ಮೈಸೂರು | ವಿಷ್ಣುವರ್ಧನ್‌ ಅವರ 14ನೇ ಪುಣ್ಯಸ್ಮರಣೆ; ರಕ್ತದಾನ ಶಿಬಿರ

Date:

ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳು ವಿಶ್ವದೆಲ್ಲಡೆಯಿದ್ದಾರೆ. ಇಂದು ವಿಷ್ಣುವರ್ಧನ್‌ ಅವರ 14ನೇ ವರ್ಷದ ಪುಣ್ಯಸ್ಮರಣೆ. ಅಭಿಮಾನಿಗಳು ವಿವಿಧೆಡೆ ರಸಮಂಜರಿ ಕಾರ್ಯಕ್ರಮ ಅನ್ನಸಂತರ್ಪಣೆ, ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ ಎಂದು‌ ವಿಷ್ಣುವರ್ಧನ್ ಅವರ ಅಳಿಯ ಚಿತ್ರನಟ ಅನಿರುದ್ ತಿಳಿಸಿದರು.

- Advertisement -

ಮೈಸೂರು ತಾಲೂಕಿನ ಉದ್ಬೂರು ಗೇಟ್‌ ಬಳಿ ಇರುವ ವಿಷ್ಣುವರ್ಧನ್ ಸ್ಮಾರಕದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ 14ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಜೀವಾಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ವಿಷ್ಣುಸ್ಮಾರಕದಲ್ಲಿ ಪ್ರತಿವಾರ ಲಯನ್ಸ್ ಜೀವಾಧಾರ ರಕ್ತನಿಧಿ ಕೇಂದ್ರದವರು ರಕ್ತದಾನ ಶಿಬಿರ ಮತ್ತು ರಸಮಂಜರಿ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದು, ಶ್ಲಾಘನೀಯ ಕೆಲಸವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶ ಬಡಾವಣೆಗಳಲ್ಲಿ ವಿಷ್ಣು ಅಪ್ಪಾಜಿ ಅವರ ಭಾವಚಿತ್ರ ಹಾಕಿ ಸಮಾಜಮಖಿ ಕೆಲಸ ಮಾಡುತ್ತಿದ್ದಾರೆ. ಅವರ ಚಿತ್ರಗಳು ಕೌಟುಂಬಿಕ ಪ್ರಧಾನವಾಗಿದ್ದವು. ಸಮಾಜದಲ್ಲಿ ಶ್ರಮಜೀವಿಗಳಿಗೆ ಇಂದಿಗೂ ಪ್ರೇರಣೆಯಾಗಿದ್ದಾರೆ” ಎಂದರು.

“ಬೆಂಗಳೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಭಿಮಾನಿಗಳು ಹೋರಾಟ ಮಾಡುತ್ತಿದ್ದು, ಬಾಲಣ್ಣ ಅವರ ಕುಟುಂಬಕ್ಕೆ ಮನವಿ ಮಾಡಿದ್ದು, 10 ಗುಂಟೆ ಜಾಗವನ್ನು ಕೇಳಿದ್ದೇವೆ. ಇದರ ಬಗ್ಗೆ ಸರ್ಕಾರದ ನಿರ್ಧಾರಗಳು ಬೇಗ ಸಮ್ಮತಿಸಿದರೆ ಕೋಟ್ಯಾಂತರ ಅಭಿಮಾನಿಗಳಿಗೆ ಖುಷಿಯಾಗುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಜಗತ್ತಿನಲ್ಲಿ ಮೂಢನಂಬಿಕೆ ಹೋಗಲಾಡಿಸಬೇಕು: ಸಚಿವ ಸತೀಶ್ ಜಾರಕಿಹೊಳಿ

ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.

ಜೀವಾಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ರೋಟರಿ ಕ್ಲಬ್ ಸೌತ್ ಈಸ್ಟ್ ಕಾರ್ಯದರ್ಶಿ ಎನ್ ಟಿ ಗಿರೀಶ್, ಅಜಯ್ ಶಾಸ್ತ್ರಿ, ಬೈರತಿ ಲಿಂಗರಾಜು, ವಿಷ್ಣುಸೇನಾ ಅಧ್ಯಕ್ಷ ಶ್ರೀಕಂಠೇಗೌಡ, ಮರಟಿ ಕ್ಯಾತನಹಳ್ಳಿ ಮಂಜು, ವರುಣ ಮಹದೇವ್, ಜಟ್ಟಿ ಹುಂಡಿಗೋಪಾಲ್, ರಶ್ಮಿ, ಪ್ರಭು, ಸುರೇಶ್ ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ದೇವಸ್ಥಾನ ಕಟ್ಟೆ ಮೇಲೆ ಕುಳಿತಿದ್ದಕ್ಕೆ ಹಲ್ಲೆ ಅರೋಪ: ಐವರ ವಿರುದ್ಧ ಪ್ರಕರಣ ದಾಖಲು

ಲಿಂಗಸುಗೂರು ತಾಲೂಕಿನ ಈಚನಾಳ ಗ್ರಾಮದಲ್ಲಿ ಗದ್ದೆಮ್ಮ ದೇವಸ್ಥಾನದ ಕಟ್ಟೆ ಮೇಲೆ ಕುಳಿತಿದ್ದ...

ಸಕಲೇಶಪುರ | 25 ವರ್ಷ ನೆನಗುದಿಗೆ ಬಿದ್ದಿದ್ದ ಆಟೋ ನಿಲ್ದಾಣ ನಿರ್ಮಾಣ 

ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಸ್ಥಳೀಯ...

ಕಾರವಾರ | ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಸುಸೂತ್ರ: ಒಟ್ಟು 11,671 ಅಭ್ಯರ್ಥಿಗಳು ಹಾಜರು

ಕಾರವಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕಂದಾಯ ಇಲಾಖೆಯ ಗ್ರಾಮ...

ಹಾಸನ | ₹426 ಕೋಟಿ; ಹಾಸನ-ಬೇಲೂರು ಚತುಷ್ಪಥ ರಸ್ತೆ ಅಭಿವೃದ್ಧಿ ಯೋಜನೆ; ಸಂಸದ ಶ್ರೇಯಸ್ ಪಟೇಲ್ 

ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಹಾಸನ -...