ಏರ್ ಇಂಡಿಯಾ ದುರಂತ |ಪೂರ್ಣವಾಗದ ಎಂಜಿನ್ ಪರೀಕ್ಷೆ; ತನಿಖಾ ವರದಿ ಇನ್ನೂ ವಿಳಂಬ ಸಾಧ್ಯತೆ

Date:

ಅಹಮದಾಬಾದ್ ಏರ್ ಇಂಡಿಯಾ (AI-171) ವಿಮಾನ ದುರಂತದ ಅಂತಿಮ ತನಿಖಾ ವರದಿ ಬಿಡುಗಡೆಯು ಒಂದು ವರ್ಷದ ಗಡುವನ್ನು ಮೀರಲಿದೆ. ಅಧಿಕೃತವಾಗಿ ವಿಳಂಬವಾಗಿದೆ ಎಂದು Bloomberg News ವರದಿ ಮಾಡಿದೆ. ಅಪಘಾತಕ್ಕೀಡಾದ ವಿಮಾನದ ಎಂಜಿನ್‌ಗಳ ಪೂರ್ಣ ಪ್ರಮಾಣದ ತಾಂತ್ರಿಕ ಪರೀಕ್ಷೆ ಇನ್ನೂ ಬಾಕಿ ಇರುವುದರಿಂದ ದುರಂತದ ವರದಿ ಇನ್ನೂ ವಿಳಂಬವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

- Advertisement -

ಅಂತಾರಾಷ್ಟ್ರೀಯ ವಿಮಾನಯಾನ ನಿಯಮಗಳ ಪ್ರಕಾರ, ಅಪಘಾತ ನಡೆದ ಒಂದು ವರ್ಷದೊಳಗೆ ಅಂದರೆ ಜೂನ್ 12ರ ಒಳಗೆ ಅಂತಿಮ ವರದಿ ಬರಬೇಕಿತ್ತು. ಆದರೆ ತಾಂತ್ರಿಕ ಸಂಕೀರ್ಣತೆಗಳಿಂದಾಗಿ ಈ ಗಡುವಿನ ಒಳಗೆ ವರದಿ ಬಿಡುಗಡೆಯಾಗಲ್ಲ. ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಈ ವಾರ ತನಿಖೆ ವಿಳಂಬಕ್ಕೆ ಕಾರಣಗಳ ಕುರಿತು ಸ್ಥಿತಿ ವರದಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಬ್ರೆಜಿಲ್‌ನಲ್ಲಿ ʼಲೂಲಾʼ ಐತಿಹಾಸಿಕ ಗೆಲುವು: ನಾಗರಿಕ ಸಂಘಟನೆಗಳು ಚುನಾವಣೆಯ...

ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲೂಲಾ ಡಿ ಸಿಲ್ವಾ ಅವರು ಅತ್ಯಂತ ಐತಿಹಾಸಿಕ ರೀತಿಯಲ್ಲಿ ಮರುಆಯ್ಕೆಯಾಗಿದ್ದಾರೆ. ಅಕ್ಟೋಬರ್ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಅವರು ಬಲಪಂಥೀಯ ಅಭ್ಯರ್ಥಿ...

ರಕ್ತಪಾತಕ್ಕೆ ಬೇಕಿದೆ ಪೂರ್ಣವಿರಾಮ: ಇಸ್ರೇಲ್ ಚುನಾವಣೆಯಲ್ಲಿ ಮೊಳಗಲಿದೆಯೇ ಶಾಂತಿಯ...

ಇಸ್ರೇಲ್ ದೇಶದ ಸಂಸತ್ತನ್ನು ‘ನೆಸೆಟ್’ (Knesset) ಎಂದು ಕರೆಯಲಾಗುತ್ತದೆ. ಇಲ್ಲಿನ ಚುನಾವಣಾ ವ್ಯವಸ್ಥೆಯು ಜಗತ್ತಿನ ಇತರ ದೇಶಗಳಿಗಿಂತ ಭಿನ್ನವಾಗಿದ್ದು, 'ಪ್ರಾತಿನಿಧಿಕ ವ್ಯವಸ್ಥೆ' (Proportional representation) ಅಡಿಯಲ್ಲಿ ನಡೆಯುತ್ತದೆ. ಅಂದರೆ, ಭಾರತದಂತೆ ಇಲ್ಲಿನ ಮತದಾರರು...

ಇದನ್ನು ಓದಿದ್ದೀರಾ? ಏರ್ ಇಂಡಿಯಾ ದುರಂತ: ಶೀಘ್ರ ವಿಚಾರಣೆಗೆ ಸುಪ್ರೀಂ ಸಮ್ಮತಿ

ಎಂಜಿನ್‌ನಲ್ಲಿ ಯಾವುದೇ ಯಾಂತ್ರಿಕ ದೋಷವಿತ್ತೇ, ಹಕ್ಕಿ ಡಿಕ್ಕಿ ಹೊಡೆದಿತ್ತೇ, ಅಥವಾ ಅಪಘಾತದ ಮುನ್ನವೇ ಎಂಜಿನ್ ನಿಷ್ಕ್ರಿಯಗೊಂಡಿತ್ತೇ ಎಂಬುದನ್ನು ಪತ್ತೆಹಚ್ಚಲು ಅತ್ಯಾಧುನಿಕ ಲ್ಯಾಬ್‌ಗಳಲ್ಲಿ ಬಿಡಿಭಾಗಗಳನ್ನು ಬಿಚ್ಚಿ ಪರೀಕ್ಷಿಸಬೇಕಾಗುತ್ತದೆ. ಹಾಗೆಯೇ ಸಾಮಾನ್ಯವಾಗಿ ಬೋಯಿಂಗ್ ಅಥವಾ ಏರ್‌ಬಸ್ ವಿಮಾನಗಳ ಎಂಜಿನ್‌ಗಳನ್ನು ತಯಾರಿಸುವ ಸಂಸ್ಥೆಗಳು ವಿದೇಶಗಳಲ್ಲಿರುತ್ತವೆ. ಹಾಗಾಗಿ, ಎಂಜಿನ್ ಪರೀಕ್ಷೆಗಾಗಿ ಜಾಗತಿಕ ತನಿಖಾ ಸಂಸ್ಥೆಗಳು ಮತ್ತು ತಯಾರಕರ ಲಭ್ಯತೆಯ ಮೇಲೆ ಭಾರತೀಯ ತನಿಖಾಧಿಕಾರಿಗಳು ಅವಲಂಬಿತರಾಗಬೇಕಾಗುತ್ತದೆ. ಇದೇ ತನಿಖೆಯ ವರದಿ ತಡವಾಗುವುದಕ್ಕೆ ಕಾರಣ ಎಂದು ವರದಿಯಾಗಿದೆ.

2025ರ ಜೂನ್‌ನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಫ್ಲೈಟ್ 171 (Boeing 787 Dreamliner) ದುರಂತವು ಇತ್ತೀಚಿನ ವರ್ಷಗಳ ಅತ್ಯಂತ ಭೀಕರ ವಿಮಾನ ಅಪಘಾತಗಳಲ್ಲಿ ಒಂದಾಗಿದೆ. ಲಂಡನ್‌ಗೆ ಹೊರಟಿದ್ದ ಈ ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದು ಪತನಗೊಂಡಿತ್ತು. ಈ ಅಪಘಾತದಲ್ಲಿ ವಿಮಾನದಲ್ಲಿದ್ದ 241 ಮತ್ತು ನೆಲದ ಮೇಲಿದ್ದ 19 ಮಂದಿ ಸೇರಿ ಒಟ್ಟು 260 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಈ ದುರಂತದ ಬಳಿಕ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಬಿಡುಗಡೆ ಮಾಡಿದ್ದ ಪ್ರಾಥಮಿಕ ತನಿಖಾ ವರದಿ ಇಡೀ ವಿಮಾನಯಾನ ಲೋಕವೇ ಬೆಚ್ಚಿಬೀಳುವಂತಹ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿತ್ತು. ವರದಿ ಪ್ರಕಾರ ಎಂಜಿನ್ ಬಲವಿಲ್ಲದೆ ನಿಯಂತ್ರಣ ಕಳೆದುಕೊಂಡ ವಿಮಾನ ಕೇವಲ 32 ಸೆಕೆಂಡುಗಳ ಕಾಲ ಗಾಳಿಯಲ್ಲಿದ್ದು, ನೇರವಾಗಿ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿತ್ತು. ಅಂದರೆ ವಿಮಾನ ರನ್‌ವೇಯಿಂದ ಗಾಳಿಯಲ್ಲಿ ಮೇಲಕ್ಕೆದ್ದ ಕೇವಲ 35 ಸೆಕೆಂಡು ಆಗುವಷ್ಟರಲ್ಲಿ ಈ ಅಪಘಾತ ನಡೆದಿತ್ತು.

ಮೊದಲ ವರದಿಯಲ್ಲಿ ವಿಮಾನದ ಬ್ಲಾಕ್ ಬಾಕ್ಸ್‌ನಲ್ಲಿದ್ದ ಆಡಿಯೋ ಸಂಭಾಷಣೆಯ ಅತ್ಯಂತ ಗಂಭೀರವಾದ ಭಾಗವನ್ನು ಉಲ್ಲೇಖಿಸಲಾಗಿತ್ತು. ಎಂಜಿನ್ ಬಂದ್ ಆದ ತಕ್ಷಣ ಓರ್ವ ಪೈಲಟ್ “ನೀನು ಸ್ವಿಚ್ ಯಾಕೆ ಕಟ್-ಆಫ್ ಮಾಡಿದೆ?” ಎಂದು ಕೇಳಿದರೆ ಇನ್ನೋರ್ವ ಪೈಲಟ್ “ನಾನು ಮಾಡಿಲ್ಲ, ನಾನು ಯಾವುದನ್ನೂ ಮುಟ್ಟಿಲ್ಲ!” ಎಂದು ಹೇಳುವುದು ಕೇಳಿಬಂದಿತ್ತು. ಇಬ್ಬರೂ ಪೈಲಟ್‌ಗಳು ಅನುಭವಿಗಳಾಗಿದ್ದರಿಂದ ಅವರು ಪ್ರಜ್ಞಾಪೂರ್ವಕವಾಗಿ ಈ ತಪ್ಪು ಮಾಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿತ್ತು. ಆದರೆ ಸ್ವಿಚ್‌ಗಳು ಆಫ್ ಆಗಿದ್ದು ಹೇಗೆ ಎಂಬುದು ಮೊದಲ ವರದಿಯಲ್ಲಿ ಬಗೆಹರಿಯದ ಒಗಟಾಗಿಯೇ ಉಳಿಯಿತು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಶಸ್ತ್ರ ಪಡೆಗಳಿಗೆ 2.12 ಲಕ್ಷ ಕೋಟಿ ರೂ. ವೆಚ್ಚದ ಶಸ್ತ್ರಾಸ್ತ್ರ ಖರೀದಿ: ರಕ್ಷಣಾ ಮಂಡಳಿ ಅನುಮೋದನೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು (DAC)...

ಕಲಬುರಗಿ | ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ : ನಾಳೆ ಮತ ಎಣಿಕೆ, ಸಕಲ ಸಿದ್ಧತೆ ಪೂರ್ಣ

ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ನಾಳೆ...

ಭದ್ರಾವತಿ | ಜಯಂತಿಗಳ ರಜೆ ರದ್ದುಪಡಿಸಲು ಸರಕಾರದ ಗಮನ ಸೆಳೆಯುವೆ: ಶಾಸಕಿ ಶಾರದಾ ಪುರ್ಯಾನಾಯ್ಕ್

ಉಪನ್ಯಾಸಕರ ಅಭಿಪ್ರಾಯದಂತೆ ದಾರ್ಶನಿಕರ ಹೆಸರಲ್ಲಿ ನೀಡುವ ರಜೆಗಳನ್ನು ರದ್ದು ಪಡಿಸಿ ಶಾಲಾ...