ಕೇವಲ 5 ದಿನಗಳಲ್ಲಿ 1 ಕೋಟಿ ಇನ್‌ಸ್ಟಾ ಫಾಲೋವರ್ಸ್: ‘ಕಾಕ್ರೋಚ್ ಜನತಾ ಪಾರ್ಟಿ’ ಮುಂದೆ ಮಂಡಿಯೂರಿದ ಬಿಜೆಪಿ!

Date:

ಭಾರತೀಯ ರಾಜಕೀಯ ಇತಿಹಾಸ ಹಾಗೂ ಸಾಮಾಜಿಕ ಜಾಲತಾಣಗಳ ಲೋಕದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ನಿರುದ್ಯೋಗಿ ಯುವಜನತೆಯ ಆಕ್ರೋಶದ ಸಂಕೇತವಾಗಿ ಕೇವಲ ಐದು ದಿನಗಳ ಹಿಂದಷ್ಟೇ ಹುಟ್ಟಿಕೊಂಡ ವಿಡಂಬನಾತ್ಮಕ ‘ಕಾಕ್ರೋಚ್ ಜನತಾ ಪಾರ್ಟಿ’ (CJP), ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 1 ಕೋಟಿ ಫಾಲೋವರ್ಸ್ ಪಡೆಯುವ ಮೂಲಕ ಆಡಳಿತಾರೂಢ ಬಿಜೆಪಿಯ ಅಧಿಕೃತ ಖಾತೆಯನ್ನೂ ಹಿಂದಿಕ್ಕಿ ಹೊಸ ದಾಖಲೆ ಬರೆದಿದೆ.

- Advertisement -

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಇತ್ತೀಚೆಗೆ ವಿಚಾರಣೆಯೊಂದರ ವೇಳೆ, ನಕಲಿ ಪದವಿ ಹೊಂದಿರುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಟಿಐ ಕಾರ್ಯಕರ್ತರ ಸೋಗಿನಲ್ಲಿ ಎಲ್ಲರನ್ನೂ ಟೀಕಿಸುವ ನಿರುದ್ಯೋಗಿ ಯುವಕರನ್ನು “ಜಿರಳೆಗಳು” ಮತ್ತು “ಪರಾವಲಂಬಿಗಳು” (Parasites) ಎಂದು ಕರೆದಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. (ನಂತರ ತಾವು ಆ ಮಾತನ್ನು ಕೇವಲ ನಕಲಿ ಪದವೀಧರರಿಗೆ ಹೇಳಿದ್ದಾಗಿ ಅವರು ಸ್ಪಷ್ಟನೆ ನೀಡಿದ್ದರು). ಆದರೆ, ಈ ಹೇಳಿಕೆಯನ್ನೇ ತಮ್ಮ ಅಸ್ತ್ರವಾಗಿಸಿಕೊಂಡ ಸಾಮಾಜಿಕ ಜಾಲತಾಣಗಳ ಯುವಪಡೆ, ಮೇ 16ರಂದು ಅಭಿಜೀತ್ ಡಿಪ್ಕೆ ಎಂಬುವವರ ನೇತೃತ್ವದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ವಿಡಂಬನಾತ್ಮಕ ಆನ್‌ಲೈನ್ ಪಕ್ಷವನ್ನು ಹುಟ್ಟುಹಾಕಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಡಲಿಗೆ ಲಕ್ಷಾಂತರ ಬಂಡವಾಳ, ಗಡಿಯಲ್ಲಿ ದಂಡ: ಕೇಳುವವರಿಲ್ಲ ಕರಾವಳಿ...

ಸಮುದ್ರದ ಅಲೆಗಳ ನಡುವೆ ಜೀವದ ಹಂಗು ತೊರೆದು, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಮೀನುಗಾರಿಕೆಗೆ ತೆರಳುವ ಮೀನುಗಾರರ ಬದುಕು ಈಗ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಡೆ ಸಮುದ್ರದ ಅಪಾಯ, ಮತ್ತೊಂದು ಕಡೆ...

ರಾಜಕೀಯದ ಅಂಧಾನುಸರಣೆ ಮತ್ತು ಮನೋವಿಜ್ಞಾನ — ಮೋದಿ ಆಡಳಿತ...

ರಾಜಕೀಯ ನಾಯಕನ ನಿರ್ಧಾರವನ್ನು ಪ್ರಶ್ನಿಸಿದರೆ ತನ್ನದೇ ಗುಂಪಿನವರು ವಿರೋಧಿಸಬಹುದು, ಅಪಹಾಸ್ಯ ಮಾಡಬಹುದು ಅಥವಾ ತನ್ನ ರಾಜಕೀಯ ನಿಷ್ಠೆ, ದೇಶಪ್ರೇಮ ಹಾಗೂ ಧರ್ಮನಿಷ್ಠೆಯ ಬಗ್ಗೆ ಅನುಮಾನ ವ್ಯಕ್ತಪಡಿಸಬಹುದು ಎಂಬ ಭಯದಿಂದ ಕೆಲವರು ಮೌನವಾಗಿರಬಹುದು. ಇನ್ನೂ...

ವೀರಪ್ಪ ಮೊಯ್ಲಿ ಹೇಳಿಕೆ- ಕಾಂಗ್ರೆಸ್‌ನ ರಾಜಕೀಯ ನಿರ್ಧಾರಗಳ ನೆರಳಲ್ಲಿ...

ಮೊಯ್ಲಿ ಅವರ ಹೇಳಿಕೆಯ ಮತ್ತೊಂದು ಪ್ರಮುಖ ಭಾಗ ಪಕ್ಷದ ಆಂತರಿಕ ಸುಧಾರಣೆಗೆ ಸಂಬಂಧಿಸಿದೆ. ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಪಕ್ಷವನ್ನು ಭವಿಷ್ಯದ ರಾಜಕೀಯ ಸವಾಲುಗಳಿಗೆ ಸಿದ್ಧಗೊಳಿಸಲು ಮಹತ್ವದ ಬದಲಾವಣೆಗಳನ್ನು ತರಲು ಬಯಸಿದ್ದರು;...

ಮೇ 21ರ ವೇಳೆಗೆ @cockroachjantaparty ಇನ್‌ಸ್ಟಾಗ್ರಾಮ್ ಖಾತೆಯು 10 ಮಿಲಿಯನ್ ಬೆಂಬಲಿಗರನ್ನು ಸಂಪಾದಿಸಿದೆ. ಈ ಮೂಲಕ 8.7 ಮಿಲಿಯನ್(87 ಲಕ್ಷ) ಫಾಲೋವರ್ಸ್ ಹೊಂದಿರುವ ಬಿಜೆಪಿಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು (@bjp4india) ಇದು ಹಿಂದಿಕ್ಕಿದೆ. ಸದ್ಯ 13.2 ಮಿಲಿಯನ್ (1.3 ಕೋಟಿ) ಫಾಲೋವರ್ಸ್ ಹೊಂದಿರುವ ಕಾಂಗ್ರೆಸ್ (@incindia) ಮಾತ್ರ ಸಿಜೆಪಿಗಿಂತ ಮುಂದಿದೆ. ಕೇವಲ 5 ದಿನಗಳಲ್ಲಿ ಮೀಮ್‌ಗಳು, ವಿಡಂಬನೆ ಹಾಗೂ ಯುವಕರ ಆಕ್ರೋಶದ ಮೂಲಕವೇ ಈ ಪಕ್ಷ ಇಷ್ಟೊಂದು ದೊಡ್ಡ ಮಟ್ಟದ ಬೆಂಬಲ ಗಳಿಸಿರುವುದು ಎಲ್ಲರ ಹುಬ್ಬೇರಿಸಿದೆ.

ಇದನ್ನು ಓದಿದ್ದೀರಾ? ಜಿಮ್ನಾಸ್ಟಿಕ್ ಹಗ್ಗದ ಕುಣಿಕೆ, ದೇಹದ ಮೇಲೆ ಗಾಯದ ಗುರುತು: ತ್ವಿಶಾ ಸಾವಿನ ಸುತ್ತ ಅನುಮಾನದ ಹುತ್ತ

ತಮ್ಮನ್ನು ತಾವು “ಸೋಮಾರಿಗಳ ಮತ್ತು ನಿರುದ್ಯೋಗಿಗಳ ಧ್ವನಿ” ಎಂದು ಕರೆದುಕೊಂಡಿರುವ ಈ ಪಕ್ಷದ ಉದ್ದೇಶ ಕೇವಲ ಹಾಸ್ಯಕ್ಕಷ್ಟೇ ಸೀಮಿತವಾಗಿಲ್ಲ. ಬದಲಾಗಿ, ನಿರುದ್ಯೋಗ, ಹಣದುಬ್ಬರ, ಎನ್‌ಇಇಟಿ (NEET) ಪರೀಕ್ಷೆಯ ಅಕ್ರಮಗಳು, ಸಿಬಿಎಸ್‌ಇ ಮರುಮೌಲ್ಯಮಾಪನ ಶುಲ್ಕದ ಸುಲಿಗೆ ಹಾಗೂ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ತೀಕ್ಷ್ಣವಾಗಿ ಧ್ವನಿ ಎತ್ತುತ್ತಿದೆ.

ಈ ಆನ್‌ಲೈನ್ ಕ್ರಾಂತಿಗೆ ಕೇವಲ ಯುವಜನತೆ ಮಾತ್ರವಲ್ಲದೆ, ಪ್ರಮುಖ ರಾಜಕೀಯ ನಾಯಕರು ಕೂಡ ಧ್ವನಿಗೂಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಕೀರ್ತಿ ಆಜಾದ್ ಅವರು ಈ ವಿಡಂಬನಾತ್ಮಕ ಪಕ್ಷದ ಸದಸ್ಯರಾಗಲು ಸಾಮಾಜಿಕ ಜಾಲತಾಣಗಳಲ್ಲೇ ಬಹಿರಂಗವಾಗಿ ಇಚ್ಛೆ ವ್ಯಕ್ತಪಡಿಸಿದ್ದು, ಈ ಚಳವಳಿಗೆ ಮತ್ತಷ್ಟು ಬಲ ತುಂಬಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2019ರ ಬಳಿಕ ಲಡಾಖ್‌ನಲ್ಲಿ ಮೊದಲ ಪಂಚಾಯತ್, ನಗರಸಭೆ ಚುನಾವಣೆ: ‘ಗ್ಯಾನು ಮಾದರಿ’ ಇಲ್ಲೂ ಅನ್ವಯ ಎಂದ ನಾಯಕರು!

ಸಂವಿಧಾನದ 370ನೇ ವಿಧಿ ರದ್ದತಿ ಮತ್ತು 2019ರಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ...

Vibe ಸಮೀಕ್ಷೆ: ಯೂಪಿಯಲ್ಲಿ ಮತ್ತಷ್ಟು ಕುಸಿಯುವುದೇ ಬಿಎಸ್‌ಪಿ; ಮಾಯಾವತಿ ಪಕ್ಷ ಕುಸಿದಷ್ಟೂ ಬಿಜೆಪಿಗೆ ನಷ್ಟ

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ ರಾಜ್ಯದಲ್ಲಿ...

ಅಕ್ರಮ ಮಾದಕವಸ್ತು ಸಾಗಣೆ ಜಾಲ ಭೇದಿಸಿದ NCB; ನಾಲ್ವರ ಬಂಧನ!

ರಾಷ್ಟ್ರ ರಾಜಧಾನಿ ದೆಹಲಿಯಿಂದ ಕಾಶ್ಮೀರ ಕಣಿವೆಗೆ ಅಕ್ರಮವಾಗಿ ಔಷಧೀಯ ಮಾದಕವಸ್ತುಗಳನ್ನು ಪೂರೈಸುತ್ತಿದ್ದ...

ಫೇರ್‌ನೆಸ್ ಕ್ರೀಮ್‌ನಲ್ಲಿ ಅಪಾಯಕಾರಿ ಪ್ರಮಾಣದ ಪಾದರಸ: 17ರ ಬಾಲಕಿಯ ಮೂತ್ರಪಿಂಡಕ್ಕೆ ಗಂಭೀರ ಹಾನಿ

ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳ ಪ್ರಚಾರದ ವಿಡಿಯೊಗಳನ್ನು ನಂಬಿ ಆನ್‌ಲೈನ್ ಮೂಲಕ ಖರೀದಿಸಿದ...