ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರುವ ಮಾನಹಾನಿಕರ ವಿಷಯಗಳನ್ನು ನಿರ್ಬಂಧಿಸುವಂತೆ ವು ಟೆಕ್ ದೈತ್ಯ ಸಂಸ್ಥೆಗಳಾದ ಎಕ್ಸ್ (ಹಿಂದಿನ ಟ್ವಿಟರ್), ಗೂಗಲ್ ಮತ್ತು ಮೆಟಾಗೆ ಮಹತ್ವದ ಆದೇಶ ನೀಡಿದೆ.
ತೆಲಂಗಾಣದ ಜನ್ವಾಡದಲ್ಲಿರುವ ಕೆರೆ ಭೂಮಿ ಒತ್ತುವರಿ ಆರೋಪಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸುಳ್ಳು ಆರೋಪಗಳು ಹಾಗೂ ಮಾನಹಾನಿಕರ ಪೋಸ್ಟ್‌ಗಳು ಹರಿದಾಡುತ್ತಿವೆ ಎಂದು ಆಕ್ಷೇಪಿಸಿ ಹಾಗೂ ಅವುಗಳ ಪ್ರಸಾರವನ್ನು ತಡೆಯುವಂತೆ ಕೋರಿ ಪವನ್ ಕಲ್ಯಾಣ್ ಅವರು ನ್ಯಾಯಾಲಯದ ಮೊರೆಹೋಗಿದ್ದರು.
ಇದನ್ನು ಓದಿದ್ದೀರಾ? ಒಪ್ಪಿಗೆಯಿಲ್ಲದೆ ಖಾಸಗಿ ಚಿತ್ರಗಳ ಹಂಚಿದರೆ ಎಫ್‌ಐಆರ್: ವಿಕೃತ ಪ್ರವೃತ್ತಿ ವಿರುದ್ಧ ಡಿಜಿಪಿ ಸಲೀಂ ಎಚ್ಚರಿಕೆ
ಈ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ 16ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮೊಹಮ್ಮದ್ ಮೊಯಿನುದ್ದೀನ್ ಅವರು ಜೂನ್ 11ರಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಪವನ್ ಕಲ್ಯಾಣ್ ಅವರ ವರ್ಚಸ್ಸಿಗೆ ಧಕ್ಕೆ ತರುವಂತಹ ಯಾವುದೇ ಹೇಳಿಕೆಗಳು, ಲೇಖನಗಳು, ಆರೋಪಗಳು ಅಥವಾ ವಿಡಿಯೋಗಳನ್ನು ಪ್ರಕಟಿಸುವಂತಿಲ್ಲ, ಮರು-ಪ್ರಕಟಿಸುವಂತಿಲ್ಲ, ಪ್ರಸಾರ ಮಾಡುವಂತಿಲ್ಲ, ಅಪ್‌ಲೋಡ್ ಮಾಡುವಂತಿಲ್ಲ ಅಥವಾ ಪ್ರದರ್ಶಿಸುವಂತಿಲ್ಲ ಎಂದು ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಹಾಗೂ ಅವರ ಪ್ರತಿನಿಧಿಗಳಿಗೆ ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ.
ಇದಕ್ಕೂ ಮುನ್ನ, ಜೂನ್ 10ರಂದು ನ್ಯಾಯಾಲಯವು ಈ ಸಂಬಂಧ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ತರುವಾಯ, ಪವನ್ ಕಲ್ಯಾಣ್ ಅವರ ಮನವಿಯ ಮೇರೆಗೆ ಮಾನಹಾನಿಕರ ವಿಷಯಗಳನ್ನು ಹೊಂದಿರುವ ನಿರ್ದಿಷ್ಟ ಆನ್‌ಲೈನ್ ಲಿಂಕ್‌ಗಳು ಹಾಗೂ ಯುಆರ್‌ಎಲ್ (URLs) ಗಳನ್ನು ಅಳವಡಿಸಿ ನ್ಯಾಯಾಲಯವು ತನ್ನ ಆದೇಶವನ್ನು ಮಾರ್ಪಡಿಸಿ ನಿರ್ಬಂಧ ಹೇರಿದೆ. ಆಧಾರರಹಿತ ಆರೋಪಗಳ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನಗಳಿಗೆ ನ್ಯಾಯಾಲಯದ ಈ ಆದೇಶದ ಮೂಲಕ ತಡೆ ಹಾಕಲಾಗಿದೆ.




