ಯಾದಗಿರಿ | ಪಿಎಸ್‌ಐ ಪರಶುರಾಮ್ ಪ್ರಕರಣ: ಶಾಸಕರ ಬಂಧನಕ್ಕೆ ಆಗ್ರಹಿಸಿ ದಲಿತ-ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

Date:

ಯಾದಗಿರಿ ನಗರ ಠಾಣೆಯ ಪಿಎಸ್‌ಐ ಪರಶುರಾಮ್ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಪುತ್ರ ಪಂಪನಗೌಡ ಇವರನ್ನು ಈ ಕೂಡಲೇ ಬಂಧಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ-ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಯಾದಗಿರಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ನಗರದ ಮೈಲಾಪೂರ ಅಗಸಿಯಿಂದ ಗಾಂಧಿವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಸುಭಾಷ್ ಚಂದ್ರ ಬೋಸ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಮುಖಂಡರು, ಪಿಎಸ್‌ಐ ಪರಶುರಾಮ್ ಅವರ ಕುಟುಂಬಕ್ಕೆ ಸರ್ಕಾರದಿಂದ 5 ಕೋಟಿ ಪರಿಹಾರ ನೀಡಬೇಕು. ಮೃತ ಪಿಎಸ್‌ಐ ಪತ್ನಿ ಶ್ವೇತಾ ಅವರಿಗೆ ಸರ್ಕಾರಿ ಹುದ್ದೆ ನೀಡಬೇಕು, ಪರಶುರಾಮ್ ತಂದೆ-ತಾಯಿ ಹೆಸರಿಗೆ ಸರ್ಕಾರದಿಂದ 10 ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪಿಎಸ್ಐ ಪರಶುರಾಮ್ ಅವರ ಸಹೋದರ ಹಣಮಂತ ಮಾತನಾಡಿ, “ದಲಿತ ಬಡ ಕುಟುಂಬದಲ್ಲಿ ಹುಟ್ಟಿ ಉನ್ನತ ಹೃದ್ದೆ ಪಡೆಯುವುದು ಎಷ್ಟು ಶ್ರಮ ಪಟ್ಟಿರುತ್ತಾರೆ ಎಂದು ಅನುಭವಿಸಿದವರಿಗೆ ಗೊತ್ತು. ಸಂಕಷ್ಟ ಕಷ್ಟಗಳನ್ನು ಮೆಟ್ಟಿ ನಮ್ಮ ತಮ್ಮ ಪರಶುರಾಮ್ ಪಿ.ಎಸ್.ಐ ಆಗಿದ್ದ. ಸಿಎಂ ಸಿದ್ದರಾಮಯ್ಯ ಅವರು ಯಾರಿಗೆ ಸಾಂತ್ವನ ಹೇಳಬೇಕಿತ್ತೋ ಅವರನ್ನು ಬಿಟ್ಟು ಅಪರಾಧ ಕೃತ್ಯಕ್ಕೆ ಕಾರಣರಾದವರಿಗೆ ಸಾಂತ್ವನ ಹೇಳಲು ಮುಂದಾಗಿದ್ದಾರೆ. ಆದರೆ ನಮ್ಮ ಕುಟುಂಬಕ್ಕೆ ಆದ ಅನ್ಯಾಯ ನಮ್ಮ ಕಷ್ಟವನ್ನು ಕೇಳುವವರು ಯಾರು? 24 ಗಂಟೆಗಳೊಳಗೆ ಅಪರಾಧಿಗಳನ್ನು ಬಂಧನ ಮಾಡಬೇಕು” ಎಂದು ಆಗ್ರಹಿಸಿದರು.

ಚಿತ್ರನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಮಾತನಾಡಿ, “ಕುಟುಂಬ ವರ್ಗದವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿರುವುದು ಸ್ವಾಗತಾರ್ಹ. ಆದರೆ, ಕೂಡಲೇ ಆರೋಪಿಗಳನ್ನು ಬಂಧಿಸಬೇಕು” ಎಂದು ಒತ್ತಾಯಿಸಿದರು.

“ರಾಜಕಾರಣಿಗಳನ್ನು ಬಚಾವ್‌ ಮಾಡಲು ಸರ್ಕಾರ ಕೆಲ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಬರುತ್ತಿದೆ. ಕೂಡಲೇ ಪರಶುರಾಮ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ₹30 ಲಕ್ಷ ಬೇಡಿಕೆ ಇಟ್ಟಿದ್ದರಿಂದ ಅದನ್ನು ಈಡೇರಿಸಲಾಗದೆ ಮನನೊಂದಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ತೊಡಗಿರುವ ಶಾಸಕನನ್ನು ಕೂಡಲೇ ವಜಾಗೊಳಿಸಬೇಕು” ಎಂದು ಹೇಳಿದರು.

ಅಹಿಂದ ಮುಖಂಡ ಹನುಮೇಗೌಡ ಬೀರನಕಲ್ ಮಾತನಾಡಿ, ಜಾತಿ ನಿಂದನೆ ಪ್ರಕರಣದಲ್ಲಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಆದರೆ, ಸರ್ಕಾರ ನಿರ್ಲಕ್ಷ್ಯ ವಹಿಸಿದೆ” ಎಂದು ದೂರಿದರು. ಪ್ರತಿಭಟನಾ ಮೆರವಣಿಗೆಯ ಬಳಿಕ ಯಾದಗಿರಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅರ್ಜುನ ಭದ್ರೆ ,ಮರಿಯಪ್ಪ ಹಳ್ಳಿ, ನಾಗಣ್ಣ ಬಡಿಗೇರ, ನಾಗಣ್ಣ ಕಲ್ಲದೇವನಹಳ್ಳಿ, ಮಲ್ಲಿಕಾರ್ಜುನ ಜಲ್ಲಪ್ಪನೋರ್, ಭೀಮಶಂಕರ ಆಲ್ದಾಳ್, ರಾಹುಲ್ ಹುಲಿಮನಿ, ತೇಜರಾಜ್ ರಾಠೋಡ್, ಮರಳಸಿದ್ದಪ್ಪ ನಾಯ್ಕಲ್, ಚಂದ್ರಶೇಖರ್ ದಾಸನಕೇರಿ, ಮಲ್ಲಿನಾಥ್ ಸುಂಗಲಕರ್, ಅಬ್ದುಲ್ ಕರೀಮ್, ಎಂ. ಡಿ ತಾಜ್,ನಿಂಗಣ್ಣ ಬೀರನಾಳ, ಮರೆಪ್ಪ ಕ್ರಾಂತಿ, ಅಜೀಜ್ ಸಾಬ್ ಐಕೂರ್, ಬಸವರಾಜ್ ಗೋನಾಲ, ಮುತ್ತುರಾಜ್, ಭೀಮಣ್ಣ ಲಕ್ಷ್ಮೀಪುರ ಪೂಜಾರಿ, ಹಣಮೆಗೌಡ ಬೀರನಕಲ್, ಮಲ್ಲಿಕಾರ್ಜುನ ಶಾಖವರ, ಮರೆಪ್ಪ ನಾಯಕ, ಬೆಂಜಮಿನ್, ಮಲ್ಲಿಕಾರ್ಜುನ ಕ್ರಾಂತಿ, ಮರೆಪ್ಪ ಚಟ್ಟೇರಕರ್, ಟಿ. ಎಸ್. ಭೀಮು ನಾಯಕ, ಶಿವಪುತ್ರ ಜವಳಿ, ನಿಂಗಪ್ಪ ಹತ್ತಿಮನಿ, ಮಾನಪ್ಪ ಕಟ್ಟಿಮನಿ, ಕಾಶೀನಾಥ್ ನಟೇಕಾರ್, ಬಿ. ಎಸ್ ವಿಶ್ವನಾಥ ನಾಯಕ, ಸದ್ದಾಂ ಹುಸೇನ್, ರವಿ. ಕೆ. ಮುದ್ನಾಳ್, ಪ್ರಭು ಎಂ. ಬುಕ್ಕರ್, ಐಕೂರ್ ಅಶೋಕ್, ಹಣಮಂತ ಎಸ್. ಆರ್. ಎಸ್, ರೇಣುಕಾ ಸರಡಗಿ, ವಿಶ್ವ ನಟೇಕಾರ್, ಸಿದ್ದು ಮುಂಡಾಸ್, ಬಸವರಾಜ್ ಶಹಾಪುರ, ಶೇಖರ್ ಬಡಿಗೇರ್, ಗೋಪಾಲ್ ತೆಳಿಕೆರಿ, ಭೀಮಣ್ಣ ಹೊಸಮನಿ, ವೆಂಕೂಬ್ ಕಟ್ಟಿಮನಿ, ಚಂದ್ರು ಚಕ್ರವರ್ತಿ, ನಗರೇಂದ್ರ ರಾಯಚೂರು, ಮಾನಪ್ಪ ಕಲ್ಲದೇವನಹಳ್ಳಿ, ಡಾ. ಎಸ್. ಎಸ್. ನಾಯಕ ಇನ್ನಿತರರು ಉಪಸ್ಥಿತರಿದ್ದರು.

ವರದಿ: ಗೀತಾ ಹೊಸಮನಿ

ಬೇಡಿಕೆಗಳು

  • ಯಾದಗಿರಿ ನಗರ ಠಾಣೆಯ ಪಿಎಸ್.ಐ ಪರಶುರಾಮ ಚಲುವಾದಿಯವರ ಶಂಕಾಸ್ಪದ ಸಾವು ಸಿಬಿಐ ತನಿಖೆಗೆ ಒಳಪಡಿಸಬೇಕು.
  • ಯಾದಗಿರಿ ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರು ಹಾಗೂ ಆತನ ಮಗನಾದ ಪಂಪಣ್ಣಗೌಡ ಇವರನ್ನು ಈ ಕೂಡಲೇ ಬಂಧಿಸಬೇಕು.
  • ಪರಶುರಾಮ ಚಲುವಾದಿಯವರ ತಂದೆ-ತಾಯಿ ಹೆಸರಿಗೆ ಸರಕಾರದಿಂದ 10 ಎಕರೆ ಜಮೀನು ಮಂಜೂರು ಮಾಡಬೇಕು.
  • ಪರಶುರಾಮ ಚಲುವಾದಿಯವರ ಕುಟುಂಬಕ್ಕೆ ಸರಕಾರದಿಂದ 5 ಕೋಟಿ ಪರಿಹಾರ ನೀಡಬೇಕು.
  • ಮೃತ ಪಿ.ಎಸ್.ಐ ಹೆಂಡತಿಗೆ ಅವರು ಹೇಳಿದ ಸರಕಾರಿ ಹುದ್ದೆ ನೀಡಬೇಕು.
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಸೆ. 15ಕ್ಕೆ ಪ್ರಜಾಪ್ರಭುತ್ವ ದಿನ; ಅಧಿಕಾರಿಗಳು ಪಾಲ್ಗೊಳ್ಳುವುದು ಕಡ್ಡಾಯ: ಸಂತೋಷ್ ಲಾಡ್

ರಾಜ್ಯ ಸರಕಾರವು ಸೆಪ್ಟೆಂಬರ್ 15 ರಂದು 'ಪ್ರಜಾಪ್ರಭುತ್ವ ದಿನ'ವನ್ನು ವಿಶೇಷವಾಗಿ ಆಚರಿಸಲು...

ರಾಯಚೂರು | ಒಳ ಮೀಸಲಾತಿ ಅನುಷ್ಠಾನಕ್ಕೆ ನಿರ್ಲಕ್ಷ್ಯ: ಸೆ.12ರಂದು ರಾಜ್ಯಾದ್ಯಂತ ತಮಟೆ ಚಳವಳಿ

ಪರಿಶಿಷ್ಟ ಜಾತಿಯಲ್ಲಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್ ತೀರ್ಪು...

ಮಂಡ್ಯ | ಸೆ.8ರಂದು ಪೂರ್ಣಚಂದ್ರ ತೇಜಸ್ವಿ-86 ರ ‘ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ’ ಕಾರ್ಯಕ್ರಮ

ಚಿತ್ರಕೂಟ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ 'ಪೂರ್ಣಚಂದ್ರ...