ತುಮಕೂರು | ಮಳೆ ಬಂದರೆ ಕೆಸರುಗದ್ದೆ… ಬಿಸಿಲಾದರೆ ಧೂಳಿನ ನರಕ : ಆಗಲಕೋಟೆ ಗ್ರಾಮಸ್ಥರ ಗೋಳು ಕೇಳುವವರು ಯಾರು?

Date:

 ಮಳೆ ಬಂದರೆ ಕೆಸರುಗದ್ದೆಯಂತಾಗುವ ರಸ್ತೆ… ಬಿಸಿಲು ಬಿದ್ದರೆ ಇಡೀ ರಸ್ತೆ ಧೂಳಿನಿಂದ ಆವೃತ. ಗುಂಡಿ-ಹೊಂಡಗಳಿಂದ ಕೂಡಿರುವ ರಸ್ತೆಯಲ್ಲಿ ಸಂಚರಿಸುವುದೇ ಗ್ರಾಮಸ್ಥರಿಗೆ ಪ್ರತಿನಿತ್ಯದ ಸವಾಲು. ಇದು ಯಾವುದೋ ದೂರದ ಹಳ್ಳಿಯ ಕಥೆಯಲ್ಲ; ತುಮಕೂರು ನಗರದ ಸಮೀಪದಲ್ಲಿರುವ ಆಗಲಕೋಟೆ ಗ್ರಾಮದ ಜನರ ಸಂಕಷ್ಟ.

- Advertisement -

ಹೆಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಗಲಕೋಟೆ ಗ್ರಾಮದಲ್ಲಿ ಸುಮಾರು 250 ಕುಟುಂಬಗಳು ವಾಸಿಸುತ್ತಿವೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ಎರಡು ಕಿಲೋಮೀಟರ್ ಉದ್ದದ ರಸ್ತೆ ಕಳೆದ ಎರಡು ದಶಕಗಳಿಂದಲೂ ದುಸ್ಥಿತಿಯಲ್ಲಿದೆ ಎನ್ನುವುದು ಗ್ರಾಮಸ್ಥರ ಆರೋಪ. ಮಳೆಗಾಲ ಆರಂಭವಾದರೆ ರಸ್ತೆಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ಕೆಸರು ಮತ್ತು ನೀರು ತುಂಬಿಕೊಂಡು ವಾಹನ ಹಾಗೂ ಪಾದಚಾರಿಗಳ ಸಂಚಾರವೇ ಕಷ್ಟವಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹವ್ಯಾಸದಿಂದ ಉದ್ಯಮದತ್ತ: ಶಿರಸಿ ಮಹಿಳೆಯರ ʻಡೇರೆʼ ಕೃಷಿಗೆ ಸ್ವಾವಲಂಬನೆಯ...

ಮನೆಯಂಗಳದ ಅಂದ ಹೆಚ್ಚಿಸುವ ಹೂವಷ್ಟೇ ಆಗಿದ್ದ ಡೇರೆ ಹೂವು (ಡೇಲಿಯಾ), ಇದೀಗ ಮಲೆನಾಡಿನ ಮಹಿಳೆಯರ ಪಾಲಿಗೆ ಹೊಸ ಆದಾಯದ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಶಿವಮೊಗ್ಗ...

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ರಸ್ತೆಯ ದುಸ್ಥಿತಿಯಿಂದಾಗಿ ತುರ್ತು ಸಂದರ್ಭಗಳಲ್ಲಿ ವಯೋವೃದ್ಧರು ಹಾಗೂ ಅಸ್ವಸ್ಥರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಗ್ರಾಮಸ್ಥರಿಗೆ ದೊಡ್ಡ ಸಮಸ್ಯೆಯಾಗಿದೆ. ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವ ಆತಂಕದಲ್ಲೇ ಸಂಚರಿಸಬೇಕಾಗಿದೆ. ಮಳೆಗಾಲದಲ್ಲಿ ಆಟೋ ಸೇರಿದಂತೆ ಇತರೆ ವಾಹನಗಳು ಗ್ರಾಮಕ್ಕೆ ಬರಲು ಹಿಂದೇಟು ಹಾಕುವ ಪರಿಸ್ಥಿತಿಯೂ ಇದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

1003837864

ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರಿಗೂ ಇದೇ ಸಂಕಷ್ಟ. ಬೆಳಿಗ್ಗೆ ಶಾಲೆಗೆ ಹೋಗುವ ಮಕ್ಕಳು ಕೆಸರು ರಸ್ತೆಯಲ್ಲಿ ಬಟ್ಟೆ ಹಾಗೂ ಚಪ್ಪಲಿಗಳನ್ನು ಕೆಸರು ಮಾಡಿಕೊಂಡು ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಇಲ್ಲದ ದಿನಗಳಲ್ಲಿ ರಸ್ತೆಯ ತುಂಬಾ ಧೂಳು ಆವರಿಸಿಕೊಂಡು, ವಾಹನಗಳು ಸಂಚರಿಸಿದಾಗ ಧೂಳಿನ ಮೋಡವೇ ಏಳುತ್ತದೆ.

ಆಗಲಕೋಟೆ ಗ್ರಾಮದಿಂದ ಎನ್‌ಎಚ್‌-206 ರಸ್ತೆಯನ್ನು ಸಂಪರ್ಕಿಸುವ ಈ ಮಾರ್ಗ ಗ್ರಾಮಸ್ಥರಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಪ್ರತಿದಿನ ಉದ್ಯೋಗ, ಶಿಕ್ಷಣ, ವ್ಯಾಪಾರ, ಚಿಕಿತ್ಸೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಗ್ರಾಮಸ್ಥರು ತುಮಕೂರು ನಗರವನ್ನು ಅವಲಂಬಿಸಿದ್ದಾರೆ.

ಇಷ್ಟೊಂದು ಜನಸಂಚಾರವಿರುವ ರಸ್ತೆಯೊಂದು ವರ್ಷಗಳಿಂದ ಹದಗೆಟ್ಟಿದ್ದರೂ ಶಾಶ್ವತ ಪರಿಹಾರ ಕಲ್ಪಿಸಲು ಜನಪ್ರತಿನಿಧಿಗಳು ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನ.

ವಿಶೇಷವೆಂದರೆ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಒಡೆತನದ ಮೆಡಿಕಲ್ ಕಾಲೇಜಿನ ಸಮೀಪದಲ್ಲೇ ಈ ರಸ್ತೆ ಹಾದುಹೋಗುತ್ತದೆ. ನಗರದ ಹೊರವಲಯದಲ್ಲೇ ಇಂತಹ ದುಸ್ಥಿತಿ ಇರುವುದು ಅಭಿವೃದ್ಧಿಯ ಕುರಿತ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ

ಪ್ರತಿ ವರ್ಷ ಮಳೆ ಬಂದಾಗ ರಸ್ತೆ ದುರಸ್ತಿಯ ಕೂಗು ಕೇಳಿಬರುತ್ತದೆ. ಆದರೆ ಮಳೆ ಕಡಿಮೆಯಾದ ಬಳಿಕ ಸಮಸ್ಯೆಯೂ ಮರೆತುಹೋಗುತ್ತದೆ. ಹೀಗಾಗಿ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಬದಲು, ರಸ್ತೆಗೆ ಶಾಶ್ವತ ಕಾಯಕಲ್ಪ ಕಲ್ಪಿಸಿ ಡಾಂಬರೀಕರಣ ಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

IMG 20260817 WA0091

ಸುಮಾರು 250 ಕುಟುಂಬಗಳು ವಾಸಿಸುವ ಗ್ರಾಮಕ್ಕೆ ಉತ್ತಮ ರಸ್ತೆ ಕಲ್ಪಿಸುವುದು ದೊಡ್ಡ ಯೋಜನೆಯೇನಲ್ಲ. ಆದರೆ ಎರಡು ದಶಕಗಳಿಂದ ಈ ಸಮಸ್ಯೆ ಮುಂದುವರಿದಿರುವುದು ಮಾತ್ರ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಗಲಕೋಟೆ ಗ್ರಾಮದ ರಸ್ತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮಳೆ-ಬಿಸಿಲಿನ ಸಂಕಷ್ಟದಿಂದ ಗ್ರಾಮಸ್ಥರಿಗೆ ಮುಕ್ತಿ ನೀಡಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ರೈತರ ಸಂಕಷ್ಟಕ್ಕೆ ಸ್ಪಂದಿಸಿ : ವೈಜ್ಞಾನಿಕ ಬರ ಪರಿಹಾರಕ್ಕೆ ಆಗ್ರಹ

ಭೀಕರ ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಕೇಂದ್ರ ಮತ್ತು ರಾಜ್ಯ...

ತುಮಕೂರು | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಪಡೆಯಬೇಕು ಹಾಗೂ ಇದುವರೆಗೆ...

ಮಧುಗಿರಿ | ಸಿಂಹಾದ್ರಿ ಹತ್ಯೆ: ಪೊಲೀಸ್ ನಿರ್ಲಕ್ಷ್ಯ ಆರೋಪ; ಕಸಾಪುರದಲ್ಲಿ ಶಾಂತಿಸಭೆಗೆ ಒತ್ತಾಯ

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದ ಮಾದಿಗ ಸಮುದಾಯದ ಯುವಕ...

ತುಮಕೂರು | ಎಸ್‌ಐಆರ್‌ ಹೆಸರಿನಲ್ಲಿ ಮತದಾರರ ಹಕ್ಕು ಕಸಿಯುವ ಆರೋಪ: ಸೆ.28ಕ್ಕೆ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಬಡವರು, ದಲಿತರು,...