ವಿಜಯಪುರ | ʼಕೈಗಾರಿಕಾ ಬೆಳವಣಿಗೆ ಕುಂಠಿತಕ್ಕೆ ಕಾರ್ಮಿಕ ಸಂಘಗಳೇ ಕಾರಣʼ ಹೇಳಿಕೆಗೆ AIUTUC ಆಕ್ಷೇಪ

Date:

‘ದೇಶದಲ್ಲಿ ಕೈಗಾರಿಕಾ ಬೆಳವಣಿಗೆ ಕುಂಠಿತಗೊಳ್ಳಲು ಕಾರ್ಮಿಕ ಸಂಘಗಳು ಕಾರಣ’ ಎಂಬ ಭಾರತದ ಮುಖ್ಯ ನ್ಯಾಯಾಧೀಶರ ಅಭಿಪ್ರಾಯಕ್ಕೆ ತೀವ್ರವಾಗಿ ಪ್ರತಿಕ್ರಿಯಿಸುತ್ತ AIUTUC ವಿಜಯಪುರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್ ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

- Advertisement -

“ದೇಶದಲ್ಲಿ ಕೈಗಾರಿಕಾ ಬೆಳವಣಿಗೆ ಕುಂಠಿತಗೊಂಡಿರುವುದಕ್ಕೆ ಕಾರ್ಮಿಕರು ಮತ್ತು ಕಾರ್ಮಿಕ ಸಂಘಗಳ ಮೇಲೆ ಆಪಾದನೆ ಮಾಡಿದ ಭಾರತದ ಮುಖ್ಯ ನ್ಯಾಯಾಧೀಶರ ಬೇಜವಾಬ್ದಾರಿಯುತ ಹೇಳಿಕೆಯನ್ನು ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ನ ಅಖಿಲ ಭಾರತ ಸಮಿತಿ ಅತ್ಯಂತ ಬಲವಾಗಿ ಖಂಡಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

2026ರ ಜನವರಿ 29ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ವ್ಯಕ್ತಪಡಿಸಿದ ಸಿಜೆಐ ಅವರ ಈ ಅಭಿಪ್ರಾಯವು ಏಕಸ್ವಾಮ್ಯ ಬಲಾಢ್ಯರ ಅಣತಿಯಂತೆ ಕಾರ್ಯನಿರ್ವಹಿಸುತ್ತಿರುವ ಸರ್ಕಾರದ ನಿಲುವಿನೊಂದಿಗೆ ಸ್ಪಷ್ಟವಾಗಿ ಹೋಲುತ್ತದೆ. ಈ ಮಾತುಗಳು ಮುಖ್ಯ ನ್ಯಾಯಧೀಶರ ಸ್ಥಾನಕ್ಕೆ ಶೋಭೆ ತರುವಂತಹುದಲ್ಲ. ಇದು ನಮ್ಮಂತಹ ಬಂಡವಾಳಶಾಹಿ ರಾಜ್ಯದಲ್ಲಿ ನ್ಯಾಯಾಂಗವು ಸಹ ಉದ್ಯೋಗದಾತ ಮಾಲೀಕ ವರ್ಗದ ಪರವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಇದರ ಬಗ್ಗೆ ನಮ್ಮ ದೇಶದ ರಾಜ್ಯ ಅಧಿಕಾರದ ಗದ್ದುಗೆಯಲ್ಲಿರುವ ಬಂಡವಾಳಶಾಹಿ ವರ್ಗಕ್ಕೆ ಅಧೀನವಾಗಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಬಲಿಷ್ಠವಾದ ಒಗ್ಗಟ್ಟಿನ ಚಳುವಳಿಗಳನ್ನು ಬೆಳೆಸುತ್ತಿರುವ ದುಡಿಯುವ ಜನರು ಜಾಗೃತರಾಗಿರಬೇಕು.

ಇದನ್ನೂ ಓದಿ: ವಿಜಯಪುರ | ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಅತಿಥಿ ಉಪನ್ಯಾಸಕರ ಪುನಶ್ಚೇತನ ಕಾರ್ಯಗಾರ

ಕೇಂದ್ರ ಸರ್ಕಾರ ಬಹಿರಂಗಪಡಿಸಿರುವ ವಾಸ್ತವಿಕ ಸಂಗತಿಗಳ ಪ್ರಕಾರ ಮುಖ್ಯ ನ್ಯಾಯಧೀಶರ ಅಭಿಪ್ರಾಯವು ಸಮಂಜಸವಲ್ಲ. ಕಳೆದ 5 ವರ್ಷಗಳಲ್ಲಿ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಗಳಿಂದ ಉಂಟಾಗಿರುವ ಕೈಗಾರಿಕಾ ವಿವಾದಗಳು 100 ಕ್ಕಿಂತ ಕಡಿಮೆಯಿವೆ, ಆದರೆ ಅದೇ ಸಂದರ್ಭದಲ್ಲಿ ಮಾಲೀಕರಿಂದಾಗಿ 40,000 ಕ್ಕಿಂತ ಹೆಚ್ಚು ಕೈಗಾರಿಕೆಗಳು ಮುಚ್ಚಿ ಹೋಗಿವೆ ಎಂದು ಸರ್ಕಾರದ ಅಂಕಿ ಅಂಶವೇ ಹೇಳುತ್ತದೆ. ಮುಖ್ಯ ನ್ಯಾಯಧೀಶರ ಕಾರ್ಮಿಕ ವಿರೋಧಿ, ಕಾರ್ಮಿಕ ಸಂಘ ವಿರೋಧಿ, ಸರ್ಕಾರ ಪರ ಮತ್ತು ಉದ್ಯೋಗದಾತರ ಪರವಾದ ಹೇಳಿಕೆಯನ್ನು ತಿರಸ್ಕರಿಸುತ್ತಾ, ಫೆಬ್ರವರಿ 12 ರ ದೇಶಾದ್ಯಂತದ ಸಾರ್ವತ್ರಿಕ ಮುಷ್ಕರವನ್ನು ಸಂಪೂರ್ಣ ಯಶಸ್ವಿಗೊಳಿಸಲು ದೇಶದ ದುಡಿಯುವ ಜನರು ಮತ್ತು ಸಾಮಾನ್ಯ ಜನರು ತಮ್ಮ ಸಿದ್ಧತೆಗಳನ್ನು ಹೆಚ್ಚಿಸಬೇಕೆಂದು ನಾವು ಕರೆ ನೀಡುತ್ತೇವೆ ಎಂದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಪಾಟೀಲ–ನಾಡಗೌಡರ ವಾಕ್ಸಮರಕ್ಕೆ ಹೊಸ ತಿರುವು: ಆಪ್ತರ ನಡುವೆ ಹೆಚ್ಚಿದ ರಾಜಕೀಯ ಅಂತರ

ಪಾಟೀಲ–ನಾಡಗೌಡರ ನಡುವಿನ ವಾಕ್ಸಮರ ಕೇವಲ ಇಬ್ಬರು ನಾಯಕರ ವೈಯಕ್ತಿಕ ಭಿನ್ನಾಭಿಪ್ರಾಯಕ್ಕೆ ಸೀಮಿತವಾಗದೆ,...

ವಿಜಯಪುರ | ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದರೆ ಸೆ.23ರೊಳಗೆ ಅರ್ಜಿ ಸಲ್ಲಿಸಿ: ಜಿಲ್ಲಾಧಿಕಾರಿ ಡಾ. ಆನಂದ ಕೆ

ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ–2026(ಎಸ್‌ಐಆರ್) ಹಿನ್ನೆಲೆಯಲ್ಲಿ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ...

ವಿಜಯಪುರ | ಸೆ. 26, 27ರಂದು ರಾಜ್ಯಮಟ್ಟದ ಸೂರ್ಯ ನಮಸ್ಕಾರ ಕ್ರೀಡಾಕೂಟ

ನಿವೃತ್ತ ಶಿಕ್ಷಕ ದಿ.ದ್ಯಾಮನಗೌಡ ಅ.ಪಾಟೀಲ, ಉತ್ನಾಳ ಸ್ಮರಣಾರ್ಥ 2ನೇ ರಾಜ್ಯಮಟ್ಟದ ಸೂರ್ಯ...

ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಳಂಬವಾಗದಂತೆ ಹೋರಾಟ ಸಮಿತಿ ಆಗ್ರಹ

ವಿಜಯಪುರ ಜಿಲ್ಲೆಯಲ್ಲಿ ಬಹುದಿನಗಳ ಬೇಡಿಕೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಯಾವುದೇ ವಿಳಂಬವಿಲ್ಲದೆ...