ವಿಜಯಪುರ | ಪಾಳು ಬಿದ್ದ ಐತಿಹಾಸಿಕ ವಿದ್ಯಾ ಮಂದಿರ; ಸಿಗುವುದೇ ಕಾಯಕಲ್ಪ?

Date:

ಒಂದು ಕಾಲದಲ್ಲಿ ವಿದ್ಯಾರ್ಥಿಗಳ ಗದ್ದಲದಿಂದ ಮೊಳಗುತ್ತಿದ್ದ, ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ವಿಜಯಪುರದ ಸರಕಾರಿ ಗಂಡು ಮಕ್ಕಳ ಶಾಲಾ ಕಟ್ಟಡವೊಂದು ಇಂದು ದಿವ್ಯ ಸ್ಮಾರಕವಾಗಿ ಮಾತ್ರ ಉಳಿದಿದೆ. ಸಾವಿರಾರು ಮಕ್ಕಳಿಗೆ ಅಕ್ಷರ ಜ್ಞಾನ ನೀಡಿದ ಈ ಶಾಲೆ ಈಗ ಪಾಳುಬಿದ್ದು ಮರೆಯಾಗುವ ಅಂಚಿಗೆ ತಲುಪಿದೆ.

- Advertisement -

ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದಲ್ಲಿ, 1860ರ ಏಪ್ರಿಲ್ 1ರಂದು ಸ್ಥಾಪಿತಗೊಂಡ ದೇವರ ಹಿಪ್ಪರಗಿಯ ಸರಕಾರಿ ಗಂಡು ಮಕ್ಕಳ ಶಾಲೆ ಇಂದು ಪಾಳು ಬಿದ್ದು ನಶಿಸುತ್ತಿರುವ ಸ್ಥಿತಿಯಲ್ಲಿದೆ. ಸುಮಾರು 165 ವರ್ಷಗಳ ಇತಿಹಾಸ ಹೊಂದಿರುವ ಈ ಐತಿಹಾಸಿಕ ಕಟ್ಟಡ, ಕಲ್ಲು ಮತ್ತು ಗಾರೆಗಳಿಂದ ಬಲಿಷ್ಠವಾಗಿ ನಿರ್ಮಿಸಲ್ಪಟ್ಟಿದೆ. ಸಂಪೂರ್ಣ ಕಲ್ಲಿನ ಚಾವಣಿ ಹೊಂದಿರುವುದು ಈ ಕಟ್ಟಡವನ್ನು ಇನ್ನಷ್ಟು ವಿಶಿಷ್ಟವಾಗಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಈ ಪ್ರದೇಶವು ಸ್ವಾತಂತ್ರ್ಯ ಪೂರ್ವದಲ್ಲಿ ಕಲಾದಗಿ ಜಿಲ್ಲೆಯ ಭಾಗವಾಗಿದ್ದು, ದೇವರ ಹಿಪ್ಪರಗಿ ಎಂಬುದು ತಾಲೂಕು ಕೇಂದ್ರವಾಗಿತ್ತು. ಅದೇ ಸಂದರ್ಭದಲ್ಲಿ ಈ ಕಟ್ಟಡ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯಾಗಿ ಕಾರ್ಯ ನಿರ್ವಹಿಸಿತ್ತು ಎನ್ನಲಾಗುತ್ತದೆ. ನಂತರದಲ್ಲಿ ಸರಕಾರಿ ಪ್ರಾಥಮಿಕ ವಿದ್ಯಾ ಕೇಂದ್ರವಾಗಿ ಅನೇಕ ಬಡ ಮಕ್ಕಳಿಗೆ ಅಕ್ಷರ ಜ್ಞಾನ ನೀಡಿದೆ.

