ಮಂಡ್ಯ | ವಿದ್ಯಾನಗರದಲ್ಲಿ ಟಿಪ್ಪು ಕಾಲದ ಸ್ಮಾರಕ; 73 ಅಡಿ ಎತ್ತರದ ಮೆಮೋರಿಯಲ್ ಪಿಲ್ಲರ್‌ಗೆ ಬೇಕಿದೆ ರಕ್ಷಣೆ

Date:

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಕಡತನಾಳು ಗ್ರಾಮದ ದರಸಗುಪ್ಪೆ ಗ್ರಾಮ ಪಂಚಾಯಿತಿಯ ಕಂದಾಯ ಗ್ರಾಮ ವಿದ್ಯಾನಗರದ ಹತ್ತಿರ ಸುಮಾರು 73 ಅಡಿ ಎತ್ತರದ ಮೆಮೋರಿಯಲ್ ಪಿಲ್ಲರ್ ಇದ್ದು, ರಾಜ್ಯ ಪುರಾತತ್ವ ಇಲಾಖೆಗೆ ಸೇರಿದ ಸ್ಮಾರಕ ಕಂಬಗಳಲ್ಲಿ ಒಂದಾಗಿದೆ. ಟಿಪ್ಪು ಸುಲ್ತಾನನ ಪತನದ ನಂತರದ ಕಾಲಘಟ್ಟದಲ್ಲಿ ಈ ಸ್ಮಾರಕವು ಒಂದು ಮುಖ್ಯ ಐತಿಹಾಸಿಕ ಗುರುತಾಗಿದೆ. ಇಂಥ ಸ್ಮಾರಕಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು. ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಬೇಕು ಮತ್ತು ಪ್ರವಾಸಿಗರು ಭೇಟಿ ನೀಡುವ ಸ್ಥಳವನ್ನಾಗಿ ಮಾರ್ಪಡಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

- Advertisement -

ಈ ಸ್ಮಾರಕವು ಬ್ರಿಟಿಷ್ ಸೈನ್ಯವು 1799ರಲ್ಲಿ ಶ್ರೀರಂಗಪಟ್ಟಣದ ಕೋಟೆಯನ್ನು ಭೇದಿಸಿದ ಸ್ಥಳಕ್ಕೆ ತೀರಾ ಹತ್ತಿರದಲ್ಲಿದೆ. ಇದು ಒಂದು ಎತ್ತರದ ಒಬೆಲಿಸ್ಕ್ (Obelisk) ಮಾದರಿಯ ಸ್ತಂಭವಾಗಿದ್ದು, ಕೋಟೆಯ ವಾಯುವ್ಯ ಭಾಗದಲ್ಲಿ (North-west) ಸ್ಥಾಪಿಸಲಾಗಿದೆ. ಗ್ರಾನೈಟ್ ಶಿಲೆಯಿಂದ ನಿರ್ಮಿತವಾದ ಪಿರಮಿಡ್ ಆಕಾರದ ಮೇಲ್ಭಾಗವನ್ನು ಹೊಂದಿರುವ ಸ್ತಂಭವಾಗಿದೆ. ಈ ಸ್ಮಾರಕವನ್ನು ಮೈಸೂರಿನ ಅಂದಿನ ದಿವಾನರಾಗಿದ್ದ ಪೂರ್ಣಯ್ಯ ಕ್ರಿ.ಶ. 1804ರಲ್ಲಿ ನಿರ್ಮಿಸಿದರು. ಪೂರ್ಣಯ್ಯ ಜೋಶಿಯಾ ವೆಬ್ ಅವರ ಆಪ್ತ ಗೆಳೆಯರಾಗಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

Josiah webbe ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಮದ್ರಾಸ್ ಸರ್ಕಾರದ ಮೊದಲ ಮುಖ್ಯ ಕಾರ್ಯದರ್ಶಿ (Chief Secretary) ಆಗಿ ಸೇವೆ ಸಲ್ಲಿಸಿದ್ದರು.ನಂತರ 1803ರಲ್ಲಿ ಮೈಸೂರು ಸಂಸ್ಥಾನದ ಬ್ರಿಟಿಷ್ ರೆಸಿಡೆಂಟ್ ಆಗಿ ನೇಮಕಗೊಂಡಿದ್ದರು. ನಂತರ 1804 ರಲ್ಲಿ ಗ್ವಾಲಿಯರ್‌ನಲ್ಲಿ ಬ್ರಿಟಿಷ್ ರೆಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ನಿಧನರಾದರು.

