ಬಿಜೆಪಿಯ ಅತೃಪ್ತ ಶಾಸಕರು ಕಾಂಗ್ರೆಸ್‌ ಸೇರಲಿದ್ದಾರೆ, ಜ.26ರ ನಂತರ ಪ್ರಕ್ರಿಯೆ ಶುರು: ಲಕ್ಷ್ಮಣ ಸವದಿ

Date:

  • ‘ಬಿಜೆಪಿಯ ಹಲವು ‘ಅತೃಪ್ತ’ ಶಾಸಕರು ಸಂಪರ್ಕದಲ್ಲಿದ್ದಾರೆ’
  • ಜನವರಿ 26ರ ನಂತರ ಮುಂದಿನ ಪ್ರಕ್ರಿಯೆ ಪ್ರಾರಂಭ: ಸವದಿ

ಬಿಜೆಪಿಯ ಹಲವು ‘ಅತೃಪ್ತ’ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ನಾವು ಜನವರಿ 26ರ ನಂತರ ಮುಂದಿನ ಪ್ರಕ್ರಿಯೆ ಪ್ರಾರಂಭಿಸುತ್ತೇವೆ. ಎಷ್ಟು ಮಂದಿ ಕಾಂಗ್ರೆಸ್‌ಗೆ ಸೇರುತ್ತಾರೆ ಎಂಬುದನ್ನು ನೋಡುತ್ತೀರಿ ಎಂದು ಕಾಂಗ್ರೆಸ್ ಶಾಸಕ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಬಾಗಲಕೋಟೆಯ ಬಿಜೆಪಿ ಮುಖಂಡ ಕುಮಾರ್ ಯಳ್ಳಿಗುತ್ತಿ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, “‘ಬಿಜೆಪಿಯಿಂದ ಬಂದವರಿಗೆ ಅನ್ಯಾಯ ಆಗಬಾರದು. ಹಾಗಾಗಿ ಅವರ ಇಚ್ಛೆಯಂತೆ ಕಾಂಗ್ರೆಸ್‌ಗೆ ಸೇರುವವರನ್ನು ಗೌರವಯುತವಾಗಿ ಸ್ವಾಗತಿಸಲಾಗುವುದು. ಸಂಸತ್ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲಲು ನೀಲನಕ್ಷೆ ಸಿದ್ಧವಾಗಿದೆ” ಎಂದರು.

ಲಿಂಗಾಯತ ಸಮುದಾಯದ ಶಾಸಕರನ್ನು ಸೆಳೆಯುವ ಕಾರ್ಯವನ್ನು ತಮಗೆ ನೀಡಲಾಗಿದೆಯೇ ಎಂದು ಪ್ರಶ್ನಿಸಿದಾಗ, “ಲಿಂಗಾಯತರು ಮಾತ್ರವಲ್ಲ, ಕಾಂಗ್ರೆಸ್ ಎಲ್ಲರನ್ನು ಸ್ವಾಗತಿಸುತ್ತದೆ” ಎಂದು ಸವದಿ ಸ್ಪಷ್ಟಪಡಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರದ ಆರು ತಿಂಗಳ ‘ಅನನ್ಯ ಸಾಧನೆ’ ಮತ್ತು ವಿರೋಧ ಪಕ್ಷಗಳ ‘ಜವಾಬ್ದಾರಿ’

“ಇವತ್ತಿನ ಪರಿಸ್ಥಿತಿಯಲ್ಲಿ ಯಾರೇ ಅಧ್ಯಕ್ಷರಾದರೂ ಚೇತರಿಸಿಕೊಳ್ಳೋದು ಬಹಳ ಕಷ್ಟ ಇದೆ. ಈಗಾಗಲೇ ಬಿಜೆಪಿಯಲ್ಲಿ ಬಹಳಷ್ಟು ಅಸಮಾಧಾನ ಇದೆ. ಸ್ಪೋಟ ಆಗೋದು ಮಾತ್ರ ಬಾಕಿ ಇದೆ. ಕೆಲವರು ಒಳಗೊಳಗೆ ಕುದಿಯುತ್ತಿದ್ದು, ಯಾವಾಗ ಜ್ವಾಲಾಮುಖಿ ಹೊರಗೆ ಬೀಳುತ್ತೆ ಗೊತ್ತಿಲ್ಲ, ಆದ್ರೆ ಅಸಮಾಧಾನ ಸ್ಪೋಟಗೊಳ್ಳೋದು ಖಂಡಿತ” ಎಂದು ಸವದಿ ಭವಿಷ್ಯ ನುಡಿದರು.

“ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಹೆಚ್ಚು ಕೇಂದ್ರೀಕೃತವಾಗಿದ್ದರೆ, ವಿಜಯೇಂದ್ರ ಅವರು ದಕ್ಷಿಣ ಕರ್ನಾಟಕದ ಮೈಸೂರು, ಬೆಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸೀಮಿತರಾಗಿದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಪಕ್ಷದ ನಿರ್ಧಾರಕ್ಕೆ ಬಿಜೆಪಿಯ ಹಲವು ನಾಯಕರಿಗೆ ಒಪ್ಪಿಗೆಯಿಲ್ಲ. ವಿಜಯೇಂದ್ರ ಅವರಂತಹ ಕಿರಿಯ ನಾಯಕರ ಅಡಿಯಲ್ಲಿ ಕೆಲಸ ಮಾಡುವುದು ಹೇಗೆ ಎಂದು ಹಿರಿಯ ನಾಯಕರು ಗೊಂದಲಕ್ಕೊಳಗಾಗಿದ್ದಾರೆ” ಎಂದು ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚೀನಾದಲ್ಲಿ ಹೊಸ ಮಾದರಿಯ ಸೋಂಕು ಪತ್ತೆ : ಕರ್ನಾಟಕ ಸೇರಿ 5 ರಾಜ್ಯಗಳಿಗೆ ಎಚ್ಚರಿಕೆ

ಈಗಷ್ಟೇ, ಕೊರೊನಾ ಸೋಂಕಿನ ಅಬ್ಬರದಿಂದ ನಿರಾಳರಾಗಿರುವ ಜನತೆಗೆ ಇದೀಗ ಮತ್ತೊಂದು ಸಂಕಷ್ಟ...

ತನಿಖೆ ಆಗುವವರೆಗೂ ಸದನಕ್ಕೆ ಹೋಗಲ್ಲ; ತಮ್ಮದೇ ಸರ್ಕಾರದ ವಿರುದ್ಧ ಬಿ.ಆರ್ ಪಾಟೀಲ್ ಕಿಡಿ

ಕಳೆದ ಸದನದಲ್ಲಿ ನನ್ನ ಪ್ರಶ್ನೆಗೆ ಉತ್ತರಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ...

ಕಲಬುರಗಿ | ಸಕಾಲ ಅರ್ಜಿ ವಿಲೇವಾರಿ : ಕಲಬುರಗಿಗೆ ರಾಜ್ಯದಲ್ಲೇ ನಂಬರ್‌ 1 ಸ್ಥಾನ

ಕಾಲಮಿತಿಯಲ್ಲಿ ಸರ್ಕಾರಿ ಸೇವೆ ನೀಡುವ ಸಕಾಲ ಯೋಜನೆಯಡಿ ನವೆಂಬರ್ ತಿಂಗಳ ಅರ್ಜಿ...