ವಡಗೇರಾ ತಾಲ್ಲೂಕಿನ ಹಯ್ಯಾಳ ಬಿ ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ ಅಭಿಯಾನದಲ್ಲಿ ಯಕ್ಷಿಂತಿ ಗ್ರಾಮಸ್ಥರು ವಿವಿಧ ಮೂಲಸೌಕರ್ಯ ಹಾಗೂ ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಶನಿವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಯಕ್ಷಿಂತಿ ಗ್ರಾಮದಲ್ಲಿ ಸಿಸಿ ರಸ್ತೆ, ಬಡವರಿಗೆ ಮನೆ, ಸಾರ್ವಜನಿಕ ಶೌಚಾಲಯ ನಿರ್ಮಾಣ, ವೃದ್ಧಾಪ್ಯ ಹಾಗೂ ವಿಧವಾ ವೇತನ ಸೇರಿದಂತೆ ಸ್ಥಗಿತಗೊಂಡಿರುವ ಪಿಂಚಣಿ ಸೌಲಭ್ಯಗಳನ್ನು ಮರುಚಾಲನೆಗೊಳಿಸಬೇಕು ಎಂದು ಮನವಿ ಮಾಡಿದರು. ಮದರಕಲ್ ರಸ್ತೆ ಡಾಂಬರೀಕರಣಕ್ಕೂ ಒತ್ತಾಯಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ಪ್ರಸ್ತುತ ಆರು ಗಂಟೆ ವಿದ್ಯುತ್ ನೀಡಲಾಗುತ್ತಿದ್ದು, ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಜನಜಾಗೃತಿ ಸಮಾವೇಶ: ಮಲ್ಲಣ್ಣ ದಾಸನಕೇರಿ ಅಧ್ಯಕ್ಷರಾಗಿ ನೇಮಕ
This video cannot be played in your browser. Open the video directly
ಈ ಸಂದರ್ಭದಲ್ಲಿ ಭೀಮರಾಯ ದಳವಾಯಿ, ತಿರುಪತಿ, ಮರಿಲಿಂಗಪ್ಪ ನಾಯಕ, ದೇವಪ್ಪ ಬುಡಚಕ್ರಿ, ಸಿದ್ದಪ್ಪ ಹುಬ್ಬಳ್ಳಿ, ರಮೇಶ ಮಡಿವಾಳ, ಮೌನೇಶ್ ಚಲವಾದಿ, ಶಿವಪ್ಪ, ನಿಂಗಣ್ಣ ಕರಡಿ ಸೇರಿದಂತೆ ಗ್ರಾಮಸ್ಥರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.





