಜನವರಿಯಿಂದ ಇದುವರೆಗೆ ಮಡಿಕೇರಿ ತಾಲ್ಲೂಕಿನಲ್ಲಿ 619.27 ಮಿ.ಮೀ., ವಿರಾಜಪೇಟೆ 432.69 ಮಿ.ಮೀ., ಪೊನ್ನಂಪೇಟೆ 344.11 ಮಿ.ಮೀ., ಸೋಮವಾರಪೇಟೆ 426.01 ಮಿ.ಮೀ. ಹಾಗೂ ಕುಶಾಲನಗರದಲ್ಲಿ 205.69 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಎಲ್ಲ ತಾಲ್ಲೂಕುಗಳಲ್ಲೂ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

ಹೋಬಳಿವಾರು ಮಳೆಯ ವಿವರದಲ್ಲಿ ಸಂಪಾಜೆ 36 ಮಿ.ಮೀ., ಭಾಗಮಂಡಲ 32.20 ಮಿ.ಮೀ., ಪೊನ್ನಂಪೇಟೆ 25 ಮಿ.ಮೀ., ಶ್ರೀಮಂಗಲ 23.60 ಮಿ.ಮೀ., ಹುದಿಕೇರಿ 20.30 ಮಿ.ಮೀ., ಮಡಿಕೇರಿ 18.50 ಮಿ.ಮೀ., ಸೋಮವಾರಪೇಟೆ 15.20 ಮಿ.ಮೀ., ಶನಿವಾರಸಂತೆ 15 ಮಿ.ಮೀ., ಬಾಳೆಲೆ 14.07 ಮಿ.ಮೀ., ಸುಂಟಿಕೊಪ್ಪ 12 ಮಿ.ಮೀ., ಕೊಡ್ಲಿಪೇಟೆ 11.20 ಮಿ.ಮೀ., ನಾಪೋಕ್ಲು 10.20 ಮಿ.ಮೀ., ಅಮ್ಮತ್ತಿ 8 ಮಿ.ಮೀ., ವಿರಾಜಪೇಟೆ 7.60 ಮಿ.ಮೀ. ಹಾಗೂ ಕುಶಾಲನಗರದಲ್ಲಿ 2.40 ಮಿ.ಮೀ. ಮಳೆಯಾಗಿದೆ.

ಇದೇ ವೇಳೆ, ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2,859 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 2,830.58 ಅಡಿ ಇದೆ. ಕಳೆದ ವರ್ಷದ ಇದೇ ದಿನ ಜಲಾಶಯದಲ್ಲಿ 2,852.98 ಅಡಿ ನೀರು ಸಂಗ್ರಹವಾಗಿತ್ತು.

ಈ ಸುದ್ದಿ ಓದಿದ್ದೀರಾ?ಕೊಡಗು ಜಿಲ್ಲೆಯಲ್ಲಿ 207 ಪ್ರಕರಣಗಳು ಬಾಕಿ: 80 ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಕ್ರಮ-ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ

ಹಾರಂಗಿ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1.80 ಮಿ.ಮೀ. ಮಳೆಯಾಗಿದ್ದು, ಜಲಾಶಯಕ್ಕೆ 1,113 ಕ್ಯುಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಿಂದ ನದಿಗೆ 180 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷದ ಇದೇ ದಿನ 7,582 ಕ್ಯುಸೆಕ್ ನೀರು ಒಳಹರಿವು ಹಾಗೂ 6,604 ಕ್ಯುಸೆಕ್ ನೀರು ಹೊರಹರಿವು ದಾಖಲಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಭಿಮಾನಿಗಳ ಆಸೆಯಂತೆ ದಸರೆಗೆ ಮರಳಿದ ಅಭಿಮನ್ಯು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಕೊಡಗಿನ ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು...

ದೆಹಲಿಯಲ್ಲಿ ಪತ್ರಕರ್ತೆಯರ ಮೇಲೆ ಪೊಲೀಸ್ ದೌರ್ಜನ್ಯ: ಕ್ರಮಕ್ಕೆ ಶಿವಮೊಗ್ಗ ಕಾನಿಪಸ ಆಗ್ರಹ

ದೆಹಲಿಯ ಜಂತರ್‌ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ರಾಜಿನಾಮೆಗೆ ಆಗ್ರಹಿಸಿ ನಡೆಯುತ್ತಿರುವ...

ತೀರ್ಥಹಳ್ಳಿ | ಮತಪಟ್ಟಿಯಿಂದ ಮುಸ್ಲಿಮರ ಹೆಸರು ಅಳಿಸಲು ಬಿಜೆಪಿ ಸಂಚು? ತಹಶೀಲ್ದಾರ್‌ಗೆ ಪತ್ರ ಬರೆದಿದ್ದ ಬಿಜೆಪಿ ಮುಖಂಡ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ರೋಗಿಗಳನ್ನು ಗ್ರಾಹಕರಂತೆ ಕಾಣದೆ ಮನೆಯ ಸದಸ್ಯರಂತೆ ಉಪಚರಿಸುವ ಚಿತ್ರಕೂಟ: ಡಾ. ಪ್ರದೀಪ್

ರೋಗಿಗಳನ್ನು ಗ್ರಾಹಕರಂತೆ ಕಾಣದೆ ಮನೆಯ ಸದಸ್ಯರಂತೆ ಅಕ್ಕರೆಯಿಂದ ಉಪಚರಿಸುವ ಅಪರೂಪದ ವಾತಾವರಣ...