WhatsApp Image 2025 06 22 at 12.13.37 PM

ಸಂಜೆಯಾದರೆ ಸಾಕು ಕಿಡಿಗೇಡಿಗಳಿಗೆ, ಮದ್ಯ ವ್ಯಸನಿಗಳಿಗೆ, ಪಾನ್ ಬೀಡ ಜಗಿಯುವವರಿಗೆ ಹಾಗೂ ಅನೈತಿಕ ಕೆಲಸಗಳಿಗೆ ಪ್ರಶಸ್ತ ಸ್ತಳವಾಗಿ ಮಾರ್ಪಟ್ಟಿದೆ. ಕಟ್ಟಡದ ಸುತ್ತಲೂ ಶೌಚ ಹಾಗೂ ಮೂತ್ರ ವಿಸರ್ಜನೆಯ ದುರ್ವಾಸನೆ. ಒಂದು ಕಾಲದಲ್ಲಿ ಅಕ್ಷರ ದಾಸೋಹ ಮಾಡಿದ ಶಾಲೆಯ ಸ್ಥಿತಿ ಕಂಡು ಹಳೆಯ ವಿದ್ಯಾರ್ಥಿಗಳು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಐತಿಹಾಸಿಕ ಕಟ್ಟಡಕ್ಕೆ ಪುನರ್‌ ಜೀವ ಕೊಡುವ ಕೆಲಸ ಮಾಡಬೇಕು ಎಂದು ಪಿಕೆಪಿಎಸ್ ನಿರ್ದೇಶಕ ರಾಘವೇಂದ್ರ ಭಾವಿಮನಿ, ಸುನೀಲ ಪಾಟೀಲ, ಅನಿಲ ಕೋಟಿನ, ಸೋಮಶೇಖರ ಸೊನ್ನದ, ಶಿವಾನಂದ ರುದ್ರಗೌಡರ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಇಒ ಎಂ ಬಿ ಯಡ್ರಾಮಿ, “ಕಟ್ಟಡವು ಶಿಕ್ಷಣ ಇಲಾಖೆ ಅಡಿಯಲ್ಲಿದೆ. ನೂತನ ತಾಲೂಕು ಘೋಷಣೆಯಾದ ನಂತರದಲ್ಲಿ ನ್ಯಾಯಾಲಯಕ್ಕಾಗಿ ಬಳಸಲಾಗುತ್ತದೆ ಎಂದು ತಿಳಿದುಬಂದಿತ್ತು. ನಂತರದಲ್ಲಿ ಏಕೆ ಕೈ ಬಿಡಲಾಯಿತು ಎಂಬುದು ಗೊತ್ತಿಲ್ಲ. ಪ್ರತ್ಯಕ್ಷ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ್ ಮಸಬಿನಾಳ ಮಾತನಾಡಿ, “ಬಾಲ್ಯದ ಶಿಕ್ಷಣವನ್ನು ಇದೇ ಶಾಲೆಯಲ್ಲಿ ಪೂರೈಸಿದ್ದೇನೆ. ಅಂದು ಆಡಿ ಬೆಳೆದ ಶಾಲೆ ಎಂದು ಹಾಳು ಕೊಂಪೆಯಾಗಿರುವುದು ಕಂಡು ಮನಸ್ಸಿಗೆ ನೋವಾಗುತ್ತದೆ. ಕಟ್ಟಡದ ಸಂಪೂರ್ಣ ಸದುಪಯೋಗಕ್ಕೆ ನನ್ನ ಮಿತಿ ಒಳಗೆ ಹಾಗೂ ಸಂಬಂಧಿಸಿದ ಅಧಿಕಾರಿ ವರ್ಗದೊಡನೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವೆ” ಎಂದರು.

ಶಾಲೆಯ ಹಳೆ ವಿದ್ಯಾರ್ಥಿ ಪ್ರಕಾಶ್ ಗುಡಮನಿ ಮಾತನಾಡಿ, “ಈ ಶಾಲೆಯಲ್ಲಿ ಕಲಿತ ನಾವು ಪುಣ್ಯವಂತರು. ಆದರೆ ಈಗ ಶಾಲೆ ಪರಸ್ಥಿತಿ ನೋಡಿದರೆ ನೋವಾಗುತ್ತಿದೆ. ಈ ಬಿಲ್ಡಿಂಗ್ ಪೋಸ್ಟ್ ಆಫೀಸ್ ಗೆ ಕೊಟ್ಟರೆ ಒಳ್ಳೆಯದಾಗಬಹುದು. ಮತ್ತೆ ಶಾಲೆ ಪ್ರಾರಂಭ ಮಾಡಲು ಸಾಧ್ಯವಿಲ್ಲ. ಈಗಾಗ್ಲೇ ಈ ಶಾಲೆ ಸ್ಥಳಾಂತರ ಮಾಡಲಾಗಿದೆ. ಇದು ಬೇರೆ ಕಚೇರಿ ಮಾಡಲು ಸೂಕ್ತವಾದ ಸ್ಥಳವಾಗಿದೆ” ಎಂದರು.

“ಅಂಗನವಾಡಿ ಕೇಂದ್ರವಾಗಿ ಈಗ ಒಂದು ವರ್ಷ ಕಳೆಗಿದೆ. ಈ ಶಾಲೆಯ ಹತ್ತಿರವಿರುವ ಕೇಂದ್ರದ ಮಕ್ಕಳು ಸಂಡಾಸ್ ಮತ್ತು ಮೂತ್ರ ವಿಸರ್ಜನೆ ವಾಸನೆಯಿಂದ ಹಲವು ರೋಗಗಳಿಗೆ ತುತ್ತಾಗುತ್ತಿರುವುದು ಬಹಳ ಬೇಸರದ ಸಂಗತಿ. ಸಮಸ್ಯೆಯನ್ನ ವಾರ್ಡ್ ಸದಸ್ಯರಿಗೆ ಮತ್ತು ಅಂಗನವಾಡಿ ಮೇಲ್ವಿಚಾರಕರಿಗೆ ತಿಳಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ” ಎನ್ನುತ್ತಾರೆ ಅಂಗನವಾಡಿ ಸಹಾಯಕಿ

WhatsApp Image 2025 06 22 at 12.13.39 PM

ಶತಮಾನಕ್ಕಿಂತ ಹೆಚ್ಚು ಕಾಲ ಅಧ್ಯಯನದ ಪವಿತ್ರ ಆವರಣವಾಗಿ, ಅಕ್ಷರ ದಾಸೋಹದ ಸಾನ್ನಿಧ್ಯವಾಗಿ ಇದ್ದ ದೇವರ ಹಿಪ್ಪರಗಿಯ ಸರ್ಕಾರಿ ಗಂಡು ಮಕ್ಕಳ ಶಾಲೆಯ ಐತಿಹಾಸಿಕ ಕಟ್ಟಡ ಇಂದು ಮರೆಯಾಗುತ್ತಿರುವ ವಿಳಾಸವಾಗಿ ಮಾರ್ಪಡುತ್ತಿದೆ. ಸಂಸ್ಕೃತಿಯ ಸಮೃದ್ಧ ಪಾಠ ಹೇಳಿದ ಈ ಕಟ್ಟಡ ಇಂದು ಪಾಪದ ಪಾಠ ಕೇಳುತ್ತಿದೆ ಎಂಬುದು ದುರಂತದ ವಾಸ್ತವ. ಒಂದು ಕಾಲದಲ್ಲಿ ನ್ಯಾಯಾಲಯ, ಪೊಲೀಸ್ ಠಾಣೆ, ಶಾಲೆ.. ಎಲ್ಲವೂ ಆಗಿ ಕೆಲಸಮಾಡಿದೆ.

ಸರ್ಕಾರ, ಸ್ಥಳೀಯ ಸಂಸ್ಥೆಗಳು, ಹಳೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಐತಿಹಾಸಿಕ ಕಟ್ಟಡವನ್ನು ಸಂರಕ್ಷಿಸಿ, ಪುನರ್‌ಜೀವನ ನೀಡಿ, ಮುಂದಿನ ತಲೆಮಾರಿಗೆ ದಾರಿ ತೋರಿಸಬೇಕಾಗಿದೆ. ಒಂದು ಕಾಲದಲ್ಲಿ ಅಕ್ಷರದ ಬೆಳಕು ಹರಡಿದ ಈ ಸ್ಥಳ ಮತ್ತೆ ವಿದ್ಯೆಯ ದೀಪವಾಗಿ ಹೊಳೆಯಬೇಕಿದೆ. ಎಲ್ಲರೂ ಕೈಜೋಡಿಸಿದರೆ ಇತಿಹಾಸವನ್ನು ಉಳಿಸಬಹುದು ಎಂಬುದು ಗ್ರಾಮಸ್ಥರ, ಹಳೆಯ ವಿದ್ಯಾರ್ಥಿಗಳ ಆಶಯ.

WhatsApp Image 2025 02 05 at 18.09.20 1
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಎರಡು ಮನೆಗಳಿಗೆ ಕನ್ನ: ₹3.65 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

ನಗರದ ಹೀರಾಪುರ ಹೊಸ ಬಡಾವಣೆ ಹಾಗೂ ಚಿಂಚೋಳಿ ಲೇಔಟ್‌ನಲ್ಲಿ ಎರಡು ಪ್ರತ್ಯೇಕ...

ಯಾದಗಿರಿ | ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳ ಗೆಲುವು

ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ವಿಭಾಗದ ಬಾಲಕರ ಜಿಲ್ಲಾ ಮಟ್ಟದ...

ಉಡುಪಿ | ತೈಲದ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲು ಹಸಿರು ಹೈಡ್ರೋಜನ್ ಸಹಕಾರಿ

ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್ ಭಾರತಕ್ಕೆ ಅಪಾರ ಸಾಧ್ಯತೆಗಳನ್ನು ಹೊಂದಿದ್ದು, ತೈಲದ...

ಎಂಆರ್‌ಪಿಎಲ್ ಸ್ಫೋಟ: ಮೃತ ಮನೀಶ್ ಕುಟುಂಬಕ್ಕೆ ಸಾಂತ್ವನ, ಹಾನಿಗೊಳಗಾದ ಚರ್ಚ್‌ಗೆ ಪ್ರಶಾಂತ್ ಜತ್ತನ್ನ ಭೇಟಿ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ (ಸಿಎಚ್‌ಟಿಯು)ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಮುಲ್ಕಿ...