ಅರಕೇರಾ ಪಟ್ಟಣದ ಬೆಟ್ಟದ ಮೇಲಿರುವ ಮೊಹರಂ ಅಲಾಯಿ ದೇವರ ಮಸೀದಿಯಲ್ಲಿ ಕಳ್ಳತನ ನಡೆದಿದ್ದು, 2.5 ಕೆ.ಜಿ ತೂಕದ ಐದು ಬೆಳ್ಳಿ ಕೊಡೆಗಳು, ಎರಡು ಕಂಚಿನ ಮೂರ್ತಿಗಳು ಹಾಗೂ ನಾಲ್ಕು ಕಬ್ಬಿಣದ ದೇವರ ಮೂರ್ತಿಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಸ್ಥಳೀಯ ಭಕ್ತರು ಮಸೀದಿಗೆ ಭೇಟಿ ನೀಡಿದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಸೀದಿ ಆವರಣದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಾಲೆ ನವೀಕರಣಕ್ಕೆ ₹15 ಸಾವಿರ ಲಂಚ: ಡಿಡಿಪಿಐ ಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲೆಗೆ
ಮಾಹಿತಿ ಪಡೆದ ದೇವದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿದರು. ಮಸೀದಿಯ ಪೂಜಾರಿ ರಾಜಸಾಬ್, ಖಾಸಿಂ ಸಬ್, ಖಾಜಣ್ಣ ಸೇರಿದಂತೆ ಗ್ರಾಮಸ್ಥರು ಕಳ್ಳರನ್ನು ಶೀಘ್ರ ಬಂಧಿಸಿ, ಕಳವಾದ ವಸ್ತುಗಳನ್ನು ಪತ್ತೆಹಚ್ಚುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.




