ಮೇಲುಕೋಟೆ ವೈರಮುಡಿ ಉತ್ಸವ: ನಿರ್ಲಕ್ಷ್ಯಕ್ಕೆ ಒಳಗಾದ ದರಸಗುಪ್ಪೆಯ ಐತಿಹಾಸಿಕ ‘ಅರವಟ್ಟಿಗೆ ಮಂಟಪ’

Date:

ವಿಶ್ವವಿಖ್ಯಾತ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವದ ಸಡಗರ ಗರಿಗೆದರಿದೆ. ಆದರೆ, ಶ್ರೀರಂಗಪಟ್ಟಣದಿಂದ ಮೇಲುಕೋಟೆಗೆ ಸಾಗುವ ಮಾರ್ಗಮಧ್ಯೆ ಇರುವ ದರಸಗುಪ್ಪೆ ಬಳಿಯ ಚಾರಿತ್ರಿಕ ‘ಅರವಟ್ಟಿಗೆ ಮಂಟಪ’ವು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಒಳಗಾಗಿ ಶಿಥಿಲಾವಸ್ಥೆ ತಲುಪಿದೆ.

- Advertisement -

​ಶ್ರೀರಂಗಪಟ್ಟಣದ ಕಿರಗೂರಿನಿಂದ ವೈರಮುಡಿ ಮತ್ತು ರಾಜಮುಡಿ ವಜ್ರಖಚಿತ ಕಿರೀಟಗಳ ಮೆರವಣಿಗೆಗೆ ಸಕಲ ಸಿದ್ಧತೆಗಳು ನಡೆದಿವೆ. ಶನಿವಾರ ಕಿರೀಟಗಳನ್ನು ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾರ್ಗದುದ್ದಕ್ಕೂ ಇರುವ ಬಹುತೇಕ ಅರವಟ್ಟಿಗೆ ಮಂಟಪಗಳನ್ನು ಭಕ್ತರು ಸುಣ್ಣ-ಬಣ್ಣ ಬಳಿದು ಶೃಂಗರಿಸುತ್ತಾರೆ. ಕಿರೀಟಗಳು ಬಂದಾಗ ಸಡಗರ ಸಂಭ್ರಮದಿಂದ ಸ್ವಾಗತಿಸಿಕೊಂಡು, ಪೂಜೆ ಸಲ್ಲಿಸಿ ಬಳಿಕ ಮೇಲುಕೋಟೆಗೆ ಕಳಿಸಿಕೊಡುತ್ತಾರೆ. ಆದರೆ, ದರಸಗುಪ್ಪೆ ಗ್ರಾಮದ ಅರವಟ್ಟಿಗೆ ಮಂಟಪವನ್ನು ಮಾತ್ರ ಶುಚಿಗೊಳಿಸದೇ ಇರುವುದುರಿಂದ ಪಾಳುಬಿದ್ದ ಸ್ಥಿತಿಯಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

1610ರಲ್ಲಿ ರಾಜ ಒಡೆಯರ್ ಅವರ ಕಾಲದಲ್ಲಿ ಶ್ರೀರಂಗಪಟ್ಟಣ ಮೈಸೂರು ಸಂಸ್ಥಾನದ ರಾಜಧಾನಿಯಾಗಿತ್ತು. ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಯನ್ನು ತಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡಿದ್ದ ರಾಜ ಒಡೆಯರ್, ಪ್ರತಿವರ್ಷ ನಡೆಯುತ್ತಿದ್ದ ವೈರಮುಡಿ ಬ್ರಹ್ಮೋತ್ಸವದಲ್ಲಿ ಖುದ್ದಾಗಿ ಪಾಲ್ಗೊಳ್ಳುತ್ತಿದ್ದರು. ವಜ್ರದ ವೈರಮುಡಿ ಮತ್ತು ರಾಜಮುಡಿ ಕಿರೀಟ ಧಾರಣೆಯೊಂದಿಗೆ ಕಂಗೊಳಿಸುವ ಸ್ವಾಮಿಯ ಉತ್ಸವವನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದರು. ನಂತರ 1617ರಲ್ಲಿ ಅವರು ಮೇಲುಕೋಟೆಯಲ್ಲೇ ಇಹಲೋಕ ತ್ಯಜಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಮೇ 3 ರಿಂದ ತುಮಕೂರು ಮಹಿಳಾ ಓಪನ್ ಟೆನಿಸ್ ಚಾಂಪಿಯನ್ ಷಿಪ್ : ಸಚಿವ ಡಾ. ಜಿ.ಪರಮೇಶ್ವರ

​ಉತ್ಸವದ ಸಮಯದಲ್ಲಿ ಶ್ರೀರಂಗಪಟ್ಟಣದಿಂದ ಪಾಂಡವಪುರ ಮಾರ್ಗವಾಗಿ ಮೇಲುಕೋಟೆಗೆ ಈ ವಜ್ರದ ಕಿರೀಟಗಳನ್ನು ತೀವ್ರ ಭದ್ರತೆಯೊಂದಿಗೆ ಕೊಂಡೊಯ್ಯಲಾಗುತ್ತಿತ್ತು. ದಾರಿಯುದ್ದಕ್ಕೂ ಕಿರೀಟಗಳ ವಿಶ್ರಾಂತಿ ಹಾಗೂ ಭದ್ರತೆಗಾಗಿ ರಾಜ ಒಡೆಯರ್ ಅವರು ಅಲ್ಲಲ್ಲಿ ಈ ‘ಅರವಟ್ಟಿಗೆ ಮಂಟಪ'(ವೈರಮುಡಿ ಮಂಟಪ)ಗಳನ್ನು ನಿರ್ಮಿಸಿದ್ದರು. ಇಂತಹ ಭವ್ಯ ಇತಿಹಾಸವಿರುವ ದರಸಗುಪ್ಪೆ ಗ್ರಾಮದ ಮಂಟಪವು ಇಂದು ಜಿಲ್ಲಾಡಳಿತದ ಕಣ್ತಪ್ಪಿ ದುಃಸ್ಥಿತಿಗೆ ತಲುಪಿದೆ. “ಇಂತಹ ಐತಿಹಾಸಿಕ ಮಂಟಪಗಳ ಸಂರಕ್ಷಣೆ ಅತ್ಯಗತ್ಯವಾಗಿದೆ. ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಂಡು ಮಂಟಪವನ್ನು ಜೀರ್ಣೋದ್ಧಾರ ಮಾಡಬೇಕು” ಎಂದು ಸಮರ್ಪಣಾ ಟ್ರಸ್ಟ್‌ನ ಕೆ ಎಸ್ ಜಯಶಂಕರ್ ಒತ್ತಾಯಿಸಿದ್ದಾರೆ.

ವರದಿ : ಜಗದೀಶ್‌ ನಗರಕೆರೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ, ಚೀನಾಗೆ ಹೆದರಿದಿರೇ?

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ...