ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಲಿಂಗಸುಗೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಹಳೆಯ ಕಟ್ಟಡದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ತಾಲ್ಲೂಕಿನ ಸಿರವಾರ ಹುಡಾ ಗ್ರಾಮದ ಮಹೇಶ ರಾಮನಗೌಡ (30) ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕುಡಿಯುವ ನೀರಿಗಾಗಿ ಹೋರಾಟ; 70-80 ಗ್ರಾಮಸ್ಥರ ಮೇಲೆ ಪ್ರಕರಣ, ಪಿಡಿಓ ವಿರುದ್ಧ ಜನರ ಆಕ್ರೋಶ
ಮಹೇಶ ತನ್ನ ಹೆಂಡತಿಯೊಂದಿಗೆ ಜಗಳ ಮಾಡಿದ್ದ. ಹೆಂಡತಿ ಕ್ರಿಮಿನಾಶಕ ಔಷದ ಸೇವನೆ ಮಾಡಿದ್ದಾಳೆ ಎಂದು ಮನಸ್ಸಿಗೆ ಬೇಜಾರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




