ಮೈಸೂರು | ಸಮಕಾಲೀನ ದಲಿತ ಕಾವ್ಯಕ್ಕೆ ‘ಎಲ್ಲಾದರು ಹದವಿದ್ದರೆ’ ಮಹತ್ವದ ಕೊಡುಗೆ: ರೂಪ ಹಾಸನ

Date:

ನಿರಂತರ ಫೌಂಡೇಶನ್ (ರಿ.), ಮೈಸೂರು ಹಾಗೂ ತಮಟೆ ಪುಸ್ತಕ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕವಯತ್ರಿ ಸಂಘಮಿತ್ರೆ ನಾಗರಘಟ್ಟ ಅವರ ಕವನ ಸಂಕಲನ ‘ಎಲ್ಲಾದರು ಹದವಿದ್ದರೆ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ಮೈಸೂರಿನ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಸಾಹಿತ್ಯದ ಸೊಗಡಿನ ನಡುವೆ ಅರ್ಥಪೂರ್ಣವಾಗಿ ನಡೆಯಿತು.

- Advertisement -

ಖ್ಯಾತ ಬರಹಗಾರ್ತಿ ರೂಪ ಹಾಸನ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಕವಿಗೆ ಮುಗ್ಧತೆ, ನಿರ್ದಿಷ್ಟತೆ ಹಾಗೂ ಸಂವೇದನಾಶೀಲತೆ ಎಂಬ ಗುಣಗಳು ಸದಾ ಜೊತೆಯಾಗಿರಬೇಕು ಎಂದು ಹೇಳಿದರು. ಈ ಎಲ್ಲ ಅಂಶಗಳನ್ನು ಒಳಗೊಂಡಿರುವ ‘ಎಲ್ಲಾದರು ಹದವಿದ್ದರೆ’ ಕೃತಿ ಕನ್ನಡ ಕಾವ್ಯಲೋಕಕ್ಕೆ ಮೌಲಿಕ ಕೊಡುಗೆಯಾಗಿದ್ದು, ಬದುಕಿನ ಸೂಕ್ಷ್ಮ ಅನುಭವಗಳನ್ನು ಕಾವ್ಯದ ಮೂಲಕ ಮನಮುಟ್ಟುವಂತೆ ಅಭಿವ್ಯಕ್ತಿಸುವ ಶಕ್ತಿ ಈ ಸಂಕಲನಕ್ಕಿದೆ ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬೆಳಗಾವಿ | ಕೆಡಿಪಿ ಸಭೆಗೆ 13 ಶಾಸಕರು ಗೈರು:...

ಬೆಳೆ ಹಾನಿ ಸಂಭವಿಸಿದರೆ ರೈತರಿಗೆ ಬೆಳೆ ವಿಮೆ, ಪರಿಹಾರ ಹಾಗೂ ನೀರಿನ ನೆರವು ಅಗತ್ಯವಾಗುತ್ತದೆ. ಈ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಮುಂದೆ ಸಮಗ್ರವಾಗಿ ಪ್ರಸ್ತಾಪಿಸಿ ಪರಿಹಾರಕ್ಕೆ ಒತ್ತಾಯಿಸುವ ಜವಾಬ್ದಾರಿ ಆಯಾ ಕ್ಷೇತ್ರದ ಜನಪ್ರತಿನಿಧಿಗಳ...

ಸಭಾಧ್ಯಕ್ಷರ ತವರಲ್ಲೇ ಬಡವರು ಅತಂತ್ರ: ʼಹಕ್ಕುಪತ್ರʼವಿದ್ದರೂ ಸ್ವಂತ ಸೂರಿಲ್ಲ,...

ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡಿರುವುದು ಈ ಸಂತ್ರಸ್ತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಜಾಪ್ರಭುತ್ವದ ಅತ್ಯುನ್ನತ ಪೀಠದಲ್ಲಿರುವ ಅವರು, ತಮ್ಮ ಸ್ವಕ್ಷೇತ್ರದ ಈ ದಶಕದ ಸಮಸ್ಯೆಗೆ ತಕ್ಷಣ...

