ಮೈಸೂರು | ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ: 350 ಮರ ಕಡಿಯುವ ಯೋಜನೆಗೆ ವಿರೋಧ

Date:

ಮೈಸೂರಿನ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಸುಮಾರು 350 ಮರಗಳನ್ನು ಕಡಿಯುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದ್ದು, ಇಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯ ನೇತೃತ್ವದಲ್ಲಿ ಪರಿಸರ ತಜ್ಞರು, ಹೋರಾಟಗಾರರು ಹಾಗೂ ಸ್ಥಳೀಯರು ಮರಗಳ ಪರಿಶೀಲನೆ ನಡೆಸಿ ಬಳಿಕ ಸಂವಾದ ಸಭೆ ನಡೆಸಿದರು.

- Advertisement -

ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಪರಿಸರ ಹೋರಾಟಗಾರ ನಿವೃತ್ತ ಮೇಜರ್ ಜನರಲ್ ಒಂಬತ್ಕೆರೆ, “ಮೈಸೂರಿನ ವಿಶಾಲ ಹಾಗೂ ಹಸಿರಿನಿಂದ ಕೂಡಿದ ರಸ್ತೆಗಳಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯೇ ಕಾರಣ ಎಂದರು. 1903ರಲ್ಲಿ ಸ್ಥಾಪಿತವಾದ ಸಿಐಟಿಬಿ ವತಿಯಿಂದ ಮರಗಳಿಂದ ಆವರಿತ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು” ಎಂದು ಅವರು ಸ್ಮರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಅದೇ ರೀತಿ, “1976ರಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜಾರಿಗೆ ತಂದ ಕರ್ನಾಟಕ ಮರಗಳ ಸಂರಕ್ಷಣಾ ಕಾಯಿದೆಯ ಉದ್ದೇಶವನ್ನು ಉಲ್ಲೇಖಿಸಿದ ಅವರು, ನಗರೀಕರಣ ಮತ್ತು ಕೈಗಾರಿಕೀಕರಣದ ಪರಿಣಾಮವಾಗಿ ಮರಗಳ ನಾಶ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಅತ್ಯಗತ್ಯವಾಗಿದೆ ಎಂದು ಹೇಳಿದರು. ಮರಗಳು ವಾಯುಮಾಲಿನ್ಯ ತಗ್ಗಿಸುವುದು, ಶಬ್ದ ನಿಯಂತ್ರಿಸುವುದು, ನೆರಳು ಒದಗಿಸುವುದು ಹಾಗೂ ನಗರ ಸೌಂದರ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ” ಎಂದು ಅಭಿಪ್ರಾಯಪಟ್ಟರು.

ಪಿಯುಸಿಎಲ್ ಸದಸ್ಯ ಮನ್ಸೂರ್ ಅಹ್ಮದ್ ಮಾತನಾಡಿ, “ವಾಹನ ಸಂಚಾರ ದಟ್ಟಣೆಯಿಂದ ಈಗಾಗಲೇ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಿಸಲು ಎಸ್.ಎಸ್.ನಗರ ಹಾಗೂ ಸಿದ್ದಿಕಿ ನಗರ ಭಾಗಗಳಲ್ಲಿ ಮರಗಳನ್ನು ಹೆಚ್ಚಾಗಿ ಬೆಳೆಸಬೇಕಿರುವಾಗ ಇರುವ ಮರಗಳನ್ನೇ ಕಡಿಯುವುದು ಸರಿಯಲ್ಲ ಎಂದು ಹೇಳಿದರು. ಮರಗಳನ್ನು ಉಳಿಸಲು ಪರ್ಯಾಯ ಯೋಜನೆಗಳನ್ನು ಸರ್ಕಾರ ಪರಿಶೀಲಿಸಬೇಕು” ಎಂದು ಅವರು ಒತ್ತಾಯಿಸಿದರು.

ರೀಪ್ ಬೆನಿಫಿಟ್ ಸಂಸ್ಥೆಯ ಸಾರಾ ಮಿಶ್ರ ಮಾತನಾಡಿ, “ನಮಗೆ ಸುಸ್ಥಿರ ಅಭಿವೃದ್ಧಿ ಬೇಕು. ಯಾವುದೇ ಯೋಜನೆ ಜಾರಿಗೆ ಮೊದಲು ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು. 350 ಮರಗಳನ್ನು ಕಡಿದರೆ ಉಂಟಾಗುವ ಪರಿಸರ ಹಾನಿಯನ್ನು ಕೇವಲ ಗಿಡ ನೆಡುವುದರಿಂದ ಅಥವಾ ಮರ ಸ್ಥಳಾಂತರದಿಂದ ಸರಿದೂಗಿಸಲಾಗುವುದಿಲ್ಲ” ಎಂದು ಹೇಳಿದರು.

ವಕೀಲ ಮನ್ನನ್ ಖಾನ್ ಮಾತನಾಡಿ, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಸಮಾನವಾಗಿ ಸಾಗಬೇಕು ಎಂದು ಆಶಿಸಿದರು. ಪರಿಸರ ಹೋರಾಟಗಾರ್ತಿ ಬಾನು ಮೋಹನ್ ಮಾತನಾಡಿ, ಯುವಜನರು ಪರಿಸರ ಸಂರಕ್ಷಣೆಯ ಹೊಣೆ ಹೊತ್ತು ಮುಂದಾಗಬೇಕು ಎಂದು ಕರೆ ನೀಡಿದರು. ಪ್ರೊ. ಕಾಳಚನ್ನೇಗೌಡ ಮಾತನಾಡಿ, ಮೈಸೂರಿನ ಅನೇಕ ಕಡೆ ರಸ್ತೆ ಅಗಲೀಕರಣದ ನಡುವೆಯೂ ಮರಗಳನ್ನು ಉಳಿಸಿಕೊಂಡ ಉದಾಹರಣೆಗಳಿವೆ. ಹೋರಾಟ ಮುಂದುವರಿಸಿದರೆ ಇಲ್ಲಿನ ಮರಗಳನ್ನೂ ಉಳಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪರಿಸರ ಕಾರ್ಯಕರ್ತ ಸಂಜಯ್ ದತ್ತಾತ್ರಿ ಮಾತನಾಡಿ, ಮೈಸೂರು ಮತ್ತೊಂದು ಬೆಂಗಳೂರು ಅಥವಾ ಚೆನ್ನೈ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, “ನಗರಗಳ ನಿಯಂತ್ರಣರಹಿತ ವಿಸ್ತರಣೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರಿಸರ ಉಳಿಸುವ ಹೋರಾಟಗಳಿಗೆ ರೈತ ಸಂಘ ಸದಾ ಬೆಂಬಲ ನೀಡಲಿದೆ” ಎಂದು ಘೋಷಿಸಿದರು.

‘ಪರಿಸರಕ್ಕಾಗಿ ನಾವು’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, “ಮೇಲ್ಸೇತುವೆ ನಿರ್ಮಾಣಕ್ಕೆ ತಮ್ಮ ವಿರೋಧವಿಲ್ಲ. ಆದರೆ ಅದಕ್ಕಾಗಿ 350 ಮರಗಳನ್ನು ಕಡಿದು ರಸ್ತೆ ಅಗಲೀಕರಣ ಮಾಡುವುದು ಅನಿವಾರ್ಯವಲ್ಲ. ತೀರಾ ಅಗತ್ಯವಿರುವಷ್ಟು ಮಾತ್ರ ರಸ್ತೆ ವಿಸ್ತರಣೆ ಮಾಡಬೇಕು ಎಂದು ಹೇಳಿದರು. ಮೈಸೂರಿನ ಪರಿಸರ ಮತ್ತು ಪರಂಪರೆಯನ್ನು ಉಳಿಸಲು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು” ಎಂದು ಮನವಿ ಮಾಡಿದರು.

ಸಭೆಯಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಯೋಜನೆಯ ಡಿಪಿಆರ್ ಸಾರ್ವಜನಿಕರಿಗೆ ನೀಡಬೇಕು. ಬಳಿಕ ಪರಿಸರ ತಜ್ಞರು ಮತ್ತು ಸಂಘಟನೆಗಳೊಂದಿಗೆ ಸಭೆ ನಡೆಸಿ ಯೋಜನೆಯ ಸಂಪೂರ್ಣ ವಿವರ ನೀಡಬೇಕು ಎಂಬ ನಿರ್ಣಯವನ್ನು ಪನಾಸಂ ಸದಸ್ಯ ರವಿ ಬಳೆ ಮಂಡಿಸಿದ್ದು, ಸಭೆ ಸರ್ವಾನುಮತದಿಂದ ಅಂಗೀಕರಿಸಿತು.

ಈ ವಿಶೇಷ ಸುದ್ದಿ ಓದಿದ್ದೀರಾ?ಶೋಷಿತರ ಗಟ್ಟಿ ಧ್ವನಿ ಎನ್ ರಾಚಯ್ಯ ‘ಸಮಾನತೆಯ ಸಮಾಜʼದ ಕನಸುಗಾರ….

ಸಭೆಯ ಅಂತ್ಯದಲ್ಲಿ ‘ಉಳಿಸಿ… ಉಳಿಸಿ ಮರಗಿಡಗಳನ್ನು ಉಳಿಸಿ, ಕೆರೆಕಟ್ಟೆಗಳನ್ನು ಉಳಿಸಿ, ಬೆಟ್ಟಗುಡ್ಡಗಳನ್ನು ಉಳಿಸಿ, ಪ್ರಾಣಿ ಪಕ್ಷಿಗಳನ್ನು ಉಳಿಸಿ’ಎಂಬ ಘೋಷಣೆಗಳು ಮೊಳಗಿದವು.

ಈ ಸುದ್ದಿ ಓದಿದ್ದೀರಾ?ಚಾಮರಾಜನಗರ | ಕಾಗಲವಾಡಿಯಲ್ಲಿ ಸ್ತ್ರೀ ಸೌಖ್ಯ ಕ್ಯಾನ್ಸರ್ ತಪಾಸಣಾ ಶಿಬಿರ ವೀಕ್ಷಿಸಿದ ಸಚಿವ ಕೆ. ವೆಂಕಟೇಶ್

ಸಭೆಯಲ್ಲಿ ಪನಾಸಂ ಕಾರ್ಯಕರ್ತರಾದ ಬಾನು ಪ್ರಶಾಂತ್, ವಿಶ್ವನಾಥ್, ಗಂಟಯ್ಯ, ಲೋಲಕುಮಾರ್, ದರ್ಶನ್, ನಿರಂಜನ್, ಅಕ್ಬರ್, ಶಿವಶಂಕರ್, ಶ್ರೀಕಾಂತ್, ಗೀತಾ, ಐಶ್ವರ್ಯ, ರೈತ ಸಂಘದ ಹೊಸಕೋಟೆ ಬಸವರಾಜು, ಮರಂಕಯ್ಯ, ಪ್ರೊ. ನಬೀಜಾನ್, ಘಯಾಜ್ ಅಹ್ಮದ್, ಸರೂಷ್, ಮುದಸಿರ್ ಅಲಿ ಖಾನ್, ಖುರ್ಷೀದ್ ಅಹ್ಮದ್, ನೇಹಾ ಅಫ್ಸರ್ ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ: ಡಾ. ನಾಗರಾಜ್

ಆಗ್ನೇಯ ಪದವೀಧರರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಹಾಗೂ ಪಕ್ಷದ ಯುವ ಘಟಕದ...

ಬಾಗೇಪಲ್ಲಿ | ನಟ ಪ್ರಕಾಶ್ ರಾಜ್ ಭಾಷಣಕ್ಕೆ ನಿರ್ಬಂಧ : ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕ್ರಮಕ್ಕೆ ಡಿ.ವೈ.ಎಫ್.ಐ ತೀವ್ರ ಆಕ್ರೋಶ

ಪಟ್ಟಣದ ತಾ.ಪಂ.ಪಕ್ಕೆ ಆಯೋಜಿಸಲಾಗಿದ್ದ ಡಿ.ವೈ.ಎಫ್.ಐ (ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್) ಸಮಾವೇಶದಲ್ಲಿ...

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ಖಂಡಿಸಿ ಕೃಷ್ಣರಾಜ...

ಕಾರವಾರ | ಚುನಾವಣಾ ಆಯೋಗ ಸುಧಾರಣೆಗೆ ಆಗ್ರಹ: ಜ್ಞಾನೇಶ್ ಕುಮಾರ್‌ ಪದಚ್ಯುತಿಗೆ KPRS ಒತ್ತಾಯ

ಕಾರವಾರ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಾಗೂ...