ಇಂಡಿ | ಸಾವಳಸಂಗದಲ್ಲಿ ಸಾವಯವ ಸುಗ್ಗಿ ಸಂಭ್ರಮ; ರೈತ ಮಹಿಳೆಯರ ಸಾಧನೆಗೆ ಶ್ಲಾಘನೆ

Date:

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ಸಾವಯವ ಕೃಷಿಯ ಮಹತ್ವವನ್ನು ಸಾರುವ ‘ಸಾವಯವ ಸುಗ್ಗಿ ಸಂಭ್ರಮ’ ಕಾರ್ಯಕ್ರಮವು ಅತ್ಯಂತ ಉತ್ಸಾಹದಿಂದ ನೆರವೇರಿತು. ಸಾವಯವ ಪ್ರಗತಿಪರ ರೈತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಇಂದು ಹೊಸಮನಿ ಅವರ ನೇತೃತ್ವದಲ್ಲಿ, ಗ್ರಾಮದ ರಾಜಶ್ರೀ ಹೊಸಮನಿ ಅವರ ತೋಟದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

- Advertisement -

ಕಾರ್ಯಕ್ರಮದಲ್ಲಿ ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಿಂದ ಆಗಮಿಸಿದ ರೈತ ಮಹಿಳೆಯರು ಭಾಗವಹಿಸಿ, ತಮ್ಮ ಸಾವಯವ ಕೃಷಿ ಅನುಭವಗಳು, ಸವಾಲುಗಳು ಮತ್ತು ಸಾಧನೆಗಳನ್ನು ಪರಸ್ಪರ ಹಂಚಿಕೊಂಡರು. ಸ್ಥಳೀಯ ರೈತ ಮಹಿಳೆಯರು ತಾವು ಬೆಳೆದ ಬೆಳೆಗಳಿಗೆ ಮೌಲ್ಯವರ್ಧನೆ (Value Addition) ಮಾಡಿ ನೇರವಾಗಿ ಬೆಂಗಳೂರು ಮಾರುಕಟ್ಟೆಗೆ ಮಾರಾಟ ಮಾಡುತ್ತಾ ಆರ್ಥಿಕವಾಗಿ ಸಬಲರಾಗುತ್ತಿರುವುದನ್ನು ಕಂಡು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಸಾವಯವ ಚಿಂತಕ ರಾಜಶೇಖರ್ ನಿಂಬರಗಿ ಅವರು ವಿಷಮುಕ್ತ ಕೃಷಿಯ ಅಗತ್ಯತೆ, ಮಣ್ಣಿನ ಆರೋಗ್ಯ ಮತ್ತು ಭವಿಷ್ಯದ ಕೃಷಿ ದಿಕ್ಕುಗಳ ಕುರಿತು ಮಾರ್ಗದರ್ಶನ ನೀಡಿದರು.

ಒಡಲದನಿ ಮಹಿಳಾ ಒಕ್ಕೂಟದ ನಿರ್ದೇಶಕಿ ಭುವನೇಶ್ವರಿ ಕಾಂಬಳೆ ಮಾತನಾಡಿ, ರೈತ ಮಹಿಳೆಯರಲ್ಲಿ ಇರುವ ನೈಜ ಕೃಷಿ ಜ್ಞಾನ ಮತ್ತು ಕೌಶಲ್ಯಗಳು ಅತ್ಯಂತ ಅದ್ಭುತವಾಗಿವೆ. ಮಣ್ಣಿನ ನಾಡಿಮಿಡಿತ ಅರಿತಿರುವ ಈ ಮಹಿಳೆಯರು ಸಾವಯವ ಕೃಷಿಯ ಮೂಲಕ ತರುತ್ತಿರುವ ಬದಲಾವಣೆಗಳು ರಾಜ್ಯಕ್ಕೆ ಮಾದರಿಯಾಗುತ್ತಿರುವುದು ಸಂತೋಷದಾಯಕ ಬೆಳವಣಿಗೆ ಎಂದರು.

ಸಂವಾದ ಸಂಸ್ಥೆಯ ರಮೇಶ್ ಚೀಮಾನಹಳ್ಳಿ ಮಾತನಾಡಿ, ಮಣ್ಣನ್ನು ನಂಬಿದ ಮಹಿಳೆಯರು ಇಂದು ಬೆಳೆಗಾರರಾಗಿ ಮಾತ್ರವಲ್ಲದೆ ಉದ್ದಿಮೆದಾರರಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಸಬಲೀಕರಣದ ಹಾದಿಯಲ್ಲಿ ಸಂವಾದ ಸಂಸ್ಥೆ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂವಾದ ಸಂಸ್ಥೆಯ ಅಂಬಿಕಾ ಅವರು ಕೂಡ ಉಪಸ್ಥಿತರಿದ್ದು, ರೈತ ಮಹಿಳೆಯರ ಪ್ರಯತ್ನಕ್ಕೆ ಸಾಕ್ಷಿಯಾದರು.

ಇದನ್ನೂ ಓದಿ: ವಿಜಯಪುರ | ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಅತಿಥಿ ಉಪನ್ಯಾಸಕರ ಪುನಶ್ಚೇತನ ಕಾರ್ಯಗಾರ

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಮೋರೆ, ಪಂಚಾಯತ್ ಸದಸ್ಯೆ ಅನುಸೂಯ ಸಾವಳಸಂಗ ಸೇರಿದಂತೆ ಹಲವರು ಉಪಸ್ಥಿತರಿದ್ದು, ರೈತ ಮಹಿಳೆಯರ ಈ ವಿಶಿಷ್ಟ ಪ್ರಯತ್ನಕ್ಕೆ ಬೆಂಬಲ ಸೂಚಿಸಿದರು.

ಸ್ಥಳೀಯ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೋಟಕ್ಕೆ ಭೇಟಿ ನೀಡಿ ಜೀವಾಮೃತ, ದಶಪರ್ಣಿ ಕಷಾಯ ಮತ್ತು ವಿವಿಧ ಸಾವಯವ ತರಕಾರಿ ಬೆಳೆಗಳನ್ನು ಕುತೂಹಲದಿಂದ ವೀಕ್ಷಿಸಿದರು. ರೈತ ಮಹಿಳೆಯರು ಹಾಡಿದ ಜಾನಪದ ಸುಗ್ಗಿ ಹಾಡುಗಳು ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಕಳೆ ತುಂಬಿದವು.

ಕಾರ್ಯಕ್ರಮದಲ್ಲಿ ರೈತ ಮಹಿಳೆ ಲಕ್ಷ್ಮಿ ದ್ರಾವಿಡ್, ಸಂಗೀತ ಮಯೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಮರ ಕಡಿದಿದ್ದಕ್ಕೆ ಪ್ರಾಯಶ್ಚಿತ್ತ; 75 ಸಸಿ ನೆಟ್ಟು ಪೋಷಣೆಗೆ ಮುಂದಾದ ನಿವಾಸಿಗಳು

ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಗಳಿಸುವ ಸಂಪತ್ತು, ಆಸ್ತಿ-ಪಾಸ್ತಿಗಿಂತ ಒಂದು ಸಸಿಯನ್ನು...

ವಿಜಯಪುರ | ಗಣೇಶೋತ್ಸವದಲ್ಲಿ ಡಿಜೆ ಬಳಕೆ ನಿಯಂತ್ರಿಸಿ, ಸೌಹಾರ್ದತೆ ಕಾಪಾಡಿ: ಜಿಲ್ಲಾಧಿಕಾರಿ ಮನವಿ

ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಹಾಗೂ ವಿದ್ಯುತ್ ಅವಘಡಗಳಿಂದ ಯಾವುದೇ ಅನಾಹುತ ಸಂಭವಿಸದಂತೆ...

ವಿಜಯಪುರ | 16ನೇ ಹಣಕಾಸು ಆಯೋಗದ ಅನುದಾನ ಸಮರ್ಥ ಬಳಕೆಗೆ ಆಗ್ರಹ

16ನೇ ಹಣಕಾಸು ಆಯೋಗದ ಅನುದಾನವನ್ನು ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನರ...

ವಿಜಯಪುರ | ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇಂದಿನಿಂದ ಅಗ್ನಿವೀರ ನೇಮಕಾತಿ ರ್ಯಾಲಿ

ಮಂಗಳೂರು ಸೇನಾ ನೇಮಕಾತಿ ಕಚೇರಿ ಹಾಗೂ ವಿಜಯಪುರ ಜಿಲ್ಲಾಡಳಿತದ ಸಹಯೋಗದಲ್ಲಿ ನಗರದ...