ಶಿವಮೊಗ್ಗ | ಅಬ್ಬಿಫಾಲ್ಸ್‌ನಲ್ಲಿ ನೀರು ಪಾಲಾದ ಯುವಕ

Date:

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗಡಿ ಭಾಗದ ಯಡೂರು ಅಬ್ಬಿಫಾಲ್ಸ್‌ನಲ್ಲಿ ಪ್ರವಾಸಿಗರೊಬ್ಬರು ನೀರುಪಾಲಾಗಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಬೆಂಗಳೂರಿನಿಂದ ಪ್ರವಾಸಕ್ಜೆ ಬಂದ 12 ಮಂದಿ ಯುವಕರು ಅಬ್ಬಿಫಾಲ್ಸ್‌ಗೆ ಬಂದಿದ್ದಾರೆ. ಅಬ್ಬಿಫಾಲ್ಸ್‌ನಲ್ಲಿ ಅಧಿಕ ಮಳೆಯಿದ್ದ ಕಾರಣ ಯಾರೂ‌ ಹೋಗದಂತೆ ಕಂದಕಗಳನ್ನು ಹೊಡೆಯಲಾಗಿದೆ. ಇದನ್ನೂ ಲೆಕ್ಕಿಸದೆ ಯುವಕರು ನೀರಿಗೆ ಇಳಿದಿದ್ದಾರೆ.

ಮಳೆಯಿರುವುದರಿಂದ ನೀರಿಗೆ ಇಳಿದ ಯುವಕರಲ್ಲಿ ಬಳ್ಳಾರಿ ಮೂಲದ ವಿನೋದ್(26) ನೀರು ಪಾಲಾಗಿದ್ದಾನೆ. ಅಧಿಕ ಮಳೆಯಿಂದಾಗಿ ಪಾಚಿ ಕಟ್ಟಿದಂತಾಗಿದ್ದು, ಅದರ ಮೇಲೆ ಕಾಲಿಟ್ಟು ಕಾಲು ಜಾರಿ ನೀರಿಗೆ ಬಿದ್ದಿರುವುದಾಗಿ ತಿಳಿದುಬಂದಿದೆ. ಇವರು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ನಗರ ಪೊಲೀಸರು ಭೇಟಿ ನೀಡಿದ್ದು ಶೋಧ ಕಾರ್ಯ ನಡೆಸಿದ್ದಾರೆ. ಈ ಸ್ಥಳದಲ್ಲಿ ಎಚ್ಚರಿಕೆ ನಾಮಫಲಕ ಇದ್ದರೂ ಕೂಡ ಯುವಕರು ಅದನ್ನು ದಾಟಿ ನೀರಿಗೆ ಇಳಿದು ನೀರು ಪಾಲಾಗಿದ್ದಾನೆ” ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಇಸ್ರೋ ಮಹತ್ವದ ಸಾಧನೆ; ವಿಆರ್‌ಎಲ್‌ ಪುಷ್ಪಕ್ ಮೂರನೇ ಬಾರಿಗೆ ಯಶಸ್ವಿ ಲ್ಯಾಂಡಿಂಗ್

ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಲೆನಾಡಿನಲ್ಲಿ ಮಳೆಗಾಲವಿ ಇವುದರಿಂದ‌ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ಮೀನು ರಫ್ತು ಕಂಪನಿಯಲ್ಲಿ ಭಾರೀ ಬೆಂಕಿ ಅವಘಡ; 10 ಕೋಟಿ ರೂ. ಮೌಲ್ಯದ ಸೊತ್ತು ನಷ್ಟ

rದಲ್ಲಿ ಕಾರ್ಯಾಚರಿಸುತ್ತಿದ್ದ ಮೀನು ರಫ್ತು ಘಟಕದ ಕಂಪನಿಯಲ್ಲಿ ಭಾನುವಾರ ಮಧ್ಯಾಹ್ನ ಭಾರೀ...

ಚಿಂತಾಮಣಿ | ಎರಡು ವರ್ಷಗಳ ಪ್ರೀತಿಗೆ ಪೋಷಕರ ವಿರೋಧ; ಕೃಷಿ ಹೊಂಡಕ್ಕೆ ಹಾರಿ ಪ್ರೇಮಿಗಳು ಆತ್ಮಹತ್ಯೆ

ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯು...

ಈ ದಿನ.ಕಾಮ್ ವರದಿ ಫಲಶೃತಿ | ಕೊನೆಗೂ ಶತಾಯುಷಿ ಅಜ್ಜಿಯ ಖಾತೆಗೆ ಜಮೆಯಾಯ್ತು ವೃದ್ದಾಪ್ಯ ವೇತನ

ಭಾಲ್ಕಿ ತಾಲೂಕಿನ ಕಪಲಾಪುರ ಗ್ರಾಮದ ಲಕ್ಷ್ಮೀಬಾಯಿ ಮಹಾಪುರೆ ಎಂಬ 110 ವರ್ಷದ...