ಉಡುಪಿ | ‘ನುಡಿ ಸಂಭ್ರಮ’ದಲ್ಲಿ ಮೂವರು ಸಾಧಕಿಯರಿಗೆ ‘ನುಡಿಭೂಷಣ’ ಪ್ರಶಸ್ತಿ ಪ್ರದಾನ

Date:

ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ‘ನುಡಿತೋರಣ’ ಬಳಗದ ನಾಲ್ಕನೇ ವಾರ್ಷಿಕೋತ್ಸವ ‘ನುಡಿ ಸಂಭ್ರಮ-2026’ ಇದೇ ಮೇ 23 ಮತ್ತು 24 ರಂದು ಉಡುಪಿಯಲ್ಲಿ ಜರುಗಲಿದೆ. ಈ ಸಂಭ್ರಮದ ವೇದಿಕೆಯಲ್ಲಿ ಸಾಹಿತ್ಯ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಗಣನೀಯ ಸಾಧನೆ ಮಾಡಿದ ಮೂವರು ಮಹಿಳಾ ಸಾಧಕಿಯರಿಗೆ ಪ್ರತಿಷ್ಠಿತ ‘ನುಡಿಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

- Advertisement -

​ಪ್ರಶಸ್ತಿ ಪುರಸ್ಕೃತರು:

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಡಲಿಗೆ ಲಕ್ಷಾಂತರ ಬಂಡವಾಳ, ಗಡಿಯಲ್ಲಿ ದಂಡ: ಕೇಳುವವರಿಲ್ಲ ಕರಾವಳಿ...

ಸಮುದ್ರದ ಅಲೆಗಳ ನಡುವೆ ಜೀವದ ಹಂಗು ತೊರೆದು, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಮೀನುಗಾರಿಕೆಗೆ ತೆರಳುವ ಮೀನುಗಾರರ ಬದುಕು ಈಗ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಡೆ ಸಮುದ್ರದ ಅಪಾಯ, ಮತ್ತೊಂದು ಕಡೆ...

ರಾಜಕೀಯದ ಅಂಧಾನುಸರಣೆ ಮತ್ತು ಮನೋವಿಜ್ಞಾನ — ಮೋದಿ ಆಡಳಿತ...

ರಾಜಕೀಯ ನಾಯಕನ ನಿರ್ಧಾರವನ್ನು ಪ್ರಶ್ನಿಸಿದರೆ ತನ್ನದೇ ಗುಂಪಿನವರು ವಿರೋಧಿಸಬಹುದು, ಅಪಹಾಸ್ಯ ಮಾಡಬಹುದು ಅಥವಾ ತನ್ನ ರಾಜಕೀಯ ನಿಷ್ಠೆ, ದೇಶಪ್ರೇಮ ಹಾಗೂ ಧರ್ಮನಿಷ್ಠೆಯ ಬಗ್ಗೆ ಅನುಮಾನ ವ್ಯಕ್ತಪಡಿಸಬಹುದು ಎಂಬ ಭಯದಿಂದ ಕೆಲವರು ಮೌನವಾಗಿರಬಹುದು. ಇನ್ನೂ...

ವೀರಪ್ಪ ಮೊಯ್ಲಿ ಹೇಳಿಕೆ- ಕಾಂಗ್ರೆಸ್‌ನ ರಾಜಕೀಯ ನಿರ್ಧಾರಗಳ ನೆರಳಲ್ಲಿ...

ಮೊಯ್ಲಿ ಅವರ ಹೇಳಿಕೆಯ ಮತ್ತೊಂದು ಪ್ರಮುಖ ಭಾಗ ಪಕ್ಷದ ಆಂತರಿಕ ಸುಧಾರಣೆಗೆ ಸಂಬಂಧಿಸಿದೆ. ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಪಕ್ಷವನ್ನು ಭವಿಷ್ಯದ ರಾಜಕೀಯ ಸವಾಲುಗಳಿಗೆ ಸಿದ್ಧಗೊಳಿಸಲು ಮಹತ್ವದ ಬದಲಾವಣೆಗಳನ್ನು ತರಲು ಬಯಸಿದ್ದರು;...

​ಶ್ರೀಮತಿ ಶೈಲಾ ಜಯಕುಮಾರ್ (ಚಿತ್ರದುರ್ಗ): ಚಿತ್ರದುರ್ಗದ ಅಪರ್ಣಾ ಎಂದೇ ಖ್ಯಾತಿ ಪಡೆದಿರುವ ಇವರು, ನಿವೃತ್ತ ಆಂಗ್ಲ ಭಾಷಾ ಉಪನ್ಯಾಸಕಿ ಹಾಗೂ ಹೆಸರಾಂತ ವಾಗ್ಮಿ. ಕಥೆ, ಕವನ, ವ್ಯಕ್ತಿಚಿತ್ರಣ ಸೇರಿದಂತೆ 14ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರು ಸಾಂಸ್ಕೃತಿಕ ಲೋಕದ ಸಕ್ರಿಯ ಚೇತನ.

​ಶ್ರೀಮತಿ ರಾಧಾ ಟೇಕಲ್ (ಬೆಂಗಳೂರು): ಹಿರಿಯ ಸಾಹಿತಿ ಸಿದ್ಧವನಹಳ್ಳಿ ಕೃಷ್ಣಶರ್ಮರ ಪುತ್ರಿಯಾದ ಇವರು, ತೆಲುಗು ಮತ್ತು ಉರ್ದು ಭಾಷೆಯ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಅಪ್ರತಿಮ ಅನುವಾದಕಿ. ಸುಮಾರು 20ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ನೀಡಿದ ಇವರ ಸಾಹಿತ್ಯಿಕ ಬದ್ಧತೆ ಅಪಾರ.

​ಶ್ರೀಮತಿ ಶೋಭಾ ಹರಿಪ್ರಸಾದ್ (ಉಡುಪಿ): ಛಂದೋಬದ್ಧ ಕಾವ್ಯ ರಚನೆಯಲ್ಲಿ ಸಿದ್ಧಹಸ್ತರಿರುವ ಇವರು ‘ಶೋಭಾ ರಾಮಾಯಣ’ ಎಂಬ ಬೃಹತ್ ಗ್ರಂಥದ ಮೂಲಕ ಪ್ರಸಿದ್ಧರು. ಹತ್ತಾರು ಸಾಹಿತ್ಯ ಪ್ರಕಾರಗಳಲ್ಲಿ ಪರಿಣಿತಿ ಪಡೆದಿರುವ ಇವರು ಉದಯೋನ್ಮುಖ ಕವಿಗಳಿಗೆ ಮಾರ್ಗದರ್ಶಕರೂ ಹೌದು.

​ಮೇ 23 ಮತ್ತು 24 ರಂದು ನಡೆಯಲಿರುವ ಎರಡು ದಿನಗಳ ಈ ಸಾಹಿತ್ಯಿಕ ಹಬ್ಬದಲ್ಲಿ ನಾಡಿನ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ನುಡಿತೋರಣ ಬಳಗವು ಪ್ರಕಟಣೆಯಲ್ಲಿ ತಿಳಿಸಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುರತ್ಕಲ್ | 81 ದಿನಗಳ ಧರಣಿ ಅಂತ್ಯ: ಮಹಿಳಾ ಹೊರ‌ಗುತ್ತಿಗೆ ಕಾರ್ಮಿಕರು ಮರಳಿ ಕೆಲಸಕ್ಕೆ

ಸುರತ್ಕಲ್‌ನ HPCL ಕಂಪನಿಯಲ್ಲಿ ಉದ್ಯೋಗ‌ ಕಳೆದುಕೊಂಡ ಮಹಿಳಾ ಹೊರಗುತ್ತಿಗೆ ಕಾರ್ಮಿಕರ 81...

ವಿಜಯಪುರ |ಬೆಳಕಿನ ಹಬ್ಬದ ಸಂಭ್ರಮದೊಂದಿಗೆ ಸಂವಿಧಾನದ ಮೌಲ್ಯಗಳ ಜಾಗೃತಿ

ಬೆಳಕಿನ ಹಬ್ಬದ ಸಂಭ್ರಮದ ನಡುವೆಯೇ ಸಂವಿಧಾನದ ಆಶಯ, ಸಮಾನತೆ, ಸ್ವಾತಂತ್ರ್ಯ ಹಾಗೂ...

ವಿಜಯಪುರ |ಜಾತಿ–ಧರ್ಮದ ಭೇದ ಮರೆತು ಸೌಹಾರ್ದದ ದೀಪ ಬೆಳಗಿಸಿದ ಸರ್ವಧರ್ಮೀಯರು

ಜಾತಿ, ಧರ್ಮಗಳ ಎಲ್ಲ ಭೇದಭಾವಗಳನ್ನು ಮರೆತು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ...

ಯುವಜನತೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲಿ: ಸಂತೋಷ್ ಹೆಗ್ಡೆ

ಭ್ರಷ್ಟಾಚಾರದಿಂದ ದೂರವಿದ್ದು, ಯುವಜನತೆ ಮಾನವೀಯತೆ ಹಾಗೂ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು...