ಉತ್ತರ ಕನ್ನಡ | ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ; 101 ಕೋಟಿ ರಫ್ತು ವಹಿವಾಟು

Date:

ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುವ ನಿರೀಕ್ಷಿತ ಸಂಖ್ಯೆಯ ಉದ್ದಿಮೆಗಳಿಲ್ಲ ಎನ್ನುವ ದೂರಿಗೆ ಅಪವಾದವೆಂಬಂತೆ, ಜಿಲ್ಲೆಯಿಂದ ವಿದೇಶಗಳಿಗೆ ಸ್ಥಳೀಯ ಉತ್ಪನ್ನಗಳನ್ನು ರಫ್ತು ಮಾಡುವ ಮೊತ್ತದ ಪ್ರಮಾಣ ಅಧಿಕವಾಗುತ್ತಿದ್ದು, 2023-24 ರಲ್ಲಿ ರೂ.156.34 ಕೋಟಿ ಮೊತ್ತದ ಉತ್ಪನ್ನಗಳನ್ನು ರಪ್ತು ಮಾಡಿದ್ದು, 2024-25 ರಲ್ಲಿ ಇದರ ಪ್ರಮಾಣ ರೂ.101.57 ಕೋಟಿಯಾಗಿದೆ.

- Advertisement -

ಜಿಲ್ಲೆಯ ರಫ್ತುದಾರರು ನೀಡಿದ ಮಾಹಿತಿಯಂತೆ, 2023-24ರಲ್ಲಿ ಲೇಖನ ಸಾಮಗ್ರಿ ಉತ್ಪನ್ನಗಳಲ್ಲಿ 2297 ಮೆ.ಟನ್, ಕಾಫಿ ಅರೆಬಿಕ್ ಚೆರ್ರಿ ಮತ್ತು ರೊಬೋಸ್ಟ್ ಚೆರ್ರಿ 59,600 ಕೆಜಿ, ಸಾವಯವ ಮೆಣಸಿನಕಾಯಿ ಚಕ್ಕೆಗಳು, ಅರಿಶಿಣ, ಕಪ್ಪು ಮತ್ತು ಬಿಳಿ ಮೆಣಸು 28,044 ಕೆಜಿ, ವೆನಿಲ್ಲಾ ಬೀನ್ಸ್ ಮತ್ತು ವೆನಿಲ್ಲಾ ಬೀನ್ಸ್ ಪೌಡರ್ 1677.3 ಕೆ.ಜಿ ಹಾಗೂ ಹರ್ಬಲ್ ಟೀ, ಮಾತ್ರೆಗಳನ್ನು ಪ್ರಮುಖವಾಗಿ ರಪ್ತು ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

2024-25 ರಲ್ಲಿ 7340 ಮೆ.ಟನ್ ಸಕ್ಕರೆ, 2449 ಮೆ.ಟನ್ ಲೇಖನ ಸಾಮಾಗ್ರಿ, 3,11,000 ಕೆ.ಜಿ. ಕಾಫಿ ಅರೆಬಿಕ್ ಚೆರ್ರಿ ಮತ್ತು ರೊಬೋಸ್ಟ್ ಚೆರ್ರಿ, 1,10,845 ಕೆಜಿ ಸಾವಯವ ಮೆಣಸಿನಕಾಯಿ ಚಕ್ಕೆಗಳು, ಅರಿಶಿಣ, ಕಪ್ಪು ಮತ್ತು ಬಿಳಿ ಮೆಣಸು, 5358 ಕೆಜಿ ವೆನಿಲ್ಲಾ ಬೀನ್ಸ್ ಮತ್ತು ವೆನಿಲ್ಲಾ ಬೀನ್ಸ್ ಪೌಡರ್ ಮತ್ತು ಹರ್ಬಲ್ ಟೀ ಯನ್ನು ರಪ್ತು ಮಾಡಲಾಗಿದೆ.

ಈ ಪ್ರಮುಖ ಉತ್ಪನ್ನಗಳನ್ನು ಹೊರತುಪಡಿಸಿ, ಇತರೆ ಹಲವು ಉತ್ಪನ್ನಗಳನ್ನು ಕೂಡಾ ಜಿಲ್ಲೆಯಿಂದ ರಫ್ತು ಮಾಡುತ್ತಿದ್ದು, ವಿದೇಶಿ ವ್ಯಾಪಾರ ನಿರ್ದೇಶನಾಲಯದ ಮಾಹಿತಿಯಂತೆ ಜಿಲ್ಲೆಯಲ್ಲಿ 230 ಮಂದಿ ರಫ್ತುದಾರರು ನೋಂದಣಿ ಮಾಡಿಕೊಂಡಿದ್ದು, ಈ ರಫ್ತುದಾರರ ವಿವಿಧ ಕುಂದು ಕೊರತೆಗಳ ಬಗ್ಗೆ ಜಿಲ್ಲಾ ಕೈಗಾರಿಕಾ ಇಲಾಖೆಯ ಮೂಲಕ ಸಮಾಲೋಚನೆ ನಡೆಸಲಾಗುತ್ತಿದೆ. ರಫ್ತು ಪ್ರಮಾಣದ ಹೆಚ್ಚಳಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಜಂಟಿ ನಿರ್ದೇಶಕರು ತಿಳಿಸಿದರು.

ಇದನ್ನೂ ಓದಿ: ಉತ್ತರ ಕನ್ನಡ | ಅಂತರ ಜಿಲ್ಲಾ ಬೈಕ್‌ ಕಳ್ಳರ ಬಂಧನ; 6 ಬೈಕ್ ವಶ

ಉತ್ತರ ಕನ್ನಡ ಜಿಲ್ಲೆಯಲ್ಲಿನ ರಫ್ತುದಾರರ ಮೂಲಕ ಇಲ್ಲಿನ ಉತ್ಪನ್ನಗಳನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವ ಕುರಿತಂತೆ ಕೈಗಾರಿಕೆ ಇಲಾಖೆಯ ಮೂಲಕ ಅಗತ್ಯವಿರುವ ಎಲ್ಲಾ ಪ್ರೋತ್ಸಾಹ ನೀಡಲಾಗುವುದು. ಇಲ್ಲಿನ ಉತ್ಪನ್ನಗಳಿಗೆ ಸೂಕ್ತ ರೀತಿಯಲ್ಲಿ ಉತ್ತಮ ಮಾರುಕಟ್ಟೆ ಒದಗಿಸುವ ಮೂಲಕ ಜಿಲ್ಲೆಯಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಯೋಜನೆ ರೂಪಿಸಲಾಗುವುದು ಎಂದು ಉ.ಕ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ನಾಯಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ ; ಮಳೆಯಲ್ಲೂ ಮುಂದುವರಿದ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಎಸ್‌ಐಆರ್‌ ಪ್ರಕ್ರಿಯೆ ರದ್ದುಗೊಳಿಸುವಂತೆ ಹಾಗೂ ಮುಖ್ಯ ಚುನಾವಣಾ...

ಉಡುಪಿ | 110 ಕೋಟಿ ರೂ. ವೆಚ್ಚದ ಆಸ್ಪತ್ರೆಗೆ ಹಳೆಯ ಪರಿಕರಗಳ ಅಳವಡಿಕೆ ಸಲ್ಲದು: ಫ್ರ್ಯಾಂಕಿ ಡಿಸೋಜ

ಸುಮಾರು 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಉಡುಪಿ ಜಿಲ್ಲಾ...

ಹಾಸನ | ಮನೆಯಲ್ಲಿಯೇ ವ್ಯಕ್ತಿ ಹತ್ಯೆ; ಪ್ರಕರಣ ದಾಖಲು 

ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಮಾರಕಾಸ್ತ್ರದಿಂದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ...