ಭ್ರಷ್ಟಾಚಾರ | ಮಾಜಿ ಪೊಲೀಸ್ ಅಧಿಕಾರಿಯ 53 ಕೋಟಿ ರೂ. ಆಸ್ತಿ ಜಪ್ತಿ!

Date:

ಭ್ರಷ್ಟಾಚಾರದ ವಿರುದ್ಧದ ಕಾರ್ಯಾಚರಣೆಯಲ್ಲಿ, ಜಾರಿ ನಿರ್ದೇಶನಾಲಯವು (ಇಡಿ) ಅಸ್ಸಾಂ ಪೊಲೀಸ್ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಸುಮಾರು 53 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂನ ಮಾಜಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿ) ಪ್ರಶಾಂತ ಕುಮಾರ್ ದತ್ತಾ ವಿರುದ್ಧ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

- Advertisement -

ದತ್ತಾ ಅವರು ಸರ್ಕಾರಿ ಸೇವೆಯಲ್ಲಿದ್ದಾಗ (1992 ರಿಂದ 2019), ತಮ್ಮ ಕಾನೂನುಬದ್ಧ ಆದಾಯದ ಮೂಲಗಳಿಗೆ ಹೊಂದಿಕೆಯಾಗದ ರೀತಿಯಲ್ಲಿ ಭಾರೀ ಪ್ರಮಾಣದ ಆಸ್ತಿಯನ್ನು ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೆಣ್ಣು-ಹಣ-ಚಾರಣ ಹಗರಣ: ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ...

ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ ಜಾಲ ಮತ್ತು ಭದ್ರತಾ ಆರೋಪಗಳು ಜಾಗತಿಕ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸಿವೆ. ತಂತ್ರಜ್ಞಾನ ದೈತ್ಯರ ಒಳಸುಳಿಗಳೇನು? ಭಾರತದ ಡಿಜಿಟಲ್ ಹಾಗೂ ಸೆಮಿಕಂಡಕ್ಟರ್ ಭವಿಷ್ಯಕ್ಕೆ...

ಹೊರಗೆ ‘ರಾಮ’-ಒಳಗೆ ‘ನಾಥೂರಾಮ’: ಗಾಂಧೀಜಿಯವರ ತಾತ್ವಿಕತೆಯ ಮುಂದೆ ಬಲಪಂಥೀಯ...

ಗಾಂಧೀಜಿಯವರನ್ನು ವಿರೋಧಿಸುವ ರಾಜಕೀಯ ಪ್ರಯತ್ನಗಳು ಅವರ ವ್ಯಕ್ತಿತ್ವವನ್ನು ಕುಗ್ಗಿಸುವ ಬದಲು, ಅವರ ಆದರ್ಶಗಳ ಪ್ರಸ್ತುತತೆಯನ್ನು ಮತ್ತಷ್ಟು ಮುನ್ನೆಲೆಗೆ ತರುತ್ತಿವೆ. ಸತ್ಯ, ಅಹಿಂಸೆ, ಮಾನವೀಯತೆ, ಸಾಮಾಜಿಕ ಸಮಾನತೆ ಮತ್ತು ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳು ಇಂದಿಗೂ...

ಎಲ್ಲವನ್ನೂ ಕಣ್ಣುಮುಚ್ಚಿ ಪಾಲಿಸುವ ವಿಭೀಷಣನೆ ಈ ಸಮಾಜಕ್ಕೆ ಸೂಕ್ತ,...

ರಾಮಾಯಣವನ್ನು ಗೌರವಿಸುವ ನಾವು ರಾವಣನ ದೃಷ್ಟಿಕೋನದಿಂದಲೂ ಕಥೆಯನ್ನು ಓದಬೇಕು. ಈ ಕಾಲಕ್ಕೆ ರಿಟೆಲ್ಲಿಂಗ್ಸ್, ಕೌಂಟರ್ ನರೇಟಿವ್ಸ್ ಹಾಗೂ ಹ್ಯೂಮನೈಸಿಂಗ್ ಸ್ಟೋರಿಸ್ ಅಗತ್ಯತೆ ಬಹಳವಾಗಿದೆ. ಶಿವ ನಮ್ಮ ಅಚ್ಚುಮೆಚ್ಚಿನ ದೇವನಾಗಿದ್ದ. ಅವನನ್ನ ನಾವು ಅತಿಯಾಗಿ ಪ್ರೀತಿಸುತಿದ್ದೆವು....

ಜಪ್ತಿಯಾದ ಸ್ವತ್ತುಗಳಲ್ಲಿ ಅಸ್ಸಾಂನ ಗುವಾಹಟಿಯ ಪಲ್ಟನ್ ಬಜಾರ್‌ನಲ್ಲಿರುವ ಹೋಟೆಲ್ ಭಾರ್ಗವ್ ಮತ್ತು ಭಾರ್ಗವ್ ಇನ್, ಲಖ್ರಾದಲ್ಲಿರುವ ಹೋಟೆಲ್ ಭಾರ್ಗವ್, ಗಾರ್ಚುಕ್‌ನ ಬೆಟ್ಕುಚಿಯಲ್ಲಿರುವ ಭಾರ್ಗವ್ ಗ್ರಾಂಡ್ ಹೋಟೆಲ್‌ಗಳು ಹಾಗೂ ಮುಂಬೈನಲ್ಲಿರುವ ಎರಡು ಭವ್ಯ ವಸತಿ ಕಟ್ಟಡಗಳು ಸೇರಿವೆ.

ಈ ಲೇಖನ ಓದಿದ್ದೀರಾ?: ಇಂದಿರಾ ತಿವಿದರೆ ನೋವೇ? ಮೋದಿ ತಿವಿದರದು ಹೂವೆ?

ಪ್ರಶಾಂತ ಕುಮಾರ್ ದತ್ತಾ ಅವರು ಕೇವಲ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಮಾತ್ರವಲ್ಲದೆ, ಅಸ್ಸಾಂ ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ನೇಮಕಾತಿ ಹಗರಣಗಳಲ್ಲಿ ಒಂದಾದ ‘ಅಸ್ಸಾಂ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ’ ಪ್ರಕರಣದ ಮುಖ್ಯ ಆರೋಪಿಯೂ ಆಗಿದ್ದಾರೆ. ಈ ಗಂಭೀರ ಭ್ರಷ್ಟಾಚಾರದ ಆರೋಪಗಳು ಕೇಳಿಬಂದ ತಕ್ಷಣವೇ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿತ್ತು.

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಹಲವು ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದ ದತ್ತಾ ಅವರನ್ನು, 2020ರ ಅಕ್ಟೋಬರ್‌ನಲ್ಲಿ ಭಾರತ-ನೇಪಾಳ ಗಡಿಯ ಬಳಿ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದರು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​’ಸಣ್ಣಗಿದ್ದೀವಿ, ನಮಗೇನೂ ಆಗಲ್ಲ’ ಎನ್ನುವ ನಿರ್ಲಕ್ಷ್ಯ ಬೇಡ: ಕಡಿಮೆ ತೂಕವಿದ್ದರೂ ಹೃದಯಾಘಾತದ ಆತಂಕ!

ಬೊಜ್ಜು (obesity) ಹಾಗೂ ಅಧಿಕ ರಕ್ತದೊತ್ತಡ (hypertension) ಹೊಂದಿರುವವರು ಹೆಚ್ಚಿನ ಆರೋಗ್ಯದ...

ಈ ದಿನ ಸಂಪಾದಕೀಯ | ಬೆಳಕಿನ ಹಬ್ಬ ತರದಿರಲಿ ಹಲವರ ಬದುಕಿಗೆ ಕತ್ತಲೆ

ಅರಿವು ಹಾಗೂ ಅದರ ಸಂಕೇತವಾದ ಬೆಳಕಿನ ವಿಸ್ತರಣೆ ಆಗಬೇಕಿದ್ದ ದೀಪಾವಳಿಯು ಪ್ರತಿಷ್ಠೆಗೆ...

ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು; ಎಲ್ಲಾ ಆರ್ಥಿಕ ಲೆಕ್ಕಪತ್ರ ಸಾರ್ವಜನಿಕಗೊಳಿಸಲು ಜೈರಾಮ್ ರಮೇಶ್ ಆಗ್ರಹ

ಅಯೋಧ್ಯೆಯ ರಾಮಮಂದಿರ ಕಾಣಿಕೆ ಮತ್ತು ದೇಣಿಗೆ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ...

ದೇಶದ ಜಲಾಶಯಗಳ ಸಂಗ್ರಹ ಕುಸಿತ; ಆಹಾರ, ವಿದ್ಯುತ್ ಉತ್ಪಾದನೆಯ ಮೇಲೆ ಭಾರೀ ಹೊಡೆತ- ಕಾದಿವೆಯೇ ಕೆಟ್ಟ ದಿನಗಳು?

ನೈರುತ್ಯ ಮುಂಗಾರಿನ ತೀವ್ರ ಅಭಾವದಿಂದಾಗಿ ದೇಶದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ...