ವಿಜಯಪುರ | ಆ.25ರಂದು ಈದ್ ಮಿಲಾದ್: ಸೌಹಾರ್ದಯುತ ಮೆರವಣಿಗೆಗೆ ಮುಂಜಾಗ್ರತಾ ಕ್ರಮ

Date:

ವಿಜಯಪುರ ನಗರದಲ್ಲಿ ಆಗಸ್ಟ್‌ 25ರಂದು ನಡೆಯಲಿರುವ ಈದ್ ಮಿಲಾದ್ ಮೆರವಣಿಗೆ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಐತಿಹಾಸಿಕ ವಿಜಯಪುರದ ಶತಮಾನಗಳ ಸೌಹಾರ್ದ ಪರಂಪರೆ, ಸಹಬಾಳ್ವೆ ಹಾಗೂ ಸರ್ವಧರ್ಮೀಯ ಭಾವೈಕ್ಯತೆಯ ಸಂದೇಶ ಸಾರಲಿದೆ. ಹೀಗಾಗಿ ಮೆರವಣಿಗೆಯಲ್ಲಿ ಸರ್ವಧರ್ಮೀಯರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಹಾಶಿಂಪೀರ ದರ್ಗಾದ ಜೈನುಲ್ ಆಬಿದಿನ್ ಹಾಶ್ಮಿ ಮನವಿ ಮಾಡಿದರು.

- Advertisement -

ವಿಜಯಪುರ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆದಿಲ್ ಶಾಹಿ ಕಾಲದಿಂದಲೂ ವಿಜಯಪುರ ಸೂಫಿ ಸಂತರು, ಧಾರ್ಮಿಕ ಪರಂಪರೆ ಹಾಗೂ ಸರ್ವಧರ್ಮೀಯ ಸಹಬಾಳ್ವೆಗೆ ಹೆಸರುವಾಸಿಯಾಗಿದೆ. ಸುಮಾರು 400 ವರ್ಷಗಳ ಹಿಂದೆ ಸೂಫಿ ಸಂತರು ಮಕ್ಕಾ-ಮದೀನಾದಿಂದ ಪ್ರವಾದಿ ಮೊಹಮ್ಮದರ ‘ಮೂಹೆ ಮುಬಾರಕ್’(ಪವಿತ್ರ ಕೂದಲು) ತಂದು ಆಸಾರ ಮಹಲ್‌ನಲ್ಲಿ ಸಂರಕ್ಷಿಸಿದ್ದಾರೆಂಬ ನಂಬಿಕೆ ಇದೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ...

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ ಕಾಮಗಾರಿ ಬರೋಬ್ಬರಿ 12 ವರ್ಷದಿಂದ ತೆವಳುತ್ತಿದೆ. 65 ಮೀಟರ್ ಅಗಲದ ಹೈವೇ 45 ಮೀ.ಗೆ ಕುಗ್ಗಿದೆ. ಸಂಚಾರ ಇಕ್ಕಟ್ಟಾಗಿ 27...

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ ಹಿಂಗಾರು ಬಿತ್ತನೆಯ ಸಿದ್ಧತೆಯಲ್ಲಿದ್ದಾರೆ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಪರಿಕರಗಳನ್ನು...

ಮೌಲಾನಾ ಯುಸುಫ್ ಖಾದ್ರಿ ಮಾತನಾಡಿ, “ಪವಿತ್ರ ಮೂಹೆ ಮುಬಾರಕ್‌ನ ಜಿಯಾರತ್‌ಗೆ ವರ್ಷದಲ್ಲಿ ಒಂದು ದಿನ ಮಾತ್ರ ಅವಕಾಶವಿದ್ದು, ಈ ಬಾರಿ ಆಗಸ್ಟ್‌ 25ರಂದು ಜಿಯಾರತ್ ನಡೆಯಲಿದೆ. ಇದರ ಅಂಗವಾಗಿ ನಗರದಲ್ಲಿ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ” ಎಂದರು.

ಜೂಲುಸ್ ಕಮಿಟಿ ಅಧ್ಯಕ್ಷ ಮಹಮ್ಮದ್ ರಫಿ ಕಾಣೆ ಮಾತನಾಡಿ, “ಮೆರವಣಿಗೆಯಲ್ಲಿ ಯುವಕರು ಶಾಂತಿ, ಸೌಹಾರ್ದತೆ ಹಾಗೂ ಶಿಸ್ತು ಕಾಪಾಡಬೇಕು. ಯಾವುದೇ ಪ್ರಚೋದನೆ, ವದಂತಿ ಅಥವಾ ಅನಗತ್ಯ ಚರ್ಚೆಗಳಿಗೆ ಅವಕಾಶ ನೀಡದೆ ಶಾಂತಿಯುತವಾಗಿ ಪಾಲ್ಗೊಳ್ಳಬೇಕು” ಎಂದು ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ಈರುಳ್ಳಿ ದುಬಾರಿ: ಬೆಳೆ ಕಡಿಮೆಯಾದಾಗ ಗ್ರಾಹಕರಿಗೆ ಬರೆ, ಉತ್ತಮ ಬೆಳೆ ಬಂದಾಗ ರೈತರಿಗೆ ಹೊರೆ

ಯುವ ಮುಖಂಡ ಇರ್ಫಾನ್ ಶೇಖ್ ಮಾತನಾಡಿ, “ಪೊಲೀಸ್ ಇಲಾಖೆ ಹಾಗೂ ಆಯೋಜಕರು ನೀಡುವ ಸೂಚನೆಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ಅನನುಕೂಲವಾಗದಂತೆ, ನಗರದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ಮೆರವಣಿಗೆಯನ್ನು ಯಶಸ್ವಿಗೊಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ” ಎಂದರು.

ಜಮೀರ್ ಅಹ್ಮದ್ ಬಾಂಗಿ, ಇದ್ರೋಸ್ ಬಕ್ಷಿ, ನಿಜಾಮ್ ಸಿರಿಯಾಳ, ಜಿಯಾ ಪಠಾಣ್, ಸೈಯದ್ ಗುಡಗುಂಟಿ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯಕ್ಕೆ ಬಾಕಿ ಅನುದಾನ: ಶೀಘ್ರದಲ್ಲೇ ‘ಸಿಹಿ ಸುದ್ದಿ’- ಡಿ.ಕೆ. ಶಿವಕುಮಾರ್

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಳೆಯ ಬಾಕಿ ಅನುದಾನದ ಕುರಿತಂತೆ ಶೀಘ್ರದಲ್ಲೇ...

ಪತ್ರಕರ್ತರ ಸಂಘದ ನೂತನ ಭವನಕ್ಕೆ ₹50 ಲಕ್ಷ ಅನುದಾನ: ಸಂಸದ ಯದುವೀರ ಘೋಷಣೆ

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಭವನ ನಿರ್ಮಾಣಕ್ಕೆ ಸಂಸದರ ಪ್ರದೇಶಾಭಿವೃದ್ಧಿ...

ಗದಗ | ಮತದಾನದ ಹಕ್ಕನ್ನು‌ ಕಳೆದುಕೊಳ್ಳುವ ಆತಂಕದಲ್ಲಿ ಅನಿವಾಸಿ ಭಾರತೀಯರು: ಮುಖಂಡರು ಕಿಡಿ

"ರೋಣ ಮತಕ್ಷೇತ್ರದಲ್ಲಿ ಅನಿವಾಸಿ ಭಾರತೀಯರು 999 ಜನರಿದ್ದಾರೆಂದು ಮತದಾರರ ಯಾದಿ ಪಟ್ಟಿಯಲ್ಲಿ...

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ ಹೋದ ಬೆಳಗಾವಿ ರೈತರು

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ...