ಮಂಡ್ಯ ಸರ್ಕಾರಿ ಜಿಲ್ಲಾಸ್ಪತ್ರೆಯು ಬಡ ಅಮೂಲ್ಯ ಜೀವಗಳ ರಕ್ಷಣೆಯ ಹಿತದೃಷ್ಠಿಯಿಂದ ಇದೇ ಆಗಸ್ಟ್ 15ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಿದ್ದು, ಮದ್ದೂರು ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜು(ತಾಲೂಕು ಪಂಚಾಯಿತಿ ಪಕ್ಕ) ಬಳಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಂಡ್ಯ ಜಿಲ್ಲಾಸ್ಪತ್ರೆ ಆಡಳಿತ ಪ್ರಕಟಣೆ ನೀಡಿದ್ದು, “ರಕ್ತದಾನ ಶ್ರೇಷ್ಠದಾನ, ರಕ್ತದಾನ ಮಹಾದಾನ, ರಕ್ತದಾನ ಉತ್ತಮ ಆರೋಗ್ಯಕ್ಕೂ ವರದಾನವಾಗಿದೆ. ರಕ್ತಕ್ಕೆ ಯಾವುದೇ ಪರ್ಯಾಯವೂ ಇಲ್ಲದೇ ಯಾವ ಯಂತ್ರ-ಮಂತ್ರ-ತಂತ್ರಗಳಿಗೂ ಸೃಷ್ಠಿಸಲು ಸಾಧ್ಯವಿಲ್ಲವಾದ್ದರಿಂದ ತಪ್ಪದೇ, ಮರೆಯದೇ, ಅಂಜದೆ, ಅಳುಕಿಲ್ಲದೆ ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ರಕ್ಷಿಸಿ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಕೀಟ ನಾಶಕಗಳ ಅಸುರಕ್ಷಿತ ಬಳಕೆಯಿಂದ ನಮ್ಮ ಆಹಾರ ಕಲುಷಿತವಾಗುತ್ತಿದೆ: ಡಾ. ಎ. ಸಿದ್ದೀಕಿ
“ರಕ್ತದಾನ ಸಮಾಜ ಸೇವೆಯಲ್ಲ. ಮತ್ತೊಂದು ಅಮೂಲ್ಯ ಜೀವ ಉಳಿಸುವ ಶ್ರೇಷ್ಠ ಜವಬ್ದಾರಿ, ಕರ್ತವ್ಯ ಎಂಬುದು ನಿಮ್ಮಗಳ ಅರಿವಿಗಿರಲಿ” ಎಂದಿದ್ದಾರೆ.