ಆಪ್ತನ ಸಹೋದರ ನಿಧನ : ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ವಿಧಾನಸಭಾ ಸ್ಪೀಕರ್

Date:

ಮಂಗಳೂರು : ಅಕಾಲಿಕವಾಗಿ ಸಾವನ್ನಪ್ಪಿದ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರ ಸಹೋದರ ಶರತ್ ಕಾಜವ(55) ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಶವಕ್ಕೆ ಹೆಗಲುಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಮುಡಿಪು ಮಿತ್ತಕೋಡಿ ನಿವಾಸಿ ಶರತ್ ಕಾಜವ ಭಾನುವಾರ(ಜೂ.4) ನಸುಕಿನ ಜಾವ ಹೃದಯಾಘಾತಕ್ಕೊಳಗಾಗಿ ಅಕಾಲಿಕವಾಗಿ ಸಾವನ್ನಪ್ಪಿದ್ದರು. ವಿಚಾರ ತಿಳಿಯುತ್ತಿದ್ದಂತೆ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಅವರು ಪೂರ್ವನಿಗದಿ ಪಡಿಸಿದ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ತಕ್ಷಣವೇ ಮಿತ್ತಕೋಡಿಯ ಮರಣ ಹೊಂದಿದ ನಿವಾಸಕ್ಕೆ ದೌಡಾಯಿಸಿದ್ದರು. ಸಂಬಂಧಿಕರಲ್ಲಿ ಧೈರ್ಯ ತುಂಬಿದ ಅವರು ನಂತರ ನಡೆದ ಅಂತಿಮಯಾತ್ರೆಗೆ ಹೆಗಲಾದರು.

ಕಾಂಗ್ರೆಸ್ ನ ಹಿರಿಯ ಮುತ್ಸದ್ದಿ ಜನಾರ್ದನ ಪೂಜಾರಿಯವರು ಹಾಕಿಕೊಟ್ಟ ಸಂಪ್ರದಾಯವನ್ನು ಮುಂದುವರಿಸಿದ ಶಾಸಕರು ಎಂಬ ಕೀರ್ತಿಗೆ ಯು.ಟಿ ಖಾದರ್ ಭಾಜನರಾಗಿದ್ದಾರೆ.

ಶರತ್ ಕಾಜವ

ನರಿಂಗಾನ ಕಂಬಳದ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಸಹೋದರ, ಪ್ರಗತಿಪರ ಕೃಷಿಕ ವೆಂಕಪ್ಪ ಕಾಜವರ ಪುತ್ರ. ಕಂಬಳ ಸಮಿತಿಯ ಸದಸ್ಯರೂ ಆಗಿದ್ದ ಶರತ್ ಕಾಜವ, ಮಿತ್ತಕೋಡಿ ಕಂಬಳದ ಯಶಸ್ಸಿಗಾಗಿ ಹಲವು ವಾರಗಳ ಕಾಲ ದುಡಿದಿದ್ದರು.

ತಾಯಿಯ ಅನಾರೋಗ್ಯವಿದ್ದಾಗಲೂ ಕಂಬಳದ ಕರೆಯಲ್ಲಿ ಆಗಬೇಕಾದ ವ್ಯವಸ್ಥೆ ಬಗ್ಗೆ ತುಂಬ ಕಾಳಜಿ ವಹಿಸಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಅವರು ಪತ್ನಿ, ಪುತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಂದಾಯ ಕರ್ಮಕಾಂಡ -3 | ಲಂಚವಿಲ್ಲದೆ ಈ ಇಲಾಖೆಯಲ್ಲಿ ಒಂದು ಕಡತವೂ ಚಲಿಸುವುದಿಲ್ಲ!

'ಇತ್ತೀಚಿನ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಉನ್ನತ ಶ್ರೇಣಿಯಿಂದ ಕೆಳಹಂತದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ....

ದಕ್ಷಿಣ ಕನ್ನಡ | ಅಲೆಮಾರಿ ಶಿಳ್ಳೆಕ್ಯಾತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ಡಿವೈಎಫ್ಐ ಒತ್ತಾಯ

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬೋಳಾರ...

ಬೆಳಗಾವಿ | ಹಿಡಕಲ್ ಡ್ಯಾಂನಿಂದ ನೀರು ಹರಿಸುವಂತೆ ರೈತರ ಪ್ರತಿಭಟನೆ

ಹಿಡಕಲ್‌ ಜಲಾಶಯದಿಂದ ಘಟಪ್ರಭಾ ಎಡದಂಡೆ ನಾಲೆಯ ರೈತರಿಗೆ ನೀರುಹರಿಸುವಂತೆ ಕೋರಿ ಚಿಕ್ಕೋಡಿ-ಮಿರಜ್‌...

ಗದಗ | ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗಿಲ್ಲ ಬೋಧಕರು; ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸುಮಾರು 380...