ಅಭಿವೃದ್ಧಿಯ ಗೌರವ ಪ್ರತಿಯೊಂದು ಮನೆಗೂ, ಪ್ರತಿಯೊಬ್ಬ ಕಾರ್ಮಿಕನಿಗೂ ತಲುಪಬೇಕು: ನಾಗೇಶ್ ಕರಿಯಪ್ಪ

Date:

ಮೈಸೂರು ನಗರದ ನಾಗರಿಕ ಸಮಸ್ಯೆಗಳು, ನಗರ ಕಾರ್ಮಿಕರ ಹಕ್ಕುಗಳು ಹಾಗೂ ಸಮಾನ ಮತ್ತು ಗೌರವಯುತ ನಗರ ಜೀವನದ ಉದ್ದೇಶದೊಂದಿಗೆ ಭಾರತೀಯ ಯುವ ಕಾಂಗ್ರೆಸ್ ವತಿಯಿಂದ ‘Better Cities’ ಅಭಿಯಾನಕ್ಕೆ ಮೈಸೂರಿನಲ್ಲಿ ಚಾಲನೆ ನೀಡಲಾಯಿತು.

- Advertisement -

ಈ ಕುರಿತು ಮೈಸೂರು ನಗರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಯುವ ಕಾಂಗ್ರೆಸ್‌ನ ಕೇರಳ ಉಸ್ತುವಾರಿ ನಾಗೇಶ್ ಕರಿಯಪ್ಪ, ‘Better Cities’ ಅಭಿಯಾನವು ಯಾವುದೇ ಸರ್ಕಾರ ಅಥವಾ ರಾಜಕೀಯ ಪಕ್ಷದ ವಿರುದ್ಧದ ಕಾರ್ಯಕ್ರಮವಲ್ಲ. ನಗರಗಳಲ್ಲಿ ವಾಸಿಸುವ ಮತ್ತು ದುಡಿಯುವ ಸಾಮಾನ್ಯ ಜನರ ಧ್ವನಿಯಾಗುವ ಜನಪರ ಅಭಿಯಾನವಾಗಿದೆ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಅಭಿಯಾನವು ‘ಗೌರವ-ಹಕ್ಕು-ಸಂಘಟನೆ-ನಾಯಕತ್ವ’ (Dignity-Rights-Organisation-Leadership) ಎಂಬ ನಾಲ್ಕು ಪ್ರಮುಖ ತತ್ವಗಳ ಮೇಲೆ ರೂಪುಗೊಂಡಿದೆ. ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ, ಸಮಾನತೆ, ಗೌರವ ಮತ್ತು ಸಹೋದರತ್ವದ ಭರವಸೆ ನೀಡಿದ್ದು, ನಗರದ ಅಭಿವೃದ್ಧಿಯ ಲಾಭ ಹಾಗೂ ಮೂಲಭೂತ ಸೌಲಭ್ಯಗಳು ಪ್ರತಿಯೊಬ್ಬರಿಗೂ ಸಮಾನವಾಗಿ ತಲುಪುತ್ತಿವೆಯೇ ಎಂಬುದನ್ನು ಪ್ರಶ್ನಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದರು.

“ಮೈಸೂರು ಈಗಾಗಲೇ ಸ್ವಚ್ಛತೆ, ಸಂಸ್ಕೃತಿ, ಪರಂಪರೆ ಹಾಗೂ ಜೀವನಮಟ್ಟಕ್ಕಾಗಿ ದೇಶದ ಹೆಮ್ಮೆಯ ನಗರವಾಗಿದೆ. ನಮ್ಮ ಉದ್ದೇಶ ಮೈಸೂರನ್ನು ಟೀಕಿಸುವುದಲ್ಲ; ಮೈಸೂರಿನ ಉತ್ತಮ ಗುಣಮಟ್ಟ ನಗರದ ಪ್ರತಿಯೊಂದು ಬಡಾವಣೆ, ಹೊರವಲಯ ಮತ್ತು ಪ್ರತಿಯೊಬ್ಬ ಕಾರ್ಮಿಕನಿಗೂ ತಲುಪಬೇಕು ಎಂಬುದು,” ಎಂದು ಹೇಳಿದರು.

‘Mera Shehar, Mera Haq’ ವಿಭಾಗದಡಿ ನಗರದ ವಿವಿಧ ವಾರ್ಡ್‌ಗಳು ಮತ್ತು ಬಡಾವಣೆಗಳಿಗೆ ತೆರಳಿ ಸಾರ್ವಜನಿಕರನ್ನು ನೇರವಾಗಿ ಭೇಟಿ ಮಾಡಿ ಅವರ ಸ್ಥಳೀಯ ಸಮಸ್ಯೆಗಳನ್ನು ದಾಖಲಿಸಲಾಗುವುದು. ಕುಡಿಯುವ ನೀರು, ರಸ್ತೆ ಮತ್ತು ಗುಂಡಿಗಳು, ಯುಜಿಡಿ, ಒಳಚರಂಡಿ, ಮಳೆನೀರು ಚರಂಡಿ, ಕಸ ವಿಲೇವಾರಿ, ಬೀದಿ ದೀಪ, ಪಾದಚಾರಿ ಮಾರ್ಗ, ಉದ್ಯಾನವನಗಳು ಹಾಗೂ ಇತರ ಮೂಲಭೂತ ನಾಗರಿಕ ಸೌಲಭ್ಯಗಳ ಕುರಿತು ಮಾಹಿತಿ ಸಂಗ್ರಹಿಸಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಇಲಾಖೆಗಳ ಗಮನಕ್ಕೆ ತರಲಾಗುವುದು. ಸಮಸ್ಯೆಗಳಿಗೆ ಪರಿಹಾರ ದೊರೆಯುವವರೆಗೆ ನಿರಂತರವಾಗಿ ಅನುಸರಣೆ ನಡೆಸಲಾಗುವುದು ಎಂದು ತಿಳಿಸಿದರು.

‘Mehnat Ke Haath’ ವಿಭಾಗದಡಿ ನಗರದ ದೈನಂದಿನ ಜೀವನವನ್ನು ನಡೆಸುವ ಕಾರ್ಮಿಕ ಸಮುದಾಯಗಳೊಂದಿಗೆ ನೇರ ಸಂವಾದ ನಡೆಸಲಾಗುವುದು. ಪೌರಕಾರ್ಮಿಕರು, ಗಿಗ್ ಮತ್ತು ಡೆಲಿವರಿ ಕಾರ್ಮಿಕರು, ಗೃಹ ಕಾರ್ಮಿಕರು, ಆಟೊ ಹಾಗೂ ಟ್ಯಾಕ್ಸಿ ಚಾಲಕರು, ಭದ್ರತಾ ಸಿಬ್ಬಂದಿ, ಬೀದಿ ವ್ಯಾಪಾರಿಗಳು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರ ಉದ್ಯೋಗದ ಗೌರವ, ಸುರಕ್ಷತೆ, ಆದಾಯದ ಸ್ಥಿರತೆ, ಹಕ್ಕುಗಳು ಮತ್ತು ಸಾಮಾಜಿಕ ಭದ್ರತೆಯ ಕುರಿತು ಅಭಿಯಾನ ಗಮನಹರಿಸಲಿದೆ.

“ಮೈಸೂರನ್ನು ಸ್ವಚ್ಛವಾಗಿಡುವ ಕೈಗೂ, ಮೈಸೂರನ್ನು ಚಲಿಸುವ ಕೈಗೂ ಗೌರವ ಸಿಗಬೇಕು,” ಜನರ ಸಮಸ್ಯೆ ಸರ್ಕಾರದ ಮುಂದೆ ಪರಿಹಾರವೇ ಗುರಿ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಅಭಿಯಾನದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ಅಭಿಯಾನ ಯಾರ ವಿರುದ್ಧ ಎಂಬುದು ಮುಖ್ಯವಲ್ಲ; ಯಾರ ಪರ ಎಂಬುದೇ ಮುಖ್ಯ. ನಾವು ಜನರ ಪರ,” ಎಂದು ಹೇಳಿದರು.

“ನಮ್ಮ ಸರ್ಕಾರವಿದ್ದರೂ ಜನರ ಸಮಸ್ಯೆ ಮರೆಮಾಡುವುದು ನಿಷ್ಠೆ ಅಲ್ಲ. ಜನರ ಸಮಸ್ಯೆಯನ್ನು ಸರ್ಕಾರದ ಮುಂದೆ ಇಟ್ಟು ಪರಿಹಾರ ತರುವುದು ನಿಜವಾದ ನಿಷ್ಠೆ. ಸರ್ಕಾರದ ಉತ್ತಮ ಕಾರ್ಯಗಳನ್ನು ಸ್ವಾಗತಿಸುತ್ತೇವೆ. ಎಲ್ಲಿ ಕೊರತೆ ಕಂಡುಬಂದರೂ ಸರ್ಕಾರದ ಗಮನಕ್ಕೆ ತರುತ್ತೇವೆ. ವಿಳಂಬವಾದರೆ ಅನುಸರಣೆ ನಡೆಸುತ್ತೇವೆ. ಜನರಿಗೆ ಪರಿಹಾರ ಸಿಗುವವರೆಗೂ ಅವರ ಜೊತೆ ನಿಲ್ಲುತ್ತೇವೆ,” ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಯುವ ಕಾಂಗ್ರೆಸ್‌ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದ್ದು, ಜನರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದು ಅಭಿಯಾನದ ಉದ್ದೇಶವಾಗಿದೆ. ವೇಗವಾಗಿ ಬೆಳೆಯುತ್ತಿರುವ ಮೈಸೂರಿನ ಭವಿಷ್ಯದ ಅಭಿವೃದ್ಧಿಯ ‘Greater Mysuru ಎಂದರೆ ನಕ್ಷೆಯಲ್ಲಿ ದೊಡ್ಡ ಮೈಸೂರು ಮಾತ್ರವಲ್ಲ; ಸೇವೆಗಳಲ್ಲಿ ಉತ್ತಮ ಮೈಸೂರು ಆಗಬೇಕು’ ಎಂದು ಹೇಳಿದರು.

ನಗರ ವಿಸ್ತರಣೆಯಾಗುವ ಸಂದರ್ಭದಲ್ಲಿ ಹೊಸ ಬಡಾವಣೆಗಳು ಹಾಗೂ ಹೊರವಲಯಗಳಿಗೆ ನೀರು, ರಸ್ತೆ, ಯುಜಿಡಿ, ಒಳಚರಂಡಿ, ಸಾರ್ವಜನಿಕ ಸಾರಿಗೆ, ಬೀದಿ ದೀಪ, ಘನತ್ಯಾಜ್ಯ ನಿರ್ವಹಣೆ, ಉದ್ಯಾನವನ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳು ಸಮಾನವಾಗಿ ತಲುಪಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಮೈಸೂರಿನ ಪರಂಪರೆ, ಪರಿಸರ ಮತ್ತು ಜೀವನಮಟ್ಟಕ್ಕೆ ಹಾನಿಯಾಗದಂತೆ ಯೋಜಿತ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

‘Better Cities’ ಅಭಿಯಾನವು ಕೇವಲ ಬ್ಯಾನರ್, ಛಾಯಾಚಿತ್ರ ಮತ್ತು ಸಾಮಾಜಿಕ ಜಾಲತಾಣದ ಕಾರ್ಯಕ್ರಮವಾಗಬಾರದು. “ಫೋಟೋ ತೆಗೆದ ಕ್ಷಣಕ್ಕೆ ನಮ್ಮ ಕೆಲಸ ಮುಗಿಯುವುದಿಲ್ಲ; ಜನರ ಸಮಸ್ಯೆ ಪರಿಹಾರವಾದಾಗ ಮಾತ್ರ ನಮ್ಮ ಕೆಲಸಕ್ಕೆ ಅರ್ಥ ಬರುತ್ತದೆ”. ಪ್ರತಿ ಪ್ರದೇಶದಲ್ಲೂ ಕೇಳುವುದು, ದಾಖಲಿಸುವುದು, ಸಂಬಂಧಿಸಿದ ಅಧಿಕಾರಿಗೆ ತಲುಪಿಸುವುದು, ಅನುಸರಣೆ ನಡೆಸುವುದು, ಜನರಿಂದಲೇ ಪರಿಹಾರವನ್ನು ಪರಿಶೀಲಿಸಿಕೊಳ್ಳುವುದು ಎಂಬ ಕಾರ್ಯವಿಧಾನವನ್ನು ಅನುಸರಿಸಲಾಗುವುದು ಎಂದರು.

ಸಭೆಗಳ ಸಂಖ್ಯೆ ಅಥವಾ ನೋಂದಣಿಯ ಸಂಖ್ಯೆಯಷ್ಟೇ ಅಭಿಯಾನದ ಯಶಸ್ಸಿನ ಮಾನದಂಡವಲ್ಲ ಎಂದು ಹೇಳಿದ ಅವರು, “ಎಷ್ಟು ಸಭೆಗಳನ್ನು ಮಾಡಿದ್ದೇವೆ ಎನ್ನುವುದು ಒಂದು ಸಂಖ್ಯೆ. ಆದರೆ ಎಷ್ಟು ಸಮಸ್ಯೆಗಳು ಪರಿಹಾರದ ಹಂತಕ್ಕೆ ಬಂದವು, ಎಷ್ಟು ಜನರ ವಿಶ್ವಾಸ ಗಳಿಸಿದ್ದೇವೆ ಮತ್ತು ಎಷ್ಟು ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ ಎನ್ನುವುದೇ ನಿಜವಾದ ಪರಿಣಾಮ,” ಎಂದು ಹೇಳಿದರು.

ಮೈಸೂರಿನ ನಾಗರಿಕರು ತಮ್ಮ ಪ್ರದೇಶದ ನೀರು, ರಸ್ತೆ, ಯುಜಿಡಿ, ಸ್ವಚ್ಛತೆ, ಬೀದಿ ದೀಪ, ತ್ಯಾಜ್ಯ ನಿರ್ವಹಣೆ ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳನ್ನು ‘Better Cities’ ಅಭಿಯಾನದ ಮೂಲಕ ಮುಂದಿಡಬಹುದಾಗಿದೆ. ನಗರ ಕಾರ್ಮಿಕ ಸಮುದಾಯಗಳೊಂದಿಗೆ ಪ್ರತ್ಯೇಕ ಸಂವಾದ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುವುದು ಎಂದು ತಿಳಿಸಿದರು.

ಈ ವಿಶೇಷ ಸುದ್ದಿ ಓದಿದ್ದೀರಾ?SIR: ಆಗಸ್ಟ್ 24ರ ಕರಡು ಪಟ್ಟಿಯ ಬಳಿಕವೇ ನಿಜವಾದ ಪರೀಕ್ಷೆ- ‘ಡಿಜಿಟಲ್ ಪ್ರಮಾಣಪತ್ರ’ ಯೋಜನೆ ಸಿದ್ಧವೇ?

“ಮೈಸೂರು ಬೆಳೆಯಬೇಕು. Greater Mysuru ಆಗಬೇಕು. ಉದ್ಯೋಗ, ಪ್ರವಾಸೋದ್ಯಮ, ಹೂಡಿಕೆ ಮತ್ತು ಮೂಲಸೌಕರ್ಯ ಬೆಳೆಯಬೇಕು. ಆದರೆ ಆ ಅಭಿವೃದ್ಧಿಯ ಮಧ್ಯದಲ್ಲಿ ಸಾಮಾನ್ಯ ನಾಗರಿಕ ಮತ್ತು ಕಾರ್ಮಿಕ ಕಾಣೆಯಾಗಬಾರದು. Developmentನ centreನಲ್ಲಿ building ಇರಬಾರದು-citizen ಇರಬೇಕು. ನಮ್ಮ ಮೈಸೂರು-ನಮ್ಮ ಹಕ್ಕು-ನಮ್ಮ ಜವಾಬ್ದಾರಿ,” ಎಂದು ನಾಗೇಶ್ ಕರಿಯಪ್ಪ ಹೇಳಿದರು.

ಈ ವಿಶೇಷ ಸುದ್ದಿ ಓದಿದ್ದೀರಾ?SIR: 1.08 ಕೋಟಿ ಮತದಾರರಿಗೆ QR ಕೋಡ್ ನೋಟಿಸ್; ಹೆಸರು ಉಳಿಸಿಕೊಳ್ಳಲು ದಾಖಲೆ ಪರಿಶೀಲನೆ ನಿರ್ಣಾಯಕ

ಪತ್ರಿಕಾಗೋಷ್ಠಿಯಲ್ಲಿ ಕೃಷ್ಣರಾಜ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಹೊಯ್ಸಳ ಎಂ.ಆರ್., ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಮಜೀದ್ ಹಿದಾಯತ್ ಖಾನ್, ಚಾಮರಾಜ ವಿಧಾನಸಭಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮನೋಜ್ ಎಂ., ನರಸಿಂಹರಾಜ ವಿಧಾನಸಭಾ ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಕ್ಲೇನ್, ಕೃಷ್ಣರಾಜ ವಿಧಾನಸಭಾ ಯುವ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಕರಣ್ ಶ್ರೀಕಂಠಯ್ಯ, ಅಧ್ಯಕ್ಷ ರೋಹಿತ್ ಸಿಂಗ್ ಹಾಗೂ ಕೃಷ್ಣರಾಜ ವಿಧಾನಸಭಾ ಯುವ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ನಿಥಿನ್ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ವಸತಿ ನಿಲಯದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಆಳಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ...

ಕಲಬುರಗಿ | ತಾಂತ್ರಿಕ ದೋಷಕ್ಕೆ ತುರ್ತು ಲ್ಯಾಂಡಿಂಗ್; ತೊಗರಿ ಜಮೀನಿನಲ್ಲಿ ಲಘು ವಿಮಾನದ ತುರ್ತು ಭೂಸ್ಪರ್ಶ

ಹಾರಾಟದ ವೇಳೆ ದಿಢೀರ್‌ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ಲಘು...

ರಾಯಚೂರು | ಸರ್ಕಾರಿ ಶಾಲೆಗಳ ವಿವಿಧ ಬೇಡಿಕೆ ಈಡೇರಿಕೆಗೆ ನ.26ರಿಂದ ಅಹೋರಾತ್ರಿ ಧರಣಿ

ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ಸರ್ಕಾರಿ ಶಾಲೆಗಳಿಗೆ ಪೂರ್ಣ...

ರಾಯಚೂರು | ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ ರಥಕ್ಕೆ ದೇವದುರ್ಗದಲ್ಲಿ ಅದ್ಧೂರಿ ಸ್ವಾಗತ

ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣ ಹಾಗೂ ಬೌದ್ಧ ಧಮ್ಮದ ಮಾನವೀಯ...