ಬಿಹಾರದಲ್ಲಿ ಬದಲಾವಣೆಯ ಗಾಳಿ?

Date:

ನೀಟ್ ವಿದ್ಯಾರ್ಥಿಯ ಹತ್ಯೆ, ಭರತ್ ತಿವಾರಿ ಪೊಲೀಸ್ ಹತ್ಯೆ, ದೆಹಲಿಯಲ್ಲಿ ಬಿಹಾರಿಯ ಹತ್ಯೆ ಸೇರಿದಂತೆ ಯಾವುದೇ ಪ್ರಮುಖ ಸಾರ್ವಜನಿಕ ಸಮಸ್ಯೆ ಎದುರಾದಾಗಲೂ, ಸರ್ಕಾರದ ವಿರುದ್ಧ ಕಿಶೋರ್ ಬೀದಿಗಿಳಿದು ಹೋರಾಡಿದರು. ವಿಧಾನಸಭೆಯ ಹೊರಗೆ ಅವರು ಅತ್ಯಂತ ಪ್ರಬಲ ವಿರೋಧ ಪಕ್ಷದ ಧ್ವನಿಯಾಗಿ ಹೊರಹೊಮ್ಮಿದರು.

2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜನ ಸುರಾಜ್ ಪಕ್ಷ (ಜೆಎಸ್‌ಪಿ) ಒಂದೇ ಒಂದು ಸ್ಥಾನವನ್ನೂ ಗೆಲ್ಲದಿದ್ದರೂ, ಪ್ರಶಾಂತ್ ಕಿಶೋರ್ ಅವರು ಬಾಂಕಿಪುರ ಉಪಚುನಾವಣೆಯಲ್ಲಿ ಸುಮಾರು 50% ಮತಗಳನ್ನು ಪಡೆದು ಐತಿಹಾಸಿಕ ಜಯ ಸಾಧಿಸಿದ್ದಾರೆ. ಬಾಂಕಿಪುರ ಹಲವು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದು, ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಐದು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅದಕ್ಕೂ ಮೊದಲು 1995ರಿಂದ ಅವರ ತಂದೆಯೇ ಈ ಕ್ಷೇತ್ರದ ಶಾಸಕರಾಗಿದ್ದರು.

- Advertisement -

2025ರ ವಿಧಾನಸಭೆ ಚುನಾವಣೆಯೊಂದಿಗೆ ಹೋಲಿಸಿದರೆ, ಬಾಂಕಿಪುರದಲ್ಲಿ ಬಿಜೆಪಿಯ ಮತ ಪ್ರಮಾಣ ಸುಮಾರು 29% ಕುಸಿದಿದ್ದು,ಹಾಗೆಯೇ  ಆರ್‌ಜೆಡಿಯ ಮತ ಪ್ರಮಾಣ ಸುಮಾರು 19% ಕಡಿಮೆಯಾಗಿದೆ. ಮತದಾನವನ್ನು ನೋಡಿದರೆ, ಕಿಶೋರ್‌ ಅವರು ಆರ್‌ಜೆಡಿಗಿಂತ ಬಿಜೆಪಿಯಿಂದಲೇ ಅತಿ ಹೆಚ್ಚು ಮತಗಳನ್ನು ಸೆಳೆದಿದ್ದಾರೆ. ಇದಕ್ಕಿಂತಲೂ ಮುಖ್ಯವಾಗಿ, ವಿಶ್ವಾಸಾರ್ಹ ರಾಜಕೀಯ ಪರ್ಯಾಯ ದೊರೆತಾಗ, ಜನರು ಜಾತಿ, ಧರ್ಮ, ವ್ಯಕ್ತಿ ಆರಾಧನೆ, ಭಯ, ಹಣ ಮತ್ತು ದ್ವೇಷದ ರಾಜಕೀಯವನ್ನು ಮೀರಿ ಮತ ಚಲಾಯಿಸಬಹುದು ಎಂಬುದನ್ನು ಬಾಂಕಿಪುರ ತೋರಿಸಿಕೊಟ್ಟಿದೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ದಶಕಗಳಿಂದ ಬಿಹಾರದ ಚುನಾವಣೆಗಳು ಐದು ಪ್ರಮುಖ ಅಂಶಗಳ ಸುತ್ತಲೇ ನಡೆಯುತ್ತಿವೆ. ಸವರ್ಣೀಯರಿಗೆ ‘ಜಂಗಲ್ ರಾಜ್’ನ ಭಯ, ಅಲ್ಪಸಂಖ್ಯಾತರಿಗೆ ಬಿಜೆಪಿ ಭಯ, ಜಾತಿ ನಿಷ್ಠೆ, ವ್ಯಕ್ತಿ  ಆರಾಧನೆ ರಾಜಕೀಯ, ಧಾರ್ಮಿಕ ಧ್ರುವೀಕರಣ ಮತ್ತು ಚುನಾವಣೆಯ ಮುನ್ನ ನಡೆಸುವ ಹಣದ ಆಮಿಷಗಳು ಆಡಳಿತ ಮತ್ತು ಅಭಿವೃದ್ಧಿಗಿಂತ ಈಗ ಅಂಶಗಳೇ ಚುನಾವಣಾ ಫಲಿತಾಂಶವನ್ನು ನಿರ್ಧರಿಸುತ್ತಾ ಬಂದಿವೆ.

ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅನೇಕ ಯಶಸ್ವಿ ಚುನಾವಣಾ ತಂತ್ರಗಳ ಹಿಂದಿದ್ದ ಪ್ರಶಾಂತ್ ಕಿಶೋರ್ ವಿಭಿನ್ನ ದಾರಿಯನ್ನು ಆಯ್ಕೆ ಮಾಡಿಕೊಂಡರು. ಅವರು 665 ದಿನಗಳ ಕಾಲ ಬಿಹಾರವನ್ನು ಪಾದಯಾತ್ರೆ ಮೂಲಕ ಸುತ್ತಿ, 1,319 ಪಂಚಾಯಿತಿಗಳ ವ್ಯಾಪ್ತಿಯ 2,679 ಗ್ರಾಮಗಳಿಗೆ ಭೇಟಿ ನೀಡಿದ್ದರು. ತಕ್ಷಣದ ಚುನಾವಣಾ ಗೆಲುವಿನ ಭರವಸೆ ನೀಡುವುದಕ್ಕಿಂತ, ಜನರು ಮತ ಚಲಾಯಿಸುವ ವಿಧಾನವನ್ನೇ ಬದಲಾಯಿಸಲು ಪ್ರಯತ್ನಿಸಿದರು. ವಲಸೆ ನಿಲ್ಲಿಸುವುದು, ಗುಣಮಟ್ಟದ ಶಿಕ್ಷಣ, ಉದ್ಯೋಗ ಸೃಷ್ಟಿ ಮತ್ತು ಬಿಹಾರವನ್ನು ಭಾರತದ ಐದು ಶ್ರೀಮಂತ ರಾಜ್ಯಗಳಲ್ಲೊಂದು ಮಾಡುವ ಕನಸನ್ನು ಜನರ ಮುಂದಿಟ್ಟರು. ಹೀಗೆ ಜನ ಸುರಾಜ್ ಕೇವಲ ಮತ್ತೊಂದು ರಾಜಕೀಯ ಪಕ್ಷವಾಗಿ ಅಲ್ಲ, ಉತ್ತಮ ಆಡಳಿತಕ್ಕಾಗಿ ಹುಟ್ಟಿದ ಜನಾಂದೋಲನವಾಗಿ ರೂಪುಗೊಂಡಿತು.

2025ರ ವಿಧಾನಸಭೆ ಚುನಾವಣೆಗೆ ಮುನ್ನ ಜನ ಸುರಾಜ್ ವೇಗವಾಗಿ ಬೆಳೆಯುತ್ತಿದ್ದಂತೆ ಜನರನ್ನು ಮೂರ್ಖರನ್ನಾಗಿಸಲು, ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಎರಡೂ ತಮ್ಮ ಹಳೆಯ ಚುನಾವಣಾ ತಂತ್ರಗಳನ್ನು ಎಣೆದವು. ಸರ್ಕಾರವು ಪಿಂಚಣಿಯನ್ನು ಹೆಚ್ಚಿಸಿತು, ಉಚಿತ ವಿದ್ಯುತ್ ಘೋಷಿಸಿತು ಮತ್ತು ಚುನಾವಣೆಗೆ ಕೆಲವೇ ದಿನಗಳ ಮುನ್ನ ಸರಿ ಸುಮಾರು 1.25 ಕೋಟಿ ಮಹಿಳೆಯರಿಗೆ 10,000 ರೂ. ಹಣ ನೀಡಿ, ಜೀವಿಕಾ ದೀದಿಗಳ ಮುಖಾಂತರ ನಿತೀಶ್ ಸರ್ಕಾರವು ಮರಳಿ ಬಂದರೆ ಉಳಿದ ರೂ.1,90,000 ಹಣವನ್ನು ನೀಡುವುದಾಗಿ ಭರವಸೆ ನೀಡಿತು. ಮತ್ತೊಂದೆಡೆ, ಪ್ರತಿಪಕ್ಷ ಜಾತಿ ಮತ್ತು ಧಾರ್ಮಿಕ ಸಮೀಕರಣಗಳ ಮೇಲೆ ಹೆಚ್ಚು ಅವಲಂಬಿಸಿತು. ಎನ್‌ಡಿಎ ಮತ್ತೊಮ್ಮೆ ಲಾಲು ಆಡಳಿತದ ವಿರುದ್ಧ ಬಿಂಬಿಸಲಾದ ‘ಜಂಗಲ್ ರಾಜ್’ ಭಯವನ್ನು ಯಶಸ್ವಿಯಾಗಿ ಬಳಸಿಕೊಂಡಿತು. ಇದರ ಪರಿಣಾಮವಾಗಿ ಆಡಳಿತ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಮರಳಿತು ಮತ್ತು ಜನ ಸುರಾಜ್ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ಅನೇಕರಿಗೆ ಕಿಶೋರ್ ಅವರ ರಾಜಕೀಯ ಪಯಣ ಇಲ್ಲಿಗೇ ಮುಗಿದಿದೆ ಎಂಬ ಭಾವನೆ ಮೂಡಿತು.

ಆದರೆ, ಸೋಲನ್ನು ಅವರು ಹೊಸ ಹೋರಾಟದ ಆರಂಭವನ್ನಾಗಿ ಮಾಡಿಕೊಂಡರು. ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ದಿನದಂದು ಒಂದು ದಿನದ ಮೌನ ಉಪವಾಸ ಆಚರಿಸಿ, ಸರ್ಕಾರವು ಜನರಿಗೆ ನೀಡಿದ ಭರವಸೆಗಳು ಈಡೇರುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ ಎಂದು ಸಂಕಲ್ಪ ಮಾಡಿದರು. ನೀಟ್ ವಿದ್ಯಾರ್ಥಿಯ ಹತ್ಯೆ, ಭರತ್ ತಿವಾರಿ ಪೊಲೀಸ್ ಹತ್ಯೆ, ದೆಹಲಿಯಲ್ಲಿ ಬಿಹಾರಿಯ ಹತ್ಯೆ ಸೇರಿದಂತೆ ಯಾವುದೇ ಪ್ರಮುಖ ಸಾರ್ವಜನಿಕ ಸಮಸ್ಯೆ ಎದುರಾದಾಗಲೂ, ಸರ್ಕಾರದ ವಿರುದ್ಧ ಕಿಶೋರ್ ಬೀದಿಗಿಳಿದು ಹೋರಾಡಿದರು. ವಿಧಾನಸಭೆಯ ಹೊರಗೆ ಅವರು ಅತ್ಯಂತ ಪ್ರಬಲ ವಿರೋಧ ಪಕ್ಷದ ಧ್ವನಿಯಾಗಿ ಹೊರಹೊಮ್ಮಿದರು.

ನಿತೀಶ್ ಕುಮಾರ್ ರಾಜೀನಾಮೆ ನೀಡಿ ಸಾಮ್ರಾಟ್ ಚೌಧರಿ ಬಿಜೆಪಿಯ ಮೊದಲ ಮುಖ್ಯಮಂತ್ರಿ ಆದ ಬಳಿಕ, ಕಿಶೋರ್ ಹೊಸ ಸರ್ಕಾರದ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದರು. ಹತ್ಯೆಗಳ ಆರೋಪಗಳು, ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳು, ಸುಳ್ಳು ವಯಸ್ಸಿನ ದಾಖಲೆಗಳು ಹಾಗೂ ತಮ್ಮ ಹೆಸರು ಮತ್ತು ರಾಜಕೀಯ ಗುರುತಿನ ಬದಲಾವಣೆಗಳ ಬಗ್ಗೆ ಅವರು ಸಾಮ್ರಾಟ್ ಚೌಧರಿಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿದರು. ಇದರಿಂದ ಅವರು ವಿಧಾನಸಭೆಯ ಹೊರಗಿನ ಅತ್ಯಂತ ಪ್ರಭಾವಿ ವಿರೋಧ ಪಕ್ಷದ ನಾಯಕನಾಗಿ ಗುರುತಿಸಿಕೊಂಡರು.

ನಿತಿನ್ ನಬಿನ್ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿ ರಾಜ್ಯಸಭೆಗೆ ತೆರಳಿದ ನಂತರ ಬಾಂಕಿಪುರ ಕ್ಷೇತ್ರ ತೆರವಾಗಿತ್ತು. ಈ ಉಪಚುನಾವಣೆ ಕೇವಲ ಒಂದು ಕ್ಷೇತ್ರದ ಚುನಾವಣೆ ಅಲ್ಲ, ಬಿಹಾರದ ಸಾಂಪ್ರದಾಯಿಕ ಮತದಾನದ ಮನಸ್ಥಿತಿಯನ್ನು ಬದಲಾಯಿಸುವ ಅವಕಾಶ ಎಂದು ಪ್ರಶಾಂತ್ ಕಿಶೋರ್ ಮನಗಂಡರು.

ಈ ಬಾರಿ ಅವರ ಚುನಾವಣಾ ಪ್ರಚಾರವೂ ವಿಭಿನ್ನವಾಗಿತ್ತು. ತಮಗೆ ಮತ ನೀಡಿ ಎಂದು ಕೇಳುವುದಕ್ಕಿಂತ, ಬಿಜೆಪಿಯ ಅಹಂಕಾರದ ರಾಜಕೀಯವನ್ನು ತಿರಸ್ಕರಿಸಿ, ಪ್ರಾಮಾಣಿಕತೆ, ಸಾಮರ್ಥ್ಯ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಜನರಲ್ಲಿ ಮನವಿ ಮಾಡಿದರು. ಬಿಹಾರದ ಮತದಾರರು ಬಲವಾದ ಸಂದೇಶ ನೀಡಿದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಬಿಹಾರದ ಆಶಯಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಅವರು ವಾದಿಸಿದರು. ಸಾಂಪ್ರದಾಯಿಕ ರಾಜಕೀಯಕ್ಕಿಂತ ಉತ್ತರದಾಯಿತ್ವದ ರಾಜಕೀಯಕ್ಕೆ ಒತ್ತು ನೀಡಿದ ಅಭಿಯಾನವಾಗಿತ್ತು.

ಈ ಲೇಖನ ಓದಿದ್ದೀರಾ?: ಇಲ್ಲಿ ಹೆಣ್ಣು ಮಕ್ಕಳನ್ನ ದಷ್ಟಪುಷ್ಟವಾಗಿ ಬೆಳೆಸುವುದು ಭದ್ರ ಭವಿಷ್ಯಕ್ಕಾಗಿ ಅಲ್ಲ, ʼಸಂಪಾದನೆʼಗಾಗಿ!

ಬಾಂಕಿಪುರದ ಜನರು ಹೊಸ ತನದ  ರಾಜಕಾರಣಕ್ಕೆ  ಸ್ಪಂದಿಸಿದರು. ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಸಾರ್ವಜನಿಕ ಜೀವನದಿಂದ ಮರೆಯಾಗದೇ ಮರುದಿನವೇ ಜನರ ನಡುವೆ ಬಂದ ನಾಯಕನನ್ನು ಅವರು ಕಂಡರು. ಅವಕಾಶವಾದಿತ್ವಕ್ಕಿಂತ ಹಠವನ್ನು, ಅನುಕೂಲಕ್ಕಿಂತ ಧೈರ್ಯವನ್ನು ಮತ್ತು ಚುನಾವಣಾ ಲೆಕ್ಕಾಚಾರಕ್ಕಿಂತ ಅವರ ನೇರ ನಡೆ – ನುಡಿಗಳನ್ನು ಜನರು ಮೆಚ್ಚಿದರು. ವಿಶ್ವಾಸಾರ್ಹ ರಾಜಕೀಯ ಪರ್ಯಾಯ ದೊರೆತರೆ, ದಶಕಗಳ ಹಳೆಯ ರಾಜಕೀಯ ಲೆಕ್ಕಾಚಾರಗಳನ್ನೂ  ತಲೆಕೆಳಗಾಗಿಸಬಹುದು ಎಂಬುದನ್ನು ಈ ಫಲಿತಾಂಶ ಸಾಬೀತುಪಡಿಸಿದೆ.

