ಅರುಣಾಚಲ ಪ್ರದೇಶದ ಲೋವರ್ ಸಿಯಾಂಗ್ ಜಿಲ್ಲೆಯ 14 ಹಳ್ಳಿಗಳಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತಗಳು ಉಂಟಾಗಿದ್ದು, 3,100 ಕ್ಕೂ ಅಧಿಕ ಮಂದಿ ಮೇಲೆ ಪರಿಣಾಮ ಬೀರಿವೆ. ಈ ವಿಪತ್ತಿನಿಂದ ನಾರಿ-ಕೊಯು ವಿಧಾನಸಭಾ ಕ್ಷೇತ್ರಾದ್ಯಂತ ಭತ್ತದ ಕೃಷಿ ಹೊಲಗಳು, ಖಾಸಗಿ ಆಸ್ತಿ ಮತ್ತು ಸಾರ್ವಜನಿಕ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯುಂಟಾಗಿರುವುದನ್ನು ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ(ಡಿಐಪಿಆರ್‌ಒ) ಆಗಸ್ಟಿ ಜಮೋಹ್ ದೃಢಪಡಿಸಿದ್ದಾರೆ.
ಹಲವಾರು ಹಳ್ಳಿಗಳಲ್ಲಿ, ರಸ್ತೆ ಸಂಪರ್ಕವು ಸಂಪೂರ್ಣವಾಗಿ ಕಡಿತಗೊಂಡಿದ್ದು, ಸುಮಾರು 500 ಮನೆಗಳು ಪ್ರತ್ಯೇಕವಾಗಿವೆ. ಅದೃಷ್ಟವಷಾತ್ ಈವರೆಗೆ ಯಾವುದೇ ಸಾವುನೋವುಗಳು ಅಥವಾ ಗಾಯಗಳ ವರದಿಯಾಗಿಲ್ಲ. ಜಿಲ್ಲಾಡಳಿತ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್(ಐಟಿಬಿಪಿ), ಗಡಿ ರಸ್ತೆಗಳ ಸಂಸ್ಥೆ(ಬಿಆರ್‌ಒ), ರಾಜ್ಯ ಪೊಲೀಸರು ಮತ್ತು ಸ್ಥಳೀಯ ಸ್ವಯಂಸೇವಕರು ವ್ಯಾಪಕ ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ. ಹಾನಿಗೊಳಗಾದ ರಸ್ತೆ ಸಂಪರ್ಕಗಳನ್ನು ಪುನಃಸ್ಥಾಪಿಸಲು ಮತ್ತು ಪೀಡಿತ ಪ್ರದೇಶಗಳನ್ನು ಮರುಸಂಪರ್ಕಿಸಲು ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಂಧು ಜಲ ಒಪ್ಪಂದ: ಭಾರತಕ್ಕೆ ‘ಕೈ ಕತ್ತರಿಸುವ’ ಬೆದರಿಕೆ ಹಾಕಿದ ಪಾಕ್ ಸಚಿವ
ಪ್ರವಾಹದ ನೀರಿನಿಂದ ಹಲವಾರು ವಾಹನಗಳು ಕೊಚ್ಚಿ ಹೋಗಿವೆ. ಹಂದಿಗಳು, ಕೋಳಿಗಳು ಸೇರಿದಂತೆ ಹಲವಾರು ಪ್ರಾಣಿಗಳು ಮೃತಪಟ್ಟಿರುವುದಾಗಿ ನಿವಾಸಿಗಳು ದೃಢಪಡಿಸಿದ್ದಾರೆ. ಈ ವಿಪತ್ತಿನಿಂದ ಅನೇಕ ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆದು ಹತ್ತಿರದ ಭತ್ತದ ಗದ್ದೆಗಳಲ್ಲಿ ಗುಡಿಸಲು ನಿರ್ಮಿಸಿಕೊಂಡು ಆಶ್ರಯ ಪಡೆಯುವಂತಾಗಿದ್ದು, ಅಲ್ಲಿ ಹಲವಾರು ಮಂದಿ ಸಿಲುಕಿಕೊಂಡರು. ಈ ವಿನಾಶಕ್ಕೆ ಹೆಚ್ಚುವರಿಯಾಗಿ, ನಿವಾಸಿಗಳು ಹೊರಗೆ ಹೋದಾಗ ಸಂಭವಿಸಿದ ಬೆಂಕಿಯಲ್ಲಿ ಎರಡು ಮನೆಗಳು ನಾಶವಾಗಿರುವುದು ತಿಳಿದುಬಂದಿದೆ.
Flood arrives in #Assam.
— Oxomiya Jiyori 🇮🇳 (@SouleFacts) June 29, 2026
This is Jonai, of Dhemaji district, most roads are inundated and many bridges are swept away.
Four-Lane highway overflowing with flood waters between Jonai and Ruksin.
Humans and cattle suffer equally, as many villages are now under 10-15 ft deep under… pic.twitter.com/1eyvX7hCqE