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

ಕೃತಿಯನ್ನು ಪರಿಚಯಿಸಿದ ಡಾ. ಎಚ್. ಉಮಾಶಂಕರ್, ಸಮಕಾಲೀನ ದಲಿತ ಕಾವ್ಯದ ಆಶಯಗಳನ್ನು ಒಳಗೊಂಡಿರುವ ಈ ಸಂಕಲನದಲ್ಲಿ ಕವಯತ್ರಿ ಸಮಸಮಾಜದ ಕನಸನ್ನು ಹೊಸ ರೂಪಕಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು. ಪ್ರಬುದ್ಧತೆ, ಪಕ್ವತೆ ಮತ್ತು ಮಾನವೀಯ ಮೌಲ್ಯಗಳಿಂದ ಕೂಡಿದ ಪ್ರೀತಿಯ ಹೊಸ ಆಯಾಮಗಳನ್ನು ಕಾವ್ಯದ ಮೂಲಕ ಅನಾವರಣಗೊಳಿಸಿರುವ ಈ ಕೃತಿ, ಸಮಕಾಲೀನ ಬದುಕಿನ ತಲ್ಲಣ, ಸಾಮಾಜಿಕ ಅಸಮಾನತೆ ಹಾಗೂ ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವಿಶೇಷ ಸುದ್ದಿ ಓದಿದ್ದೀರಾ?ಅರಣ್ಯ, ಹಾಡಿ, ದುರ್ಗಮ ಹಾದಿಗಳ ನಡುವೆ ‘SIR’ ಶೇ.100: ಚಾಮರಾಜನಗರದ ಸಾಧನೆ ಹೇಗೆ ಸಾಧ್ಯವಾಯಿತು?

ಕಾರ್ಯಕ್ರಮದಲ್ಲಿ ನಿರಂತರ ಫೌಂಡೇಶನ್‌ನ ಕಾರ್ಯದರ್ಶಿ ಪ್ರಸಾದ್ ಕುಂದೂರು, ನಿರ್ದೇಶಕ ಶ್ರೀನಿವಾಸ್ ಪಾಲಹಳ್ಳಿ, ಸುಗುಣ, ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ತಮಟೆ ಪ್ರಕಾಶನದ ಹುಲಿಕುಂಟೆ ಮೂರ್ತಿ, ಕವಯತ್ರಿ ಸಂಘಮಿತ್ರೆ ನಾಗರಘಟ್ಟ, ಮಂಜುಳ ಕಿರುಗಾವಲು, ಧನಂಜಯ ಎಲಿಯೂರು, ಪತ್ರಕರ್ತ ಸ್ವಾಮಿ ಆನಂದ್, ಗಾಯಕ ದೇವಾನಂದ್ ವರಪ್ರಸಾದ್, ಕವಿ ಆಲೂರು ದೊಡ್ಡನಿಂಗಪ್ಪ, ವಿಕಾಸ್ ಮೌರ್ಯ, ಶೈಲಜ ನಾಗರಘಟ್ಟ, ರಾಜೇಶ್ ಹೆಬ್ಬಾರ್, ಅಭಿರುಚಿ ಗಣೇಶ್, ಪಲ್ಲವಿ ಟಿ.ಎಸ್., ಪ್ರೊ. ಕಾಳೇಗೌಡ ನಾಗವಾರ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳು, ಕವಿಗಳು, ಕಲಾವಿದರು ಹಾಗೂ ಸಾಹಿತ್ಯಾಸಕ್ತರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ವೃತ್ತಿ ಕೌಶಲ್ಯಕ್ಕೆ ಗೌರವ ಸಲ್ಲಿಸುವ ದಿನವೇ ವಿಶ್ವಕರ್ಮ ಜಯಂತಿ: ಡಾ. ಔದ್ರಾಮ್

ಭಾರತೀಯ ಪರಂಪರೆಯಲ್ಲಿ ವಿಶ್ವಕರ್ಮರಿಗೆ ವಿಶಿಷ್ಟ ಸ್ಥಾನವಿದೆ. ದೇವಶಿಲ್ಪಿಯಾಗಿ ಪರಿಗಣಿಸಲ್ಪಡುವ ವಿಶ್ವಕರ್ಮರು ತಮ್ಮ...

ಹಾವೇರಿ | ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಬ್ಯಾಂಕ್ ಮತ್ತು ಕೈಗಡ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾದ ಘಟನೆ...

ವಿಜಯಪುರ | ಕೇಂದ್ರದ UPI ಶುಲ್ಕ ನೀತಿ ಮರುಪರಿಶೀಲನೆಗೆ ಭೋಗೇಶ್ ಸೋಲಾಪುರ ಆಗ್ರಹ

ರೂ. 2,000ಕ್ಕಿಂತ ಹೆಚ್ಚಿನ ಕೆಲವು UPI ವ್ಯಾಪಾರಿ ವಹಿವಾಟುಗಳಿಗೆ Merchant Discount...

ಸಭಾಧ್ಯಕ್ಷರ ತವರಲ್ಲೇ ಬಡವರು ಅತಂತ್ರ: ʼಹಕ್ಕುಪತ್ರʼವಿದ್ದರೂ ಸ್ವಂತ ಸೂರಿಲ್ಲ, 13 ವರ್ಷಗಳಿಂದ ಬೀದಿಯಲ್ಲೇ ಬದುಕು!

ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡಿರುವುದು...