ರಾಜ್ಯ ಸರ್ಕಾರವು ರಾಯಚೂರು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲೆಯ ಎಂಟು ತಾಲ್ಲೂಕು ಪಂಚಾಯಿತಿ ಸ್ಥಾನಗಳ ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಿದೆ.
ರಾಯಚೂರು ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 39 ಸ್ಥಾನಗಳಿದ್ದು, ಈ ಪೈಕಿ 20 ಸ್ಥಾನಗಳು ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿಗೆ 9 ಸ್ಥಾನಗಳನ್ನು ಮೀಸಲಿಡಲಾಗಿದ್ದು, ಈ ಪೈಕಿ ಐದು ಮಹಿಳೆಯರಿಗೆ ಮೀಸಲಾಗಿವೆ. ಪರಿಶಿಷ್ಟ ಪಂಗಡಕ್ಕೆ ಒಟ್ಟು 9 ಸ್ಥಾನಗಳು ಮೀಸಲಾಗಿದ್ದು, ಇದರಲ್ಲಿ 5 ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ.
ಹಿಂದುಳಿದ ವರ್ಗ ‘ಅ’ ಅಡಿ 1 ಸ್ಥಾನ ಮೀಸಲಾಗಿದ್ದು, ಒಂದು ಸ್ಥಾನ ಮಹಿಳೆಗೆ ಮೀಸಲಾಗಿದೆ. ಸಾಮಾನ್ಯ ವರ್ಗದಡಿ 20 ಸ್ಥಾನಗಳಿದ್ದು, ಈ ಪೈಕಿ 9 ಮಹಿಳೆಯರಿಗೆ ಮೀಸಲಿಟ್ಟಿದೆ.
ರಾಯಚೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿಗಳ ವಿವರ
ರಾಯಚೂರು ತಾಲ್ಲೂಕು ಪಂಚಾಯಿತಿ – ಮೀಸಲಾತಿ ವಿವರ, ಒಟ್ಟು 23 ಸ್ಥಾನಗಳಲ್ಲಿ 12 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ
| ವರ್ಗ | ಒಟ್ಟು ಸ್ಥಾನ | ಮಹಿಳೆಯರಿಗೆ |
|---|---|---|
| ಪರಿಶಿಷ್ಟ ಜಾತಿ (SC) | 5 | 3 |
| ಪರಿಶಿಷ್ಟ ಪಂಗಡ (ST) | 5 | 3 |
| ಹಿಂದುಳಿದ ವರ್ಗ–ಅ | 1 | 1 |
| ಸಾಮಾನ್ಯ ವರ್ಗ | 12 | 5 |
| ಒಟ್ಟು | 23 | 12 |
ಅರಕೇರಾ ತಾಲ್ಲೂಕು ಪಂಚಾಯಿತಿ – ಮೀಸಲಾತಿ ವಿವರ, ಒಟ್ಟು 13 ಸ್ಥಾನಗಳಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ
| ವರ್ಗ | ಒಟ್ಟು ಸ್ಥಾನಗಳು | ಮಹಿಳೆಯರಿಗೆ |
|---|---|---|
| ಪರಿಶಿಷ್ಟ ಜಾತಿ (SC) | 2 | 1 |
| ಪರಿಶಿಷ್ಟ ಪಂಗಡ (ST) | 4 | 2 |
| ಸಾಮಾನ್ಯ ವರ್ಗ | 7 | 4 |
| ಒಟ್ಟು | 13 | 7 |
ಸಿರವಾರ ತಾಲ್ಲೂಕು ಪಂಚಾಯಿತಿ – ಮೀಸಲಾತಿ ವಿವರ, ಒಟ್ಟು 11 ಸ್ಥಾನಗಳಲ್ಲಿ 6 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ
| ವರ್ಗ | ಒಟ್ಟು ಸ್ಥಾನಗಳು | ಮಹಿಳೆಯರಿಗೆ |
|---|---|---|
| ಪರಿಶಿಷ್ಟ ಜಾತಿ (SC) | 2 | 1 |
| ಪರಿಶಿಷ್ಟ ಪಂಗಡ (ST) | 3 | 2 |
| ಸಾಮಾನ್ಯ ವರ್ಗ | 6 | 3 |
| ಒಟ್ಟು | 11 | 6 |
ಮಾನ್ವಿ ತಾಲ್ಲೂಕು ಪಂಚಾಯಿತಿ – ಮೀಸಲಾತಿ ವಿವರ, ಒಟ್ಟು 14 ಸ್ಥಾನಗಳಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ
| ವರ್ಗ | ಒಟ್ಟು ಸ್ಥಾನಗಳು | ಮಹಿಳೆಯರಿಗೆ |
|---|---|---|
| ಪರಿಶಿಷ್ಟ ಜಾತಿ (SC) | 3 | 2 |
| ಪರಿಶಿಷ್ಟ ಪಂಗಡ (ST) | 4 | 2 |
| ಸಾಮಾನ್ಯ ವರ್ಗ | 7 | 3 |
| ಒಟ್ಟು | 14 | 7 |
ಮಸ್ಕಿ ತಾಲ್ಲೂಕು ಪಂಚಾಯಿತಿ – ಮೀಸಲಾತಿ ವಿವರ, ಒಟ್ಟು 16 ಸ್ಥಾನಗಳಲ್ಲಿ 8 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ
| ವರ್ಗ | ಒಟ್ಟು ಸ್ಥಾನಗಳು | ಮಹಿಳೆಯರಿಗೆ |
|---|---|---|
| ಪರಿಶಿಷ್ಟ ಜಾತಿ (SC) | 4 | 2 |
| ಪರಿಶಿಷ್ಟ ಪಂಗಡ (ST) | 4 | 2 |
| ಸಾಮಾನ್ಯ ವರ್ಗ | 8 | 4 |
| ಒಟ್ಟು | 16 | 8 |
ಲಿಂಗಸುಗೂರು ತಾಲ್ಲೂಕು ಪಂಚಾಯಿತಿ – ಮೀಸಲಾತಿ ವಿವರ, ಒಟ್ಟು 22 ಸ್ಥಾನಗಳಲ್ಲಿ 11 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
| ವರ್ಗ | ಒಟ್ಟು ಸ್ಥಾನಗಳು | ಮಹಿಳೆಯರಿಗೆ |
|---|---|---|
| ಪರಿಶಿಷ್ಟ ಜಾತಿ (SC) | 5 | 3 |
| ಪರಿಶಿಷ್ಟ ಪಂಗಡ (ST) | 5 | 3 |
| ಹಿಂದುಳಿದ ವರ್ಗ–ಬಿ | 1 | 1 |
| ಸಾಮಾನ್ಯ ವರ್ಗ | 11 | 4 |
| ಒಟ್ಟು | 22 | 11 |
ಸಿಂಧನೂರು ತಾಲ್ಲೂಕು ಪಂಚಾಯಿತಿ – ಮೀಸಲಾತಿ ವಿವರ, ಒಟ್ಟು 21 ಸ್ಥಾನಗಳಲ್ಲಿ 11 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
| ವರ್ಗ | ಒಟ್ಟು ಸ್ಥಾನಗಳು | ಮಹಿಳೆಯರಿಗೆ |
|---|---|---|
| ಪರಿಶಿಷ್ಟ ಜಾತಿ (SC) | 4 | 2 |
| ಪರಿಶಿಷ್ಟ ಪಂಗಡ (ST) | 3 | 2 |
| ಹಿಂದುಳಿದ ವರ್ಗ–ಅ | 2 | 1 |
| ಹಿಂದುಳಿದ ವರ್ಗ–ಬಿ | 1 | 1 |
| ಸಾಮಾನ್ಯ ವರ್ಗ | 11 | 5 |
| ಒಟ್ಟು | 21 | 11 |
ದೇವದುರ್ಗ ತಾಲ್ಲೂಕು ಪಂಚಾಯಿತಿ – ಮೀಸಲಾತಿ ವಿವರ, ಒಟ್ಟು 13 ಸ್ಥಾನಗಳಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
| ವರ್ಗ | ಒಟ್ಟು ಸ್ಥಾನಗಳು | ಮಹಿಳೆಯರಿಗೆ |
|---|---|---|
| ಪರಿಶಿಷ್ಟ ಜಾತಿ (SC) | 3 | 2 |
| ಪರಿಶಿಷ್ಟ ಪಂಗಡ (ST) | 3 | 2 |
| ಸಾಮಾನ್ಯ ವರ್ಗ | 7 | 3 |
| ಒಟ್ಟು | 13 | 7 |
ಇದನ್ನೂ ಓದಿ : ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?




