ತುಮಕೂರು| ಪುರುಷ ರಾಜಕಾರಣಕ್ಕೆ ಹೆಣ್ಣು ದಾಳ : ಕೆ.ಎಸ್. ಸಿದ್ಧಲಿಂಗಪ್ಪ

Date:

ಹೆಣ್ಣಿಗೆ ಸ್ವತಂತ್ರವಾಗಿ ಆಲೋಚಿಸುವ ಶಕ್ತಿಯಿದ್ದರೂ ಪುರುಷ ರಾಜಕಾರಣಕ್ಕೆ ದಾಳವಾಗಿದ್ದಾಳೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಅಭಿಪ್ರಾಯಪಟ್ಟರು.

- Advertisement -


ತುಮಕೂರಿನ ಝೆನ್ ಟೀಮ್, ಜಿಲ್ಲಾ ಕನ್ನಡ ಪರಿಷತ್ ಸಹಯೋಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕನ್ನಡ ಭವನದಲ್ಲಿ ಆಯೋಜಿಸಿದ್ದ ಪಂಚವರ್ಣೆ' ಎಂಬ ಏಕ ವ್ಯಕ್ತಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಆಕೆಯದ್ದು ದೃಢವಾದ ಹೆಜ್ಜೆಗಳಾದರೂ ಒಲೆಗಳು ಬದಲಾಗಿವೆಯೇ ಹೊರೆತು ಬಿಸಿ, ಶಾಖ, ಝಳ ಇತ್ಯಾದಿಗಳಲ್ಲಿ ಅಂತಹ ವ್ಯತ್ಯಾಸವಾಗಿಲ್ಲ. ಈಗಲೂ ಆಕೆ ಅತಂತ್ರಳೆ ಎಂದು ತಿಳಿಸಿದರು. ಡಾ. ಮೀರಾ ಹೆಚ್.ಎನ್. ಅವರುಪಂಚವರ್ಣೆ’ ನಾಟಕದ ಮೂಲಕ ಮಹಾಭಾರತವನ್ನು ಮಹಿಳಾ ಭಾರತದ ಕಣ್ಣಿನಲ್ಲಿ ತೋರಿಸಿರುವುದು ಅತ್ಯಂತ ವಿಶಿಷ್ಟವಾದದ್ದು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ದ್ರೌಪದಿಯನ್ನು ರೂಪಕವಾಗಿಸಿ ಅವಳ ಅಂತರಂಗ, ವನವಾಸದ ಪಡಿಪಾಟಲು, ಅವಳ ಬದುಕು ಅವಳದಾಗದ, ಆಯ್ಕೆಗಳೇ ಇಲ್ಲದ ರಾಜಕುಮಾರಿಯ ಮನೋಕಲಾಪವನ್ನು ಮೀರಾ ಅವರು ಪಂಚವರ್ಣೆ' ಏಕ ವ್ಯಕ್ತಿ ನಾಟಕದ ಮೂಲಕ ರಂಗದ ಮೇಲೆ ಅನಾವರಣಗೊಳಿಸಿದರು ತುಮಕೂರಿನಲ್ಲಿ ಹಲವಾರು ಏಕ ವ್ಯಕ್ತಿ ನಾಟಕ ಪ್ರದರ್ಶನಗಳು ಪ್ರದರ್ಶನಗೊಂಡಿದೆ ಎಂದ ಅವರು ಕೆಲ ತಿಂಗಳ ಹಿಂದೆ ಉಮಾಶ್ರೀ ಅಭಿನಯದಶರ್ಮಿಷ್ಟೆ’ ಎಂಬ ಏಕ ವ್ಯಕ್ತಿ ಪ್ರದರ್ಶನವನ್ನು ಮೆಲಕು ಹಾಕಿದರು. ಒಂದರಿAದ ಒಂದೂವರೆ ಗಂಟೆಗಳ ಕಾಲ ರಂಗಮಂದಿರದಲ್ಲಿ ಅಭಿನಯಿಸುವುದು ಸುಲಭದ ವಿಚಾರವಲ್ಲ. ಅಂತಹ ಸವಾಲನ್ನು ಮೀರಾ ಅವರು ಸ್ವೀಕರಿಸಿ ಗೆದ್ದಿದ್ದಾರೆ ಎಂದರು.


ಡಾ. ಮೀರಾ ಅವರು ಮೂಲತಃ ತುಮಕೂರಿನವರು. ಯಯಾತಿ',ಮಡಿವಾಳ ಮಾಚಿದೇವ’, ಹೆಣದ ಬಟ್ಟೆ',ನಾ ಕೊಂದ ಹುಡುಗಿ’ ಸೇರಿದಂತೆ ಹಲವಾರು ರಂಗ ಪ್ರಯೋಗಗಳಲ್ಲಿ ಅಭಿನಯಿಸಿರುವ ಇವರು 13 ವರ್ಷಗಳ ಕೂಚುಪುಡಿ ನೃತ್ಯಾಭ್ಯಾಸ ಮಾಡಿದ್ದಾರೆ ಎಂದ ಅವರು ಹಲವಾರು ಧಾರವಾಹಿಗಳಲ್ಲೂ ಅಭಿನಯಿಸಿದ್ದಾರೆ ಎಂದರು.


ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯರಾದ ಪ್ರಭಾವತಿ ಅವರು ಮೀರಾ ಅವರು ಹಾವಾಭಾವ, ಅಭಿನಯ ಎಲ್ಲದರಲ್ಲೂ ವಿಶೇಷತೆ ಮೆರೆದಿದ್ದಾರೆ. ರಂಗ ಸ್ಥಳದಲ್ಲೇ ಒಬ್ಬರೇ ನಿಂತು ಒಂದು ಗಂಟೆಗಳ ಕಾಲ ದ್ರೌಪದಿಯ ಕಥೆಯನ್ನು ಅನಾವರಣೊಳಿಸಿದ್ದಾರೆ ಎಂದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ ಮಾತನಾಡಿ ತುಮಕೂರಿನಲ್ಲಿ ಸಾಕಷ್ಟು ರಂಗ ಪ್ರಯೋಗಗಳು ನಡೆಯುತ್ತಿವೆ. ಏಕ ವ್ಯಕ್ತಿ ಪ್ರದರ್ಶನಗಳು ಕೂಡ ಹೊಸತಲ್ಲ. ಆದರೆ ಹೊಸ ರೀತಿಯಲ್ಲಿ ರಂಗದ ಮೇಲೆ ತರುತ್ತಿರುವುದು ವಿಶೇಷವಾದದ್ದು ಎಂದರು.


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ರವಿಕುಮಾರ್ ನೀಹಾ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಹಾಗೂ ಝೆನ್ ಟೀಮ್ ನ ಉಗಮ ಶ್ರೀನಿವಾಸ್ ವೇದಿಕೆಯಲ್ಲಿದ್ದರು. ಬಳಿಕ ಡಾ. ಹೆಚ್.ಎನ್. ಮೀರಾ ಅಭಿನಯದ `ಪಂಚವರ್ಣೆ’ ನಾಟಕ ಪ್ರದರ್ಶನಗೊಂಡಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧುಗಿರಿ | ‘ಸಿಂಹಾದ್ರಿ’ ಕೊಲೆ ಖಂಡಿಸಿ ಪ್ರತಿಭಟನೆ :ಎಲ್ಲರ ವಿರುದ್ಧ ಎಫ್‌ಐಆರ್ ದಾಖಲಿಸಲು ಒತ್ತಾಯ

ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಯಲ್ಲಿ...

ಮಧುಗಿರಿ | ಗಣೇಶ ವಿಸರ್ಜನೆ ವೇಳೆ ಗಲಾಟೆ: ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ; ಆರೋಪಿ ಬಂಧನ

ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಕಸಾಪುರ ಗ್ರಾಮದಲ್ಲಿ ಭಾನುವಾರ ಗಣೇಶ ಮೂರ್ತಿ...

ಗುಬ್ಬಿ | ಬರಗಾಲ ಕಾಮಗಾರಿ ಆರಂಭಕ್ಕೆ ಒತ್ತಾಯ: ಸೆ.28ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತಸಂಘ ಪ್ರತಿಭಟನೆ

ಬರಪೀಡಿತ ಪ್ರದೇಶಗಳನ್ನು ಘೋಷಿಸಿದ್ದರೂ ಸರ್ಕಾರ ಈವರೆಗೆ ಯಾವುದೇ ಬರಗಾಲ ಪರಿಹಾರ ಕಾಮಗಾರಿಗಳನ್ನು...

ತುಮಕೂರು | ಪಾರಂಪರಿಕ ಮೌಲ್ಯಗಳು ಜೀವನದ ಆದರ್ಶಗಳು : ಡಿ. ಕೃಷ್ಣ

 ಐತಿಹಾಸಿಕ ಸ್ಮಾರಕಗಳು ಹಾಗೂ ಪಾರಂಪರಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವ ಜವಾಬ್ದಾರಿ...