ಭಾರತ ನನ್ನನ್ನು ರಾಜನಂತೆ ನಡೆಸಿಕೊಂಡಿದೆ: ಆಸಿಸ್‌ ಮಾಜಿ ವೇಗಿ ಬ್ರೆಟ್ ಲೀ

Date:

ಭಾರತ ನನ್ನನ್ನು ಯಾವಾಗಲೂ ರಾಜನಂತೆ ನೋಡಿಕೊಂಡಿದೆ. ಮುಂಬೈ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ನುಡಿದಿದ್ದಾರೆ. ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದ ಬ್ರೆಟ್ ಲೀ, ಮುಂಬೈ ಮಳೆಗಾಲ, ನಗರದ ಚೈತನ್ಯ ಹಾಗೂ ಭಾರತೀಯ ಅಭಿಮಾನಿಗಳ ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

- Advertisement -

“1994ರಲ್ಲಿ ಆಸ್ಟ್ರೇಲಿಯಾ ಅಂಡರ್-19 ತಂಡದೊಂದಿಗೆ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೇನೆ. ಆಗ ಮೊದಲ ಬಾರಿಗೆ ಕಾಲಿಟ್ಟ ನಗರವೇ ಮುಂಬೈ. ಬಳಿಕ ದೇಶದ ಹಲವೆಡೆ ಪ್ರವಾಸ ಮಾಡಿದ್ದರೂ, ಮುಂಬೈನ ಉತ್ಸಾಹ, ಗದ್ದಲ ಮತ್ತು ಜೀವಂತಿಕೆ ಬೇರೆಲ್ಲೂ ಸಿಗುವುದಿಲ್ಲ. ಅದಕ್ಕಾಗಿಯೇ ಈ ನಗರ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಮಳೆ ಎಷ್ಟೇ ಜೋರಾಗಿ ಬಂದರೂ ಈ ನಗರ ಎಂದಿಗೂ ನಿಲ್ಲುವುದಿಲ್ಲ. ಮಳೆ ನಗರವನ್ನು ತಂಪಾಗಿಸುತ್ತದೆ. ಮುಂಬೈನ ಶಕ್ತಿ, ಚೈತನ್ಯವನ್ನು ಮಳೆ ಮತ್ತಷ್ಟು ಹೆಚ್ಚಿಸುತ್ತದೆ. ಮಳೆಗಾಲವೇ ಮುಂಬೈನ ವಿಶೇಷ ಅನುಭವದ ಭಾಗವಾಗಿದೆ. ಮಳೆ ಇರಲಿ, ಬಿಸಿಲಿರಲಿ, ಇಲ್ಲಿಗೆ ಬರಲು ನನಗೆ ಯಾವಾಗಲೂ ಇಷ್ಟ” ಎಂದು ಬ್ರೆಟ್‌ ಲೀ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

“ಇತ್ತೀಚಿನ ಫೋಟೋಶೂಟ್ ವೇಳೆ ಆಟೋರಿಕ್ಷಾದಲ್ಲಿ ಕುಳಿತ ಅನುಭವ ತಮ್ಮ ಹಳೆಯ ದಿನಗಳನ್ನು ನೆನಪಿಸಿತು ಎಂದ ಅವರು, “1994ರಲ್ಲಿ ನಾವು ಕ್ರಿಕೆಟ್ ಕಿಟ್‌ಗಳನ್ನು ಆಟೋದಲ್ಲಿ ಹಾಕಿಕೊಂಡು ಅಭ್ಯಾಸಕ್ಕೆ ಹೋಗುತ್ತಿದ್ದೆವು. ಆಗ ಮೊದಲ ಬಾರಿಗೆ ಆಟೋದಲ್ಲಿ ‘ಮುಕಾಬಲಾ’ ಹಾಡನ್ನು ಕೇಳಿದ್ದೆ. ಹಿಂದಿ ಅರ್ಥವಾಗದಿದ್ದರೂ ಆ ಸಂಗೀತ ತುಂಬಾ ಇಷ್ಟವಾಗಿತ್ತು. ನಂತರ ಅದರ ಅರ್ಥ ತಿಳಿದುಕೊಂಡೆ. ಈಗ ಭಾರತಕ್ಕೆ ಬಂದಾಗಲೆಲ್ಲ ಆ ಹಾಡನ್ನು ಕೇಳುತ್ತೇನೆ. ಬಳಿಕ ಎ.ಆರ್. ರೆಹಮಾನ್ ಅವರನ್ನು ಸಂದರ್ಶನ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ವಿಶೇಷ ಕ್ಷಣವಾಗಿತ್ತು” ಎಂದು ಸ್ಮರಿಸಿದ್ದಾರೆ.

ಇದನ್ನೂ ಓದಿ: ‘ಮೆಕ್‌ಗ್ರಾತ್ ಕ್ಯಾಂಪ್‌ಗಿಂತ ಪರೀಕ್ಷೆ ಮುಖ್ಯ’ ಎಂದಿದ್ದ ಆಕೀಬ್ ನಬೀ ತಂದೆ: ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಕಾಶ್ಮೀರದ ಮೊದಲ ಕ್ರಿಕೆಟಿಗ

“ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಹಲವು ವರ್ಷಗಳಾದರೂ ಭಾರತದಲ್ಲಿ ಅಭಿಮಾನಿಗಳಿಂದ ಸಿಗುತ್ತಿರುವ ಪ್ರೀತಿ ಇಂದಿಗೂ ಅಚ್ಚರಿ ಮೂಡಿಸುತ್ತದೆ. ಆಡುವಾಗ ಪ್ರತಿಯೊಂದು ಪಂದ್ಯವನ್ನೂ ಗೆಲ್ಲಬೇಕೆಂಬ ಗುರಿಯೊಂದಿಗೆ ಮೈದಾನಕ್ಕಿಳಿಯುತ್ತಿದ್ದೆ. ಆದರೆ ಆಟ ಮುಗಿದ ಬಳಿಕ ಅದು ಜೀವನದ ಒಂದು ಅಧ್ಯಾಯ ಮಾತ್ರ. ಆಸ್ಟ್ರೇಲಿಯಾ ಅಥವಾ ದುಬೈನಲ್ಲಿ ಓಡಾಡುವಾಗ ನಾನು ಕ್ರಿಕೆಟಿಗ ಎಂಬುದನ್ನೇ ಮರೆತುಬಿಡುತ್ತೇನೆ. ಆದರೆ ಮುಂಬೈಗೆ ಬಂದಾಗ ಅಭಿಮಾನಿಗಳು ತೋರುವ ಪ್ರೀತಿ ಅದನ್ನು ನೆನಪಿಸುತ್ತದೆ. ಭಾರತದಲ್ಲಿ ಸಿಗುವ ಪ್ರೀತಿಯನ್ನು ಇಲ್ಲಿ ಬರದವರಿಗೆ ವಿವರಿಸುವುದು ಕಷ್ಟ” ಎಂದಿದ್ದಾರೆ.

ಭಾರತದ ಬಗ್ಗೆ ವಿದೇಶಿಯರು ಕೇಳಿದಾಗ, “ಇಲ್ಲಿ ಅತ್ಯುತ್ತಮ ಹೋಟೆಲ್‌ಗಳಿವೆ, ಸುಂದರ ಪ್ರವಾಸಿ ತಾಣಗಳಿವೆ. ಮುಂಬೈನ ಕ್ವೀನ್ಸ್ ನೆಕ್ಲೇಸ್‌ನಲ್ಲಿ ನಡೆಯುವುದೇ ಒಂದು ಅದ್ಭುತ ಅನುಭವ. ಆದರೆ ಭಾರತವನ್ನು ವಿಶೇಷವಾಗಿಸುವುದು ಇಲ್ಲಿನ ಜನ. ಅವರ ಆತ್ಮೀಯತೆ, ಪ್ರೀತಿ, ಉತ್ಸಾಹ ಮತ್ತು ಕರುಣೆ ನನ್ನನ್ನು ಯಾವಾಗಲೂ ಸೆಳೆಯುತ್ತದೆ. ಭಾರತದಲ್ಲಿ ನನಗೆ ರಾಜನಂತೆ ಗೌರವ ಸಿಗುತ್ತದೆ” ಎಂದು ಬ್ರೆಟ್ ಲೀ ಹಂಚಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ – ಯುಪಿಯಲ್ಲಿ ಸಿನಿಮಾ ಆಗುವುದೇ?

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ...

ನೋಯ್ಡಾ ಬಳಿ ವಿದ್ಯಾರ್ಥಿಗಳಿಗೆ ಗುದ್ದಿ ಪರಾರಿಯಾದ ಕಾರು ಚಾಲಕ

​ನೋಯ್ಡಾದ ನಾಲೆಡ್ಜ್ ಪಾರ್ಕ್ ಪ್ರದೇಶದಲ್ಲಿರುವ ಪ್ರತಿಷ್ಠಿತ ಜಿಎನ್‌ಐಓಟಿ (GNIOT) ಕಾಲೇಜಿನ ಮುಂಭಾಗದಲ್ಲಿ...

ಮಹಾರಾಷ್ಟ್ರ ಟಿಇಟಿ ಪ್ರಶ್ನೆಪತ್ರಿಕೆ ಸೋರಿಕೆ: ಕೇವಲ 8,000 ರೂ. ಆಸೆಗೆ ಬಿದ್ದು ಶೂಗಳಲ್ಲಿ ಅಡಗಿಸಿ ಪಶ್ನೆಪತ್ರಿಕೆ ಕಳವು!

ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ...