ಶಿವಮೊಗ್ಗ | ಗಾಂಧಿ ಪಾರ್ಕ್‌ನಲ್ಲಿ ಅನೈರ್ಮಲ್ಯ; ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ

Date:

ಶಿವಮೊಗ್ಗ ಮಹಾನಗರ ಪಾಲಿಕೆ ಎದರು ಇರುವ ಗಾಂಧಿ ಪಾರ್ಕ್ ಸ್ವಚ್ಛವಾಗಿಲ್ಲ ಕಸ, ಕಡ್ಡಿ, ಒಣಗಿದ ಎಲೆಗಳು, ಈಜುಕೋಳದ ಮುಂದೆ ಇರುವ ಬಾಗಿಲು ತುಕ್ಕು ಹಿಡಿದಿದ್ದು, ಹಾಗೆ ಪಾರ್ಕ್ ಒಳಗೆ ಇರುವ ದೀಪದ ಕಂಬ ಬೇರೆ ಬೇರೆ ಕಂಬಗಳೂ ಕೂಡ ತುಕ್ಕು ಹಿಡಿದಿದೆ. ಪಾರ್ಕ್ ಒಳಗೆ ಇರುವ ಶೌಚಾಲಯದಲ್ಲಿರುವ ಕೈ ತೊಳೆಯುವ ನೀರಿನ ನಲ್ಲಿಗಳು ಮುರಿದು ಹೋಗಿರುವುದು ಕಂಡುಬಂದಿದೆ.

ಕಸ, ಕಡ್ಡಿ, ಒಣಗಿದ ಎಲೆಗಳು ಇದನ್ನೆಲ್ಲ ತೆಗೆದು ಸ್ವಚ್ಛಗೊಳಿಸುವುದಿಲ್ಲವಾ ತುಂಬಾ ದಿನದಿಂದ ಇದೇ ರೀತಿಯಲ್ಲಿ ಇದೆ. ಪಾರ್ಕ್ ಒಳಗೆ ಬರುವುದಕ್ಕೆ ₹10 ಶುಲ್ಕ ಇದೆ ಎಂದು ಈ ದಿನ.ಕಾಮ್‌ ಪ್ರಶ್ನೆ ಮಾಡಿದ್ದು, “ಇದರಲ್ಲಿ ಕೆಲವಷ್ಟು ನಮ್ಮ ವ್ಯಾಪ್ತಿಯ ಅಡಿಯಲ್ಲಿ, ಮತ್ತಷ್ಟು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತದೆ. ಈಗಿನ ಆರ್ ಆರ್ ಎಂಟರ್‌ಪ್ರೈಸಸ್‌ನವರಿಗೆ 6 ತಿಂಗಳಿಗೆ ಟೆಂಡರ್ ಆಗಿದೆ” ಎಂದು ಅಲ್ಲಿಯ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.

“ಪ್ರತಿ ಬಾರಿ 3 ವರ್ಷ ಟೆಂಡರ್ ಕೊಡುತ್ತಿದ್ದು, ಈ ಬಾರಿ 6 ತಿಂಗಳಿಗೆ ಮಾತ್ರ ಟೆಂಡರ್ ಕೊಟ್ಟಿದ್ದಾರೆ. ಹಾಗಾಗಿ ನಮ್ಮ ವ್ಯಾಪ್ತಿಯಲ್ಲಿ ಬರುವುದನ್ನು ನಾವು ಸ್ವಚ್ಛ ಮಾಡುತ್ತೇವೆ” ಎಂದು ಆರ್‌ ಆರ್‌ ಎಂಟರ್‌ಪ್ರೈಸಸ್‌ ಸಿಬ್ಬಂದಿ ಈ ದಿನ.ಕಾಮ್‌ಗೆ ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರನ್ನು ಈ ದಿನ.ಕಾಮ್‌ ಸಂಪರ್ಕಿಸಿದ್ದು, “ಕಾಮಗಾರಿ ಪ್ರಗತಿಯಲ್ಲಿ ಇದೆ. ಹೀಗಾಗಿ ನಾವು ಇದನ್ನು ಮುಂದಿನ ಶನಿವಾರದ ಒಳಗೆ ಸರಿಪಡಿಸಿಕೊಡುತ್ತೇವೆ” ಎಂದು ಹೇಳಿದರು.

ತ್ವರಿತಗತಿಯ ಕಾಮಗಾರಿ ನಡೆಯುತ್ತಿಲ್ಲ, 15s ಗ್ರಾಂಟ್ಸ್ ಅಡಿಯಲ್ಲಿ ಮತ್ತು ಕಳೆದ 5 ವರ್ಷ ಅವಧಿಯಲ್ಲಿ ಮಹಾನಗರ ಪಾಲಿಕೆಗೆ ಎಷ್ಟೆಷ್ಟು ಅನುದಾನ ಬಿಡುಗಡೆಯಾಗಿದೆ ಎಂದು ಎಸ್‌ಎಫ್‌ಸಿ ಅಡಿಯಲ್ಲಿ ಈ ದಿನ.ಕಾಮ್‌ ಮಾಹಿತಿ ಕೇಳಿದ್ದು, ಪ್ರಶ್ನೆಗೆ ಕೆರಳಿದ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರು, “ಇಂತಹ ವಿಚಾರ ಕೇಳುವುದಕ್ಕೆ ಕರೆ ಮಾಡಬೇಡಿ, ನಮಗೆ ಸಮಯ ಇಲ್ಲ ಮೀಟಿಂಗ್ ಅಲ್ಲಿ ಇದ್ದೀನಿ ಖುದ್ದಾಗಿ ಕಚೇರಿ ಬಂದು ಮಾಹಿತಿ ಪಡೆಯಿರಿ” ಎಂದರು.

ಈ ಸುದ್ದಿ ಓದಿದ್ದೀರಾ? ಗದಗ | ಜಾಗ, ಮನಿ, ಕರೆಂಟ್, ನೀರು ಕೊಡ್ತೀವಿ ಓಟಾಕಿ ಅಂದ್ರು; ಈಗ ಏನನ್ನೂ ಕೊಡ್ಲಿಲ್ರಿ; ಅಲೆಮಾರಿ ಸಮುದಾಯಗಳ ಅಳಲು

ಮಹಾನಗರ ಪಾಲಿಕೆ ಸದಸ್ಯರೊಬ್ಬರು ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದು, “ಶಿವಮೊಗ್ಗ ಮಹಾನಗರ ಪಾಲಿಕೆಗೆ ಕಳೆದ 5 ವರ್ಷದಲ್ಲಿ ಯಾವುದೇ ರೀತಿಯ ಬಿಡಿಗಾಸು ಅನುದಾನ ಬಂದಿಲ್ಲ. ಇದನ್ನು ತರುವ ಮನಸ್ಸು ಇಚ್ಛಾ ಶಕ್ತಿ ಕೂಡ ಇವರಲ್ಲಿ ಕಾಣಿಸಲಿಲ್ಲ. ಹಾಗೆಯೇ ಶಿವಮೊಗ್ಗ ನಗರದ ಹಿಂದಿನ ಸರ್ಕಾರ, ಜನಪ್ರತಿನಿಧಿಗಳಿಗೆ ನಗರದ ಅಭಿವೃದ್ಧಿಗೆ ಇವರು ಎಷ್ಟು ಕಾಳಜಿ ವಹಿಸಿದ್ದರು ಎಂಬುದು ತಿಳಿಯುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

ಭಾರಧ್ವಾಜ್ ಶಿವಮೊಗ್ಗ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆ ಕಡ್ಡಾಯ: ನ್ಯಾ. ನೇರಳೆ ವೀರಭದ್ರಯ್ಯ ಭವಾನಿ

ಮಕ್ಕಳ ಸುರಕ್ಷತೆ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಆದೇಶದಂತೆ ಪ್ರತಿ ಶಾಲೆಯಲ್ಲಿಯೂ...

ಚಿಕ್ಕಬಳ್ಳಾಪುರ | ವೀರಪ್ಪ ಮೊಯ್ಲಿ ವಿರಚಿತ ‘ವಿಶ್ವಸಂಸ್ಕೃತಿಯ ಮಹಾಯಾನ’ ಪುಸ್ತಕ ಬಿಡುಗಡೆ

ವೀರಪ್ಪ ಮೊಯ್ಲಿ ಮರೆಯಲಾರದ ರಾಜಕಾರಣಿಯೂ ಹೌದು ಮತ್ತು ಲೇಖಕರೂ ಹೌದು ಎಂದು...

ಬೆಂಗಳೂರು | ಕುಡಿಯುವ ನೀರಿಗಾಗಿ ಬಂಗಾರಪ್ಪನಗರ ನಿವಾಸಿಗಳ ಪರದಾಟ

ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ನೀರಿಗೆ ಹಾಹಾಕಾರ ಶುರುವಾಗಿದೆ. ಇದೀಗ, ರಾಜರಾಜೇಶ್ವರಿ...

ಚಿತ್ರದುರ್ಗ | ಹಾಳಾಗಿದೆ ಆರೋಗ್ಯ ಉಪಕೇಂದ್ರ; ಗ್ರಾಮಸ್ಥರಿಗೆ ಆರೋಗ್ಯ ಸೇವೆಯೂ ದೂರ

ಚಿಕ್ಕಂದವಾಡಿಯಲ್ಲಿ ಒಂದು ಪ್ರಾಥಮಿಕ ಆರೋಗ್ಯ ಉಪ ಕೇಂದ್ರವಿದೆ. ಆದರೆ, ಅದು ನಿಜಕ್ಕೂ...