ದೆಹಲಿ ಅಂತಾರಾಷ್ಟ್ರೀಯ AI ಸಮ್ಮೇಳನ; ಪಂಚತಾರಾ ಹೋಟೆಲ್ ಬಾಡಿಗೆ 10 ಪಟ್ಟು ದುಬಾರಿ

Date:

ದೆಹಲಿಯಲ್ಲಿ 2026ರ ಫೆಬ್ರವರಿ 16 ರಿಂದ 20ರವರೆಗೆ ‘ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್-2026’ (India AI Impact Summit 2026) ಎಂಬ ಅಂತಾರಾಷ್ಟ್ರೀಯ AI ಶಿಖರ ಸಮ್ಮೇಳನ ನಡೆಯಲಿದೆ. ಭಾರತದ ಇತಿಹಾಸದಲ್ಲೇ ಅತಿ ದೊಡ್ಡ AI ಸಮ್ಮೇಳನವೆಂದೂ ಪರಿಗಣಿಸಲಾಗಿದೆ. ಈ ಸಮ್ಮಿಟ್‌ನಲ್ಲಿ ಅಂತಾರಾಷ್ಟ್ರೀಯ ನಾಯಕರು ಭಾಗಿಯಾಗಲಿದ್ದಾರೆ. ಈ ಸಂದರ್ಭವನ್ನು ಬಳಸಿಕೊಳ್ಳಲು ಮುಂದಾಗಿರುವ ಹೋಟೆಲ್‌ ಉದ್ಯಮಗಳು ದುಪ್ಪಟ್ಟು ಹಣ ಗಳಿಕೆಗೆ ಬಂದಾಗಿವೆ. ಪಂಚತಾರಾ (ಫೈವ್‌ ಸ್ಟಾರ್) ಹೋಟೆಲ್‌ಗಳ ಕೊಠಡಿಗಳ ಬಾಡಿಗೆಗಳು 10ರಿಂದ 12 ಪಟ್ಟು ಹೆಚ್ಚಾಗಿವೆ.

- Advertisement -

ಸಮ್ಮೇಳನದಲ್ಲಿ ಸುಂದರ್ ಪಿಚೈ (ಗೂಗಲ್ ಸಿಇಒ), ಬಿಲ್ ಗೇಟ್ಸ್, ಸ್ಯಾಮ್ ಆಲ್ಟ್‌ಮನ್ (ಓಪನ್‌ಎಐ), ಜೆನ್ಸನ್ ಹುವಾಂಗ್ (ಎನ್‌ವಿಡಿಯಾ), ಆರ್ಥರ್ ಮೆನ್ಷ್ (ಮಿಸ್ಟ್ರಲ್ AI) ಸೇರಿದಂತೆ 100ಕ್ಕೂ ಹೆಚ್ಚು ದೇಶಗಳ 35,000ಕ್ಕೂ ಅಧಿಕ ಪ್ರಮುಖ ಟೆಕ್ ನಾಯಕರು, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದು ಭಾರತವನ್ನು ಜಾಗತಿಕ AI ನಾಯಕತ್ವದ ಕೇಂದ್ರವನ್ನಾಗಿ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಬೃಹತ್ ಸಮ್ಮೇಳನವನ್ನು ದೆಹಲಿಯ ಹೋಟೆಲ್‌ ಉದ್ಯಮಗಳಿಗೆ ಅಕ್ಷಯ ಪಾತ್ರೆಯನ್ನಾಗಿ ನೋಡುತ್ತಿವೆ. ಕೊಠಡಿ ಬಾಡಿಗೆಗಳನ್ನು ಮನಸೋಯಿಚ್ಛೆ ಹೆಚ್ಚಿಸಿವೆ. ಪಂಚತಾರಾ ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ, ಒಂದು ದಿನಕ್ಕೆ 20,000ರಿಂದ 40,000 ರೂ. ಇದ್ದ ಸಾಧಾರಣ ಕೊಠಡಿಗಳ ಬಾಡಿಗೆ ಈಗ, 50,000 ರೂ.ಗಳಿಂದ 25 ಲಕ್ಷ ರೂ.ಗಳವರೆಗೆ ಏರಿಕೆಯಾಗಿದೆ.

* ತಾಜ್ ಪ್ಯಾಲೇಸ್ನಲ್ಲಿ ಪ್ರೆಸಿಡೆನ್ಷಿಯಲ್ ಸೂಟ್ ಸಾಮಾನ್ಯವಾಗಿ ₹2.37 ಲಕ್ಷ ಇದ್ದರೆ, ಸಮ್ಮೇಳನದ ಸಮಯದಲ್ಲಿ 30 ಲಕ್ಷ ರೂ.ಗೆ ಏರಿಕೆಯಾಗಿದೆ.
* ದಿ ಒಬೆರಾಯ್ನ ಲಕ್ಸರಿ ಸೂಟ್‌ಗಳು ಸಾಮಾನ್ಯವಾಗಿ 4 ಲಕ್ಷ ರೂ. ಇದ್ದರೆ, ಈಗ 25 ಲಕ್ಷ ರೂ.ಗೆ ಏರಿದೆ.
* ದಿ ಲೀಲಾ ಪ್ಯಾಲೇಸ್, ಐಟಿಸಿ ಮೌರ್ಯ, ದಿ ಇಂಪೀರಿಯಲ್ ಮುಂತಾದ ಹೋಟೆಲ್‌ಗಳಲ್ಲಿಯೂ ಸಾಧಾರಣ ಕೊಠಡಿಗಳು 1 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಏರಿವೆ.

ಈ ಲೇಖನ ಓದಿದ್ದೀರಾ?: ಮೇಡಿಹಾಳ ಗ್ರಾಮದಲ್ಲಿ ಅವೈಜ್ಞಾನಿಕ ಗಣಿಗಾರಿಕೆ: ರೈತರ ಬೆಳೆ-ಮನೆಗಳಿಗೆ ಕಲ್ಲಿನ ಮಳೆ, ಧೂಳಿನ ಪರದೆ

ಈ ದರ ಏರಿಕೆಯು ಸಮ್ಮೇಳನದ ಸಮಯದಲ್ಲಿ (ವಿಶೇಷವಾಗಿ ಫೆಬ್ರವರಿ 18-20) ಅತಿ ಹೆಚ್ಚಾಗಿದ್ದು, ಸಾಮಾನ್ಯ ದಿನಗಳಿಗೆ ಹೋಲಿಸಿದರೆ 6ರಿಂದ 15 ಪಟ್ಟು ಹೆಚ್ಚಳ ಕಂಡುಬಂದಿದೆ. ಟ್ರಾವೆಲ್ ಪೋರ್ಟಲ್‌ಗಳಾದ ಮೇಕ್‌ಮೈಟ್ರಿಪ್, ಇಕ್ಸಿಗೋ ಮುಂತಾದವುಗಳಲ್ಲಿ ಈ ದರಗಳು ಪ್ರತಿಬಿಂಬಿಸುತ್ತಿವೆ.

ಈ ಭರ್ಜರಿ ಏರಿಕೆಯು ಹೋಟೆಲ್‌ಗಳಿಗೆ ದೊಡ್ಡ ಲಾಭ ತರುತ್ತಿದ್ದರೂ, ಸಾಮಾನ್ಯ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಆಘಾತಕಾರಿಯಾಗಿದೆ. ಕೆಲವರು ಹೋಟೆಲ್ ದರಗಳ ಮೇಲೆ ಮಿತಿ ಹಾಕಬೇಕೆಂದು ಒತ್ತಾಯಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಪದ್ಮಭೂಷಣ ಸಣ್ಣ ವಿಷಯ, ಅವರನ್ನೇ ಪಿಎಂ ಮಾಡಿ: ಗ್ಯಾನೇಶ್‌ರನ್ನು ಹೊಗಳಿಸಿ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ತಿರುಗೇಟು

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ಪಶ್ಚಿಮ...

ನಾಗಾಲ್ಯಾಂಡ್‌ನಲ್ಲಿ ಕಳ್ಳಭಟ್ಟಿ ಹಾವಳಿ; 19 ಮಂದಿ ಬಲಿ, 3 ಸಾವಿರ ಬಾಟಲಿ ವಶ

ಕಳ್ಳಭಟ್ಟಿ ಸೇವಿಸಿ ಕನಿಷ್ಠ 19 ಮಂದಿ ಮೃತಪಟ್ಟಿರುವ ಆಘಾತಕಾರಿ ಘಟನೆ ನಾಗಾಲ್ಯಾಂಡ್‌ನಲ್ಲಿ...

CEC ಗ್ಯಾನೇಶ್‌ ಕುಮಾರ್‌ ವಿರುದ್ಧ ತನಿಖೆಗೆ ಸುಪ್ರೀಂನಲ್ಲಿ ಅರ್ಜಿ; ಆಯೋಗದ ಡೇಟಾಬೇಸ್‌ ಆಡಿಟ್‌ಗೆ ಮನವಿ

ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ವಿರುದ್ಧದ ಆರೋಪಗಳ ತನಿಖೆಗೆ...