ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ಕ್ಯಾಂಪಸ್ ನಲ್ಲಿ ಎಸ್ಸಿ/ಎಸ್‌ಟಿ ವಿದ್ಯಾರ್ಥಿನಿಯರಿಗೆ ಹೆಚ್ಚುವರಿ ವಸತಿ ನಿಲಯವನ್ನು ವಿಶೇಷ ಅನುದಾನದಲ್ಲಿ ಮಂಜೂರು ಮಾಡಲು ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಸಿಎಂ ಸಿದ್ದರಮಯ್ಯನವರಿಗೆ ಮನವಿ ಸಲ್ಲಿಸಿದರು.
ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿನಿಯರು ಓದುವುದಕ್ಕೆ ಬರುತ್ತಾರೆ. ಇವರಿಗೆ ಆಶ್ರಯವಾಗಿ ಸರ್ಕಾರದ ವಸತಿ ನಿಲಯಗಳು ಕಾರ್ಯ ಮಾಡುತ್ತಿವೆ. ಇದ್ದ ವಸತಿನಿಲಯಗಳು ಭರ್ತಿಯಾಗಿವೆ. ಇನ್ನೂ ಅನೇಕ ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ವಿಶ್ವವಿದ್ಯಾಲಯದಲ್ಲಿ ಹೆಚ್ಚುವರಿ 500 ಜನ ವಿದ್ಯಾರ್ಥಿನಿಯರ ನೂತನ ವಸತಿ ನಿಲಯದ ಅವಶ್ಯಕತೆ ತುಂಬಾ ಇದೆ ಮತ್ತು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ ಇನ್ನು ಹೆಚ್ಚುವರಿ ವಸತಿ ನಿಲಯಗಳನ್ನು ಮಂಜೂರು ಮಾಡಬೇಕು. ಈಗಾಗಲೇ ಕೊರೋನದಂತಹ ಮಹಾಮಾರಿಯಿಂದ ಪಾಲಕರು ದುಡಿಮೆ ಇಲ್ಲದೇ ಕಂಗಾಲಾಗಿದ್ದಾರೆ. ಬಡ ವಿದ್ಯಾರ್ಥಿಗಳು ರೂಮ್ ಮಾಡಿ ವಿದ್ಯಾಭ್ಯಾಸ ಮಾಡುವಷ್ಟು ಆರ್ಥಿಕವಾಗಿ ಸದೃಢರಾಗಿಲ್ಲ.
ಆದ್ದರಿಂದ ತಾವುಗಳು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಹೆಚ್ಚುವರಿ ವಸತಿ ನಿಲಯಗಳನ್ನ ಮಂಜೂರು ಮಾಡುವುದರಿಂದ ವಸತಿ ಸೌಲಭ್ಯ ವಂಚಿತ ವಿದ್ಯಾರ್ಥಿಗಳಿಗೆ ಓದಲು ಅನುಕೂಲ ಮಾಡಿಕೊಡಬೇಕು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಆದೇಶ ಹೊರಡಿಸಬೇಕೆಂದು ಮುಖ್ಯಮಂತ್ರಿಯವರ ಹತ್ತಿರ ಮನವಿ ಮಾಡಿದರೂ.
ಈ ಸಂದರ್ಭದಲ್ಲಿ ಸುಮಾ ತಡವಲಕರ, ಮಾದೇಶ್ ಛಲವಾದಿ, ಸಂತೋಷ್, ಹಣಮಂತ, ಸುರೇಶ್, ಪ್ರಜ್ವಲ್ ಮುಂತಾದವರು ಭಾಗಿಯಾಗಿದ್ದರು.