‌ಮೈಸೂರು ವಿವಿ ಸಂಜೆ ಕಾಲೇಜು: ಸಾಂಸ್ಕೃತಿಕ ಹಾಗೂ NSS ಚಟುವಟಿಕೆಗಳಿಗೆ ಚಾಲನೆ

Date:

ಮೈಸೂರು ವಿವಿ ಸಂಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿಯಿಂದ 2026-27ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಮತ್ತು ಎನ್‌ಎಸ್‌ಎಸ್(NSS) ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ವಿಜೃಂಭಣೆಯಿಂದ ನೆರವೇರಿತು.

- Advertisement -

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಉದ್ಯಮಿ ಲಿಂಗರಾಜು ಎನ್. ಬೆಳ್ತೂರು, “ವಿದ್ಯಾರ್ಥಿ ಜೀವನದಲ್ಲಿ ಕೇವಲ ಪಠ್ಯ ಮಾತ್ರವಲ್ಲದೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಎರಡನೇ ಬರಪಟ್ಟಿಗೂ ಬಾರದ ರಾಮದುರ್ಗ, ಸವದತ್ತಿ: ಸಂಕಷ್ಟದಲ್ಲಿ ರೈತರು,...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ...

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ, ಆಹಾರ ಭದ್ರತೆ ಮತ್ತು ಶಕ್ತಿ ಭದ್ರತೆಯ ತಾಣ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಭಾರತವು ಕೇವಲ ಪರಿಸರ ಸಮಸ್ಯೆಯಾಗಿ...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ...

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಸಿ ಎಚ್‌ ಭಾಗ್ಯ ಅವಳು ತನ್ನ ಹಾಸಿಗೆಯ ಸುತ್ತಾ ಇರುವ ಮಕ್ಕಳನ್ನು ಒಟ್ಟೈಸುವಳು.ಹೊಟೇಲ್ ಬಿಡುವ...

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಾನಪದ ಕಲಾವಿದ ಡಾ. ಸಿ. ಸುಂದರೇಶ್ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ಥಳೀಯ ಜಾನಪದ ಕಲೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ಹೇಗೆ ವೇದಿಕೆ ಸಿಗುತ್ತದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ತಿಮ್ಮಯ್ಯ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ವಿಶ್ವವಿದ್ಯಾನಿಲಯ ಸಂಜೆ ಕಾಲೇಜಿನ ವೈಶಿಷ್ಟ್ಯಗಳು, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ, ಆಸಕ್ತಿ ಹಾಗೂ ಅವರ ಸಂಘಟನಾ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ವೇದಿಕೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಸಮಿತಿಯ ಸಂಚಾಲಕರಾದ ಡಾ. ಶಿವಶಂಕರ್ ಬಿ. ಹಾಗೂ NSS ಸಂಯೋಜಕರಾದ ಡಾ. ನಿಂಗರಾಜು ಉಪಸ್ಥಿತರಿದ್ದರು.

ಈ ಸುದ್ದಿ ಓದಿದ್ದೀರಾ? ಕೋಲಾರ | ಥಲ್ ಸೈನಿಕ್ ಶಿಬಿರದಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ, ಜಿಲ್ಲೆಯ ಐವರು ಎನ್‌ಸಿಸಿ ಕೆಡೆಟ್‌ಗಳ ಸಾಧನೆ

ಡಾ. ಎಚ್ ಬಿ ಪುಷ್ಪ ಕಾರ್ಯಕ್ರಮ ನಿರೂಪಿಸಿದರು. ಡಾ. ಲಾವಣ್ಯ ಅವರು ಎಲ್ಲ ಅತಿಥಿಗಳನ್ನು ಸ್ವಾಗತಿಸಿದರು. ಡಾ. ನಿಂಗರಾಜು ಅವರು ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಿದರು ಹಾಗೂ ಡಾ. ಪಿ ರವಿ ಅವರು ಅತಿಥಿಗಳು ಹಾಗೂ ಸಭಿಕರೆಲ್ಲರಿಗೂ ವಂದನೆಗಳನ್ನು ಅರ್ಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಶಿಕ್ಷಕರ ಮಾತು ಆಜ್ಞೆಯಂತೆ ಪಾಲಿಸುವ ಮಕ್ಕಳು ಸೋಲುವುದಿಲ್ಲ : ಶಾಸಕ ಪ್ರಭು ಚವ್ಹಾಣ

ಶಿಕ್ಷಕರು ನೀಡುವ ಮೌಲ್ಯಯುತ ಮಾತುಗಳನ್ನು ಆಜ್ಞೆಯಂತೆ ಪಾಲಿಸುವ ಮಕ್ಕಳು ಜೀವನದಲ್ಲಿ ಸೋಲದೆ,...

ಪಾಕಿಸ್ತಾನದ ಮಸೀದಿಯಲ್ಲಿ ಭೀಕರ ಆತ್ಮಾಹುತಿ ದಾಳಿ: 16 ಮಂದಿ ಸಾವು

ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕೊಹಾಟ್ ಜಿಲ್ಲೆಯ ಹಳೆಯ ಪೊಲೀಸ್...

ಕಾರವಾರ | ಕಡವಾಡದಲ್ಲಿ ನಿರಂತರ ವಿದ್ಯುತ್ ಕಡಿತ – ಹೆಸ್ಕಾಂ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕಾರವಾರ: ತಾಲ್ಲೂಕಿನ ಕಡವಾಡ ಗ್ರಾಮದಲ್ಲಿ ನಿರಂತರವಾಗಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದರಿಂದ ಸಾರ್ವಜನಿಕರು...