ಉಡುಪಿ | ಆಮೆಗತಿಯಲ್ಲಿ ಸಾಗುತ್ತಿದೆ ಸಂತೆಕಟ್ಟೆ ಹೆದ್ದಾರಿ ಅಂಡರ್ ಪಾಸ್ ಕಾಮಗಾರಿ

Date:

ಕೇಂದ್ರ ಸರ್ಕಾರದ ಅಧಿಕಾರಿಗಳ ಅವೈಜ್ಞಾನಿಕ ವರ್ತನೆಯಿಂದ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿರುವ ಸರ್ವಿಸ್ ರಸ್ತೆ, ಕಳೆದ ವರ್ಷ ಜುಲೈನಲ್ಲಿ ಕುಸಿದಿತ್ತು. ಮುಂದಿನ ದಿನಗಳಲ್ಲಿ ಈ ಪರಿಸರದ ರಾಷ್ಟ್ರೀಯ ಹೆದ್ದಾರಿಯೇ ಕಡಿತಗೊಂಡರೆ ಇದಕ್ಕೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇರ ಹೊಣೆಯಾಗುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂತೆಕಟ್ಟೆ ಭಾಗದಲ್ಲಿ ಸ್ಥಳೀಯರನ್ನು ಯಾವುದೇ ರೀತಿಯಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಇಲ್ಲಿನ ಧಾರಣಾ ಸಾಮರ್ಥ್ಯವನ್ನು ಪರಿಶೀಲಿಸದೆ ಅವೈಜ್ಞಾನಿಕವಾಗಿ ಬೇಕಾಬಿಟ್ಟಿ ಆಳವಾದ ಹೊಂಡವನ್ನು ತೆಗೆದ ಪರಿಣಾಮ ಇಲ್ಲಿನ ಸರ್ವಿಸ್ ರಸ್ತೆ ಕುಸಿತ ಕಂಡಿತ್ತು. ಇದೀಗ ಏಳು ತಿಂಗಳು ಕಳೆದರೂ‌ ಕೂಡ ಅಂಡಪಾಸ್ ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿದೆ. ಹೈವೇ ಕಾಮಗಾರಿಯಿಂದಾಗಿ ಹೈವೇಯಲ್ಲಿ ನಿತ್ಯ ನಿರಂತರ ಟ್ರಾಫಿಕ್‌ ಸಮಸ್ಯೆ ಜನರನ್ನು ಹೈರಾಣು ಮಾಡಿದೆ. ಹೆದ್ದಾರಿ ಸಮಸ್ಯೆ ಬಗೆಹರಿಸುವ ಕಡೆಗೆ ಸಂಸದರು, ಜಿಲ್ಲಾಡಳಿತ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಜನ ಹಿಡಿಶಾಪ ಹಾಕುತ್ತಿದ್ದಾರೆ.

ಸಂತೆ ಕಟ್ಟೆಯಲ್ಲಿ ಹೆದ್ದಾರಿ ಅಂಡರ್ ಪಾಸ್ ಕಾಮಗಾರಿ ಆರಂಭವಾಗಿ ಎರಡು ವರ್ಷ ಕಳೆದಿವೆ. ಎರಡು ವರ್ಷಗಳಿಂದ ವಾಹನಗಳು ಹೈವೇ ಬದಲಿಗೆ ಸರ್ವಿಸ್ ರಸ್ತೆಯಲ್ಲೇ ಸಾಗಬೇಕಾಗುತ್ತಿದೆ. ಸರ್ವೀಸ್ ರಸ್ತೆ ನಿತ್ಯ ವಾಹನ ದಟ್ಟಣೆ ಅಪಘಾತ ದಾರಿ ಮಾಡಿಕೊಡುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಷ್ಟ್ರೀಯ ಹೆದ್ದಾರಿ 169ರ ಕತೆ ಒಂದೆಡೆಯಾದರೆ, ನಗರದ ಇಂದ್ರಾಳಿಯಲ್ಲಿ ರೈಲ್ವೆ ಸೇತುವೆ ಕಾಮಗಾರಿ ಹಲವು ವರ್ಷಗಳಿಂದ ಬಾಕಿ ಇದೆ. ಸಂಸದೆ ಶೋಭಾ ಕರಂದ್ಲಾಜೆ ಈಗ ಕೇಂದ್ರ ಸಚಿವೆಯೂ ಹೌದು. ಪದೆ ಪದೇ ಹೇಳಿಕೆ ನೀಡುತ್ತಾ ಕಾಲಕಳೆಯುವ ಸಚಿವರು, ಇತ್ತ ಕಡೆ ಗಮನ ಹರಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸಚಿವರು ಪೆಂಡಿಂಗ್ ಇರುವ ಕಾಮಗಾರಿಗಳಿಗೆ ವೇಗ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದು ಈಗಾಗಲೇ ಅವೈಜ್ಞಾನಿಕವಾಗಿ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು ಪ್ರತಿನಿತ್ಯ‌ ಸಾವಿರಾರು ಜನರಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದ್ದೆ. ಉಡುಪಿ‌ ಜಿಲ್ಲೆಯ ಹಲವು ಭಾಗಗಳಲ್ಲಿಯೂ ಕೂಡ ಇದೇ ಸಮಸ್ಯೆ ಎದುರಾಗಿದೆ ಆದಷ್ಟು ಬೇಗ ಕಾಮಗಾರಿ ಕೆಲಸ ಮುಗಿಸಿ‌ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಂಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳುವಂತೆ ತಿಳಿಸಿದರು.

ಈ ಬಗ್ಗೆ ಈಗಾಗಲೇ ಮಾಧ್ಯಮದ ಜೊತೆ ಮಾತನಾಡಿರುವ, ಉಡುಪಿ‌ ಜಿಲ್ಲಾಧಿಕಾರಿ ವಿದ್ಯಾಕುಮಾರಿಯವವರು ರಾ.ಹೆದ್ದಾರಿ 66ರ ಸಂತೆಕಟ್ಟೆ ಅಂಡರ್‌ಪಾಸ್‌ ರಸ್ತೆ ಕಾಮಗಾರಿ ಗುಣಮಟ್ಟದೊಂದಿಗೆ ನಡೆಯುತ್ತಿಲ್ಲ ಹಾಗೂ ಕಾಮಗಾರಿಗಳು ತೀರಾ ಮಂದಗತಿಯಲ್ಲಿ ಸಾಗುತ್ತಿವೆ ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಭಿಯಂತರರು ಈ ಬಗ್ಗೆ ಎಚ್ಚರ ವಹಿಸಿ ಕಾಮಗಾರಿಗಳನ್ನು ನಿರ್ವಹಿಸಬೇಕು. ಆದಷ್ಟು ತ್ವರಿತಗತಿಯಲ್ಲಿ ಇಲ್ಲಿನ ಕೆಲಸಕಾರ್ಯಗಳನ್ನು ಮುಗಿಸಬೇಕು ಎಂದು ಸೂಚನೆಗಳನ್ನು ಈಗಾಗಲೇ ನೀಡಲಾಗಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರವಾಸಿ ತಾಣವಾದ ಉಡುಪಿ‌ ಜಿಲ್ಲೆಗೆ ಪ್ರತಿದಿನ ಸಾವಿರಾರು ಜನ ಆಗಮಿಸುತ್ತಾರೆ ಅವರಿಗೆ ತೊಂದರೆ ಆಗದಂತೆ ಮತ್ತು ಪ್ರತಿನಿತ್ಯ ತಮ್ಮ ಜೀವನವನ್ನು ಅರಸಿ ಓಡಾಡುವ ಉಡುಪಿ‌ಯ ಸಾರ್ವಜನಿಕರಿಗೂ ಅನುಕೂಲ ಆಗುವಂತೆ, ಆಮೆಗತಿಯಲ್ಲಿ ಆಗುತ್ತಿರುವ ಎಲ್ಲಾ ಕಾಮಗಾರಿಯನ್ನು ಶೀಘ್ರವಾಗಿ ಅಂತಿಮ ಹಂತಕ್ಕೆ ತರಬೇಕಾಗಿದೆ.

ಶಾರೂಕ್ ತೀರ್ಥಹಳ್ಳಿ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಗಣೇಶ ವಿಸರ್ಜನೆ ವೇಳೆ ಗಲಾಟೆ: ಓರ್ವ ಸಾವು

ಹಳೆ ದ್ವೇಷದ ಹಿನ್ನೆಲೆ ಇಟ್ಟುಕೊಂಡು ಗಣೇಶ ವಿಸರ್ಜನೆ ವೇಳೆ ಗಲಾಟೆ ನಡೆದಿದ್ದು,...

ಗದಗ | ಮೌಢ್ಯತೆ ಆಚರಿಸುವ ದೇಶಗಳ ಅಭಿವೃದ್ಧಿ ಸಾಧ್ಯವಿಲ್ಲ: ಡಾ. ಜಯದೇವಿ ಗಾಯಕವಾಡ

ಯಾವ ದೇಶದಲ್ಲಿ ಮೌಢ್ಯ ಸಂಪ್ರದಾಯಗಳ ಆಚರಣೆ ಇರುತ್ತವೆಯೋ, ಅಂತಹ ದೇಶಗಳ ಅಭಿವೃದ್ಧಿ...

ಗದಗ | ₹5 ಕೋಟಿ ವೆಚ್ಚದಲ್ಲಿ 13 ಸ್ಮಾರಕಗಳ ರಕ್ಷಣೆ; ಕಾಮಗಾರಿಗೆ ಶಿಲಾನ್ಯಾಸ

13 ಅಸುರಕ್ಷಿತ ಸ್ಮಾರಕಗಳ ಸಂರಕ್ಷಣೆ ಮಾಡಲು ₹5 ಕೋಟಿ ವೆಚ್ಚದಲ್ಲಿ ಕಾಮಗಾರಿಗಳ...

ಕೊಪ್ಪಳ | ಗಣೇಶ ಚತುರ್ಥಿಯ ಮರುದಿನ ಮುಸ್ಲಿಮರ ಈ ಮನೆಯಲ್ಲಿ ಇಲಿ ಪೂಜೆ!

ಡೊಳ್ಳು ಹೊಟ್ಟೆ ಗಣಪನಿಗೆ ಮೂಷಿಕ(ಇಲಿ)ವು ವಾಹನ ಎಂಬುದು ಹಿಂದೂಗಳ ನಂಬಿಕೆ. ಗಣೇಶ...