ಜೋಶಿಯಾ ವೆಬ್ ಆರಂಭದಲ್ಲಿ ಟಿಪ್ಪು ಸುಲ್ತಾನ್ ವಿರುದ್ಧ ಯುದ್ಧ ಮಾಡುವುದನ್ನು ವಿರೋಧಿಸಿದ್ದರು ಮತ್ತು ಬ್ರಿಟಿಷ್ ನೀತಿಯು ಮೈಸೂರನ್ನು ಸಮತೋಲನದಲ್ಲಿ ಇಡಬೇಕು ಎಂದು ಅನಿಸಿಕೆ ಪಟ್ಟಿದ್ದರು. ಟಿಪ್ಪುವನ್ನು ಅಧಿಕಾರದಲ್ಲಿ ಉಳಿಸಿಕೊಳ್ಳುವುದು ಬ್ರಿಟಿಷ್ ಹಿತಾಸಕ್ತಿಗೆ ಪೂರಕ ಎಂದು ಅವರು ನಂಬಿದ್ದರು.

ಇದನ್ನೂ ಓದಿ: ಮಂಡ್ಯ | ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ತಾಂತ್ರಿಕ ಗೊಂದಲಗಳು; ಎನ್ಯೂಮರೇಷನ್ ಹಂತಕ್ಕೆ ಪೂರ್ವ ಸಿದ್ಧತೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ

ಈ ಸ್ಮಾರಕವು ಯಾವುದೇ ಯುದ್ಧದ ವಿಜಯೋತ್ಸವಕ್ಕಾಗಿ ನಿರ್ಮಿಸಿದ್ದಲ್ಲ, ಬದಲಾಗಿ ಒಬ್ಬ ವ್ಯಕ್ತಿಯ ಮೇಲಿದ್ದ ಗೌರವ ಮತ್ತು ಸ್ನೇಹಕ್ಕಾಗಿ ನಿರ್ಮಿಸಲಾದ ಅಪರೂಪದ ಬ್ರಿಟಿಷ್ ಸ್ಮಾರಕವಾಗಿದೆ. ಇಂತಹ ಐತಿಹಾಸಿಕ ವಿಶ್ವದಲ್ಲಿ ಸ್ನೇಹ ಪೂರ್ವಕವಾಗಿ ಸ್ಮಾರಕ ಕಂಬವೊಂದನ್ನು ನಿರ್ಮಿಸಿದ್ದು ಮೊದಲಿನದು ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇಂತಹ ಸ್ಮಾರಕಗಳು ಮುಂದಿನ ತಲೆಮಾರಿಗೆ ಸಂರಕ್ಷಿಸುವುದು ನಮ್ಮೆಲ್ಲರ ಅಗತ್ಯ ಕರ್ತವ್ಯವಾಗಿದೆ ಎಂದು ಶ್ರೀರಂಗಪಟ್ಟಣದ ಸಮರ್ಪಣಾ ಟ್ರಸ್ಟ್‌ ಅಧ್ಯಕ್ಷ ಜಯಶಂಕರ್‌ ಕೆ ಎಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಅಂಬೇಡ್ಕರ್ ಅವಹೇಳನ ಆರೋಪ: ವೇದಮೂರ್ತಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಅವಹೇಳನಕಾರಿ ಹೇಳಿಕೆ...

ತಮಿಳು ಕಾಲೊನಿ ನಿವಾಸಿಗಳನ್ನು ‘ಭಯೋತ್ಪಾದಕರು’ ಎಂದಿರುವ ಆರೋಪ: ರವೀಂದ್ರ ವಿರುದ್ಧ FIR ದಾಖಲಿಸಲು ಆಗ್ರಹ

ಮಂಡ್ಯ ನಗರದ ತಮಿಳು ಕಾಲೊನಿ ನಿವಾಸಿಗಳನ್ನು ‘ತಮಿಳುನಾಡಿನಿಂದ ಬಂದವರು’, ‘ಭಯೋತ್ಪಾದಕರು’ ಎಂದು...

ಮಂಡ್ಯದ ನ್ಯೂ ತಮಿಳು ಕಾಲೊನಿಯಲ್ಲಿ ‘SIR’ ಗೊಂದಲ: 207 ಮತದಾರರು ಎಲ್ಲಿ ಹೋದರು?

ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ...

ಬರದ ನೆರಳಲ್ಲಿ 101 ತಾಲ್ಲೂಕುಗಳು; ಮೈಸೂರು-ಚಾಮರಾಜನಗರ-ಮಂಡ್ಯದಲ್ಲಿ ರೈತರ ಬದುಕಿಗೆ ಕಠಿಣ ಸವಾಲು

ಕರ್ನಾಟಕದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವುದು ಕೇವಲ ಮಳೆ ಕಡಿಮೆಯಾಗಿದೆ...