ಉತ್ತರ ಕನ್ನಡ – ಸರ್ಕಾರಿ ತಂಡದ ಕಾರ್ಯಕ್ಕೆ ಮರಳು ಮಾಫಿಯಾ ಅಡ್ಡಿ: ಹೊನ್ನಾವರ ಠಾಣೆಯಲ್ಲಿ FIR ದಾಖಲು

Date:

ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಧಿಕೃತ ಮರಳು ಸಾಗಾಣಿಕೆ ತಡೆಗಟ್ಟಲು ತೆರಳಿದ್ದ ಭೂ ವಿಜ್ಞಾನ ಇಲಾಖೆ ತಂಡದ ಸರ್ಕಾರಿ ಕಾರ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಹೊನ್ನಾವರ ಠಾಣೆಯಲ್ಲಿ FIR ದಾಖಲಾಗಿದೆ. ಹಿರಿಯ ಭೂ ವಿಜ್ಞಾನಿ ಶ್ರೀಮತಿ ಆಶಾ ಎಂ.ಎಸ್ ಅವರು ನವೆಂಬರ್ 12ರ ರಾತ್ರಿ ಕಾರವಾರದಿಂದ ಕುಮಟಾ–ಹೊನ್ನಾವರ ಮಾರ್ಗದಲ್ಲಿ ಗಸ್ತು ನಡೆಸುವಾಗ. ಅವರು ತಮ್ಮ ಸಹೋದ್ಯೋಗಿಗಳಾದ ಹರೀಶ ಕೆ.ಎಸ್, ಮಂಜುನಾಥ ಶನಿಯಾರ ದೇವಾಡಿಗ, ಸಿಬ್ಬಂದಿ ಸಂತೋಷ ನಾಯ್ಕ ಹಾಗೂ ಚಾಲಕ ಸಂಜಯ ನಾಯ್ಕ ರೊಂದಿಗೆ ಅಧಿಕೃತ ವಾಹನ (ಕೆಎ-04/ಜಿ-1608)ದಲ್ಲಿ ಕಾರ್ಯಾಚರಣೆಗೆ ಹೊರಟಿದ್ದರು.

- Advertisement -

ಆ ಸಂದರ್ಭದಲ್ಲಿ ಅನಧಿಕೃತ ಮರಳು ಸಾಗಾಣಿಕೆಯ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಂಡವು ಚಂದಾವರದ ಕಡೆಗೆ ತೆರಳುತ್ತಿದ್ದ ವೇಳೆ, 2 ಗಂಟೆಯ ಸುಮಾರಿಗೆ ಕೆಎ–47/7700, ಕೆಎ–47/ಎ–4785, ಕೆಎ–47/ಎ–5750 ಮತ್ತು ಕೆಎ–31/ಎ–4923 ಸಂಖ್ಯೆಯ ಮರಳು ಸಾಗಾಣಿಕೆ ವಾಹನಗಳು ಕಂಡುಬಂದಿದ್ದವು. ವಾಹನಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಬೇರೆ ವಾಹನಗಳಲ್ಲಿ ಬಂದ ಅಪರಿಚಿತರು ಆ ವಾಹನಗಳನ್ನು ತಪ್ಪಿಸಿಕೊಳ್ಳುವಂತೆ ಮಾಡಿದ್ದು ಅಲ್ಲದೆ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಂತಕ ಗೋಡ್ಸೆಯ ಹೇಳಿಕೆಯೇ ಇತಿಹಾಸವಲ್ಲ; ಸ್ವಾತಂತ್ರ್ಯ ಹೋರಾಟಗಾರರ ಚಾರಿತ್ರ್ಯಹರಣಕ್ಕೆ...

ಅಡ್ಡಂಡ ಕಾರ್ಯಪ್ಪನವರ ‘ಗಾಂಧಿ ಹತ್ಯೆಯ ಸತ್ಯ’ ಪುಸ್ತಕ ಮತ್ತು ನಾಟಕವನ್ನು ನಿಷೇಧಿಸಬೇಕೆಂಬ ಆಗ್ರಹಕ್ಕೆ ಬಲವಾದ ಐತಿಹಾಸಿಕ ಕಾರಣಗಳಿವೆ. ಮನಶಾಸ್ತ್ರದ ದೃಷ್ಟಿಯಿಂದಲೂ ಹಂತಕನ ಸಮರ್ಥನೆಗೆ ಎಚ್ಚರಿಕೆ ಅಗತ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆಗೆ ಸಂಬಂಧಿಸಿದಂತೆ ಅಡ್ಡಂಡ...

ಕಲ್ಯಾಣ ಯೋಜನೆಗಳಿಗೆ ‘ಆಧಾರ್’ ಬದಲು ‘ಎಪಿಕ್’: ಬಡಜನರ ಹೊಟ್ಟೆಯ...

ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಕರು ಎಚ್ಚರಿಸುವಂತೆ, ಕಳೆದ ಒಂದು ದಶಕದ ಡಿಜಿಟಲ್ ಪರಿಶೀಲನಾ ವ್ಯವಸ್ಥೆಯ ಇತಿಹಾಸವನ್ನು ನೋಡಿದರೆ, ಹೊಸ ತಂತ್ರಜ್ಞಾನಗಳು ಬಂದಾಗಲೆಲ್ಲ ಅತ್ಯಂತ ದುರ್ಬಲ ವರ್ಗದವರನ್ನು ವ್ಯವಸ್ಥೆಯಿಂದ ಹೊರಗಿಡುತ್ತಲೇ ಬರಲಾಗಿದೆ. ಆಧಾರ್ ಜೋಡಣೆ...

ಈ ದಿನ ಕವಿತೆ | ಚರಿತ್ರೆ- ಚೀನಾದ ಕವಿ...

18 ನೇ ಶತಮಾನದಲ್ಲಿದ್ದ ಚೀನಾದ ಮಹತ್ವದ ಕವಿಗಳಲ್ಲಿ ಒಬ್ಬರಾದ ಜ಼ಾವ್ ಯಿ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ ಅತಿಥಿಯೊಬ್ಬ ದಿಢೀರನೆ ಮನೆಯ ಬಾಗಿಲು ಬಡಿದ.ಬಂದವನೇ...

ಕೆಎ–47/ಎಂ–6763 (ಕ್ವಿಡ್), ಕೆಎ–05/ಎಂಎಲ್–7354 (ಎರ್ಟಿಗಾ) ಹಾಗೂ ಕೆಎ–19/ಎಂಎ–8825 (ಕಾರ್) ವಾಹನಗಳಲ್ಲಿ ಬಂದ ನಾಲ್ವರು ಸರ್ಕಾರಿ ವಾಹನಕ್ಕೆ ಅಡ್ಡಿಯಾಗಿ, ಚಂದಾವರದಿಂದ ಅಂಕೋಲಾದವರೆಗೆ ಬೆಳಗ್ಗೆ 8 ಗಂಟೆಯವರೆಗೂ ಅಧಿಕಾರಿಗಳನ್ನು ಹಿಂಬಾಲಿಸಿ, ಮಾಹಿತಿ ಹಂಚುವ ಮೂಲಕ ಮರಳು ಸಾಗಾಣಿಕೆ ವಾಹನಗಳನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜಿಲ್ಲೆಯಲ್ಲಿ ಆರು ಸಂಚಾರಿ ಆರೋಗ್ಯ ಘಟಕಗಳ ಸೇವೆ ಶೀಘ್ರದಲ್ಲೇ ಪ್ರಾರಂಭ

ಅನಧಿಕೃತ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ವಾಹನಗಳು ವಿನಾಯಕ ಮಾಣಿ ಹಾಗೂ ಇನ್ನಿತರರಿಗೆ ಸೇರಿರುವ ಸಾಧ್ಯತೆಯಿದೆ ಎಂಬ ಅನುಮಾನವನ್ನೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಶ್ರೀಮತಿ ಆಶಾ ಅವರು ದೂರಿನಲ್ಲಿ ದಾಖಲಿಸಿದ್ದಾರೆ. ಒಬ್ಬ ಮಹಿಳಾ ಸರ್ಕಾರಿ ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ನಡೆದಿರುವುದು, ಮರಳು ಮಾಫಿಯಾ ಜಿಲ್ಲೆಯಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸೂಚನೆಯಾಗಿದೆ. ಇವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ನಿಯಂತ್ರಣಕ್ಕೆ ತರದಿದ್ದರೆ, ಮುಂದಿನ ದಿನಗಳಲ್ಲಿ ಇವರು ಮತ್ತಷ್ಟು ಅಪಾಯಕಾರಿಗಳಾಗುವ ಸಾಧ್ಯತೆ ಇದೆ. ಘಟನೆಯ ಚಿತ್ರಗಳು ಹಾಗೂ ವೀಡಿಯೊಗಳಿರುವ ಸಿಡಿ–1 ಅನ್ನು ಅಧಿಕಾರಿಗಳು ಪೊಲೀಸರಿಗೆ ಹಸ್ತಾಂತರಿಸಿದ್ದು, ಪೊಲೀಸರು ದೂರು ದಾಖಲಿಸಿ ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ; ಕಾರವಾರದಲ್ಲಿ ದಸಂಸ ಬೃಹತ್ ಪ್ರತಿಭಟನೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ವಿವಿಧ ಸಮಸ್ಯೆಗಳನ್ನು ಪರಿಹರಿಸಿ,...

ವಿಜಯಪುರ | ಕೃಷ್ಣಾ ನದಿಯಿಂದ ಉಜ್ಜನಿ ಅಣೆಕಟ್ಟಿಗೆ 40 ಟಿಎಂಸಿ ನೀರು: ರೈತ ಸಂಘದ ತೀವ್ರ ವಿರೋಧ

ಕೃಷ್ಣಾ ನದಿಯಿಂದ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಹಾರಾಷ್ಟ್ರದ ಉಜ್ಜನಿ ಅಣೆಕಟ್ಟಿಗೆ...

ಮೀಟರ್ ಹಾಕಲ್ಲ, ನಿಗದಿತ ಬಾಡಿಗೆಗೆ ಬರಲ್ಲ: ಆಟೋ ಸುಲಿಗೆಯಿಂದ ಪ್ರಯಾಣಿಕರಿಗಿಲ್ಲ ಮುಕ್ತಿ!

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೋಗಳ ಸಂಚಾರ ಮತ್ತು ಆಟೋ ಪ್ರಯಾಣಿಕರ...

ಆಲಮಟ್ಟಿ– ಕುಷ್ಟಗಿ ರೈಲು ಮಾರ್ಗಕ್ಕೆ ಭೂಮಿ ಒದಗಿಸಲು ರೈಲ್ವೇ ಹೋರಾಟ ಸಮಿತಿಯ ಮನವಿ

ರಾಜ್ಯದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಹಾಗೂ ಅನುದಾನ...