‘ನನ್ನ ಜೀವನ ಹಾಳುಮಾಡಲು ಆತನಿಗೆ ಸಾಧ್ಯವಾಗಲಿಲ್ಲ’: ‘ಚೆವೆನಿಂಗ್’ ಸ್ಕಾಲರ್‌ಶಿಪ್ ಪಡೆದ ಆಸಿಡ್ ದಾಳಿ ಸಂತ್ರಸ್ತೆ ಫಾತಿಮಾ

Date:

ಭೀಕರ ಆಸಿಡ್ ದಾಳಿಗೆ ಒಳಗಾಗಿದ್ದ 29 ವರ್ಷದ ರೇಷಮ್ ಫಾತಿಮಾ ಅವರು ಬ್ರಿಟನ್ (UK) ಸರ್ಕಾರದ ಅತ್ಯಂತ ಪ್ರತಿಷ್ಠಿತ ‘ಚೆವೆನಿಂಗ್ ಸ್ಕಾಲರ್‌ಶಿಪ್’ ಪಡೆದಿದ್ದಾರೆ.  ಈ ಸ್ಕಾಲರ್‌ಶಿಪ್ ಪಡೆದ ಭಾರತದ ಮೊದಲ ಆಸಿಡ್ ದಾಳಿ ಸಂತ್ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್‌ (LSE) ಸಂಸ್ಥೆಯಲ್ಲಿ ‘ಜೆಂಡರ್, ಡೆವಲಪ್‌ಮೆಂಟ್ ಅಂಡ್ ಗ್ಲೋಬಲೈಸೇಶನ್’ ವಿಷಯದಲ್ಲಿ ಸ್ನಾತಕೋತ್ತರ (MSc) ಶಿಕ್ಷಣ ಪಡೆಯಲಿದ್ದಾರೆ.

- Advertisement -

“ನನಗೆ ಇದು ಮತ್ತೊಂದು ಪದವಿ ಮಾತ್ರವಲ್ಲ, ಅದಕ್ಕಿಂತಲೂ ಅತ್ಯಂತ ವೈಯಕ್ತಿಕವಾದದ್ದು. ನಾನು ಅನುಭವಿಸಿದ ಪ್ರತಿಯೊಂದು ಕಷ್ಟವೂ ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ” ಎಂದು ರೇಷಮ್ ಫಾತಿಮಾ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ತಮ್ಮ ಮೇಲೆ ದಾಳಿ ಮಾಡಿದ್ದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೆನಪಿಸಿಕೊಂಡ ಅವರು, “ಆತ ಸಾಯುವುದು ನನಗೆ ಇಷ್ಟವಿರಲಿಲ್ಲ. ಆತ ಬದುಕಿದ್ದು ನಾನು ಯಶಸ್ವಿಯಾಗುವುದನ್ನು ನೋಡಬೇಕಿತ್ತು. ನನ್ನ ಜೀವನವನ್ನು ಹಾಳುಮಾಡಲು ಆತನಿಂದ ಸಾಧ್ಯವಾಗಲಿಲ್ಲ ಎಂಬುದನ್ನು ಆತನಿಗೆ ತೋರಿಸಿಕೊಡಬೇಕಿತ್ತು” ಎಂದಿದ್ದಾರೆ.

ಜಾರ್ಖಂಡ್‌ನ ಜಂಶೆಡ್‌ಪುರದಲ್ಲಿ ಜನಿಸಿದ ಫಾತಿಮಾ ಅವರು ಬೆಳದದ್ದು ಲಕ್ನೋದಲ್ಲಿ. ಅವರು 2014ರ ಫೆಬ್ರವರಿಯಲ್ಲಿ 11ನೇ ತರಗತಿ ಓದುತ್ತಿದ್ದಾಗ ಅವರ ಮೇಲೆ ಆಸಿಡ್‌ ದಾಳಿ ನಡೆದಿತ್ತು. ಅವರ ತಾಯಿಯ ಸೋದರಸಂಬಂಧಿಯಾಗಿದ್ದ ವ್ಯಕ್ತಿ ಫಾತಿಮಾರನ್ನು ವಿವಾಹವಾಗುವುದಾಗಿ ಪ್ರಸ್ತಾಪಿಸಿದ್ದ. ಆದರೆ, ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕಾಗಿ, ಫಾತಿಮಾ ಮೇಲೆ ಆ ದುರುಳ ಆಸಿಡ್ ದಾಳಿ ನಡೆಸಿದ್ದ.

12 ವರ್ಷಗಳ ಹಿಂದಿನ ಆ ದುರಂತ ಘಟನೆಯನ್ನು ನೆನಪಿಸಿಕೊಳ್ಳುವ ಫಾತಿಮಾ, “ಖಾಸಗಿ ಕೋಚಿಂಗ್ ಕ್ಲಾಸ್‌ನಿಂದ ಮನೆಗೆ ಬಿಡುವುದಾಗಿ ಆತ ಹೇಳಿದ್ದ. ಕುಟುಂಬದವನೆಂಬ ನಂಬಿಕೆಯಿಂದ ನಾನು ಆತನ ಜೊತೆ ಹೋದೆ. ಆದರೆ, ಆತ ಕಾರನ್ನು ಹೈವೇ ಕಡೆಗೆ ಚಲಾಯಿಸಿ, ನನ್ನ ತಲೆಯ ಮೇಲೆ ಪೂರ್ತಿ ಬಾಟಲಿ ಆಸಿಡ್ ಸುರಿದಿದ್ದ” ಎಂದು ವಿವರಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಫಾತಿಮಾ ಅಲ್ಲಿಂದ ತಪ್ಪಿಸಿಕೊಂಡು ಆಸ್ಪತ್ರೆಗೆ ತೆರಳಿದ್ದರು. ಹಲವು ವರ್ಷಗಳ ಕಾಲ ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ಚಿಕಿತ್ಸೆಗಳನ್ನು ಪಡೆಯುತ್ತಲೇ ಶಿಕ್ಷಣವನ್ನೂ ಮುಂದುವರೆಸಿದ್ದರು. ಗಾಯಗಳು ಮತ್ತು ಚಿಕಿತ್ಸೆಗಳ ನಡುವೆಯೂ 12ನೇ ತರಗತಿಯ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ 87% ಅಂಕ ಗಳಿಸಿ ಉತ್ತೀರ್ಣರಾಗಿದ್ದರು.

ಬಳಿಕ, ಫಾತಿಮಾ ಅವರು 2018ರಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಫಿಸಿಕ್ಸ್‌ನಲ್ಲಿ ಬಿಎಸ್‌ಸಿ (ಆನರ್ಸ್) ಪದವಿ ಪಡೆದರು. ನಂತರ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (JNU) ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು.

ಇದೆಲ್ಲದರ ನಡುವೆ, ತಾವು ಆಸಿಡ್ ದಾಳಿಗೆ ಒಳಗಾದ ನಂತರವೂ ಅವರು ತೋರಿಸಿದ ಧೈರ್ಯಕ್ಕಾಗಿ ಅವರಿಗೆ ಭಾರತದ ಅತ್ಯುನ್ನತ ಮಕ್ಕಳ ಸಾಹಸ ಪ್ರಶಸ್ತಿಯಾದ ‘ಭಾರತ ಪ್ರಶಸ್ತಿ’ ನೀಡಿ ಭಾರತ ಸರ್ಕಾರ ಗೌರವಿಸಿದೆ.

ಈ ಲೇಖನ ಓದಿದ್ದೀರಾ?: ಇಲ್ಲಿ ಹೆಣ್ಣು ಮಕ್ಕಳನ್ನ ದಷ್ಟಪುಷ್ಟವಾಗಿ ಬೆಳೆಸುವುದು ಭದ್ರ ಭವಿಷ್ಯಕ್ಕಾಗಿ ಅಲ್ಲ, ʼಸಂಪಾದನೆʼಗಾಗಿ!

“ಜನರು ನನ್ನನ್ನು ಅನುಕಂಪದಿಂದ ನೋಡುವುದು ನನಗಿಷ್ಟವಿರಲಿಲ್ಲ. ಬದಲಿಗೆ ಸಾಮರ್ಥ್ಯವಿರುವ ವ್ಯಕ್ತಿಯಾಗಿ ನೋಡಬೇಕೆಂದು ಬಯಸಿದ್ದೆ” ಎಂದು ಅವರು ಹೇಳುತ್ತಾರೆ.

2023ರಲ್ಲಿ JNUನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಫಾತಿಮಾ ಅವರು’ಇಬ್ರಾ ಫೌಂಡೇಶನ್’ (Ebrah Foundation) ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಅದರ ಮೂಲಕ ಮುಸ್ಲಿಂ ಯುವತಿಯರಿಗೆ ಶಿಕ್ಷಣ, ವೃತ್ತಿಜೀವನ ಹಾಗೂ ಆರ್ಥಿಕ ಸ್ವಾವಲಂಬನೆಯ ಮಾರ್ಗದರ್ಶನ ನೀಡಲಾರಂಭಿಸಿದರು. ಈಗ, ನಾನು ಲಂಡನ್‌ಗೆ ತೆರಳುತ್ತಿದ್ದೇನೆ. ಆದರೂ, ಸಂಸ್ಥೆಯ ಕೆಲಸ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

 “ಮುಸ್ಲಿಂ ಮಹಿಳೆಯರು ಮಹಿಳೆಯರಾಗಿಯೂ ಮತ್ತು ಅಲ್ಪಸಂಖ್ಯಾತ ಸಮುದಾಯದವರಾಗಿಯೂ ದ್ವಿಗುಣ ತಾರತಮ್ಯ ಎದುರಿಸುತ್ತಾರೆ. ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಗಳಾದರೆ, ತಮ್ಮ ಸ್ವಂತ ನಿರ್ಧಾರಗಳನ್ನು ಧೈರ್ಯವಾಗಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ” ಎಂದು ಅವರ ವಿಶ್ವಾಸ.

2024ರಲ್ಲಿ ಅಸ್ಘರ್ ಎಂಬುವವರನ್ನು ಮದುವೆಯಾಗಿರುವ ರೇಷಮ್, ಚೆವೆನಿಂಗ್ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ತಮ್ಮ ಪತಿಯೇ ಪ್ರೇರಣೆ ಎನ್ನುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ – ಯುಪಿಯಲ್ಲಿ ಸಿನಿಮಾ ಆಗುವುದೇ?

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ...

ನೋಯ್ಡಾ ಬಳಿ ವಿದ್ಯಾರ್ಥಿಗಳಿಗೆ ಗುದ್ದಿ ಪರಾರಿಯಾದ ಕಾರು ಚಾಲಕ

​ನೋಯ್ಡಾದ ನಾಲೆಡ್ಜ್ ಪಾರ್ಕ್ ಪ್ರದೇಶದಲ್ಲಿರುವ ಪ್ರತಿಷ್ಠಿತ ಜಿಎನ್‌ಐಓಟಿ (GNIOT) ಕಾಲೇಜಿನ ಮುಂಭಾಗದಲ್ಲಿ...

ಮಹಾರಾಷ್ಟ್ರ ಟಿಇಟಿ ಪ್ರಶ್ನೆಪತ್ರಿಕೆ ಸೋರಿಕೆ: ಕೇವಲ 8,000 ರೂ. ಆಸೆಗೆ ಬಿದ್ದು ಶೂಗಳಲ್ಲಿ ಅಡಗಿಸಿ ಪಶ್ನೆಪತ್ರಿಕೆ ಕಳವು!

ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ...