ಸಿದ್ದಾಪುರ | ‘ಕೃಷಿ ಎಂದರೆ ವಿಜ್ಞಾನ’: ಪ್ರಗತಿಪರ ರೈತ ಮಡಗಾಂವಕರ ತೋಟಕ್ಕೆ ಶಾಲಾ ಮಕ್ಕಳ ಭೇಟಿ

Date:

ಸಿದ್ದಾಪುರ: ಇಂದಿನ ಆಧುನಿಕ ಯುಗದಲ್ಲಿ ಕೃಷಿ ಎಂದರೆ ಕೇವಲ ಮಣ್ಣಿನ ಕೆಲಸವಲ್ಲ, ಅದೊಂದು ವೈಜ್ಞಾನಿಕ ಕಲೆ ಎಂಬುದನ್ನು ತಾಲೂಕಿನ ಬಿಳಗಿ ಗ್ರಾಮದ ಪ್ರಗತಿಪರ ರೈತ ರವಿಲೋಚನ ಮಡಗಾಂವಕರ ಅವರು ನಿರೂಪಿಸಿದ್ದಾರೆ.

- Advertisement -

‘ಕೃಷಿಯ ಡಾಕ್ಟರ್’ ಎಂದೇ ಜನಪ್ರಿಯರಾಗಿರುವ ಇವರ ಕೃಷಿ ಸಾಧನೆಯನ್ನು ಕಣ್ಣಾರೆ ವೀಕ್ಷಿಸಲು ಶಾಲಾ ವಿದ್ಯಾರ್ಥಿಗಳು ಭೇಟಿ ನೀಡಿದ್ದರು. ಸೋವಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಾದ್ರಿಮನೆ ಕಿರಿಯ ಪ್ರಾಥಮಿಕ ಶಾಲೆಯ 23 ವಿದ್ಯಾರ್ಥಿಗಳು ಮಡಗಾಂವಕರ ಅವರ ತೋಟಕ್ಕೆ ಭೇಟಿ ನೀಡಿ, ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಪ್ರಾಯೋಗಿಕ ಮಾಹಿತಿ ಪಡೆದುಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಮಡಗಾಂವಕರ ಅವರ 5 ಎಕರೆ ಕೃಷಿ ಭೂಮಿಯಲ್ಲಿ ಅಳವಡಿಸಿಕೊಂಡಿರುವ ಸಮಗ್ರ ಕೃಷಿ ಪದ್ಧತಿಯು ಮಕ್ಕಳಲ್ಲಿ ಕುತೂಹಲ ಮೂಡಿಸಿತು. ಪ್ರಮುಖ ಬೆಳೆಯಾದ ಅಡಿಕೆಯೊಂದಿಗೆ ವಿಜಯ, ಕರಿಮುಂಡ, ಪೆಣಿಯೂರು ತಳಿಯ ಕಾಳುಮೆಣಸುಗಳನ್ನು ಬೆಳೆಸಿರುವುದನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.

ಇದರೊಂದಿಗೆ ಮಾವು, ಗೇರು, ಹಲಸು, ಏಲಕ್ಕಿ, ನಿಂಬೆ ಹಾಗೂ ವಿಶೇಷ ಬೆಳೆಗಳಾದ ಅಗರ್ ವುಡ್, ಮಹಾಗನಿ ಮತ್ತು ಅವಕೆಡೊ ಬೆಳೆಗಳ ಬಗ್ಗೆಯೂ ರೈತರಿಂದ ಮಾಹಿತಿ ಸಂಗ್ರಹಿಸಿದರು. ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಇಳುವರಿ ಪಡೆಯುವ ಸೂತ್ರಗಳನ್ನು ಮಡಗಾಂವಕರ ಅವರು ಮಕ್ಕಳಿಗೆ ಸರಳವಾಗಿ ವಿವರಿಸಿದರು.

ಮಣ್ಣಿನ ಸಾರ ರಕ್ಷಿಸಲು ಬಳಸುವ ಪ್ಲಾಸ್ಟಿಕ್ ಮಲ್ಚಿಂಗ್ ವಿಧಾನ, ಅಡಿಕೆ ತೋಟದ ಜೌಗು ತಡೆಯಲು ಅಳವಡಿಸಲಾದ ವೈಜ್ಞಾನಿಕ ಒಳಚರಂಡಿ ವ್ಯವಸ್ಥೆ ಹಾಗೂ ಜಲ ಮರುಪೂರಣ ಕ್ರಮಗಳು ಮಕ್ಕಳ ಗಮನ ಸೆಳೆದವು.

ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಸತೀಶ್ ಸೈಲ್‌ಗೆ ಮತ್ತೆ ವೈದ್ಯಕೀಯ ಜಾಮೀನು ಮಂಜೂರು: ಲಿವರ್ ಕಸಿ ಶಸ್ತ್ರಚಿಕಿತ್ಸೆಗೆ ಹೈಕೋರ್ಟ್ ಅನುಮತಿ

ಸಾವಯವ ಕೃಷಿಯ ಮಹತ್ವವನ್ನು ಅರಿತ ಮಕ್ಕಳು, ಬಯೋಡೈಜಸ್ಟರ್ ಮೂಲಕ ಗೊಬ್ಬರ ಉತ್ಪಾದನೆ, ಹನಿ ನೀರಾವರಿ ಪದ್ಧತಿಯಿಂದ ದ್ರವ ಗೊಬ್ಬರ ಬಳಕೆ ಹಾಗೂ ಜೀವಾಮೃತ ತಯಾರಿಕೆಯ ಬಗ್ಗೆ ಆಸಕ್ತಿಯಿಂದ ತಿಳಿದುಕೊಂಡರು. ಕೃಷಿಯಲ್ಲಿ ಯಾಂತ್ರೀಕರಣದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟ ರೈತರು,

ಬೀಜ ಬಿತ್ತುವ ಯಂತ್ರ, ಪವರ್ ಟಿಲ್ಲರ್, ಸೋಲಾರ್ ಡ್ರೆಯರ್ ಹಾಗೂ ಮೋಟೋಕಾರ್ಡ್‌ನಂತಹ ಆಧುನಿಕ ಉಪಕರಣಗಳ ಕಾರ್ಯವೈಖರಿಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.

ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ರವಿಲೋಚನ ಮಡಗಾಂವಕರ ಅವರನ್ನು ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗೌರವಿಸಿ ಸನ್ಮಾನಿಸಿದರು.

ಈ ಕೃಷಿ ಅಧ್ಯಯನ ಪ್ರವಾಸದಲ್ಲಿ ಶಿಕ್ಷಕರಾದ ದರ್ಶನ ಹರಿಕಾಂತ, ಮೈತ್ರಿ ಹೆಗಡೆ, ಅತಿಥಿ ಶಿಕ್ಷಕಿ ಭಾರತಿ ಸುಭಾಶ್ಚಂದ್ರ ನಾಯ್ಕ ಹಾಗೂ ಪಾಲಕರಾದ ಜನಾರ್ಧನ ತಿಮ್ಮ ಗೌಡ, ಜಯಶೀಲ ನಾರಾಯಣ ಗೌಡ, ಕೃಷ್ಣ ಬೀರ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘SIR’ ಪರಿಶೋಧ-ಪ್ರತಿರೋಧ: ಸೆ.29ರಂದು ಮೈಸೂರಿನಲ್ಲಿ ಪ್ರಕಾಶ್ ರಾಜ್ ಸಂವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆ...

ಉಡುಪಿ | ಹೆತ್ತ ತಾಯಿಯನ್ನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಮಗ

ಹೆತ್ತ ತಾಯಿಯನ್ನೇ ಮಗ ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿರುವ ಅಮಾನವೀಯ ಘಟನೆ...

ಬಳ್ಳಾರಿ | ಲಾರಿ ಪಲ್ಟಿ; ಸ್ಟೀನಿಂಗ್ ಯಂತ್ರ ಬಿದ್ದು ಯುವಕ ದುರ್ಮರಣ

ಜಿಲ್ಲೆ ಸಂಡೂರು ತಾಲ್ಲೂಕಿನ ಉಬ್ಬಳಗಂಡಿ ಗ್ರಾಮದ ಬಳಿ ಮೈನ್‌ಸ್‌ನ ಸ್ಟೀನಿಂಗ್ ಯಂತ್ರವನ್ನು...

ಯಾದಗಿರಿ | ತತ್ವಪದಕಾರ ಅವಧೂತ ಶ್ರೀ ರಂಗಲಿಂಗೇಶ್ವರ ಕುರಿತು ವಿಶೇಷ ಉಪನ್ಯಾಸ

ತತ್ವಪದಕಾರ ಹಾಗೂ ಅವಧೂತ ಶ್ರೀ ರಂಗಲಿಂಗೇಶ್ವರರ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ತಾಲೂಕು...