ಇದು ಬಿಹಾರದಲ್ಲಿ ದೊಡ್ಡ ರಾಜಕೀಯ ಪರಿವರ್ತನೆಯ ಆರಂಭವೇ ಎಂಬುದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟವಾಗಲಿದೆ. ಆದರೆ ಬಾಂಕಿಪುರ ಒಂದು ಮಹತ್ವದ ಪಾಠವನ್ನು ಕಲಿಸಿದೆ—ಸಾಂಪ್ರದಾಯಿಕ  ರಾಜಕೀಯ ಕೇಂದ್ರಬಿಂದುವಿನಿಂದ ಉತ್ತಮ ಆಡಳಿತದತ್ತ, ಭಯದಿಂದ ಭರವಸೆಯತ್ತ ಬದಲಾಗಿದಾಗ ಮತದಾರರ ವರ್ತನೆಯೂ ಬದಲಾಗುತ್ತದೆ.

ಕರ್ನಾಟಕವೂ ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಇಲ್ಲಿಯೂ ಚುನಾವಣೆಗಳು ಜಾತಿ, ಧರ್ಮ, ಹಣ, ವ್ಯಕ್ತಿ ಆರಾಧನೆ ರಾಜಕೀಯ ಮತ್ತು ಆಡಳಿತ ವಿರೋಧಿ ಅಲೆಯ ಸುತ್ತಲೇ ನಡೆಯುತ್ತಿವೆ. ಮತದಾರರು ಉತ್ತಮ ನಾಯಕರನ್ನು ಆಯ್ಕೆ ಮಾಡುವ ಬದಲು, ಈಗಿರುವ ಪಕ್ಷಗಳ ನಡುವೆ ಕಡಿಮೆ ಕೆಟ್ಟವರನ್ನು ಆಯ್ಕೆ ಮಾಡುವ ಪರಿಸ್ಥಿತಿಯಲ್ಲಿದ್ದಾರೆ. ಬಾಂಕಿಪುರದ ತೀರ್ಪು ಕರ್ನಾಟಕಕ್ಕೂ ಒಂದು ಮಹತ್ವದ ಪ್ರಶ್ನೆಯನ್ನು ಕೇಳುತ್ತದೆ. ಜಾತಿ, ಧರ್ಮ, ಹಣ, ವ್ಯಕ್ತಿ ಆರಾಧನೆ ಮತ್ತು ದ್ವೇಷದ ರಾಜಕೀಯವನ್ನು ಮೀರಿ ನಾವು ಮತ ಚಲಾಯಿಸಬಹುದೇ?

ಸಂಪೂರ್ಣ ರಾಜಕೀಯ ಕ್ರಾಂತಿ ಪಕ್ಷಗಳು  ಬದಲಾದಾಗ ಆರಂಭವಾಗುವುದಿಲ್ಲ. ಮತದಾರರು ಬದಲಾದಾಗ ಆರಂಭವಾಗುತ್ತದೆ. ಬಾಂಕೀಪುರ  ದಂತಹ ಬದಲಾವಣೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿರಬಹುದು. ಈ ಪಾಠ ಬಿಹಾರವನ್ನು ಮೀರಿ ದೇಶಾದ್ಯಂತ ಹರಡಿದರೆ, ಕರ್ನಾಟಕ ಸೇರಿದಂತೆ ಭಾರತದ ರಾಜಕೀಯದ ದಿಕ್ಕನ್ನೇ ಬದಲಾಯಿಸುವ ಶಕ್ತಿ ಅದಕ್ಕಿದೆ

ಪೋಸ್ಟ್ ಹಂಚಿಕೊಳ್ಳಿ:

ಡಾ. ನಿಶ್ಚಿತ್ ಕೆ.ಆರ್
ಡಾ. ನಿಶ್ಚಿತ್ ಕೆ.ಆರ್
ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರು, ಬೆಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಾರಾಷ್ಟ್ರ ಟಿಇಟಿ ಪ್ರಶ್ನೆಪತ್ರಿಕೆ ಸೋರಿಕೆ: ಕೇವಲ 8,000 ರೂ. ಆಸೆಗೆ ಬಿದ್ದು ಶೂಗಳಲ್ಲಿ ಅಡಗಿಸಿ ಪಶ್ನೆಪತ್ರಿಕೆ ಕಳವು!

ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ ಭಾರತ

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್...

ಲಡಾಖ್‌ ಹೋರಾಟಕ್ಕೆ ವರ್ಷ: ಸೆ. 23ರಂದು ಸೋನಮ್ ವಾಂಗ್‌ಚುಕ್ ನೇತೃತ್ವದಲ್ಲಿ 20 ಕಿ.ಮೀ ಪಾದಯಾತ್ರೆ

ಲಡಾಖ್‌ಗೆ ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ವಿಶೇಷ ರಕ್ಷಣೆ ಹಾಗೂ ಪೂರ್ಣ...